Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ದೆಹಲಿಯಲ್ಲಿ ಏಕಾಏಕಿ ಕೋವಿಡ್ ರೀತಿಯ ಪ್ರಕರಣ ಏರಿಕೆ..! ಪ್ರತಿ ಮನೆಯಲ್ಲೂ ಓರ್ವ ರೋಗಿ..!
ಇತ್ತೀಚಿಗೆ ವೈರಸ್‌ನಿಂದ ಹರಡುತ್ತಿರುವ ಕಾಯಿಲೆಗಳ ಸಂಖ್ಯೆ ಹೆಚ್ಚಾಗುತ್ತಲಿದೆ. ಅದರಲ್ಲು ಮಹಾನಗರಗಳಲ್ಲಿ ಈ ಸಮಸ್ಯೆಗಳು ಹೆಚ್ಚಾಗುತ್ತಿದೆ. ಈಗ ದೆಹಲಿಯಲ್ಲಿ ಕೋವಿಡ್ ರೀತಿಯ ಸಮಸ್ಯೆ ಕಂಡುಬಂದಿದೆ. ಕೋವಿಡ್ ರೀತಿಯಲ್ಲೇ ಜನರು ಅನಾರೋಗ್ಯಕ್ಕೆ ಒಳಗಾಗುತ್ತಿರುವುದು ಕಂಡುಬಂದಿದೆ. ದೆಹಲಿ ಎನ್‌ಸಿಆರ್ ಭಾಗ್ಯದಲ್ಲಿ ಈ ರೀತಿ ವೈರಲ್ ಅನಾರೋಗ್ಯ ಕಾಡುತ್ತಿದೆ.
ವರದಿಗಳ ಪ್ರಕಾರ ಶೇ. 54ರಷ್ಟು ಮನೆಗಳಲ್ಲಿ ಕನಿಷ್ಠ ಒಬ್ಬ ಸದಸ್ಯನಿಗೆ ಜ್ವರ, ಗಂಟಲು ನೋವು, ಕೆಮ್ಮು, ತಲೆನೋವು, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು, ಕೀಲು ನೋವು ಮತ್ತು ಉಸಿರಾಟದ ಸಮಸ್ಯೆಗಳು ಸೇರಿದಂತೆ ಹಂದಿ ಜ್ವರ (H5N1) ಲಕ್ಷಣಗಳು ಕಂಡುಬಂದಿದೆ. ಈ ಲಕ್ಷಣಗಳು ಕೋವಿಡ್ ನಿಕಟ ಹೊಂದಿಕೆಯಾಗುತ್ತವೆ ಎಂದು ತಿಳಿದುಬಂದಿದೆ.

ಆಸ್ಪತ್ರೆಗಳು ಹೆಚ್ಚಿನ ಜ್ವರ, ನಿರಂತರ ಕೆಮ್ಮು, ಗಂಟಲು ನೋವು ಸೇರಿ ಹಲವು ರೀತಿಯ ಸಮಸ್ಯೆಗಳು ಕಾಡುತ್ತಿರುವುದು ವರದಿಯಾಗಿದೆ. ಹೀಗಾಗಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳ ತೆಗೆದುಕೊಳ್ಳಬೇಕು ಎಂದು ವೈದ್ಯರು ಸಲಹೆ ನೀಡುತ್ತಿದ್ದಾರೆ. ಈ ನಡುವೆ 9 ರಾಜ್ಯಗಳು ಹಕ್ಕಿ ಜ್ವರ ಪ್ರಕರಣಗಳನ್ನು ವರದಿ ಮಾಡಿದ ನಂತರ ಈ ಪ್ರಕರಣಗಳಲ್ಲೂ ಏರಿಕೆಯಾಗಿರುವುದು ನೋಡಬಹುದಾಗಿದೆ.
ಪಂಜಾಬ್ ಮತ್ತು ಜಾರ್ಖಂಡ್ ಸೇರಿದಂತೆ 9 ರಾಜ್ಯಗಳು ಜನವರಿಯಿಂದ ಹಕ್ಕಿ ಜ್ವರ ಪ್ರಕರಣಗಳ ಏರಿಕೆಯಾಗಿದೆ. ಮಾರ್ಚ್ 7 ರಂದು ಕೇಂದ್ರ ಸರ್ಕಾರವ ಸಲಹಾ ಮಂಡಳಿಯ ಪ್ರಕಟಣೆಯಲ್ಲಿ ಹಲವು ಮುನ್ಸೂಚನೆಗಳ ಹೊರಡಿಸಿತ್ತು. ಕೋಳಿ ಸಾಕಾಣಿಕೆ ಕೇಂದ್ರಗು ಸೇರಿ ಈ ಪ್ರಕರಣಗಳು ಕಂಡುಬರುತ್ತಿರುವ ಪ್ರದೇಶದಲ್ಲಿ ಕಣ್ಗಾವಲು ಇಡುವಂತೆ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೂ ಸೂಚನೆ ನೀಡಿತ್ತು.
ಈಗ ದೆಹಲಿಯಲ್ಲಿ ಇನ್ಫ್ಲುಯೆನ್ಸ ಬಿ ಮತ್ತು ಎಚ್1ಎನ್1 ವೈರಸ್‌ಗಳಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆ ದಿಢೀರ್ ಏರಿಕೆ ಕಂಡಿದೆ. ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಹಾಗೆ ಮನೆಯಲ್ಲಿ ಓರ್ವ ಸದಸ್ಯರಲ್ಲಿ ಈ ಲಕ್ಷಣಗಳಿವೆ ಎಂಬುದು ಆತಂಕ ಹೆಚ್ಚುವಂತೆ ಮಾಡಿದೆ.
ಕಳೆದ ತಿಂಗಳು ಇನ್ಫ್ಲುಯೆನ್ಸ ತರಹದ ಅನಾರೋಗ್ಯದ ಪ್ರಕರಣಗಳ ಹೆಚ್ಚಳದಲ್ಲಿ ಏಕಾಏಕಿ ಹೆಚ್ಚಳ ಕಂಡುಬಂದಿದೆ. ಇನ್ಫ್ಲುಯೆನ್ಸ ಎ, ಬಿ, ಎಚ್1ಎನ್1, ಎಚ್3ಎನ್2, ಮತ್ತು ಉಸಿರಾಟದ ಸಿನ್ಸಿಟಿಯಲ್ ವೈರಸ್ (ಆರ್‌ಎಸ್‌ವಿ), ಇದು ಶ್ವಾಸಕೋಶದ ಮೇಲೆ ಹಾನಿ ಮಾಡುತ್ತದೆ. ಕೆಲವು ಸಂದರ್ಭಗಳಲ್ಲಿ ಇದು ಪರೀಕ್ಷೆಯಗಳಲ್ಲೂ ಪತ್ತೆ ಮಾಡಲು ಆಗುವುದಿಲ್ಲ.
ಈ ವೈರಸ್ ಸದ್ಯ ಎಲ್ಲಾ ವಯೋಮಾನದವರ ಮೇಲೆಯೂ ಪರಿಣಾಮ ಬೀರುತ್ತಿದೆ. ವೈರಸ್ ಪ್ರಕರಣಗಳ ಹೆಚ್ಚಳವು ನ್ಯುಮೋನಿಯಾ, ಬ್ರಾಂಕೈಟಿಸ್ ಮತ್ತು ಸೈನುಟಿಸ್ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಕೂಡ ಹೆಚ್ಚಳವಾಗಿದೆ. ಇದು ಕೋವಿಡ್ ಸೋಂಕಿಗೆ ಒಳಗಾದ ನಂತರ ಕಂಡುಬರುತ್ತಿರುವ ಬ್ರಾಂಕೈಟಿಸ್ ಆಗಿದೆ. ಇಂತಹ ಲಕ್ಷಣಗಳು ಈಗ ಕಂಡುಬಂದಿರುವುದು ದೆಹಲಿ ಜನತೆಯ ನಿದ್ದೆಗೆಡಿಸಿದೆ.
ಹಕ್ಕಿ ಜ್ವರದ ಲಕ್ಷಣವೇನು?
ಹಕ್ಕಿ ಜ್ವರ ಕಾಣಿಸಿಕೊಂಡ ವ್ಯಕ್ತಿಯಲ್ಲಿ ಅತೀಯಾದ ಜ್ವರ, ಆಯಾಸ, ಕೆಮ್ಮು, ಸ್ನಾಯು ನೋವು, ಗಂಟಲು ನೋವು, ಅತಿಸಾರ, ಮೂಗಿನಲ್ಲಿ ನೀರು ಬರುವುದು, ಉಸಿರಾಟದ ತೊಂದರೆ, ಕಣ್ಣುಗಳು ಕೆಂಪಾಗುವುದು ಸೇರಿ ಹಲವು ರೀತಿಯಲ್ಲಿ ದೇಹದ ನೋವಿ ಕಾಣಿಸಿಕೊಳ್ಳುತ್ತದೆ.
ಇನ್ಫ್ಲುಯೆನ್‌ಸಾ ಎ ವೈರಸ್ ಸಾಮಾನ್ಯವಾಗಿ ಮಾನವರಲ್ಲಿ H5N1 ಅಥವಾ ಹಕ್ಕಿ ಜ್ವರ ಉಂಟು ಮಾಡುತ್ತದೆ. ಇದು ನೇರವಾಗಿ ಶ್ವಾಸಕೋಶ ಹಾನಿ ಉಂಟು ಮಾಡುತ್ತದೆ. ಈ ವೈರಸ್ ಇರುವ ಪಕ್ಷಿಗಳ ಉಗುಳು, ಉಸಿರಾಟದ ಹನಿಗಳು ಅಥವಾ ಮಲದಂತಹ ವಸ್ತುವಿನಿಂದ ಹಾಗೆ ಮಾಂಸದಿಂದಲೂ ಹರಡಬಹುದು ಎಂದು ಅಂದಾಜಿಸಲಾಗಿದೆ. ಹೀಗಾಗಿ ಸಾಕು ಪ್ರಾಣಗಳಿಂದ ದೂರ ಇರುವುದು ಬಹಳ ಮುಖ್ಯ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
