ಬೆಳಗ್ಗೆಯ ಮೂತ್ರ ಹಳದಿ ಬಣ್ಣದಿಂದ ಕೂಡಿದ್ಯಾ.? ನಿರ್ಲಕ್ಷಿಸಿದರೆ ಏನಾಗುತ್ತೆ?

ನೀವು ಬೆಳಗ್ಗೆ ಎದ್ದ ಕೂಡಲೆ ಮೂತ್ರ ವಿಸರ್ಜನೆಗೆ ಮುಂದಾಗುತ್ತೀರಿ. ಆದ್ರೆ ಈ ಸಮಯದಲ್ಲಿ ಮೂತ್ರವು ಹಳದಿ ಬಣ್ಣಕ್ಕೆ ತಿರುಗುವುದು ನೋಡಬಹುದು. ಇದು ಸಾಮಾನ್ಯವಾಗಿ ಎಲ್ಲರ ವಿಚಾರದಲ್ಲೂ ನಡೆಯಲಿದೆ. ಹಾಗೆ ಎಲ್ಲರು ಇದನ್ನು ಸಾಮಾನ್ಯ ಪ್ರಕ್ರಿಯೆ ಎಂದೇ ಭಾವಿಸಿರುತ್ತಾರೆ, ಏಕೆಂದರೆ ಬೇಸಿಗೆಯ ಸಮಯದಲ್ಲಿ ದೇಹದ ಉಷ್ಣಾಂಶದ ಪ್ರಕಾರವಾಗಿ ಈ ರೀತಿ ಮೂತ್ರದ ಬಣ್ಣ ಬದಲಾಗುವುದು ನೋಡಬಹುದು. ಹಾಗೆ ಇಡೀ ರಾತ್ರಿ ನೀವು ನೀರು ಕುಡಿಯದೆ ಇರುವುದು ಕೂಡ ಇದಕ್ಕೆ ಕಾರಣವಾಗುತ್ತದೆ.

ಆದ್ರೆ ದಿನದ ಪ್ರತಿಯೊಂದು ಬಾರಿ ನೀವು ಮೂತ್ರ ವಿಸರ್ಜನೆಗೆ ಮುಂದಾದಾಗ ಮೂತ್ರ ಬಣ್ಣದಲ್ಲಿ ಬದಲಾವಣೆ ಇದ್ದರೆ ಅದಕ್ಕೆ ಹಲವು ಕಾರಣಗಳಿರುತ್ತದೆ. ನಿಮ್ಮ ಮೂತ್ರದ ಬಣ್ಣದಿಂದಲೂ ನಿಮ್ಮ ಆರೋಗ್ಯ ಕುರಿತು ತಿಳಿದುಕೊಳ್ಳಬಹುದು. ನಿಮ್ಮ ನಿತ್ಯದ ಆಹಾರ, ಔಷಧಿ, ಬಾಹ್ಯ ಪರಿಸರ ಹೀಗೆ ಹತ್ತು ಹಲವು ಅಂಶಗಳು ನಿಮ್ಮ ಮೂತ್ರದ ಬಣ್ಣ ಬದಲಾವಣೆಗೆ ನೇರವಾಗಿ ಸಂಬಂಧ ಹೊಂದಿರಲಿದೆ.

The Hidden Warning In Your Morning Urine

ಈ ಮೂತ್ರದ ಬಣ್ಣವನ್ನು ಪರೀಕ್ಷಿಸುವ ಮೂಲಕ ನಿಮ್ಮ ದೇಹದ ಸಮಸ್ಯೆಯನ್ನು ಪರಿಹರಿಸಬಹುದು. ಈ ವಿಧಾನವನ್ನು ಯುರೋಸ್ಕೋಪಿ ಎಂದು ಕರೆಯಲಾಗುತ್ತಿತ್ತು. ಇದು ಪುರಾತನ ಕಾಲದಿಂದಲೂ ಕೂಡ ನಡೆದುಕೊಂಡು ಬಂದಿರುವ ಒಂದು ಚಿಕಿತ್ಸಾ ವಿಧಾನವಾಗಿದೆ. ಮೂತ್ರ ಬಣ್ಣ, ವಾಸನೆಗಳ ಪರೀಕ್ಷೆ ಕೂಡ ಹಲವು ರೋಗದ ಗುರುತಿಸಲು ಸಹಕಾರಿಯಾಗಲಿದೆ.

ಹಾಗಾದ್ರೆ ನಾವಿಂದು ಯಾವ ಮೂತ್ರದ ಬಣ್ಣವು ಯಾವ ಸಮಸ್ಯೆಯನ್ನು ಪ್ರತಿನಿಧಿಸುತ್ತದೆ? ಯಾವ ಬಣ್ಣವು ಯಾವ ಸಮಸ್ಯೆಯ ರೂಪಕವಾಗಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಹಳದಿ ಮೂತ್ರ

ಸಾಮಾನ್ಯವಾಗಿ ನೀವು ಬೆಳಗ್ಗೆ ಎದ್ದು ಮೂತ್ರ ವಿಸರ್ಜನೆ ಮಾಡುವಾಗ ಹಳದಿ ಬಣ್ಣದಲ್ಲಿ ಮೂತ್ರ ಕಂಡುಬರುತ್ತದೆ. ಬೇಸಿಗೆಯಲ್ಲಿ ಸಾಮಾನ್ಯವಾಗಿ ಎಲ್ಲರಿಗೂ ಈ ರೀತಿ ಉಂಟಾಗಬಹುದು, ಆದ್ರೆ ಇದರ ಹಿಂದೆ ಕೂಡ ಅನಾರೋಗ್ಯದ ಮುನ್ಸೂಚನೆ ಇರಲಿದೆ. ಆದ್ರೆ ಬಹುತೇಕ ಪ್ರಕರಣದಲ್ಲಿ ಇದು ಉತ್ತಮ ಆರೋಗ್ಯದ ಸೂಚನೆಯಾಗಿದೆ. ಹಳದಿ ಬಣ್ಣ ದೇಹದಲ್ಲಿನ ಕಲ್ಮಶ ಹೊರಹಾಕುವುದಾಗಿದೆ. ಹೀಗಾಗಿ ಹಳದಿ ಮಿಶ್ರಿತ ಮೂತ್ರವು ಆತಂಕಕ್ಕೆ ಕಾರಣವಲ್ಲ. ಕೆಲವೊಮ್ಮೆ ಬಹಳ ಬಿಸಲಿನ ಕಾರಣ, ಹಾಗೆ ನೀವು ಕಡಿಮೆ ನೀವು ಸೇವಿಸಿದ ಕಾರಣದಿಂದಾಗಿ ಈ ರೀತಿ ಹಳದಿ ಮೂತ್ರಕ್ಕೆ ಕಾರಣವಾಗುತ್ತದೆ. ಹಾಗೆ ನೀವು ಮಾತ್ರೆ, ಔಷಧಿ ಸೇವಿಸಿದಾಗಲು ಕೂಡ ಹಳದಿ ಮೂತ್ರ ನೋಡಬಹುದು. ಹಾಗೆ ಅತೀಯಾದ ಟೀ, ಕಾಫಿ, ಜ್ಯೂಸ್ ಸೇವನೆ ಕೂಡ ಈ ಹಳದಿ ಬಣ್ಣದ ಮೂತ್ರಕ್ಕೆ ಕಾರಣವಾಗಲಿದೆ. ಒಂದು ವೇಳೆ ನಿಮ್ಮ ಕಿಡ್ನಿಗಳಲ್ಲಿ ಕಲ್ಲುಗಳು ಕಂಡುಬಂದರೆ, ಆಗಲೂ ಸಹ ನಿಮ್ಮ ಮೂತ್ರದ ಬಣ್ಣ ಹಳದಿ ಬಣ್ಣಕ್ಕೆ ತಿರುಗುತ್ತದೆ.

ಬಣ್ಣವಿಲ್ಲದ ಮೂತ್ರ

ನೀವು ಮೂತ್ರ ವಿಸರ್ಜನೆ ಮಾಡಿದಾಗ ಅದು ಯಾವುದೇ ಬಣ್ಣ ಇಲ್ಲವೆ ಮೂತ್ರ ವಿಸರ್ಜನೆ ಮಾಡಿರಬಹುದು. ಇದರ ಅರ್ಥ ನಿಮ್ಮಲ್ಲಿ ಉತ್ತಮ ಜಲಸಂಚಯನವಿದೆ ಎಂದಾಗುತ್ತದೆ. ಆದ್ರೆ ಇದು ಒಂದಿಷ್ಟು ಸಮಸ್ಯೆ ತರಬಹುದು. ಇದು ನಿರ್ಜಲಿಕರಣದ ಅಪಾಯ ಉಂಟು ಮಾಡದಿದ್ದರೂ ದೇಹದಲ್ಲಿನ ಎಲೆಕ್ಟ್ರೋಲೈಟ್‌ಗಳನ್ನು ದುರ್ಬಲಗೊಳಿಸಲಿದೆ. ಇದು ಕೂಡ ಸಮಸ್ಯೆ ತರಬಹದು.

ಗಾಢ ಹಳದಿ ಅಥವಾ ಕೇಸರಿ ಬಣ್ಣ

ಮೂತ್ರ ವಿಸರ್ಜನೆಯು ಗಾಢ ಹಳದಿ ಅಥವಾ ತಿಳಿ ಕೇಸರಿ ಬಣ್ಣದಿಂದ ಕೂಡಿದ್ದರೆ ದೇಹದ ಉಷ್ಣಾಂಶ ಹೆಚ್ಚಾಗಿದೆ ಎಂದರ್ಥ ಹಾಗೆ ನಿಮ್ಮ ದೇಹಕ್ಕೆ ನೀರಿನ ಅವಶ್ಯಕತೆ ಇದೆ ಎಂಬ ಸುಳಿವು ನೀಡಲಿದೆ. ಯೂರಿಯಾ ಮತ್ತು ಯೂರೋಕ್ರೋಮ್ ನಂತಹ ತ್ಯಾಜ್ಯ ಉತ್ಪನ್ನಗಳ ಹೆಚ್ಚಿದ ಸಾಂದ್ರತೆಯು ಗಾಢವಾದ ಬಣ್ಣಕ್ಕೆ ಕಾರಣವಾಗಲಿದೆ. ಹಾಗೆ ಇದು ನಿಮ್ಮ ಯಕೃತ್ತು ಹಾಗೂ ಕಿಡ್ನಿಯಲ್ಲಿ ಸಮಸ್ಯೆಯ ಸೂಚಕವೂ ಆಗಿರಬಹುದು.

ಕೆಂಪು ಅಥವಾ ಗುಲಾಬಿ ಬಣ್ಣದ ಮೂತ್ರ

ನಿಮ್ಮ ಮೂತ್ರವು ಕೆಂಪು ಅಥವಾ ಗುಲಾಬಿ ಬಣ್ಣವನ್ನು ಹೊಂದಿದ್ದರೆ. ಕೆಲವು ಔಷಧಿಗಳು ಇದಕ್ಕೆ ಕಾರಣವಾಗಿರಬಹುದು. ನಮಗೆ ಅಚ್ಚರಿ ಎನಿಸಬಹುದು ಮಹಿಳೆಯೊಬ್ಬರು ವಾರರಿಂದಲೂ ಕೆಂಪು ಮೂತ್ರ ಬರುತ್ತಿದೆ ಎಂದು ಆಸ್ಪತ್ರೆಗೆ ತೆರಳಿದಾಗ ಅಲ್ಲಿ ಮೂತ್ರ ಪರಿಶೀಲನೆ ವೇಳೆ ಆಕೆ ಬಳಸುತ್ತಿದ್ದ ಲಿಪ್‌fಸ್ಟಿಕ್‌ ಇದಕ್ಕೆ ಕಾರಣವಾಗಿತ್ತು ಎಂದು ವರದಿಯಾಗಿದೆ. ಏಕೆಂದರೆ ಆಕೆ ನಿತ್ಯ ಕೆಂಪು ಬಣ್ಣದ ಲಿಪ್‌ಸ್ಟಿಕ್ ಹಚ್ಚಿಕೊಳ್ಳುತ್ತಿದ್ದಳು, ಅದರ ಅಂಶಗಳು ಉದರ ಸೇರಿದ ಬಳಿಕ ಕೆಂಪು ಮೂತ್ರಕ್ಕೆ ಕಾರಣವಾಗಿತ್ತು. ಹಾಗೆ ನೀವು ಕ್ಯಾರೆಟ್, ಬೀಟ್ರೂಟ್ ಸೇವನೆ ಮಾಡಿದಾಗಲು ಈ ರೀತಿ ಬಣ್ಣದ ಮೂತ್ರ ನೋಡಬಹುದು.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

The Hidden Warning In Your Morning Urine: What Yellow Color Reveals About Your Health

You can solve your body problem by checking the color of your urine. This method was called uroscopy. It is a medical procedure that has been practiced since ancient times.
Story first published: Wednesday, March 5, 2025, 17:12 [IST]
X
Desktop Bottom Promotion