Latest Updates
-
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ -
ಮಧುರೈಗೆ ಹೋಗ್ತಿದ್ದೀರಾ? ಈ ಪವಿತ್ರ ದೇಗುಲಗಳಿಗೂ ಭೇಟಿ ನೀಡೋದನ್ನ ಮರೀಬೇಡಿ.. ಪಟ್ಟಿ ಇಲ್ಲಿದೆ -
ಈ 3 ರಾಶಿಗಳಿಗೆ ಜೀವನದಲ್ಲಿ ಏರಿಳಿತಗಳು! ಹಳೆಯ ನೆನಪುಗಳು ಕಾಡುತ್ತೆ -
March 09 Horoscope: ಶುಭ ಕಾರ್ಯದಲ್ಲಿ ಭಾಗಿಯಾಗುವ ಸಾಧ್ಯತೆ ಹೆಚ್ಚು! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ!
ಯಂಗ್ ಆಗಿ ಕಾಣಬೇಕಾ? ಈ 5 ಆಹಾರ ಈಗಲೇ ಬಿಟ್ಟುಬಿಡಿ.. ಸುಕ್ಕಾದ ಚರ್ಮ ಮಾಯ ಆಗುತ್ತೆ
ಯುವಕರಂತೆ ಕಾಣಬೇಕೆ? ಈ 6 ಆಹಾರಗಳನ್ನು ಈಗಲೇ ಬಿಟ್ಟುಬಿಡಿ. ನೀವು ಯಾವಾಗಲೂ ಚಿಕ್ಕವರಾಗಿ ಕಾಣುವಿರಿ. ಹೌದು, ಪ್ರತಿಯೊಬ್ಬರೂ ತಾವು ಸದಾ ಯುವಕರಂತೆ (Youthful Skin) ಕಾಣಬೇಕು ಅಂತ ಬಯಸುತ್ತಾರೆ. ಅದಕ್ಕಾಗಿ ದುಬಾರಿ ಕ್ರೀಮ್, ಕಾಸ್ಮೆಟಿಕ್ ಚಿಕಿತ್ಸೆ, ಸಪ್ಲಿಮೆಂಟ್ ಇತ್ಯಾದಿಗ ಗಳು ಮುಂತಾದವುಗಳನ್ನು ಬಳಸುವರು. ಆದರೆ, ನಿಜವಾದ ಸೌಂದರ್ಯ ಮತ್ತು ಯೌವನದ ರಹಸ್ಯ ನಮ್ಮ ದೈನಂದಿನ ಆಹಾರದಲ್ಲಿಯೇ ಅಡಗಿದೆ. ನಾವು ತಿಳಿದುಕೊಂಡು ಅಥವಾ ತಿಳಿಯದೇ ತಿನ್ನುವ ಕೆಲವು ಆಹಾರಗಳು ದೇಹ ಮತ್ತು ಚರ್ಮದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತವೆ. ಅವು ಚರ್ಮವನ್ನು ಒಣಗಿಸಿಬಿಡುತ್ತವೆ. ಮಡಸುಗಳನ್ನು ಬೇಗ ತರುತ್ತವೆ ಮತ್ತು ವೃದ್ಧಾಪ್ಯದ ಪ್ರಕ್ರಿಯೆಯನ್ನು ವೇಗಗೊಳಿಸುತ್ತವೆ.
ಆಶ್ಚರ್ಯಕರ ವಿಷಯವೆಂದರೆ, ಈ ಆಹಾರಗಳಲ್ಲಿ ಹೆಚ್ಚಿನವು ನಮ್ಮ ನೆಚ್ಚಿನ ತಿಂಡಿಗಳೇ ಆಗಿವೆ. ಹಾಗಾದರೆ, ನಮ್ಮ ಆಹಾರ ಪಟ್ಟಿಯಿಂದ ನಾವು ಯಾವ ಆಹಾರಗಳನ್ನು ದೂರ (avoid these foods) ಇಡಬೇಕು. ಆರೋಗ್ಯ ತಜ್ಞರ ಪ್ರಕಾರ, ಯುವಕರಂತೆ ಕಾಣಲು ಮತ್ತು ಆರೋಗ್ಯಕರ ಚರ್ಮವನ್ನು (skin care) ಉಳಿಸಿಕೊಳ್ಳಲು ಏನು ಮಾಡಬೇಕು ಎಂಬ ಬಗ್ಗೆ ಈ ಲೇಖನದಲ್ಲಿ ಮಾಹಿತಿ ನೀಡಲಾಗಿದೆ.

ಐಸ್‌ಕ್ರೀಮ್ ಬೇಡ
ಬಹುತೇಕರು ಐಸ್‌ಕ್ರೀಮ್ ತಿನ್ನಲು ಇಷ್ಟಪಡುತ್ತಾರೆ. ಐಸ್‌ಕ್ರೀಮ್‌ನಲ್ಲಿ ಸಕ್ಕರೆ ಮತ್ತು ಕೊಬ್ಬು ಎರಡೂ ಹೆಚ್ಚಿನ ಪ್ರಮಾಣದಲ್ಲಿ ಇರುತ್ತವೆ. ಇವೆರಡೂ ಸೇರಿದಾಗ, ದೇಹದಲ್ಲಿ ಗ್ಲೈಕೇಶನ್ ಪ್ರಕ್ರಿಯೆ ವೇಗಗೊಳ್ಳುತ್ತದೆ. ಇದು ನಮ್ಮ ಚರ್ಮವನ್ನು ಬಿಗಿಯಾಗಿ ಇಡುವ ಕಾಲಜನ್‌ನಂತಹ ಪ್ರೋಟೀನ್‌ಗಳನ್ನು ದುರ್ಬಲಗೊಳಿಸುತ್ತದೆ. ಇದರಿಂದ ಚರ್ಮ ಸಡಿಲಗೊಂಡು, ಮುಖದ ಮೇಲೆ ಸುಕ್ಕುಗಳು ಬೇಗನೆ ಕಾಣಿಸಿಕೊಳ್ಳುತ್ತವೆ. ನಿತ್ಯ ಐಸ್‌ಕ್ರೀಮ್ ತಿನ್ನುವುದು ಚರ್ಮ ಬೇಗ ವಯಸ್ಸಾದಂತೆ ಕಾಣುವಂತೆ ಮಾಡುತ್ತದೆ.
ಸೋಡಾ ತ್ಯಜಿಸಿ
ಸೋಡಾವನ್ನು ಪುನರುಜ್ಜೀವನಗೊಳಿಸುವ ಪಾನೀಯ ಎಂದು ಪರಿಗಣಿಸಲಾಗುತ್ತದೆ. ಆದರೆ, ವಾಸ್ತವ ತದ್ವಿರುದ್ಧವಾಗಿದೆ. ಇದರಲ್ಲಿ ಹೆಚ್ಚಿನ ಸಕ್ಕರೆ ಮತ್ತು ಫಾಸ್ಪರಿಕ್ ಆಮ್ಲ ಇದೆ. ಇವೆರಡೂ ನಿಮ್ಮ ಮೂಳೆಗಳು ಮತ್ತು ಹಲ್ಲುಗಳನ್ನು ದುರ್ಬಲಗೊಳಿಸಿ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು (ಶುಗರ್ ಲೆವೆಲ್) ಹೆಚ್ಚಿಸುತ್ತವೆ. ಇದರಿಂದ ಚರ್ಮ ಮಂದವಾಗುತ್ತದೆ. ನಿಮ್ಮ ಚರ್ಮ ಹೊಳೆಯುವಂತೆ ಮತ್ತು ಆರೋಗ್ಯಕರವಾಗಿ ಕಾಣಬೇಕಿದ್ದರೆ, ಸೋಡಾ ಮತ್ತು ಇನ್ನಿತರ ಪಾನೀಯಗಳಿಂದ ದೂರ ಉಳಿಯುವುದು ಒಳ್ಳೆಯದು.
ಈ ಜ್ಯೂಸ್ ನಿಲ್ಲಿಸಿ
ಹಣ್ಣಿನ ರಸವನ್ನು (ಜ್ಯೂಸ್) ಆರೋಗ್ಯಕರ ಎಂದು ಅನೇಕರು ಸಾಮಾನ್ಯವಾಗಿ ಭಾವಿಸುತ್ತಾರೆ. ಆದರೆ, ಹೆಚ್ಚಿನ ಪ್ಯಾಕ್ ಮಾಡಿದ ಜ್ಯೂಸ್‌ಗಳಲ್ಲಿ ಅಧಿಕ ಸಕ್ಕರೆ ಅಂಶವಿರುತ್ತದೆ. ಇಡೀ ಹಣ್ಣುಗಳಲ್ಲಿ ಇರುವಂತೆ ನಾರಿನಂಶ ಇರುವುದಿಲ್ಲ. ನಾರಿನಂಶದ ಕೊರತೆಯಿಂದ ದೇಹವು ಸಕ್ಕರೆಯನ್ನು ಅತಿ ವೇಗವಾಗಿ ಹೀರಿಕೊಳ್ಳುತ್ತದೆ. ಇದು ಇನ್ಸುಲಿನ್ ಮೇಲೆ ಒತ್ತಡ ಹೆಚ್ಚಿಸಲಿದೆ. ದೇಹದಲ್ಲಿ ಉರಿಯೂತಕ್ಕೆ ಕಾರಣವಾಗಿ, ಚರ್ಮ ಸಡಿಲಗೊಳ್ಳಲು ಆರಂಭಿಸುತ್ತದೆ. ಪ್ಯಾಕ್ ಮಾಡಿದ ಜ್ಯೂಸ್ ಬದಲಿಗೆ ತಾಜಾ ಹಣ್ಣುಗಳನ್ನು ಸೇವಿಸುವುದು ಉತ್ತಮ. ಇದು ದೇಹವನ್ನು ಆರೋಗ್ಯಕರವಾಗಿಟ್ಟು, ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ.
ಆಲ್ಕೋಹಾಲ್ ಯಾಕೆ?
ಮದ್ಯವು (ಆಲ್ಕೋಹಾಲ್) ದೇಹವನ್ನು ನಿರ್ಜಲೀಕರಣಗೊಳಿಸುತ್ತದೆ. ಚರ್ಮದ ದುರಸ್ತಿಗೆ ಅಗತ್ಯವಾದ ವಿಟಮಿನ್ ಎ ಅನ್ನು ಕಡಿಮೆ ಮಾಡುತ್ತದೆ. ಇದು ಚರ್ಮವನ್ನು ಮಂದ ಮತ್ತು ನಿರ್ಜೀವವಾಗಿ ಕಾಣುವಂತೆ ಮಾಡುತ್ತದೆ. ಪದೇ ಪದೆ ಮದ್ಯ ಸೇವಿಸಿದರೆ ಯಕೃತ್ತಿಗೂ ಹಾನಿಯಾಗುತ್ತದೆ. ಇದರಿಂದ ದೇಹದಿಂದ ವಿಷಕಾರಿ ಅಂಶಗಳು ಸರಿಯಾಗಿ ಹೊರಹಾಕಲ್ಪಡುವುದಿಲ್ಲ. ದೇಹ ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ. ಆರೋಗ್ಯಕರ ದೇಹ ಮತ್ತು ಹೊಳೆಯುವ ಚರ್ಮಕ್ಕಾಗಿ ಮದ್ಯಪಾನ ತ್ಯಜಿಸಿ ಉತ್ತಮ.
ಸಿಹಿ ಮಾರಕ
ಸಕ್ಕರೆ ಬದಲಿಗೆ ಬಹುತೇಕರು ಕೃತಕ ಸಿಹಿಕಾರಕಗಳನ್ನು ಬಳಸುತ್ತಾರೆ. ಅವುಗಳಲ್ಲಿ ಕ್ಯಾಲೊರಿ ಇರುವುದಿಲ್ಲ. ಆದರೆ, ಇದು ಕರುಳಿನಲ್ಲಿರುವ ಆರೋಗ್ಯಕರ ಬ್ಯಾಕ್ಟೀರಿಯಾಗಳನ್ನು ಹದಗೆಡಿಸಿ, ಸಿಹಿ ತಿನ್ನುವ ಬಯಕೆಯನ್ನು ಹೆಚ್ಚಿಸುತ್ತದೆ. ಇದರಿಂದ ಚಯಾಪಚಯ ಒತ್ತಡ ಹೆಚ್ಚಾಗಿ, ಮುಖದ ಮೇಲೆ ಅಕಾಲಿಕವಾಗಿ ಸುಕ್ಕುಗಳು ಕಾಣಿಸಿಕೊಳ್ಳಬಹುದು.
ಒಟ್ಟಾರೆಯಾಗಿ, ನೀವು ದೀರ್ಘಕಾಲದವರೆಗೆ ಸುಂದರವಾಗಿ ಕಾಣಲು ಬಯಸಿದರೆ ನಿಮ್ಮ ಆಹಾರ ಮತ್ತು ಜೀವನಶೈಲಿಯ ಬಗ್ಗೆ ಗಮನಹರಿಸಿ. ಐಸ್‌ಕ್ರೀಮ್, ಸೋಡಾ, ಪ್ಯಾಕ್ ಮಾಡಿದ ಜ್ಯೂಸ್, ಮದ್ಯ ಮತ್ತು ಕೃತಕ ಸಿಹಿಯಿಂದ ದೂರವಿರಿ. ಸಾಧ್ಯವಾದಷ್ಟು ನೈಸರ್ಗಿಕ ಮತ್ತು ಆರೋಗ್ಯಕರ ಆಹಾರಕ್ಕೆ ಆದ್ಯತೆ ನೀಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications












