Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ಟೀ ಜೊತೆ ಸಿಗರೇಟ್ ಸೇದುವ ಅಭ್ಯಾಸ ಇದ್ಯಾ? ಈ ಕ್ಷಣ ನಿಮ್ಮ ದೇಹದಲ್ಲಿ ಏನಾಗಲಿದೆ ಗೊತ್ತಾ?
ನೀವು ಟೀಯೊಂದಿಗೆ ಸಿಗರೇಟ್ ಸೇದುವ ಹವ್ಯಾಸ ಇಟ್ಟುಕೊಂಡಿರಬಹುದು, ಅಥವಾ ಈ ರೀತಿ ಟೀಯೊಂದಿಗೆ ಸಿಗರೇಟ್ ಸೇದುವ ಮಂದಿಯನ್ನು ನೋಡಿರಬಹುದು. ಕೆಲವರು ಬೆಳಗ್ಗೆಯಿಂದ ರಾತ್ರಿ ಮಲಗುವವರೆಗೂ ಸುಮಾರು 10 ಬಾರಿ ಈ ರೀತಿ ಮಾಡುವುದು ನೋಡಬಹುದು. ಮತ್ತೆ ಕೆಲವರು ಈ ಅಭ್ಯಾಸಕ್ಕೆ ಎಷ್ಟು ದಾಸರಾಗಿರುತ್ತಾರೆ ಅಂದ್ರೆ ಟೀ ಸಿಗರೇಟ್‌ಗಾಗಿ ಮೈಲುಗಳ ದೂರ ಪ್ರಯಾಣ ಮಾಡುತ್ತಾರೆ. ಹಾಗೆ ಒಂದು ದಿನ ಈ ರೀತಿ ಟೀಯೊಂದಿಗೆ ಸಿಗರೇಟ್ ಸೇದದೆ ಇದ್ದರೆ ಅವರಿಗೆ ಆಕಾಶವೇ ತಲೆ ಮೇಲೆ ಬಿದ್ದಂತಾಗಿರಲಿದೆ.
ಕೆಲವರು ವಿಶ್ರಾಂತಿ ಪಡೆಯುವ ಸುಲುವಾಗಿ ಆರಂಭಿಸಿದ್ದ ಈ ಅಭ್ಯಾಸವು ಮುಂದೆ ದೊಡ್ಡ ಚಟವಾಗಿ ಪರಿಣಮಿಸಿರಬಹುದು. ಅದ್ರಲ್ಲೂ ಕೆಲವರು ದಿನದಲ್ಲಿ ಹಲವು ಬಾರಿ ಈ ಟೀ ಸಿಗರೇಟ್ ಅಭ್ಯಾಸ ಬೆಳೆಸಿಕೊಂಡು ಅದಕ್ಕಾಗಿಯೇ ಹೆಚ್ಚು ಖರ್ಚು ಮಾಡುವುದು ನೋಡಬಹುದು. ಆದ್ರೆ ಸಿಗರೇಟ್ ಟೀ ಸೇವಿಸುವುದು ನಿಮ್ಮ ದೇಹದ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಅನ್ನೋದು ನಿಮಗೆ ಗೊತ್ತಿದ್ಯಾ?

ಸಿಗರೇಟ್ ನಿಮ್ಮ ದೇಹಕ್ಕೆ ಯಾವ ರೀತಿ ಹಾನಿ ಉಂಟು ಮಾಡಲಿದೆ ಎಂಬುದನ್ನು ನೀವು ಕೂಡ ತಿಳಿದಿರಬಹುದು. ಹಾಗೆ ಟೀ ಕೂಡ ನಿಮ್ಮ ಆರೋಗ್ಯಕ್ಕೆ ಹಾನಿ ಮಾಡುವ ಅಂಶವಾಗಿದೆ. ಸಿಗರೇಟ್‌ನಲ್ಲಿ ನಿಕೋಟಿನ್ ಅಂಶವಿದ್ದರೆ ಇತ್ತ ಟೀಯಲ್ಲಿ ಕೆಫೀನ್ ಅಂಶ ಇರಲಿದೆ, ಇದೆರಡು ನಿಮ್ಮ ದೇಹಕ್ಕೆ ಉತ್ತಮವಲ್ಲ.
ಹಾಗಾದ್ರೆ ಸಿಗರೇಟ್ ಸೇದುತ್ತಾ ಟೀ ಕುಡಿದರೆ ನಿಮ್ಮ ದೇಹದಲ್ಲಾಗುವ ಬದಲಾವಣೆ ಆದರೂ ಏನು? ಇದರಿಂದ ನಿಮಗೆ ಯಾವ ರೀತಿಯಾದ ಹಾನಿ ಉಂಟಾಗಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಸಾಮಾನ್ಯವಾಗಿ ನಿಕೋಟಿನ್ ಹಾಗೂ ಕೆಫೀನ್ ಅಂಶವು ನಿಮ್ಮ ಮೆದುಳಿನ ಮೇಲೆ ಪರಿಣಾಮ ಉಂಟು ಮಾಡುತ್ತವೆ. ಇದನ್ನು ಸೇವಿಸಿದಾಗ ನೀವು ಮತ್ತೆ ಚೈತನ್ಯ ಭರಿತ ವ್ಯಕ್ತಿಯಾಗಿ ಕಾಣಬಹುದು. ಮೆದುಳು ವೇಗವಾಗಿ ಕೆಲಸ ಮಾಡಲು ಅನುವು ಮಾಡಿಕೊಟ್ಟಂತೆ ನಿಮಗೆ ಅನಿಸಬಹುದು. ನಿಕೋಟಿನ್ ಡೋಪಮೈನ್ ರಶ್ ಅನ್ನು ಪ್ರಚೋದಿಸುತ್ತದೆ, ಇದು ಮೆದುಳಿನ 'ಉತ್ತಮ ಭಾವನೆ' ರಾಸಾಯನಿಕವಾಗಿದೆ, ಆದರೆ ಕೆಫೀನ್ ನಿದ್ರೆಯ ರಾಸಾಯನಿಕವಾದ ಅಡೆನೊಸಿನ್ ಬಿಡುಗಡೆಯಾಗುವುದನ್ನು ತಡೆಯಲಿದೆ. ಹೀಗಾಗಿ ರಾತ್ರಿ ಸಮಯದಲ್ಲಿ ಟೀ ಸೇವಿಸಿದರೆ ನಿದ್ರೆ ಹಾಳಾಗುತ್ತದೆ.
ಇನ್ನು ಈ ಎರಡು ರಾಸಾಯನಿಕಗಳು ನಿಮ್ಮ ದೇಹವನ್ನು ಒಟ್ಟಿಗೆ ಸೇರಿದಾಗ ಎರಡು ಪ್ರೋದನೆಗಳು ತುಸು ಅಧಿಕವಾಗುತ್ತದೆ. ನೀವು ಹೆಚ್ಚು ಚಟುವಟಿಕೆಯಲ್ಲಿ ತೊಡಗುವಂತೆ ಮಾಡುತ್ತವೆ. ಆದ್ರೆ ಇದು ನಿಮ್ಮ ದೇಹಕ್ಕೆ ಹಾಗೂ ಮೆದುಳಿನ ಮೇಲೆ ನಿಧಾನವಾಗಿ ವ್ಯತಿರಿಕ್ತ ಪರಿಣಾಮ ಉಂಟು ಮಾಡಲು ಕಾರಣವಾಗುತ್ತದೆ.
ಚಹಾವು ಸಣ್ಣ ಪ್ರಮಾಣದ ನಿಕೋಟಿನ್ ಅನ್ನು ಹೊಂದಿರುತ್ತದೆ, ಆದರೆ ಧೂಮಪಾನಕ್ಕೆ ಹೋಲಿಸಿದರೆ ಈ ಪ್ರಮಾಣ ಬಹಳ ಕಡಿಮೆಯಾಗಿದೆ. ಆದ್ರೆ ನೀವು ನಿರಂತರವಾಗಿ ಈ ಅಭ್ಯಾಸ ಮುಂದುವರೆಸಿದರೆ ಮೆದುಳು ಬರು ಬರುತ್ತಾ ಇದಕ್ಕೆ ಒಗ್ಗಿಕೊಳ್ಳುತ್ತದೆ. ಮುಂದೆ ಟೀ ಹಾಗೂ ಸಿಗರೇಟ್ ಇಲ್ಲದೆ ನೀವು ಕೆಲಸ ಮಾಡುವುದೇ ಕಷ್ಟವಾಗಬಹುದು. ಈ ಎರಡು ಅಂಶ ಒಟ್ಟಿಗೆ ನಿಮ್ಮ ದೇಹ ಸೇರದೆ ಇದ್ದಾಗ ಆಯಾಸ, ಸುಸ್ತು, ಹೆಚ್ಛಾಗಬಹುದು. ಹಾಗೆ ಧೂಮಪಾನವನ್ನು ತ್ಯಜಿಸುವುದು ಕಷ್ಟವಾಗಬಹುದು.
ಕೆಫೀನ್ ಮತ್ತು ನಿಕೋಟಿನ್ ಎರಡೂ ಹೃದಯ ಬಡಿತ ಮತ್ತು ರಕ್ತದೊತ್ತಡವನ್ನು ಹೆಚ್ಚಿಸುತ್ತವೆ. ಇದರಿಂದ ನಿಮ್ಮ ಸ್ನಾಯುಗಳಿಗೆ ಹಚ್ಚು ಆಮ್ಲಜನಕ ಪೂರೈಕೆಯಾಗುತ್ತದೆ. ಹೀಗಾಗಿ ಯಾವುದೇ ಟೀ ಸಿಗರೇಟ್ ಸೇದಿದ ಬಳಿಕ ಯಾವುದಾದರು ಕೆಲಸದಲ್ಲಿ ನೀವು ಸುಲಭವಾಗಿ ತೊಡಗಬಹುದು, ಹೆಚ್ಚು ಶಕ್ತಿಶಾಲಿಯಂತೆಯೂ ಚೈತನ್ಯಭರಿತರಾಗಿ ಕಾಣುವಿರಿ. ಆದ್ರೆ ಇದು ತಾತ್ಕಾಲಿಕವಾಗಿ ನಿಮಗೆ ಸಹಾಯ ಮಾಡಲಿದೆ. ಆದ್ರೆ ನಿಕೋಟಿನ್ ನಿಮ್ಮ ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಆಮ್ಲೀಯತೆ ಮತ್ತು ದೀರ್ಘಕಾಲದ ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡಬಹುದು.
ಹಾಗೆ ಸಿಗರೇಟ್ ನಿಮ್ಮಲ್ಲಿ ಕ್ಯಾನ್ಸರ್ ಅಪಾಯ ಹೆಚ್ಚು ಮಾಡುವ ಸಾಧ್ಯತೆ ದಟ್ಟವಾಗಿಸಲಿದೆ. ಇದರಿಂದ ದೇಹದಲ್ಲಿ ಉಸಿರಾಟ ಸಮಸ್ಯೆಯಂತಹ ಗಂಭೀರ ಅನಾರೋಗ್ಯಕ್ಕೆ ಕಾರಣವಾಗಬಹುದು.



Click it and Unblock the Notifications