Latest Updates
-
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ -
ಮಧುರೈಗೆ ಹೋಗ್ತಿದ್ದೀರಾ? ಈ ಪವಿತ್ರ ದೇಗುಲಗಳಿಗೂ ಭೇಟಿ ನೀಡೋದನ್ನ ಮರೀಬೇಡಿ.. ಪಟ್ಟಿ ಇಲ್ಲಿದೆ -
ಈ 3 ರಾಶಿಗಳಿಗೆ ಜೀವನದಲ್ಲಿ ಏರಿಳಿತಗಳು! ಹಳೆಯ ನೆನಪುಗಳು ಕಾಡುತ್ತೆ -
March 09 Horoscope: ಶುಭ ಕಾರ್ಯದಲ್ಲಿ ಭಾಗಿಯಾಗುವ ಸಾಧ್ಯತೆ ಹೆಚ್ಚು! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ!
ಮದುವೆ ಬಳಿಕ ಮಹಿಳೆಯರ ತೂಕ ಹೆಚ್ಚಾಗೋದು ಏಕೆ? ಕಾರಣ ಏನು ಗೊತ್ತಾ?
ಮಹಿಳೆಯರು ಹೆಚ್ಚಾಗಿ ತೂಕ ಹೆಚ್ಚಳದಂತಹ ಸಮಸ್ಯೆಗೆ ಒಳಗಾಗುವುದು ನೋಡಬಹುದು. ಹಾಗೆ ಮಹಿಳೆಯರಲ್ಲಿ ಬಹುಬೇಗ ತೂಕ ಹೆಚ್ಚಳ ಆಗುವುದು ಬಹುದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅವರ ಆಹಾರ ಹಾಗೂ ಜೀವನ ಶೈಲಿ ಒಂದು ಕಡೆಯಲ್ಲಿ ಇದಕ್ಕೆ ಕಾರಣವಾಗುತ್ತಿದೆ. ಅತೀ ಕಡಿಮೆ ಸಮಯದಲ್ಲಿ ಅವರು ಅತೀ ಹೆಚ್ಚು ತೂಕ ಪಡೆಯುವುದು ಹೊಸ ರೀತಿಯ ಸಮಸ್ಯೆಗಳ ತರುತ್ತಿದೆ.
ಅದರಲ್ಲೂ ಮಹಿಳೆಯರು ಮದುವೆಯಾದ ಬಳಿಕ ಏಕಾಏಕಿ ತೂಕ ಹೆಚ್ಚಳ ಆಗುವುದನ್ನು ನಾವು ನೋಡಬಹುದು. ಮದುವೆಯಾಗಿ ಕೆಲವೇ ತಿಂಗಳಲ್ಲಿ ಮಹಿಳೆಯರು ತೂಕ ಹೆಚ್ಚಳವಾಗುವುದು ಈಗ ಸಾಮಾನ್ಯವಾಗಿ ಎಲ್ಲರಲ್ಲೂ ನೋಡಬಹುದು. ಇದು ಎಲ್ಲರಿಗೂ ಕಾಡುವ ಸಮಸ್ಯೆ. ಹಾಗೆ ಯುವತಿಯರಲ್ಲು ಇದು ಹೆಚ್ಚಾಗುತ್ತಿದೆ. ಈ ಸಮಸ್ಯೆ ಅವರ ತಾಯ್ತನ ಹಾಗೆ ದೈನಂದಿನ ಕೆಲಸದ ಮೇಲೂ ಪರಿಣಾಮ ಬೀರುತ್ತಿದೆ.

ಇದಕ್ಕೆ ಹತ್ತು ಹಲವು ಕಾರಣಗಳನ್ನು ನಾವು ಪಟ್ಟಿ ಮಾಡಬಹುದು. ಅದರಲ್ಲೂ ಆಹಾರ ಶೈಲಿ ಹಾಗೂ ಜೀವನದಲ್ಲಾಗುವ ಹಲವು ಕಾರಣಗಳ ಪಟ್ಟಿ ಮಾಡಬಹುದು. ಹಾಗಾದ್ರೆ ನಾವಿಂದು ಮದುವೆಯಾದ ಮಹಿಳೆಯರಲ್ಲಿ ಏಕಾಏಕಿ ತೂಕ ಹೆಚ್ಚಳಕ್ಕೆ ಕಾರಣವಾಗುವ ಅಂಶಗಳನ್ನು ತಿಳಿದುಕೊಳ್ಳೋಣ.
ಇದು ಮದುವೆ ಆಗುವುದು ಕಾರಣವಲ್ಲ
ಹಲವರು ಮದುವೆಯಾದ ಬಳಿಕ ತಮ್ಮ ತೂಕ ಹೆಚ್ಚಳವಾಗಿದೆ ಎಂಬ ತಪ್ಪು ಕಲ್ಪನೆಗೆ ಒಳಗಾಗುತ್ತಾರೆ, ಆದ್ರೆ ಮದುವೆಗೂ ಈ ತೂಕ ಹೆಚ್ಚಳಕ್ಕೂ ಒಂದಕ್ಕೊಂದು ಸಂಪರ್ಕವೇ ಇಲ್ಲ. ವಯಸ್ಸಿನ ಕಾರಣದಿಂದಾಗಿ ತೂಕ ಹೆಚ್ಚಳವಾಗುತ್ತದೆ. ಸಾಮಾನ್ಯವಾಗಿ ಮಹಿಳೆಯರು 30 ವರ್ಷ ದಾಟಿದ ಬಳಿಕ ಆವರ ದೇಹದಲ್ಲಾಗುವ ಹಲವು ಬದಲಾವಣೆಗಳು ಹಾಗೂ ಮದುವೆಯ ಬಳಿಕ ಅವರ ಜೀವನ ಶೈಲಿಯಲ್ಲಿನ ಬದಲಾವಣೆ ಇದಕ್ಕೆ ಕಾರಣವಾಗುತ್ತದೆ. ನೀವು ಮದುವೆ ಆಗದಿದ್ದರೂ ಈ ವಯಸ್ಸು ದಾಟಿದ ಬಳಿಕ ತೂಕ ಹೆಚ್ಚಳ ಆಗುವುದು ನೋಡಬಹುದು.
ಹಾರ್ಮೋನ್ ಬದಲಾವಣೆ
ಮಹಿಳೆಯರು 30 ವರ್ಷ ದಾಟಿದ ಬಳಿಕ ಅವರಲ್ಲಿ ಹಲವು ರೀತಿಯ ಹಾರ್ನೋನ್ ಬದಲಾವಣೆಗಳ ನೋಡಬಹುದು. ಅದರಲ್ಲೂ ಗರ್ಭಾವಸ್ಥೆಯಲ್ಲಿ ಅವರಲ್ಲಿ ಹಲವು ರೀತಿಯ ಹಾರ್ಮೋನ್ ಬದಲಾವಣೆಯ ಕಾರಣದಿಂದಾಗಿ ಅವರ ತೂಕದಲ್ಲಿ ಏಕಾಏಕಿ ಏರಿಕೆಯಾಗುವುದು ನೋಡಬಹುದು. ಇದು ಸಾಮಾನ್ಯವಾಗಿ 30 ರಿಂದ 35 ವರ್ಷ ದಾಟಿದ ಬಹುತೇಕ ಮಹಿಳೆಯರಲ್ಲಿ ಉಂಟಾಗುವುದರಿಂದ ಅವರ ತೂಕ ಹೆಚ್ಚಳದ ನೋಡಬಹುದು.
ನಿದ್ರೆಯ ಕೊರತೆ
ಮದುವೆಯಾದ ಬಳಿಕ ಮಹಿಳೆಯರ ಜವಾಬ್ದಾರಿ ಹೆಚ್ಚಾಗಬಹುದು, ಕುಟುಂಬ ಮಕ್ಕಳು ಎಂಬ ವಿಶ್ರಾಂತಿ ಇಲ್ಲದ ಜೀವನಕ್ಕೆ ಅವರು ಸಿದ್ಧವಾಗಬೇಕಾಗುತ್ತದೆ. ಅದರಲ್ಲೂ ಮಗವಾದ ಆರಂಭಿಕ ದಿನಗಳಲ್ಲಿ ಅವರು ನಿದ್ರೆ ಇಲ್ಲದ ಹಲವು ರಾತ್ರಿಗಳನ್ನು ಕಳೆಯಬೇಕಾಗುತ್ತದೆ. ಇದಲ್ಲದೆ ಹಲವು ರೀತಿಯ ಬದಲಾವಣೆಗಳು ಅವರಲ್ಲಿ ನಿದ್ರೆ ಇಲ್ಲದೆ ಮಾಡಬಹುದು, ಇದರಿಂದ ಕೂಡ ಅವರ ತೂಕ ಹೆಚ್ಚಳ ನೋಡಬಹುದು.
ದೈಹಿಕ ಚಟುವಟಿಕೆ ಕಡಿಮೆಯಾಗುವುದು ಹಾಗೂ ಆಹಾರ
ಮದುವೆಯಾದ ಬಳಿಕ ಅವರು ದೈಹಿಕ ಚಟುವಟಿಕೆ ಕಡಿಮೆ ಮಾಡುವುದು ಅವರ ತೂಕ ಹೆಚ್ಚಳಕ್ಕೆ ಕಾರಣವಾಗಬಹುದು, ಬಹುತೇಕ ಸಮಯ ಅವರು ಮನೆಯ ಕೆಲಸದಲ್ಲಿ ಇಲ್ಲವೆ ಹೊರಗಿನ ಕೆಲಸದಲ್ಲಿ ತೊಡಗುವ ಕಾರಣ ದೈಹಿಕ ಚಟುವಟಿಕೆ ಕಡಿಮೆಯಾಗುತ್ತದೆ, ಯೋಗ, ವ್ಯಾಯಾಮದಿಂದ ಅವರು ದೂರಾಗಿ ಮನೆಯ ಜವಾಬ್ದಾರಿ ಪಡೆಯುವುದು ಕೂಡ ಇದಕ್ಕೆ ಕಾರಣವಾಗುತ್ತದೆ. ಹಾಗೆ ಅವರ ಆಹಾರ ಸೇವನೆಯ ಪದ್ಧತಿ ಕೂಡ ಬದಲಾಗುತ್ತದೆ. ಸಮಯದಕ್ಕೆ ಸರಿಯಾಗಿ ಆಹಾರ ಸೇವನೆ ಇಲ್ಲದೆ ಹಾಗೆ ಹೊರಗಿನ ಆಹಾರ ಹೆಚ್ಚಾಗಿ ಸೇವಿಸಲು ಆರಂಭಿಸಬಹುದು, ಇದು ಕೂಡ ಅವರ ತೂಕ ಹೆಚ್ಚಳಕ್ಕೆ ಕಾರಣವಾಗಲಿದೆ.
ಈ ತೂಕ ಹೆಚ್ಚಳದ ಕುರಿತು ವೈದ್ಯೆ ಡಾ. ಅಕ್ಷತಾ ಆವರು ಹೇಳುವುದು ಹೀಗೆ, 'ಮದುವೆಯ ನಂತರ ಮಹಿಳೆಯರ ತೂಕ ಹೆಚ್ಚಾಗುವುದು ಸಾಮಾನ್ಯ. ಇದಕ್ಕೆ ಹಲವು ಕಾರಣಗಳಿರಬಹುದು. ಕೆಲವರಲ್ಲಿ ಜೀವನ ಶೈಲಿ ಕಾರಣವಾದರೆ ಮತ್ತೆ ಕೆಲವರಲ್ಲಿ ಹಾರ್ಮೋನ್, ಅನುವಂಶೀಯತೆ ಕೂಡ ಕಾರಣವಾಗುತ್ತದೆ. ಮದುವೆಯ ನಂತರ ತೂಕ ಹೆಚ್ಚಾದರೆ ಉತ್ತಮ ಆರೋಗ್ಯದ ಸಂಕೇತವು ಹೌದು ಆದರೆ ಅದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಾರದು. ನಿಯಮಿತ ವ್ಯಾಯಾಮ, ದೈಹಿಕ ಚಟುವಟಿಕೆಗಳಿದ್ದಾಗ ಈ ರೀತಿ ತೂಕ ಹೆಚ್ಚಳ ಆಗುವುದಿಲ್ಲ. ಆರೋಗ್ಯವಂತ ಮಹಿಳೆ ಎಂದು ಕರೆಸಿಕೊಳ್ಳಬೇಕಾದರೆ ಅವರ ತೂಕ ಕೂಡ ಹೆಚ್ಚಾಗಿರಬೇಕು ಎಂದೇನಿಲ್ಲ. ವಯಸ್ಸಿಗೆ ತಕ್ಕ ಹಾಗೆ ಅವರ ತೂಕ ಇದ್ದರೆ ಸಾಕು' ಎಂದಿದ್ದಾರೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











