Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಹಲ್ಲು ಹುಳುಕಿಗೆ ಸಕ್ಕರೆ ಕಾರಣ ಅಲ್ಲವೇ ಅಲ್ಲ..! ಹಾಗಾದ್ರೆ ನಾವು ತಿಳಿದಿರುವ ತಪ್ಪು ವಿಚಾರಗಳೇನು?
ಹಲ್ಲುಗಳು ಹುಳುಕು ಹಿಡಿಯುವುದು ಇತ್ತೀಚಿಗೆ ಬಹಳವಾಗಿ ಕಾಡುತ್ತಿರುವ ಸಮಸ್ಯೆಯಾಗಿದೆ. ಅದರಲ್ಲೂ ವಯಸ್ಸಿನ ಮಿತಿ ಇಲ್ಲದೆಯೇ ಈ ಸಮಸ್ಯೆ ಹರಡುತ್ತಿದೆ. ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಹಲ್ಲಿನ ಸಮಸ್ಯೆ ಈಗ ಸಾಮಾನ್ಯ ಎನ್ನುವಂತಾಗಿದೆ. ಹಾಗೆ ಹುಳುಕು ಹಲ್ಲು ಅಸಾಮಾನ್ಯ ನೋವಿಗೆ ಕಾರಣವಾಗುವುದು ನೋಡಬಹುದು. ಬಹುತೇಕರು ಈ ಹಲ್ಲುಗಳನ್ನು ತೆಗೆಸಿಬಿಡುವುದು ಹೆಚ್ಚು. ಏಕೆಂದರೆ ಹುಳುಕು ಹಲ್ಲುಗಳನ್ನು ಮತ್ತೆ ಮೊದಲಿನಂತೆ ಮಾಡುವುದು ಕಷ್ಟ. ಆದರೆ ನೋವು ಬಾರದಂತೆ ನಿಯಂತ್ರಣದಲ್ಲಿಡಬಹುದು.
ಮಕ್ಕಳಲ್ಲಿ ಈ ಸಮಸ್ಯೆ ಬಹಳವಾಗಿ ಕಾಡುತ್ತದೆ. ಕೆಲವರಿಗೆ ಬಹುಬೇಗ ಈ ಸಮಸ್ಯೆ ಉಂಟಾಗುವುದು ಹಲ್ಲುಗಳ ನಷ್ಟಕ್ಕೆ ಕಾರಣವಾಗುತ್ತದೆ. ಹೀಗಾಗಿ ಈ ಕುರಿತು ಜಾಗೃತಿ ಮೂಡಿಸಲು ಪ್ರತಿ ವರ್ಷ ಮಾರ್ಚ್ 20 ರಂದು ವಿಶ್ವ ಬಾಯಿ ಆರೋಗ್ಯ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನ ಬಾಯಿಯ ಆರೋಗ್ಯಕ್ಕೆ ಸಂಬಂಧಿಸಿದಂತೆ ಜಾಗೃತಿ ಮೂಡಿಸಲಾಗುತ್ತದೆ. ಬಾಯಿಯ ಆರೋಗ್ಯದಲ್ಲಿ ಹಲ್ಲುಗಳ ಆರೋಗ್ಯ ಕೂಡ ಬಹಳ ಮುಖ್ಯ ಎನಿಸಿದೆ.

ಹೆಚ್ಚಿನವರು ಸಿಹಿ ಸೇವಿಸುವುದು, ಸಕ್ಕರೆ ಪ್ರಮಾಣ ಹೆಚ್ಚಾಗಿ ಸೇವಿಸುವುದು ಈ ಹುಳುಕು ಹಲ್ಲಿನ ಸಮಸ್ಯೆಗೆ ಕಾರಣವಾಗುತ್ತಿದೆ ಎಂದು ನಂಬಿದ್ದಾರೆ. ಆದ್ರೆ ಎಲ್ಲಾ ಪ್ರಕರಣದಲ್ಲೂ ಈ ಸಕ್ಕರೆ ಅಂಶವೇ ಕಾರಣ ಎಂಬುದು ತಪ್ಪಾಗುತ್ತದೆ. ಬಹುತೇಕರಿಗೆ ಹುಳುಕು ಹಲ್ಲಿನ ಸಮಸ್ಯೆ ಯಾಕಾಗಿ ಉಂಟಾಗುತ್ತಿದೆ ಎಂಬುದೇ ತಿಳಿದಿರುವುದಿಲ್ಲ. ಹೀಗಾಗಿ ಈ ಸಮಸ್ಯೆ ಕುರಿತ ಅರಿವಿಲ್ಲದ ಕಾರಣದಿಂದಾಗಿ ಅವರ ಸಮಸ್ಯೆ ಹೆಚ್ಚಳವಾಗಲು ಕಾರಣವಾಗುತ್ತಿದೆ.
ಹಾಗಾದ್ರೆ ನಾವಿಂದು ಈ ಹಲ್ಲಿನ ಸಮಸ್ಯೆಗೆ ಕಾರಣವಾಗುವ ಅಂಶಗಳೇನು? ಹುಳುಕು ಹಲ್ಲಿಗೆ ಸಕ್ಕರೆ ಅಂಶ ಕಾರಣವಲ್ಲ ಎಂದಾದರೆ ಮತ್ಯಾವ ಅಂಶಗಳು ಕಾರಣವಾಗುತ್ತಿವೆ? ಹಾಗೆ ಜನರು ತಿಳಿದುಕೊಂಡಿರುವ ಕೆಲವೊಂದು ತಪ್ಪಾದ ಅಂಶಗಳು ಯಾವುದು ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.
ಸಕ್ಕರೆ ಅಂಶ ಹುಳುಕು ಹಲ್ಲಿಗೆ ಕಾರಣವಲ್ಲ
ಬಹುತೇಕರಲ್ಲಿ ಈ ರೀತಿಯ ತಪ್ಪು ತಿಳುವಳಿಕೆ ಇದೆ. ಸಕ್ಕರೆ ಪ್ರಮಾಣ ಹೆಚ್ಚು ಸೇವಿಸುವುದು ಹುಳುಕು ಹಲ್ಲಿನ ಸಮಸ್ಯೆ ಉಂಟು ಮಾಡುಲಿದೆ ಎಂದು ನಂಬಿರುತ್ತಾರೆ. ಆದ್ರೆ ನೇರವಾಗಿ ಸಕ್ಕರೆಯಿಂದಲೇ ಇದು ಉಂಟಾಗುವುದಿಲ್ಲ. ನಮ್ಮ ಹಲ್ಲಿನ ಮೇಲೆ ಉಳಿಯುವ ಸಕ್ಕರೆಯ ಅಂಶವನ್ನು ಸೇವಿಸುವ ಬ್ಯಾಕ್ಟೀರಿಯಾಗಳು ನಮ್ಮ ಹುಳುಕು ಹಲ್ಲಿಗೆ ಕಾರಣವಾಗುತ್ತಿದೆ. ಒಂದರ್ಥದಲ್ಲಿ ಸಕ್ಕರೆ ಪರೋಕ್ಷವಾಗಿ ಹುಳುಕು ಹಲ್ಲಿನ ಸಮಸ್ಯೆಗೆ ಕಾರಣ ಎನ್ನಬಹುದು. ಸಕ್ಕರೆ ಅಥವಾ ಸಿಹಿ ಅಂಶ ಹಲ್ಲಿನ ಸುತ್ತ ಅಥವಾ ಮೇಲೆ ಉಳಿದರೆ ಅದು ಬ್ಯಾಕ್ಟೀರಿಯಾವನ್ನು ಆಕರ್ಷಿಸುತ್ತದೆ. ಇದರಿಂದ ಹಲ್ಲುಗಳ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇರಲಿದೆ.
ಹಲ್ಲುಜ್ಜುವುದು ಹುಳುಕನ್ನು ತಡೆಯೋದಿಲ್ಲ
ಕೆಲವರು ಸರಿಯಾಗಿ ಹಲ್ಲು ಉಜ್ಜದೇ ಇರುವ ಕಾರಣದಿಂದಾಗಿ ಹಲ್ಲಿನ ಸಮಸ್ಯೆ ಉಂಟಾಗಿದೆ ಎಂದುಕೊಂಡಿರುತ್ತಾರೆ. ಆದ್ರೆ ನೀವು ಗಟ್ಟಿಯಾಗಿ ಹಲ್ಲುಜ್ಜುವುದು ಸಮಸ್ಯೆ ದೂರ ಮಾಡುವುದಿಲ್ಲ ಬದಲಿಗೆ ಗಟ್ಟಿಯಾಗಿ ಹಲ್ಲನ್ನು ಉಜ್ಜುವುದು ಸಮಸ್ಯೆಗಳು ಹೆಚ್ಚಾಗಲು ಕಾರಣವಾಗುತ್ತದೆ. ಹಲ್ಲಿನ ಮೇಲ್ಪದರ ಸವೆಯುವುದಕ್ಕೆ ಇದು ಕಾರಣವಾಗುತ್ತದೆ. ಇದರಿಂದ ಒಸಡುಗಳಿಗೂ ಹಾನಿಯಾಗುತ್ತದೆ.
ಚಾಕೋಲೆಟ್ ಸೇವನೆ ಹಲ್ಲು ಹುಳುಕಿಗೆ ಕಾರಣವಲ್ಲ
ಚಾಕೋಲೆಟ್ ಸೇವನೆಯಿಂದಾಗಿ ಹಲ್ಲು ಹುಳುಕಾಗುತ್ತವೆ ಎಂಬುದು ಹಲವರ ವಾದವಾಗಿರುತ್ತದೆ. ಆದ್ರೆ ಎಲ್ಲಾ ಸಮಯದಲ್ಲೂ ಅಥವಾ ಎಲ್ಲಾ ಹುಳುಕಿನ ಸಮಯದಲ್ಲೂ ಇದು ಸರಿಯಲ್ಲ. ನೀವು ಚಾಕೋಲೆಟ್ ಸವಿದ ಬಳಿಕ ಹಲ್ಲುಜ್ಜುವುದು ಹಾಗೆ ಸಕ್ಕರೆ ಅಂಶ ಕಡಿಮೆ ಇರುವಂತಹ ಚಾಕೋಲೆಟ್ ಸೇವನೆಯು ನಿಮ್ಮನ್ನು ಹುಳುಕಿನಿಂದ ಕಾಪಾಡಲಿದೆ. ಹಾಗೆ ಸಕ್ಕರೆಯ ಅಂಶ ಹಲ್ಲಿನಲ್ಲಿ ಉಳಿಯದಂತೆ ನೋಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಹಾಗೆ ದಿನಕ್ಕೆ ಎರಡು ಬಾರಿ ಉಲ್ಲುಜ್ಜುವುದು ನಿಮ್ಮ ಹಲ್ಲಿನ ಆರೋಗ್ಯದ ದೃಷ್ಟಿಯಿಂದ ಉತ್ತಮ ಅಭ್ಯಾಸವಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications