Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಹಿಳೆಯರಲ್ಲಿ ಕೂದಲು ಉದುರುವಿಕೆಗೆ ಪ್ರಮುಖ 5 ಕಾರಣವಿದು..!
ಇತ್ತೀಚಿನ ವರ್ಷಗಳಲ್ಲಿ ಜನರನ್ನು ಅತಿಯಾಗಿ ಕಾಡುತ್ತಿರುವ ಸಮಸ್ಯೆಗಳಲ್ಲಿ ಕೂದಲು ಉದುರುವಿಕೆಯೂ ಸಹ ಒಂದಾಗಿದೆ. ವಯಸ್ಸಿನ ಮಿತಿ ಇಲ್ಲದೆ ಎಲ್ಲರಲ್ಲೂ ಈ ಕೂದಲು ಉದುರುವಿಕೆ ಕಾಡ ತೊಡಗಿದೆ. ಕೂದಲು ಉದುರುವಿಕೆ ತಡೆಯಲು ಹತ್ತು ಹಲವು ಔಷಧಿಗಳಿಂದು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ ಪ್ರಯೋಜನಕಾರಿಯಾಗಿ ಯಾವುದು ಪರಿಣಾಮ ಬೀರುತ್ತಿಲ್ಲ.
ಪುರುಷರು ಮಾತ್ರವಲ್ಲ ವಯಸ್ಕ ಯುವತಿಯರಲ್ಲಿ ಈ ಕೂದಲು ಉದುರುವಿಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದ್ದು, ಹೊಸ ತಲೆ ನೋವಿಗೆ ಕಾರಣವಾಗಿದೆ. ಜೀವನಶೈಲಿ, ಆಹಾರ ಕ್ರಮ ಸೇರಿ ಹಲವು ಕಾರಣಗಳಿಂದಾಗಿ ಯುವತಿಯರು ಸಹ ಕೂದಲು ಉದುರುವಿಕೆಯಂತಹ ಅಸಹಜ ಸಮಸ್ಯೆಗೆ ಒಳಗಾಗಿದ್ದಾರೆ.

ಇನ್ನು ಪುರುಷರು ಹಾಗೂ ಮಹಿಳೆಯರಲ್ಲಿ ಕೂದಲು ಉದುರುವಿಕೆಗೆ ಬೇರೆ ಬೇರೆ ಕಾರಣಗಳಿವೆ. ಮಹಿಳೆಯರಲ್ಲಿ ಈ ಕಾರಣಗಳು ಅತ್ಯಂತ ಕ್ಲಿಷ್ಟಕರ ಹಾಗೂ ವ್ಯಾಪಕವಾಗಿ ಹರಡಿದೆ. ಹಾಗಾದ್ರೆ ನಾವಿಂದು ಮಹಿಳೆಯರಲ್ಲಿ ಕೂದಲು ಉದುರುವಿಕೆಗೆ ಕಾರಣವಾಗುವ ಅಂಶಗಳ ಕುರಿತಂತೆ ತಿಳಿದುಕೊಳ್ಳೋಣ.
ಮೊದಲು ಮಹಿಳೆಯರಲ್ಲಿ ಕೂದಲು ಉದುರುವಿಕೆಗೆ ಮುಖ್ಯ ಕಾರಣ ಎಂದರೆ ಅನುವಂಶಿಯತೆ ಅಂತೆ. ಪುರುಷರಲ್ಲಿ ಮಧ್ಯ ತಲೆ ಬೋಳಾಗಲು ಕಾರಣವಾಗುವ ಆಂಡ್ರೊಜೆನ್‌ಗಳು ಮಹಿಳೆಯರಲ್ಲೂ ಇರುತ್ತವೆ. ಆದರೆ ಈಸ್ಟ್ರೋಜೆನ್ ಹೆಚ್ಚಿನ ಪ್ರಮಾಣದಲ್ಲಿದ್ದರೆ ಆಂಡ್ರೋಜನ್ ಕಡಿಮೆ ಪ್ರಮಾಣದಲ್ಲಿರುತ್ತದೆ. ಮಹಿಳೆಯರಲ್ಲಿ ಕೂದಲು ಉದುರುವಿಕೆಗೆ ಸಾಮಾನ್ಯ ಕಾರಣವೆಂದರೆ ಆಂಡ್ರೊಜೆನೆಟಿಕ್ ಅಲೋಪೆಸಿಯಾ, ಇದನ್ನು ಸ್ತ್ರೀ ಮಾದರಿಯ ಕೂದಲು ಉದುರುವಿಕೆ ಎಂದು ಸಹ ಕರೆಯುತ್ತಾರೆ.
ಈ ಹಾರ್ಮೋನುಗಳು ಕೂದಲಿನ ಬೆಳವಣಿಗೆಯ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ. ಕೂದಲು ಒಮ್ಮೆ ಹೋದರೆ ಮತ್ತೆ ಮತ್ತೆ ಹುಟ್ಟಿಕೊಳ್ಳುತ್ತದೆ ಆದರೆ ಈ ಹಾರ್ಮೋನ್‌ಗಳು ಈ ಚಕ್ರವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಕೂದಲು ತೆಳುವಾಗಲು ಹಾಗೂ ಚಿಕ್ಕದಾಗಲು ಅದರ ತುದಿ ತುಂಡಾಗುವಂತೆ ಕೂದಲನ್ನು ದುರ್ಬಲವಾಗಿಸಲು ಕಾರಣವಾಗಿರುತ್ತದೆ.
ಹಾರ್ಮೋನ್ ಬದಲಾವಣೆ: ಪುರುಷರು ಹಾಗೂ ಮಹಿಳೆಯರಲ್ಲಿ ಹಾರ್ಮೋನ್‌ಗಳ ಬದಲಾವಣೆ ಅವರ ಕೂದಲು ಉದುರುವಿಕೆ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಅದರಲ್ಲೂ ಮಹಿಳೆಯರಲ್ಲಿ ವಯಸ್ಸಿಗೆ ಅನುಗುಣವಾಗಿ ಹಾರ್ಮೋನ್‌ಗಳಲ್ಲಾಗುವ ಬದಲಾವಣೆ ಕೂದಲು ಉದುರುವಿಕೆಗೆ ಕಾರಣವಾಗುತ್ತಿದೆ. ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (PCOS), ಗರ್ಭಧಾರಣೆ, ಋತುಬಂಧ ಮತ್ತು ಥೈರಾಯ್ಡ್ ಅಸ್ವಸ್ಥತೆಗಳಂತಹ ಪರಿಸ್ಥಿತಿಗಳು ಎಲ್ಲಾ ಹಾರ್ಮೋನುಗಳ ಸಾಮಾನ್ಯ ಸಮತೋಲನವನ್ನು ಅಡ್ಡಿಪಡಿಸಬಹುದು, ಇದು ತೆಳುವಾಗುವುದು ಮತ್ತು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ ಎಂದು ಹೇಳಲಾಗಿದೆ.
ಇತ್ತ ಹೆರಿಗೆಯ ನಂತರ, ಋತುಸ್ರಾವ ನಿಲ್ಲುವ ವಯಸ್ಸಿನಲ್ಲಿ ಮಹಿಳೆಯರಲ್ಲಿ ಕೂದಲು ಉದುರುವುದು ಹೆಚ್ಚಾಗುತ್ತದೆ. ಈ ಸ್ಥಿತಿಯನ್ನು ಟೆಲೋಜೆನ್ ಎಫ್ಲುವಿಯಮ್ ಎಂದು ಕರೆಯಲಾಗುತ್ತದೆ.
ಮಾನಸಿಕ ಅಂಶಗಳು: ಒಬ್ಬ ಮಹಿಳೆಯ ಮಾನಸಿಕ ಸ್ಥಿತಿಗತಿ ಸಹ ಆಕೆ ಕೂದಲು ಉದುರುವಿಕೆಗೆ ಕಾರಣವಾಗಿರುತ್ತದೆ. ಮಾನಸಿಕ ಒತ್ತಡದ ಕಾರಣದಿಂದ ಟೆಲೋಜೆನ್ ಎಫ್ಲುವಿಯಮ್‌ನಂತಹ ಕೂದಲು ಉದುರುವಿಕೆಯ ಸ್ಥಿತಿಗೆ ಕಾರಣವಾಗುತ್ತದೆ.
ಔಷಧಿ ಹಾಗೂ ಚಿಕಿತ್ಸೆ: ಮಹಿಳೆಯರು ತೆಗೆದುಕೊಳ್ಳುವ ಕೆಲವೊಂದು ಔಷಧಿಗಳು ಅವರ ಕೂದಲು ಉದುರುವಿಕೆಗೆ ಕಾರಣವಾಗಲಿದೆ. ನೀವು ಸಹ ಯಾವುದದಾರು ಔಷಧಿ ಸೇವಿಸುತ್ತಿದ್ದರೆ ಕೂದಲು ಉದುರುವಿಕೆಯನ್ನು ಗಮನಿಸಿರಬಹುದು. ಅದರಲ್ಲೂ ಮುಖ್ಯವಾಗಿ ಕೀಮೋಥೆರಪಿ ಔಷಧಿಗಳು, ಅಧಿಕ ರಕ್ತದೊತ್ತಡ, ಖಿನ್ನತೆ ಮತ್ತು ಕೆಲವು ಮೌಖಿಕ ಗರ್ಭನಿರೋಧಕಗಳು ಸೇರಿದಂತೆ ಇತರ ಔಷಧಿಗಳು ಕೂದಲು ತೆಳುವಾಗುವುದಕ್ಕೆ ಕಾರಣವಾಗಬಹುದು.
ಇದಿಷ್ಟೇ ಅಲ್ಲ ಅವರ ಆಹಾರ ಕ್ರಮಗಳು ಸಹ ಕೂದಲು ಉದುರುವಿಕೆಯ ಕಾರಣಕ್ಕೆ ಸಂಬಂಧಿಸಿದೆ. ಅದರಲ್ಲೂ ಯುವ ಸಮುದಾಯ ಇಂದು ಫಾಸ್ಟ್‌ಫುಡ್, ಬೇಕರಿ ಪ್ರಾಡಕ್ಟ್, ಆಯಿಲ್‌ಯುಕ್ತ ಉತ್ಪನ್ನಗಳು ಸೇರಿ ಹಲವು ರೀತಿಯ ಆಹಾರ ಕ್ರಮವು ಕೂದಲು ಉದುರುವಿಕೆಗೆ ಪರೋಕ್ಷವಾಗಿ ಹಾಗೂ ಪ್ರತ್ಯಕ್ಷವಾಗಿಯೂ ಕಾರಣವಾಗುತ್ತಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications