Latest Updates
-
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್‌ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ
ಬೇಸಿಗೆ: ದೇಹದ ಉಷ್ಣಾಂಶ ಕಡಿಮೆ ಮಾಡುವ 7 ಸರಳ ಯೋಗಾಸನಗಳು
ಈ ವರ್ಷದ ರಣ ಬಿಸಿಲಿಗೆ ಜನ ಸುಸ್ತೋ ಸುಸ್ತು. ವಯಸ್ಸಾದವರು ಕೂಡ ಇಂಥ ಉರಿ ಬಿಸಿಲು ನನ್ನ ಜೀವಮಾನದಲ್ಲಿಯೇ ನೋಡಿಲ್ಲ ಎಂದು ಹೇಳುತ್ತಿದ್ದಾರೆ, ಅಷ್ಟರಮಟ್ಟಿಗಿದೆ ಬಿಸಿಲ ಪ್ರಭಾವ. ದೇಶದ ಕೆಲವು ಕಡೆ ಈಗಾಗಲೇ ಹೀಟ್‌ವೇವ್ ಶುರುವಾಗಿದೆ. ತುಂಬಾ ಕಡೆ ಉಷ್ಣಾಂಶ 45 ಡಿಗ್ರಿ C ಉಷ್ಣಾಂಶ ತಲುಪಿದೆ, ಇನ್ನು ಕೆಲವು ಕಡೆ 38-39Cಉಷ್ಣಾಂಶ ಇದೆ. ಹೀಗಾಗಿ ಜನ ಒಂದು ಮಳೆ ಬಂದು ಇಳೆಯನ್ನು ತಂಪು ಮಾಡಪ್ಪಾ ಎಂದು ಬೇಡಿಕೊಳ್ಳುತ್ತಿದ್ದಾರೆ.

ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾದಾಗ ಮೈ ಉಷ್ಣತೆ ಹೆಚ್ಚಾಗುವುದು, ಜೊತೆಗೆ ಅನೇಕ ಆರೋಗ್ಯ ಸಮಸ್ಯೆ ಉಂಟಾಗುವುದು. ಈ ಅವಧಿಯಲ್ಲಿ ಕಾಯಿಲೆ ಬೀಳುವುದನ್ನು ತಡೆಗಟ್ಟಲು ದೇಹದಲ್ಲಿ ಉಷ್ಣಾಂಶ ಹೆಚ್ಚಾಗದಂತೆ ನೋಡಿಕೊಳ್ಳಬೇಕು. ಬಿಸಿಲಿನ ಝಳ ಅಧಿಕವಿರುವ ಈ ಸಮಯದಲ್ಲಿ ನೀವು ದೇಹವನ್ನು ತಂಪಾಗಿಡಲು ಯೋಗಾಸನಗಳು ಸಹಕಾರಿಯಾಗಿದೆ ನೋಡಿ:
1. ತಾಡಾಸನ: ಇದನ್ನು ದಿನದಲ್ಲಿ ಯಾವಾಗ ಬೇಕಾದರೂ ಅಭ್ಯಾಸ ಮಾಡಬಹುದು. ಇದನ್ನು ಖಾಲಿ ಹೊಟ್ಟೆಯಲ್ಲೇ ಮಾಡಬೇಕೆಂದೇನಿಲ್ಲ. ಇದೊಂದು ತುಂಬಾ ಸರಳವಾದ ಭಂಗಿಯಾಗಿದೆ. ಈ ಆಸನದಲ್ಲಿ 10-12 ಸೆಕೆಂಡ್ ಇರಬೇಕು.
ಈ ಆಸನ ಮಾಡುವುದರಿಂದ ಬೇಸಿಗೆಯಲ್ಲಿ ದೇಹದ ಉಷ್ಣಾಂಶ ಕಡಿಮೆಯಾಗುವುದು, ಇದರಿಂದ ತುಂಬಾ ಸೆಕೆ ಅನಿಸುವುದಿಲ್ಲ.
2. ಬದ್ಧ ಕೋನಾಸನ
ಇದನ್ನು ಬಟರ್‌ಫ್ಲೈ ಪೋಸ್ ಎಂದು ಕರೆಯಲಾಗುವುದು. ಇದು ಕೂಡ ತುಂಬಾ ಸರಳವಾದ ಹಾಗೂ ಅಷ್ಟೇ ಪರಿಣಾಮಕಾರಿಯಾದ ಆಸನವಾಗಿದೆ. ಈ ಆಸನವನ್ನು ನೀವು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅಭ್ಯಾಸ ಮಾಡಿ. ಈ ಆಸನ ಕೂಡ ಸೆಕೆಯಲ್ಲಿ ದೇಹದ ಉಷ್ಣಾಂಶ ಕಡಿಮೆ ಮಾಡಲು ಸಹಕಾರಿಯಾಗಿದೆ.
3. ಆಂಜನೇಯಾಸನ(Crescent Pose)
ಅರ್ಧ ಚಂದ್ರಾಕೃತಿಯ ಈ ಆಸನವನ್ನು ದಿನದಲ್ಲಿ 10-15 ಸೆಕೆಂಡ್ ಇದ್ದರೆ ಸಾಕು ದೇಹದ ಉಷ್ಣಾಂಶ ಕಾಪಾಡಲು ತುಂಬಾ ಸಹಕಾರಿಯಾಗಿದೆ. ಈ ಆಸನ ಮಾನಸಿಕ ಒತ್ತಡ ಕಡಿಮೆಯಾಗುವುದು. ಸೆಕೆ ಹೆಚ್ಚಾದಾಗ ಜೀರ್ಣಕ್ರಿಯೆ ಮೇಲೆ ಪ್ರಭಾವ ಬೀರುವುದು. ಈ ಆಸನ ಜೀರ್ಣಕ್ರಿಯೆ ಉತ್ತಮವಾಗಿ ನಡೆಯಲು ಸಹಕಾರಿಯಾಗಿದೆ.
4. ಉಷ್ಟ್ರಾಸನ
ಈ ಆಸನವನ್ನು ಬೆಳಗ್ಗೆ ಅಭ್ಯಾಸ ಮಾಡಿ. ಬೆಳಗ್ಗೆ ಈ ಆಸನದಲ್ಲಿ 30-60 ನಿಮಿಷ ಸೆಕೆಂಡ್ ಇರಿ. ಹೀಗೆ ಮಾಡುವುದರಿಂದ ದೇಹದಲ್ಲಿ ರಕ್ತ ಸಂಚಾರ ಉತ್ತಮವಾಗಿ ನಡೆಯುವುದು. ದೇಹವನ್ನು ಡಿಟಾಕ್ಸ್ ಮಾಡಲು ಕೂಡ ಸಹಕಾರಿ.
5. ಸಿಂಹಾಸನ
ಸಿಂಹಾಸನ ಕೂಡ ತುಂಬಾ ಪವರ್‌ಫುಲ್ ಆದ ಆಸನ ಆಗಿದೆ. ಈ ಆಸನವನ್ನು ನೀವು ಸರಿಯಾದ ರೀತಿಯಲ್ಲಿ ಮಾಡಬೇಕು. ಈ ಆಸನವನ್ನು 30 ಸೆಕೆಂಡ್ ಮಾಡಿದರೆ ನೀವು ತುಂಬಾನೇ ಪ್ರಯೋಜನ ಪಡೆಯಬಹುದು. ಇದರಿಂದ ದೇಹದಲ್ಲಿ ಉಷ್ಣಾಂಶ ಕಡಿಮೆಯಾಗುವುದು, ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು.
6. ಭುಜಾಂಗಾಸನ
ಈ ಆಸನ ಕೂಡ ಬೇಸಿಗೆಯಲ್ಲಿ ಪ್ರತಿದಿನ ಅಭ್ಯಾಸ ಮಾಡಿ. ಇದರಿಂದ ಸೆಕೆಯನ್ನು ಸಹಿಸಲು ದೇಹ ಸಿದ್ಧವಾಗುವುದು. ಈ ಆಸನ ದೇಹದಲ್ಲಿ ಉಷ್ಣಾಂಶ ಕಡಿಮೆ ಮಾಡಲು ಸಹಕಾರಿ.
ಭುಜಾಂಗಾಸನ ಅಭ್ಯಾಸ ಮಾಡುವುದರಿಂದ ರಕ್ತ ಸಂಚಾರ ಉತ್ತಮವಾಗಿರುವುದು.
7. ಶವಾಸನ
ನೀವು ಈ ಆಸನವನ್ನು ಪ್ರತಿಯೊಂದು ಆಸನ ಮಾಡಿದ ಮೇಲೂ ಮಾಡಬೇಕು. ಶವಾಸನ ಮಾಡುವುದರಿಂದ ದೇಹದಲ್ಲಿ ಉಷ್ಣಾಂಶ ಕಾಪಾಡಲು ತುಂಬಾನೇ ಸಹಕಾರಿಯಾಗಿದೆ. ಶವಾಸನ ಮಾಡುವಾಗ ನಿದ್ದೆ ಜಾರ ಬೇಡಿ. ಒಂದು ನಿಮಿಷ ಶವಾಸನದಲ್ಲಿ ವಿಶ್ರಾಂತಿ ಪಡೆದರೆ ಸಾಕು.
ಈ ಎಲ್ಲಾ ಆಸನಗಳನ್ನು ಬೇಸಿಗೆಯಲ್ಲಿ ಅಭ್ಯಾಸ ಮಾಡಿದರೆ ದೇಹದ ಆರೋಗ್ಯ ಕಾಪಾಡಲು ಸಹಕಾರಿ ನೋಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications












