Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಎಳನೀರಿನ ಬೆಲೆ ದುಬಾರಿ, ಎಳನೀರಿಗೆ ಪರ್ಯಾಯವಾಗಿ ದೇಹ ತಂಪಾಗಿಡಲು ಯಾವ ಪಾನೀಯ ಒಳ್ಳೆಯದು?
ಅಬ್ಬಾಬ್ಬ ಉರಿ ಬಿಸಿಲು ಈ ಬಿಸಿಲಿನಲ್ಲಿ ಎಳನೀರು ಕುಡಿದರೆ ಒಳ್ಳೆಯದು ಎಳನೀರು ಕುಡಿಯಲು ಹೋದರೆ ತಲೆಸುತ್ತು ಬರುತ್ತೆ, ಒಂದು ಎಳನೀರಿಗೆ ಬರೋಬರಿ 60 ರುಪಾಯಿ, ಕೆಲವೂ ಕಡೆ ಇನ್ನೂ ಹೆಚ್ಚು, ಎಳನೀರು ಕುಡಿಯಬೇಕಾ, ಬೇಡ್ವಾ ಎಂದು ಆಲೋಚನೆ ಮಾಡುವಂತೆ ಮಾಡುವುದು. ಈ ಬೇಸಿಗೆಯಲ್ಲಿ ಎಳನೀರು ಕುಡಿಯದಿದ್ದರೆ ಆಗಲ್ಲ, ದೇಹಕ್ಕೆ ಅವಶ್ಯಕ ಎಂಬ ಕಾರಣಕ್ಕೆ ಕೆಲವರು ಬೆಲೆ ಹೆಚ್ಚಾದರು ಪರ್ವಾಗಿಲ್ಲ ಎಂದು ಕುಡಿಯುತ್ತಿದ್ದಾರೆ.
ಆದರೆ ನಿಮಗೆ ಗೊತ್ತಾ? ಈ ಬೇಸಿಗೆಯಲ್ಲಿ ನೀವು ಎಳನೀರು ಕುಡಿಯಲೇಬೇಕೆಂದಿಲ್ಲ , ಅದರ ಬದಲಿಗೆ ಚೆನ್ನಾಗಿ ಕುದಿಸಿ ಆರಿಸಿದ ನೀರು ಅಥವಾ ಫಿಲ್ಟರ್ ನೀರು ಕುಡಿದರೆ ಸಾಕಾಗುತ್ತೆ. ಎಳನೀರು ಕುಡಿಯಲೇಬೇಕೆಂಬ ನಿರ್ಬಂಧವಿಲ್ಲ ಎಂದು ಬೆಂಗಳೂರಿನ ಪ್ರಸಿದ್ಧ ವೈದ್ಯರಾದ ಡಾ. ಕೃಷ್ಣಮೂರ್ತಿ ಟ್ವೀಟ್ ಮಾಡಿದ್ದಾರೆ.

ಆ ಟ್ವೀಟ್‌ಗೆ ಈ ಬೇಸಿಗೆಯಲ್ಲಿ ನನಗೆ ಮೂಗಿನಲ್ಲಿ ರಕ್ತ ಬರುತ್ತದೆ, ಎಳನೀರು ಕುಡಿದರೆ ಮಾತ್ರ ಆ ಸಮಸ್ಯೆ ತಡೆಗಟ್ಟಬಹುದು, ಬರಿ ನೀರು ಕುಡಿಯುವುದರಿಂದ ಈ ಸಮಸ್ಯೆಗೆ ಪರಿಹಾರ ಸಿಗಲ್ಲ ಎಂದು ಅದಕ್ಕೆ ರೀಟ್ವೀಟ್ ಮಾಡಿದ್ದರು, ಅದಕ್ಕೆ ಡಾಕ್ಟರ್ ನೀವು ಒಳ್ಳೆಯ ENT ಡಾಕ್ಟರ್ ಕಂಡು ಚಿಕಿತ್ಸೆ ಪಡೆದರೆ ಸರಿಹೋಗುತ್ತೆ ಎಂಬುವುದಾಗಿ ಸಲಹೆ ನೀಡಿದ್ದಾರೆ.
ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ನೀರು, ಮಜ್ಜಿಗೆ ಸೇವಿಸಿ
ದೇಹವನ್ನು ತಂಪಾಗಿಡಲು ಎಳನೀರೇ ಸೇವಿಸಬೇಕೆಂದಿಲ್ಲ, ಬದಲಿಗೆ ನೀರು, ಮಜ್ಜಿಗೆ ಕುಡಿದರೆ ಸಾಕಾಗುತ್ತೆ. ಬಾಳೆಹಣ್ಣು ಸೇವಿಸಿ, ಎಳನೀರಿನಲ್ಲಿರುವ ಪೋಷಕಾಂಶ ನಿಮಗೆ ಬಾಳೆಹಣ್ಣಿನಿಂದ ಕೂಡ ಸಿಗುತ್ತದೆ.
ಎಳನೀರಿನಿಂದಲೇ ದೇಹ ತಂಪಾಗುತ್ತೆ ಎಂದು ಭಾವಿಸಬೇಕಾಗಿಲ್ಲ
ಎಳನೀರು ಬೆಲೆ ದುಬಾರಿಯಾಗುತ್ತಿರುವಾಗ ಎಳನೀರೇ ಕುಡಿಯಲೇಬೇಕೆಂದಿಲ್ಲ, ನೀವು ನಿಮ್ಮ ತೋಟದಲ್ಲಿ ತೆಂಗಿನ ಮರವಿದ್ದರೆ ಎಳನೀರು ಹಾಕಿ ಕುಡಿಯಿರಿ, ಹೊರಗಡೆಯಿಂದ ದುಬಾರಿ ಬೆಲೆ ಕೊಟ್ಟು ಖರೀದಿ ಮಾಡಬೇಕಾಗಿಲ್ಲ.
ದೇಹವನ್ನು ತಂಪಾಗಿಸಲು ಈ ಪಾನೀಯ ಸೇವಿಸಿ
ಕಾಮ ಕಸ್ತೂರಿ ಮತ್ತು ನಿಂಬೆ ಪಾನೀಯ ಮಾಡಿ ಸೇವಿಸಿ: ನೀವು ಒಂದು ಚಮಚ ಕಾಮಕಸ್ತೂರಿ 10 ನಿಮಿಷ ನೆನೆ ಹಾಕಿ, ನಂತರ ನಿಂಬೆ ಪಾನೀಯ ಮಾಡಿ ಅದರಲ್ಲಿ ಕಾಮ ಕಸ್ತೂರಿ ಹಾಕಿ ಕುಡಿಯಿರಿ. ಈ ಪಾನೀಯ ದೇಹವನ್ನು ತಂಪಾಗಿಡುತ್ತದೆ.
ಮಜ್ಜಿಗೆ ಮಾಡಿ ಕುಡಿಯಿರಿ: ಅರ್ಧ ಲೀಟರ್ ಮೊಸರಿಗೆ ಒಂದೂವರೆ ಲೀಟರ್ ನೀರು ಹಾಕಿ, ಅದರಲ್ಲಿ ಕೊತ್ತಂಬರಿ ಸೊಪ್ಪು, ಸ್ವಲ್ಪ ಶುಂಠಿ , ಒಂದು ಹಸಿ ಮೆಣಸು ಹಾಕಿ ಮಜ್ಜಿಗೆಮಾಡಿ ಕುಡಿಯಿರಿ, ಮಜ್ಜಿಗೆ ಕೂಡ ದೇಹವನ್ನು ತಂಪಾಗಿಡುತ್ತದೆ.
Overrated drink. If you have a coconut tree at home or farm, drink it. Otherwise, there is no need to buy and drink. Drink water. https://t.co/GVHQsObDT3
— Dr Deepak Krishnamurthy (@DrDeepakKrishn1) March 26, 2025
ಕೋಕಂ ಪಾನೀಯ, ಪುನರ್ಪುಳಿ ಪಾನೀಯ ಮಾಡಿ ಕುಡಿಯಿರಿ: ಬೇಸಿಗೆಗೆ ತುಂಬಾನೇ ತುಂಬಾನೇ ಒಳ್ಳೆಯದು. ಇದು ಪಿತ್ತದೋಷ ಕಡಿಮೆ ಮಾಡುತ್ತದೆ, ದೇಹವನ್ನು ತಂಪಾಗಿಡುತ್ತದೆ. ಮೈ ಉಷ್ಣಾಂಶ ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ.
ಬಾಳೆಹಣ್ಣು ಸೇವಿಸಿ: ಬಾಳೆಹಣ್ಣು ಬೇಸಿಗೆಯಲ್ಲಿ ತಿನ್ನುವುದರಿಂದ ದೇಹ ತಂಪಾಗಿಡಲು ತುಂಬಾನೇ ಸಹಕಾರಿಯಾಗಿದೆ.
ಜೀರಿಗೆ ಕಷಾಯ ಮಾಡಿ ಕುಡಿಯಿರಿ: ನೀರಿಗೆ ಜೀರಿಗೆ ಹಾಕಿ ಕುದಿಸಿ ಆ ನೀರು ಕುಡಿಯುವುದರಿಂದ ದೇಹ ತಂಪಾಗಿರುತ್ತದೆ.
ಎಳನೀರಿನಲ್ಲಿಯೂ ಅನೇಕ ಆರೋಗ್ಯಕರ ಪ್ರಯೋಜನಗಳಿವೆ:
ಎಳನೀರಿನಲ್ಲಿ ಎಲೆಕ್ಟ್ರೋಲೈಟ್ಸ್ ಗುಣಗಳಿವೆ, ಜೊತೆಗೆ ಅನೇಕ ಪೋಷಕಾಂಶಗಳು, ಖನಿಜಾಂಶಗಳಿವೆ. ಆದರೆ ದುಬಾರಿ ಆದಾಗ ಜೇಬು ಖಾಲಿ ಮಾಡುತ್ತದೆ. ಹಾಗಾಗಿ ದೇಹವನ್ನು ತಂಪಾಗಿಡಲು ನೀವು ಬಜೆಟ್ ಫ್ರೆಂಡ್ಲಿ ಆರೋಗ್ಯಕರ ಆಹಾರ, ಪಾನೀಯ ಸೇವಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
