Latest Updates
-
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್! -
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು!
Fish Venkat: ಫಿಶ್ ವೆಂಕಟ್ ನಿಧನ.. ಈ ರೋಗವೇ ಜೀವ ತೆಗೆದಿದ್ದು! ಈ ತಪ್ಪುಗಳನ್ನು ನೀವು ಮಾಡಬೇಡಿ
ತೆಲುಗು ಚಿತ್ರರಂಗ ಮತ್ತೋರ್ವ ಪ್ರತಿಭಾವಂತ ಕಲಾವಿದನನ್ನು ಕಳೆದುಕೊಂಡಿದೆ. ಹಿರಿಯ ನಟ ಕೋಟ ಶ್ರೀನಿವಾಸ ರಾವ್ ನಿಧನರಾಗಿ ವಾರ ಕಳೆಯುವ ಮುನ್ನವೇ ಮತ್ತೊಬ್ಬ ಹಿರಿಯ ನಟ ಇಹಲೋಕ ತ್ಯಜಿಸಿದ್ದಾರೆ. ಹಾಸ್ಯನಟ ಫಿಶ್ ವೆಂಕಟ್ (53) ಅನಾರೋಗ್ಯದಿಂದಾಗಿ ಕೊನೆಯುಸಿರೆಳೆದಿದ್ದಾರೆ. ಹಲವು ಚಿತ್ರಗಳಲ್ಲಿ ಖಳನಟನಾಗಿ, ಹಾಸ್ಯ ಖಳನಟನಾಗಿ, ಹಾಸ್ಯನಟನಾಗಿ ನಟಿಸಿ ನಗೆಯ ಹೊಳೆ ಹರಿಸಿದ್ದ ಅವರ ಮೂಲ ಹೆಸರು ಮಂಗಳಂಪಲ್ಲಿ ವೆಂಕಟೇಶ್. ಆದರೆ, ಮೀನು ವ್ಯಾಪಾರ ಮಾಡುತ್ತಿದ್ದರಿಂದ ಫಿಶ್ ವೆಂಕಟ್ (Fish Venkat) ಎಂದೇ ಪ್ರಸಿದ್ಧಿ. ತೆಲುಗು ನಟನ ನಿಧನಕ್ಕೆ ಅಸಲಿ ಕಾರಣ ಏನು (Fish Venkat death reason) ಗೊತ್ತಾ? ಏಕಕಾಲದಲ್ಲಿ ಕಿಡ್ನಿ ಮತ್ತು ಯಕೃತ್ತು ವೈಫಲ್ಯಕ್ಕೆ ಕಾರಣವೇನು ಗೊತ್ತಾ? ಇಲ್ಲಿದೆ ಮಾಹಿತಿ.
ನಟ ಫಿಶ್ ವೆಂಕಟ್ ಅವರು ಮೂತ್ರಪಿಂಡ ವೈಫಲ್ಯದಿಂದ ನಿಧನರಾದರು. ಅವರಿಗೆ ಎರಡು ಕಿಡ್ನಿಗಳು ಹಾಳಾಗಿದ್ದರಿಂದ ಬಹಳ ದಿನಗಳಿಂದ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ವೆಂಕಟ್ ಅವರ ಅಕಾಲಿಕ ಮರಣವು ಅನೇಕರಲ್ಲಿ ಆಘಾತವನ್ನುಂಟು ಮಾಡಿದೆ. ವೈದ್ಯರ ಪ್ರಕಾರ, ವೆಂಕಟ್ ಅವರ ಕಿಡ್ನಿ ಮತ್ತು ಲಿವರ್ ಎರಡೂ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದಾಗ ಅವರ ಸ್ಥಿತಿ ಹದಗೆಟ್ಟಿತು. ಇದನ್ನು ವೈದ್ಯಕೀಯ ಭಾಷೆಯಲ್ಲಿ ಮಲ್ಟಿಪಲ್ ಆರ್ಗನ್ ಫೇಲ್ಯೂರ್ (ಬಹು ಅಂಗಾಂಗ ವೈಫಲ್ಯ) ಎಂದು ಕರೆಯಲಾಗುತ್ತದೆ.

ಕಿಡ್ನಿ ಮತ್ತು ಲಿವರ್ ದೇಹದ ಪ್ರಮುಖ ಅಂಗಗಳಾಗಿವೆ. ಇವೆರಡೂ ಒಟ್ಟಿಗೆ ವಿಫಲವಾದರೆ, ಅದು ಮಾರಣಾಂತಿಕವಾಗಬಹುದು. ಕಿಡ್ನಿ ಮತ್ತು ಲಿವರ್ ಏಕಕಾಲದಲ್ಲಿ ಏಕೆ ವಿಫಲಗೊಳ್ಳುತ್ತವೆ ಮತ್ತು ಅವುಗಳ ಹಿಂದಿನ ಕಾರಣಗಳೇನು ಎಂಬುದನ್ನು ನೋಡೋಣ ಬನ್ನಿ.
ಕಿಡ್ನಿ, ಲಿವರ್ ಫೇಲ್ಯೂರ್ ಒಟ್ಟಿಗೆ ಏಕೆ ಸಂಭವಿಸುತ್ತದೆ?
ಹೆಪಟೋರಿನಲ್ ಸಿಂಡ್ರೋಮ್
ಹೆಪಟೋರಿನಲ್ ಸಿಂಡ್ರೋಮ್ (Hepatorenal Syndrome - HRS) ಒಂದು ಗಂಭೀರ ವೈದ್ಯಕೀಯ ಸ್ಥಿತಿಯಾಗಿದೆ. ಇದರಲ್ಲಿ ಲಿವರ್ ಹಾನಿಯಿಂದಾಗಿ ಕಿಡ್ನಿ ಕಾರ್ಯನಿರ್ವಹಣೆಯೂ ಕಡಿಮೆಯಾಗುತ್ತದೆ. ಇದು ಸಾಮಾನ್ಯವಾಗಿ ಲಿವರ್ ಸಿರೋಸಿಸ್ ಅಥವಾ ಹೆಪಟೈಟಿಸ್‌ನಂತಹ ದೀರ್ಘಕಾಲದ ಲಿವರ್ ಕಾಯಿಲೆ ಇರುವ ರೋಗಿಗಳಲ್ಲಿ ಕಂಡುಬರುತ್ತದೆ.
ಅತಿಯಾದ ಮದ್ಯಪಾನ
ಅತಿಯಾದ ಮದ್ಯಪಾನವು ಲಿವರ್ ಅನ್ನು ಹಾನಿಗೊಳಿಸುತ್ತದೆ. ಇದು ಸಿರೋಸಿಸ್ ಮತ್ತು ಹೆಪಟೈಟಿಸ್‌ಗೆ ಕಾರಣವಾಗುತ್ತದೆ. ಲಿವರ್ ಹಾನಿಗೊಳಗಾದಂತೆ, ಅದು ಕಿಡ್ನಿಯ ಮೇಲೆ ಪರಿಣಾಮ ಬೀರುತ್ತದೆ. ಈ ಸಂಯೋಜನೆಯು ಸಾಮಾನ್ಯವಾಗಿ ಎರಡೂ ಅಂಗಗಳ ಏಕಕಾಲಿಕ ವೈಫಲ್ಯಕ್ಕೆ ಕಾರಣವಾಗುತ್ತದೆ.
ಶುಗರ್ ಮತ್ತು ಹೈ ಬ್ಲಡ್ ಪ್ರೆಶರ್
ದೀರ್ಘಕಾಲದವರೆಗೆ ಶುಗರ್ (ಮಧುಮೇಹ) ಮತ್ತು ಅಧಿಕ ರಕ್ತದೊತ್ತಡದಿಂದ (ಹೈ ಬ್ಲಡ್ ಪ್ರೆಶರ್) ಬಳಲುತ್ತಿರುವ ವ್ಯಕ್ತಿಯು ಸರಿಯಾಗಿ ಔಷಧಿಗಳನ್ನು ತೆಗೆದುಕೊಳ್ಳದಿದ್ದರೆ, ಅದು ಕ್ರಮೇಣ ಕಿಡ್ನಿ ಮತ್ತು ಲಿವರ್ ಎರಡನ್ನೂ ಹಾನಿಗೊಳಿಸುತ್ತದೆ.
ಹೆಪಟೈಟಿಸ್ ಸೋಂಕು
ಹೆಪಟೈಟಿಸ್ ಬಿ ಮತ್ತು ಸಿ ನಂತಹ ಸೋಂಕುಗಳು ಲಿವರ್ ಅನ್ನು ಹಾನಿಗೊಳಿಸುತ್ತವೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ಈ ಸೋಂಕುಗಳು ಕಿಡ್ನಿಯ ಮೇಲೆ ಪರಿಣಾಮ ಬೀರಬಹುದು. ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ವ್ಯಾಯಾಮ ಮಾಡುವುದರಿಂದ ದೇಹದ ತೂಕವನ್ನು ನಿಯಂತ್ರಿಸಬಹುದು ಮತ್ತು ಕಿಡ್ನಿಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಬಹುದು.
ಅತಿಯಾದ ಔಷಧ ಸೇವನೆ
ಕೆಲವರು ನೋವು ನಿವಾರಕಗಳು, ಸ್ಟೀರಾಯ್ಡ್‌ಗಳು ಅಥವಾ ಇತರ ರಾಸಾಯನಿಕಗಳನ್ನು ಒಳಗೊಂಡಿರುವ ಔಷಧಿಗಳನ್ನು ವೈದ್ಯರ ಸಲಹೆ ಇಲ್ಲದೆ ಅತಿಯಾದ ಪ್ರಮಾಣದಲ್ಲಿ ತೆಗೆದುಕೊಳ್ಳುತ್ತಾರೆ. ಇದರಿಂದ ಲಿವರ್ ಮತ್ತು ಕಿಡ್ನಿ ಮೇಲೆ ನೇರ ಪರಿಣಾಮ ಬೀರುತ್ತದೆ. ಮತ್ತು ಎರಡೂ ಅಂಗಗಳನ್ನು ಕ್ರಮೇಣ ನಿಷ್ಕ್ರಿಯಗೊಳಿಸುತ್ತದೆ. ವೈದ್ಯರ ಸಲಹೆ ಇಲ್ಲದೆ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕು.
ಸೆಪ್ಸಿಸ್
ದೇಹದಲ್ಲಿ ಗಂಭೀರ ಸೋಂಕು ಉಂಟಾದಾಗ ಮತ್ತು ಅದು ರಕ್ತದ ಮೂಲಕ ದೇಹದಾದ್ಯಂತ ಹರಡಿದಾಗ, ಅದು ಕಿಡ್ನಿ ಮತ್ತು ಲಿವರ್ ಮೇಲೆ ತೀವ್ರವಾಗಿ ಪರಿಣಾಮ ಬೀರಬಹುದು. ಈ ಸ್ಥಿತಿಯನ್ನು ಸೆಪ್ಸಿಸ್ ಎಂದು ಕರೆಯಲಾಗುತ್ತದೆ.
ಅನಾರೋಗ್ಯಕರ ಜೀವನಶೈಲಿ
ಅನಾರೋಗ್ಯಕರ ಜೀವನಶೈಲಿ ಮತ್ತು ಬೊಜ್ಜು, ಫಾಸ್ಟ್ ಫುಡ್, ಸಂಸ್ಕರಿಸಿದ ಆಹಾರ, ಒತ್ತಡದ ಜೀವನ ಮತ್ತು ದೈಹಿಕ ಚಟುವಟಿಕೆಯ ಕೊರತೆಯಿಂದಾಗಿ ಫ್ಯಾಟಿ ಲಿವರ್ ಮತ್ತು ದೀರ್ಘಕಾಲದ ಕಿಡ್ನಿ ಕಾಯಿಲೆ (ಸಿಕೆಡಿ) ಹೆಚ್ಚಾಗುವ ಸಾಧ್ಯತೆಯಿದೆ. ಬೊಜ್ಜು ಮತ್ತು ಜೀವನಶೈಲಿಗೆ ಸಂಬಂಧಿಸಿದ ಕಾಯಿಲೆಗಳು ದೀರ್ಘಕಾಲದಲ್ಲಿ ಎರಡೂ ಅಂಗಗಳನ್ನು ಹಾನಿಗೊಳಿಸಬಹುದು.
ಇವುಗಳ ಬಗ್ಗೆ ಎಚ್ಚರವಿರಲಿ
• ನಿರಂತರ ಆಯಾಸ ಮತ್ತು ದೌರ್ಬಲ್ಯ
• ಹಸಿವು ಕಡಿಮೆಯಾಗುವುದು ಅಥವಾ ವಾಕರಿಕೆ
• ಕಾಲುಗಳು ಮತ್ತು ಮುಖದಲ್ಲಿ ಊತ
• ಹೊಟ್ಟೆ ಉಬ್ಬುವುದು ಅಥವಾ ನೋವು
• ಕಣ್ಣುಗಳು ಅಥವಾ ಚರ್ಮದ ಹಳದಿ ಬಣ್ಣ (ಕಾಮಾಲೆ)
• ಪದೇ ಪದೇ ವಾಂತಿ
• ಮೂತ್ರದ ಪ್ರಮಾಣ ಕಡಿಮೆಯಾಗುವುದು ಅಥವಾ ಬಣ್ಣ ಗಾಢವಾಗುವುದು
• ಮಾನಸಿಕ ಗೊಂದಲ ಅಥವಾ ತಲೆತಿರುಗುವಿಕೆ
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications