Latest Updates
-
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ -
ಮಧುರೈಗೆ ಹೋಗ್ತಿದ್ದೀರಾ? ಈ ಪವಿತ್ರ ದೇಗುಲಗಳಿಗೂ ಭೇಟಿ ನೀಡೋದನ್ನ ಮರೀಬೇಡಿ.. ಪಟ್ಟಿ ಇಲ್ಲಿದೆ -
ಈ 3 ರಾಶಿಗಳಿಗೆ ಜೀವನದಲ್ಲಿ ಏರಿಳಿತಗಳು! ಹಳೆಯ ನೆನಪುಗಳು ಕಾಡುತ್ತೆ -
March 09 Horoscope: ಶುಭ ಕಾರ್ಯದಲ್ಲಿ ಭಾಗಿಯಾಗುವ ಸಾಧ್ಯತೆ ಹೆಚ್ಚು! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ!
ಬೇಸಿಗೆಯಲ್ಲಿ ಬೆವರು ಗುಳ್ಳೆ ಉಂಟಾಗುವುದೇಕೆ? ಮನೆಯಲ್ಲೇ ಇದಕ್ಕೆ ಪರಿಹಾರ ಏನು ಗೊತ್ತಾ?
ಬೇಸಿಗೆಯ ಬಿಸಿಲಿನಲ್ಲಿ ಹತ್ತಾರು ಅನಾರೋಗ್ಯ ಸಮಸ್ಯೆಗಳು ಎದುರಾಗುವುದು ನೋಡಬಹುದು. ಕಾಲೋಚಿತ ಅನಾರೋಗ್ಯ ಸಮಸ್ಯೆಗಳು ಕಾಡುತ್ತಿರುತ್ತವೆ. ಈಗ ಮಳೆಗಾಲ, ಚಳಿಗಾಲ ಹಾಗೆ ಬೇಸಿಗೆಯಲ್ಲಿ ಆ ಕಾಲಕ್ಕೆ ಅನುಗುಣವಾಗಿ ಹರಡುವ ಹಲವು ಸಮಸ್ಯೆಗಳ ನಾವು ನೋಡಬಹುದು. ಮಳೆಗಾಲದಲ್ಲಿ ನೀವು ಶೀತ, ಕೆಮ್ಮು, ಸಾಮಾನ್ಯ ಜ್ವರದಂತಹ ಸಮಸ್ಯೆಗೆ ಒಳಗಾಗುತ್ತೀರಿ, ಚಳಿಗಾಲದಲ್ಲಿಯೂ ಈ ರೀತಿ ಆಗುವುದು ನೋಡಬಹುದು.
ಹಾಗೆ ಬೇಸಿಗೆಯಲ್ಲೂ ಕೂಡ ಹತ್ತು ಹಲವು ರೀತಿಯ ಅನಾರೋಗ್ಯ ಸಮಸ್ಯೆಗಳನ್ನು ನಾವು ನೋಡಬಹುದು. ಹಾಗೆ ಈ ಸಮಯದಲ್ಲಿ ಮಕ್ಕಳು, ವಯಸ್ಕರು, ಹಿರಿಯರಿಗೂ ಕೂಡ ಹಲವು ರೀತಿಯ ಸಮಸ್ಯೆ ಕಾಡುವುದು ನೋಡಬಹುದು. ಹೆಚ್ಚಾಗಿ ಈ ಸಮಯದಲ್ಲಿ ತಾಪಮಾನ ಏರಿಕೆಯಾಗುವ ಕಾರಣದಿಂದಾಗಿ ದೇಹದ ಉಷ್ಣತೆ ಹೆಚ್ಚಾಗಿ ಅದರ ಪರಿಣಾಮ ಹಲವು ರೀತಿ ಸಮಸ್ಯೆ ಎದುರಿಸುತ್ತಾರೆ.

ಹಾಗೆ ಸಾಮಾನ್ಯವಾಗಿ ಈ ಸಮಯದಲ್ಲಿ ಚರ್ಮಕ್ಕೆ ಸಂಬಂಧಿಸಿದ ಹಲವು ರೀತಿ ಅನಾರೋಗ್ಯಕ್ಕೆ ತುತ್ತಾಗುವುದು ಕೂಡ ನಾವು ನೋಡಬಹುದು. ಅದರಲ್ಲೂ ಬೆವರು ಗುಳ್ಳೆ, ಬೆವರು ಸಾಲೆ ಸಮಸ್ಯೆ ಎಲ್ಲರಿಗೂ ಕಾಡುವ ಅನಾರೋಗ್ಯ ಎನ್ನಬಹುದು. ಅದರಲ್ಲೂ ಮಕ್ಕಳಲ್ಲಿ ಹೆಚ್ಚಾಗಿ ಇದು ಕಂಡುತ್ತದೆ. ಮನೆಯಿಂದ ಹೊರಗೆ ಅವರು ಹೆಚ್ಚು ಸಮಯ ಕಳೆಯುವ ಕಾರಣ ಅವರಲ್ಲಿ ಈ ಸಮಸ್ಯೆ ನೋಡಬಹುದು.
ಬೇಸಿಗೆಯಲ್ಲಿ ಈ ರೀತಿಯ ಬೆವರು ಗುಳ್ಳೆಯು ನಿದ್ರೆ ಇಲ್ಲದ ರಾತ್ರಿ ನೀಡುತ್ತೆ. ಅದರಲ್ಲೂ ಮಕ್ಕಳು ಇದರಿಂದ ಬಹಳಷ್ಟು ಸಮಸ್ಯೆ ಎದುರಿಸುತ್ತಾರೆ. ನಾವಿಂದು ಈ ಬೆವರು ಗುಳ್ಳೆ ಉಂಟಾಗುವುದೇಕೆ? ಇದಕ್ಕೆ ಮನೆಯಲ್ಲೇ ಯಾವೆಲ್ಲಾ ಮದ್ದು ಮಾಡಿಕೊಳ್ಳಬಹುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಬೆವರು ಗುಳ್ಳೆ ಕಾಣಿಸಿಕೊಳ್ಳಲು ಕಾರಣಗಳು
ಅತೀಯಾಗಿ ಬೆವರುವುದು
ಬೇಸಿಗೆಯಲ್ಲಿ ಬೆವರದೆ ಇರಲು ಸಾಧ್ಯವಿಲ್ಲ. ಅದರಲ್ಲೂ ಹೊರಗೆ ಬಿಸಿಲಿಗೆ ಬಂದ ತಕ್ಷಣವೇ ಬೆವರು ಆರಂಭಿಸುತ್ತೇವೆ. ಹೆಚ್ಚಾಗಿ ಬೆವರುವವರು ಬೆವರು ಗುಳ್ಳೆಯಂತಹ ಸಮಸ್ಯೆಗೆ ಒಳಗಾಗುವ ಸಂಭವ ಹೆಚ್ಚಾಗಿರುತ್ತದೆ. ಬೆವರು ಅತಿಯಾಗಿ ಬರುವುದು ಚರ್ಮದ ಮೇಲೆ ರಾಷಸ್ ಉಂಟಾಗಲು ಕಾರಣವಾಗುತ್ತದೆ, ಹೀಗಾಗಿ ಹೆಚ್ಚು ಬೆವರದಂತೆ ಎಚ್ಚರ ವಹಿಸಿ.
ಮೇಕಪ್
ಬೇಸಿಗೆಯಲ್ಲಿ ಅತೀಯಾಗಿ ಮೇಕಪ್ ಮಾಡಿಕೊಳ್ಳುವುದು ಕೂಡ ಬೆವರಿನ ಗುಳ್ಳೆಗಳಿಗೆ ಕಾರಣವಾಗುತ್ತದೆ. ಬೇಸಿಗೆಯಲ್ಲಿ ಇದು ಮೊಡವೆಗಳು ಮತ್ತು ಬಿರುಕುಗಳಿಗೆ ಕಾರಣವಾಗುತ್ತದೆ. ಕುತ್ತಿಗೆ ಭಾಗದಲ್ಲಿ ಉಂಟಾಗುವ ಬೆವರು ಗುಳ್ಳೆಗಳಿಗೆ ಮೇಕಪ್ ಕಾರಣವಾಗಬಹುದು. ಚರ್ಮದಿಂದ ಬೆವರು ಹೊರಬಂದಷ್ಟು ಉತ್ತಮ, ಆದ್ರೆ ಮೇಕಪ್ ಮೂಲಕ ಈ ರಂಧ್ರಗಳಿಂದ ನೀರು ಹೊರಬಾರದಂತೆ ತಡೆಯುವುದು ಬೆವರು ಗುಳ್ಳೆ ಹೆಚ್ಚಲು ಕಾರಣವಾಗಬಹುದು.
ನೀವು ಧರಿಸುವ ಬಟ್ಟೆಗಳು
ಬೇಸಿಗೆಯಲ್ಲಿ ನೀವು ಬಳಸುವ ಬಟ್ಟೆ ಕೂಡ ಬೆವರು ಸಾಲೆಗೆ ಕಾರಣವಾಗುತ್ತದೆ. ನೀವು ದಪ್ಪವಾದ ಜೀನ್ಸ್, ಉಣ್ಣೆಯ ಬಟ್ಟೆ ಧರಿಸುವುದು ನಿಮ್ಮ ದೇಹದಲ್ಲಿ ಮತ್ತಷ್ಟು ಉಷ್ಣತೆ ಹೆಚ್ಚಾಗಲು ಕಾರಣವಾಗಲಿದೆ. ಹೀಗಾಗಿ ಬೇಸಿಗೆಯಲ್ಲಿ ತೆಳುವಾದ ಬಟ್ಟೆ ಧರಿಸುವುದು ಬಹಳ ಉತ್ತಮ.
ಸರಿಯಾದ ವಿಧಾನದಲ್ಲಿ ಸ್ನಾನ ಮಾಡದಿರುವುದು
ಬೇಸಿಗೆಯಲ್ಲಿ ನೀವು ಮನೆಯಲ್ಲಿ ಇದ್ದಾಗಲು ಬೆವರುತ್ತೀರಿ, ಆದ್ರೆ ಸರಿಯಾದ ವಿಧಾನದಲ್ಲಿ ಸ್ನಾನ ಮಾಡಿದರೆ ನಿಮಗೆ ಬೆವರು ಗುಳ್ಳೆಗಳು ಸೇರಿ ಹಲವು ಚರ್ಮ ಸಂಬಂಧಿ ಸಮಸ್ಯೆಯಿಂದ ದೂರ ಇರಬಹುದು. ನೀವು ಸರಿಯಾಗಿ ಸ್ನಾನ ಮಾಡದೆ ಇದ್ದರೆ ಅಥವಾ ಸ್ನಾನ ಮಾಡಿದ ಬಳಿಕ ಹೊರಗೆ ಹೋಗಿ ಬೆವರುವುದು ಹಾಗೆ ಮತ್ತೆ ಸ್ನಾನ ಮಾಡದೆ ಇರುವುದು ಕೂಡ ಈ ಸಮಸ್ಯೆ ಹೆಚ್ಚಾಗಲು ಕಾರಣವಾಗುತ್ತದೆ.
ಬೆವರು ಸಾಲೆಗೆ ಮನೆಯಲ್ಲೇ ಪರಿಹಾರ ಹೇಗೆ ಮಾಡಿಕೊಳ್ಳುವುದು?
ಬೆವರು ಗುಳ್ಳೆಗೆ ಮೆಡಿಕಲ್‌ನ ಔಷಧಿಯ ಜೊತೆಗೆ ಮನೆಯಲ್ಲೇ ಹಲವು ಪರಿಹಾರ ಮಾಡಿಕೊಳ್ಳಬಹುದು. ಇದು ಸುರಕ್ಷಿತ ಮಾರ್ಗವು ಹೌದು. ಹಾಗಾದ್ರೆ ಮನೆಯಲ್ಲಿ ಯಾವ ರೀತಿಯ ಪರಿಹಾರಕ್ಕೆ ಮುಂದಾಗಬಹುದು ಎಂಬುದನ್ನು ತಿಳಿದುಕೊಳ್ಳಿ.
ಅಕ್ಕಿ ನೀರಿನಿಂದ ಸ್ನಾನ
ಬೆವರು ಸಾಲೆಗೆ ಮನೆಯಲ್ಲೇ ನೀವು ದೇಹ ತಂಪಾಗಿಸುವಂತಹ ಪ್ರಯತ್ನ ಮಾಡಿ. ಇದಕ್ಕಾಗಿ ಅಕ್ಕಿಯನ್ನು ತೊಳೆದು ಉಳಿಯುವ ನೀರನ್ನು ಬಳಸಿ ಸ್ನಾನ ಮಾಡಬಹುದು. ಇದರಿಂದ ತಂಪಾಗುವ ಕಾರಣದಿಂದ ಬೆವರು ಗುಳ್ಳೆಗಳು ನಿವಾರಣೆಯಾಗಲಿವೆ.
ಅಲೂವೆರಾ
ಲೋಳೆಸರ ಅಥವಾ ಅಲೂವೆರಾ ತ್ವಚೆಗೆ ತಂಪು ನೀಡುವ ಅತ್ಯುತ್ತಮ ವಸ್ತು. ಇದು ಬೆವರು ಸಾಲೆಗೂ ಅತ್ಯುತ್ತಮ ಆಗಿದೆ. ಉರಿಯೂತ, ರಾಷಸ್ ನಿವಾರಣೆಗೂ ಬಹಳ ಉತ್ತಮ. ಮೊದಲು ಒಂದು ಲೋಳೆರಸದ ಎಲೆಯಿಂದ ಲೋಳೆಗಳ ತೆಗೆದು ಬೌಲ್‌ಗೆ ಹಾಕಿಕೊಂಡು ಅದನ್ನು ಬೆವರಿನ ಗುಳ್ಳೆಗಳು ಆಗಿರುವ ಜಾಗಕ್ಕೆ ಹಚ್ಚಿಕೊಳ್ಳಬೇಕು. ಸುಮಾರು 1 ವಾರದ ವರೆಗೆ ಹೀಗೆ ಹಚ್ಚಿದರೆ ಸಮಸ್ಯೆ ನಿವಾರಣೆಯಾಗಲಿದೆ.
ಸೌತೆಕಾಯಿ
ಸೌತೆಕಾಯಿ ತಂಪಿನ ವಸ್ತು. ದೇಹದ ಉಷ್ಣತೆ ಹೆಚ್ಚಾದರೆ ಈ ಸೌತೆಕಾಯಿ ಸವಿಯುವುದು ನಿಮ್ಮಲ್ಲಿ ಸಮತೋಲನಕ್ಕೆ ಕಾರಣವಾಗುತ್ತದೆ. ಹಾಗೆ ಚರ್ಮದ ಮೇಲೆ ಸೌತೆಕಾಯಿ ಕತ್ತರಿಸಿ ಇಟ್ಟುಕೊಳ್ಳುವುದು ಕೂಡ ಬೆವರು ಗುಳ್ಳೆಗಳಂತಹ ಸಮಸ್ಯೆಯಿಂದ ದೂರ ಇಡಲಿದೆ.
ಗಂಧದ ಪುಡಿ
ದೇಹದ ತಂಪಿಗೆ ಹಾಗೆ ಬೆವರು ಗುಳ್ಳೆಗಳಿಂದ ವಿಪರೀತ ಉರಿ ಉಂಟಾಗುತ್ತಿದ್ದರೆ ಶ್ರೀಗಂಧದ ಪುಡಿಯನ್ನು ಹಚ್ಚಿಕೊಳ್ಳಬೇಕು. ಗಂಧದ ಪುಡಿಯನ್ನು ಮೊದಲಿಗೆ ನೀರಿನಲ್ಲಿ ಹಾಕಿ ಅದನ್ನು ಪೇಸ್ಟ್ ರೀತಿ ಮಾಡಿಕೊಳ್ಳಬೇಕು. ನಂತರ ಇದಕ್ಕೆ ಸ್ವಲ್ಪ ಹಾಲು, ಅರಶಿಣ ಸೇರಿಸಿ ಮಿಶ್ರಣ ಮಾಡಿ ಬೆವರು ಗುಳ್ಳೆ ಆಗಿರುವಂತಹ ಸ್ಥಳಕ್ಕೆ ಹಚ್ಚಿಕೊಳ್ಳಬೇಕು. ಈ ರೀತಿ ವಾರದಲ್ಲಿ ಎರಡರಿಂದ ಮೂರು ಬಾರಿ ಮಾಡಿದರೆ ಸಾಕಾಗುತ್ತದೆ.
ಜೇನು ತುಪ್ಪ ಹಾಗೂ ಮೊಸರು
ಜೇನು ತುಪ್ಪವು ಬ್ಯಾಕ್ಟೀರಿಯಾ ವಿರೋಧಿ ಗುಣಗಳ ಹೊಂದಿದೆ. ಹೀಗಾಗಿ ಬೆವರು ಗುಳ್ಳೆಗಳು ಆಗಿರುವ ಸ್ಥಳದ ಮೇಲೆ ಜೇನು ತುಪ್ಪವನ್ನು ನಿಧಾನವಾಗಿ ಸವರಿಕೊಳ್ಳಬೇಕು ಹಾಗೆ ಅದನ್ನು 20 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಬೇಕು. ಇದರಿಂದ ಬೆವರು ಸಾಲೆ ಬಹುಬೇಗ ನಿವಾರಣೆಯಾಗುತ್ತದೆ. ಇನ್ನು ಮೊಸರು ಕೂಡ ಇದಕ್ಕೆ ಉತ್ತಮ ಪರಿಹಾರ ನೀಡಲಿದೆ. ಬೆವರು ಗುಳ್ಳೆಯ ಮೇಲೆ ದಪ್ಪವಾಗಿ ಮೊಸರನ್ನು ಹಚ್ಚಿ ಬಿಡಬೇಕು. 30 ನಿಮಿಷದ ಬಳಿಕ ತೊಳೆಯುವುದು ಆ ಜಾಗದಲ್ಲಿ ಉರಿ ಕಡಿಮೆ ಮಾಡಲು ಸಹಕಾರಿಯಾಗುತ್ತದೆ.
ನೀರಿನ ಅಂಶ ಹೆಚ್ಚಿರುವ ಆಹಾರ ಸೇವಿಸಿ
ಬೇಸಿಗೆಯಲ್ಲಿ ದೇಹದ ಉಷ್ಣತೆ ಹೆಚ್ಚಾಗುವುದರಿಂದ ಈ ರೀತಿ ಬೆವರು ಗುಳ್ಳೆಗಳು ಕಾಣಿಸಿಕೊಳ್ಳುತ್ತದೆ, ಹೀಗಾಗಿ ದೇಹ ತಂಪಾಗಿರಬೇಕಾದರೆ ನೀರು ಹೆಚ್ಚು ಹೆಚ್ಚು ಕುಡಿಯಬೇಕು. ಹಾಗೆ ನೀರಿನ ಅಂಶ ಹೆಚ್ಚಾಗಿರುವ ಆಹಾರ ಸೇವಿಸುವುದು ಉತ್ತಮ. ಜ್ಯೂಸ್, ಎಳನೀರು, ಹಣ್ಣುಗಳ ಸೇವನೆ ಹಚ್ಚಿಸಿಕೊಳ್ಳಿ.
ದಿನಕ್ಕೆರಡು ಬಾರಿ ಸ್ನಾನ ಮಾಡಿ
ಬೇಸಿಗೆಯ ದಿನದಲ್ಲಿ ಎಷ್ಟು ಬಾರಿ ಸ್ನಾನ ಮಾಡಿದರೂ ಅನಾರೋಗ್ಯ ಬೀಳುವುದಿಲ್ಲ. ಹೀಗಾಗಿ ದಿನಕ್ಕೆ ಎರಡು ಬಾರಿ ಸ್ನಾನ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ. ಬೆಳಗ್ಗೆ ಹಾಗೂ ಮಲಗುವ ಮುನ್ನ ಸ್ನಾನ ಮಾಡುವುದು ಕೂಡ ದೇಹದಲ್ಲಿ ಕಲ್ಮಶ ನಿವಾರಣೆಗೆ ಸಹಕಾರಿಯಾಗಲಿದೆ. ಹಾಗೆ ಬೆವರು ದೇಹದಲ್ಲಿ ಉಳಿದಂತೆ ಮಾಡಬಹುದು.
ಗಾಳಿಯುವ ಹತ್ತಿ ಮತ್ತು ಲಿನಿನ್ ಬಟ್ಟೆಗಳನ್ನು ಈ ಸಮಯದಲ್ಲಿ ಧರಿಸುವುದು ಉತ್ತಮ. ಪಾಲಿಯೆಸ್ಟರ್ ಬಟ್ಟೆಯನ್ನು ಧರಿಸುವುದು ಸೂಕ್ತವಲ್ಲ. ಸಡಿಲವಾಗಿ ಚೆನ್ನಾಗಿ ಗಾಳಿ ಆಡುವಂತಹ ಬಟ್ಟೆ ಇದ್ದಷ್ಟು ಉತ್ತಮ. ನಿತ್ಯ ಬಟ್ಟೆಯನ್ನ ಬದಲಾಯಿಸುವುದು ಬಹಳ ಒಳ್ಳೆಯದು. ಎಳನೀರು, ತಾಜಾ ನಿಂಬೆ ರಸ, ಕೋಕಮ್ ಬೀಟ್ರೂಟ್, ಕ್ಯಾರೆಟ್ ಜ್ಯೂಸ್ ಸೇವಿಸುವುದು ಬಹಳ ಒಳ್ಳೆಯದು. ಕಾರ್ಬೋಹೈಡ್ರೇಟ್ ತುಂಬಿರುವ ತಂಪು ಪಾನಿಯ ಸೇವಿಸಬೇಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











