Latest Updates
-
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್
ಬೆಳಗ್ಗೆ ಎದ್ದು ಬಿಸಿ ನೀರು ಕುಡಿದರೆ ಏನಾಗುತ್ತೆ? ಈ ವಿಷಯ ತಿಳಿದರೆ ನಾಳೆಯಿಂದ ನೀವು ಅಭ್ಯಾಸ ಮಾಡ್ತೀರಿ!
ಬೆಳಗ್ಗೆ ಎದ್ದ ಕೂಡಲೆ ಹಲವರಿಗೆ ನೀರು ಕುಡಿಯುವ ಅಭ್ಯಾಸ ಇರುತ್ತದೆ. ಆರೋಗ್ಯದ ದೃಷ್ಟಿಯಿಂದ ಈ ರೀತಿಯ ಅಭ್ಯಾಸ ಬಹಳ ಮುಖ್ಯ ಹಾಗೆ ಉತ್ತಮ ಕೂಡ. ನಿಮ್ಮ ಜೀರ್ಣಕ್ರಿಯೆ ಸುಧಾರಣೆಗೆ ಹಾಗೆ ದೇಹವು ಒಮ್ಮೆ ರೀಚಾರ್ಜ್ ಆಗಲು ಮೊದಲು ನೀವು ಕುಡಿಯುವ ನೀರು ಬಹಳ ಪ್ರಮುಖವಾಗಲಿದೆ. ಏಕೆಂದರೆ ರಾತ್ರಿ ಊಟ ಮಾಡಿ ಮಲಗಿದ ಬಳಿಕ ನೀವು ಯಾವುದೇ ರೀತಿ ಲಿಕ್ವಿಡ್ ಅನ್ನು ಸೇವಿಸಿರುವುದಿಲ್ಲ. ದೇಹ ವಿಶ್ರಾಂತಿ ಹಂತದಲ್ಲಿದ್ದರೂ ದೇಹಕ್ಕೆ ನೀರಿನ ಅಗತ್ಯತೆ ಇರಲಿದೆ.
ಹೀಗಾಗಿ ಬೆಳಗ್ಗೆ ಎದ್ದ ಕೂಡಲೆ ನೀವು ಒಂದು ಗ್ಲಾಸ್ ನೀರು ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ ಎಂದು ಹೇಳಲಾಗುತ್ತದೆ. ಬೆಳಗ್ಗೆ ನಮ್ಮ ದಿನವನ್ನು ಒಂದು ಲೋಟ ನೀರಿನಿಂದ ಪ್ರಾರಂಭಿಸಿದರೆ ನಮ್ಮ ದೇಹದಲ್ಲಿರುವ ಕಶ್ಮಲಗಳನ್ನು ಮಲ, ಮೂತ್ರ ಮೂಲಕ ಹೊರಹಾಕಲು ಸಹಾಯ ಮಾಡುತ್ತದೆ. ಬೆಳಗ್ಗೆ ಎದ್ದ ಮೇಲೆ ಬಿಸಿ ನೀರಿಗೆ ನಿಂಬೆರಸ ಸೇರಿಸಿ ಕುಡಿದರೆ ಒಳ್ಳೆಯದು. ಹಾಗೆ ಬಿಸಿ ನೀರು ಕುಡಿಯುವುದು ಸಹ ಉತ್ತಮ ಅಭ್ಯಾಸ ಎಂದು ಹೇಳಲಾಗಿದೆ.

ಆದ್ರೆ ಬಹುತೇಕರು ಎದ್ದ ಕೂಡಲೆ ತಣ್ಣೀರು ಕುಡಿಯುತ್ತಾರೆ. ಆದ್ರೆ ನೀವು ನಿತ್ಯ ಬೆಳಗ್ಗೆ ಉಗುರು ಬೆಚ್ಚಗಿನ ನೀರು ಕುಡಿಯುವುದರಿಂದ ನಿಮ್ಮ ದೇಹದಲ್ಲಿ ಏನೆಲ್ಲಾ ಬದಲಾವಣೆಗಳು ಸಂಭವಿಸಲಿದೆ ಎಂಬುದನ್ನು ತಿಳಿದುಕೊಂಡರೆ ನೀವು ನಿತ್ಯವೂ ಈ ರೀತಿ ಅಭ್ಯಾಸ ಬೆಳೆಸಿಕೊಳ್ಳುವಿರಿ. ಬಿಸಿ ನೀರಿನ ಅಚ್ಚರಿಯ ಉಪಯೋಗಗಳ ತಿಳಿದರೆ ಇಂದಿನಿಂದ ಈ ಅಭ್ಯಾಸ ರೂಢಿಸಿಕೊಳ್ಳುವಿರಿ.
ದೇಹದ ನಡುಕ ಕಡಿಮೆಯಾಗಿಸಲಿದೆ
ನೀವು ಬಹಳ ದೂರ ನಡೆದರೆ ಅಥವಾ ಶ್ರಮದಾಯಕ ಕೆಲಸದಲ್ಲಿ ಭಾಗಿಯಾದಾಗ ನಿಮ್ಮಲ್ಲಿ ನಡುಕ ಬರುವುದು ಗಮನಿಸಿರಬಹುದು. ಇದು ದೇಹದಲ್ಲಿನ ಹಲವು ರೀತಿಯ ಏರಿಳಿತಗಳಿಂದ ಉಂಟಾಗುತ್ತದೆ. ಆದ್ರೆ ನಿತ್ಯ ನೀವು ಬೆಚ್ಚಗಿನ ನೀರು ಕುಡಿಯುವ ಅಭ್ಯಾಸ ಮಾಡಿಕೊಂಡರೆ ನಿಮ್ಮ ದೇಹದ ಕೋರ್ ತಾಪಮಾನವನ್ನು ನಿಯಂತ್ರಿಸುವ ಮೂಲಕ ನಡುಕ ಕಡಿಮೆಯಾಗುತ್ತದೆ. ಬೆಚ್ಚಗಿನ ನೀರು ಸೇವಿಸುವುದರಿಂದ ನಿಮ್ಮ ದೇಹದ ಆಂತರಿಕ ಉಷ್ಣತೆಯು ತಾತ್ಕಾಲಿಕವಾಗಿ ಹೆಚ್ಚಾಗುತ್ತದೆ, ಇದು ದೇಹವು ಶಾಖವನ್ನು ಉತ್ಪಾದಿಸಲು ಕಡಿಮೆ ಶ್ರಮಕ್ಕೆ ಕಾರಣವಾಗುತ್ತದೆ. ಹಾಗೆ ಬಿಸಿ ನೀರು ದೇಹದ ಕಾರ್ಯಕ್ಷಮತೆ ಹೆಚ್ಚಿಸಲು ಸಹಕಾರಿಯಾಗಲಿದೆ. ಇದರಿಂದ ದೇಹದಲ್ಲಿ ಸಕಾರಾತ್ಮಕ ಪರಿಣಾಮಗಳ ನೋಡಬಹುದು.
ರಕ್ತ ಪರಿಚಲನೆಗೆ ಇದು ಸಹಕಾರಿ
ನೀವು ಬೆಚ್ಚಗಿನ ಅಥವಾ ಬಿಸಿನೀರನ್ನು ಕುಡಿದರೆ, ಅದು ರಕ್ತನಾಳಗಳನ್ನು ವಿಸ್ತರಿಸಲಿದೆ. ಇದರಿಂದ ರಕ್ತನಾಳಗಳು ಹಿಗ್ಗುವುದರಿಂದ ರಕ್ತಪರಿಚಲನೆ ವೇಗ ಪಡೆದುಕೊಳ್ಳುತ್ತದೆ. ಇದರಿಂದ ನೀವು ನಡೆಯುವುದು, ಓಡುವುದು, ವ್ಯಾಯಾಮ ಮಾಡುವುದು ಸುಲಭವಾಗಿಸಲಿದೆ. ಅಲ್ಲದೆ ಹೃದಯ ಆರೋಗ್ಯಕ್ಕೆ ಇದು ಬಹಳ ಉಪಕಾರಿಯಾಗಲಿದೆ.
ದೇಹದ ನೋವನ್ನು ಕಡಿಮೆ ಮಾಡುತ್ತದೆ
ಒಂದು ಲೋಟ ಬಿಸಿನೀರು ಸ್ನಾಯುಗಳನ್ನು ವಿಶ್ರಾಂತಿ ಮಾಡಲು ಮತ್ತು ನೋವು ಕಡಿಮೆ ಮಾಡಲಿವೆ. ಹೀಗಾಗಿ ದೇಹದ ನೋವಿನ ಸಮಯದಲ್ಲಿ ಬಿಸಿ ನೀರಿನ ಸ್ನಾನಕ್ಕೆ ಶಿಫಾರಸ್ಸು ಮಾಡಲಾಗುತ್ತದೆ. ಅದೆ ರೀತಿ ದೇಹಕ್ಕೂ ಸಹ ಬಿಸಿನೀರಿನ ಅಗತ್ಯವಿರುತ್ತದೆ. ಹೆಚ್ಚಿದ ರಕ್ತ ಪರಿಚಲನೆಯು ದೇಹದ ಸ್ನಾಯುಗಳಿಗೆ ರಕ್ತ, ಪೋಷಕಾಂಶಗಳು ಮತ್ತು ಆಮ್ಲಜನಕವನ್ನು ಸರಾಗವಾಗಿ ತಲುಪಿಸಲು ಸಹಾಯ ಮಾಡುತ್ತದೆ.
ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ
ತೂಕ ಇಳಿಸಲು ನೀರು ಯಾವಾಗಲೂ ಉತ್ತಮವಾಗಿದೆ. ಬಿಸಿ ನೀರು ಸೇವನೆ ನಿಮ್ಮ ಜೀರ್ಣಕ್ರಿಯೆಯ ಮೇಲೆಯೂ ಉತ್ತಮ ಪರಿಣಾಮ ಉಂಟು ಮಾಡಲಿದೆ. ಚಯಾಪಚಯ ಕ್ರಿಯೆಯನ್ನು ಉತ್ತೇಜಿಸುವುದರಿಂದ ದೇಹದ ತೂಕ ಇಳಿಕೆಯಲ್ಲೂ ಇದು ನೆರವಾಗಲಿದೆ. ಹಾಗೆ ಮಲಬದ್ಧತೆ ನಿವಾರೆಯಲ್ಲೂ ಬಿಸಿ ನೀರು ನೆರವಾಗಲಿದೆ. ನಿಯಮಿತ ಕರುಳಿನ ಚಲನೆಯನ್ನು ಬೆಂಬಲಿಸುತ್ತದೆ. 98.6 ಡಿಗ್ರಿ ಫ್ಯಾರನ್‌ಹೀಟ್‌ನಲ್ಲಿ ಬಿಸಿನೀರನ್ನು ಸೇವಿಸುವುದರಿಂದ ಜಠರಗರುಳಿನ ವ್ಯವಸ್ಥೆ ಮತ್ತು ಕರುಳಿನ ಚಲನೆಯನ್ನು ಬೆಂಬಲಿಸುತ್ತದೆ.
ಒತ್ತಡ ನಿವಾರಣೆಗೆ ಬಿಸಿ ನೀರು ಸಿದ್ದ ಔಷಧ
ಬೆಳಗ್ಗೆ ಎದ್ದ ಕೂಡಲೆ ಬಿಸಿ ನೀರು ಸೇವಿಸುವುದು ಕೇಂದ್ರ ನರಮಂಡಲದ ಕಾರ್ಯಗಳು ಸುಧಾರಿಸುತ್ತವೆ, ನಿಮಗೆ ಕಡಿಮೆ ಆತಂಕ ಮತ್ತು ಒತ್ತಡ ಉಂಟಾಗುತ್ತದೆ. ಹೀಗಾಗಿ ನಿಮ್ಮಲ್ಲಿ ಸಕಾರಾತ್ಮಕ ಭಾವನೆ ಉಂಟು ಮಾಡುವುದು ನೋಡಬಹುದು.



Click it and Unblock the Notifications
