Latest Updates
-
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ!
ನಿತ್ಯ ಬೆಳಗ್ಗೆ ಒಂದು ಬಾಳೆಹಣ್ಣು ಏಕೆ ಸೇವಿಸಬೇಕು? ಅದರ ಪ್ರಯೋಜನವೇನು ಗೊತ್ತಾ?
ದೇಹಕ್ಕೆ ಬಾಳೆಹಣ್ಣು ಎಷ್ಟು ಆರೋಗ್ಯ ನೀಡುತ್ತೆ, ಎಷ್ಟು ಮುಖ್ಯ ಅನ್ನೋದನ್ನು ನೀವೆಲ್ಲಾ ತಿಳಿದಿದ್ದೀರಿ. ಅತೀ ಹೆಚ್ಚು ಪ್ರೋಟಿನ್ ನೀಡುವಂತಹ ಹಣ್ಣಗಳಲ್ಲಿ ಈ ಬಾಳೆಹಣ್ಣು ಕೂಡ ಒಂದಾಗಿದೆ. ಬಾಳೆಹಣ್ಣಿನಿಂದ ದೇಹಕ್ಕೆ ಬೇಕಾಗುವ ಪ್ರಮುಕ ಪೋಷಕಾಂಶ ನೀಡುತ್ತದೆ. ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್, ಮೆಗ್ನೀಸಿಯಮ್, ವಿಟಮಿನ್-ಎ, ಬಿ, ಸಿ ಮತ್ತು ವಿಟಮಿನ್ ಬಿ6 ಇದೆ.
ಇಷ್ಟೆಲ್ಲಾ ಅಂಶ ಹೊಂದಿರುವ ಬಾಳೆಹಣ್ಣನ್ನು ನಾವು ಊಟ ಮಾಡಿದ ಮೇಲೆ, ಸಮಯದ ಮಿತಿ ಇಲ್ಲದೆ ಸವಿಯುವುದು ನೋಡಿರುತ್ತೇವೆ. ಬಾಳೆಹಣ್ಣುಗಳು ಹಣ್ಣಾಗುತ್ತಿದ್ದಂತೆ ಪೋಷಕಾಂಶಗಳ ಮಟ್ಟವು ನಿರಂತರವಾಗಿ ಹೆಚ್ಚಾಗುತ್ತದೆ. ಬಿಳಿ ರಕ್ತ ಕಣಗಳಿಗೆ ಹಸಿರು ಬಾಳೆಹಣ್ಣುಗಳಿಗಿಂತ ಕಪ್ಪು ಬಾಳೆಹಣ್ಣುಗಳು 8 ಪಟ್ಟು ಹೆಚ್ಚು ಪರಿಣಾಮಕಾರಿ ಎಂದು ತಿಳಿದುಬರುತ್ತದೆ.

ಆದ್ರೆ ನೀವು ನಿತ್ಯ ಬೆಳಗ್ಗೆ ಒಂದು ಬಾಳೆಹಣ್ಣು ಸೇವಿಸುವುದು ಎಷ್ಟು ಆರೋಗ್ಯಕರ ಲಾಭಗಳಿಗೆ ಕಾರಣವಾಗುತ್ತದೆ ಎಂಬುದು ನಿಮಗೆ ಗೊತ್ತಾ? ಕೆಲವರು ಬಾಳೆಹಣ್ಣು ಸೇವನೆಯು ತೂಕ ಹೆಚ್ಚಾಗಲು ಕಾರಣ ಎಂದುಕೊಂಡಿರುತ್ತಾರೆ. ಆದ್ರೆ ಬಾಳೆ ಹಣ್ಣು ತೂಕ ಇಳಿಸಲು ಕೂಡ ನೆರವಾಗುತ್ತದೆ. ಹಾಗೆ ಜೀರ್ಣಕ್ರಿಯೆಗೆ ಅತ್ಯುತ್ತಮ ಹಣ್ಣಾಗಿದೆ.
ಇಡೀ ದಿನ ನೀವು ಅತ್ಯಂತ ಚಟುವಟಿಕೆಯಿಂದ ಕೂಡಿರಬೇಕಾದರೆ ಬೆಳಗ್ಗೆ ಒಂದೊಂದು ಬಾಳೆಹಣ್ಣು ಸವಿಯಬೇಕಂತೆ. ಕೊಬ್ಬು ಮುಕ್ತವಾಗಿರುವ ಈ ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್, ವಿಟಮಿನ್ ಬಿ 6 ಮತ್ತು ಆಹಾರದ ನಾರಿನಿಂದ ತುಂಬಿರುವ ಬಾಳೆಹಣ್ಣುಗಳು ಕೊಲೆಸ್ಟ್ರಾಲ್-ಮುಕ್ತ ಮತ್ತು ವಾಸ್ತವಿಕವಾಗಿ ಸೋಡಿಯಂ-ಮುಕ್ತವಾಗಿವೆ.
ಹಾಗಾದ್ರೆ ನಾವಿಂದು ಬೆಳಗ್ಗೆ ಎದ್ದಾಗ ನಿತ್ಯ ಒಂದೊಂದು ಬಾಳೆಹಣ್ಣು ಸವಿಯುವುದರಿಂದ ಆಗುವ ಲಾಭವೇನು ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸುಧಾರಿಸುತ್ತದೆ
ಬಾಳೆಹಣ್ಣಿನಲ್ಲಿ ಅತ್ಯಂತ ಹೆಚ್ಚು ನಾರಿನ ಅಂಶ ಇರುವುದರಿಂದಾಗಿ ಜೀರ್ಣಕ್ರಿಯೆಗೆ ಬಹಳ ಸಹಕಾರಿ ಹಾಗೆ ಇದು ಕರಗಿ ಜೆಲ್‌ನಂತಹ ವಸ್ತುವನ್ನು ಉಂಟು ಮಾಡುತ್ತದೆ. ತಜ್ಞರ ಪ್ರಕಾರ ಬಾಳೆಹಣ್ಣುಗಳು ನಿರೋಧಕ ಪಿಷ್ಠ ಹೊಂದಿವೆ, ಇದರಲ್ಲಿನ ಅಂಶಗಳು ದೇಹದಲ್ಲಿನ ಸಕ್ಕರೆ ಮಟ್ಟ ಸುಧಾರಿಸಲಿದೆ. ನಿಮ್ಮ ಹಸಿವು ನಿಯಂತ್ರಣದಲ್ಲಿಡಲಿದೆ.
ತೂಕ ಇಳಿಸಿಕೊಳ್ಳಲು ಸಹಕಾರಿ
ಬಾಳೆಹಣ್ಣುಗಳ ಸೇವನೆ ಅದರಲ್ಲೂ ಬೆಳಗ್ಗೆ ಸಮಯದಲ್ಲಿ ಈ ಬಾಳೆ ಹಣ್ಣು ಸೇವನೆಯು ನಿಮ್ಮ ತೂಕ ಇಳಿಕೆಗೆ ಸಹಕಾರಿಯಾಗಲಿದೆ. ಬಾಳೆಹಣ್ಣುಗಳು ಕಡಿಮೆ ಕ್ಯಾಲೋರಿಗಳಿಂದ ತುಂಬಿದೆ. ಆದ್ರೆ ಇದು ಪೌಷ್ಟಿಕ ಆಹಾರ ಹಾಗೆ ಪೋಷಕಾಂಶ ತುಂಬಿರುವ ಆಹಾರವಾಗಿದೆ. ಹೀಗಾಗಿ ಇದನ್ನು ಊದ ಮೊದಲು ತಿಂಡಿಯ ಮೊದಲು ಸವಿಯುವುದರಿಂದ ಹಸಿವು ನೀಗಿಸಲಿದೆ. ಇದರಿಂದ ಆಹಾರ ಕಡಿಮೆ ಸೇವಿಸಬೇಕಾಗುತ್ತದೆ. ಇದು ತೂಕ ಇಳಿಸಲು ಸಹಕಾರಿಯಾಗಲಿದೆ.
ಹೃದಯದ ಆರೋಗ್ಯಕ್ಕೆ ಬಹಳ ಉತ್ತಮ
ನೀವು ಬೆಳಗ್ಗೆ ಎದ್ದು ಬಾಳೆ ಹಣ್ಣು ಸವಿಯುವುದು ಬಹಳ ರುಚಿ ನೀಡಲಿದೆ. ನಿಮ್ಮ ಹೃದಯದ ಆರೋಗ್ಯಕ್ಕೆ ಇದು ಬಹಳ ಉತ್ತಮ. ಏಕೆಂದರೆ ಬಾಳೆಹಣ್ಣಿನಲ್ಲಿರುವ ಪೊಟ್ಯಾಸಿಯಂ ಹೃದಯದ ಆರೋಗ್ಯಕ್ಕೆ ಬಹಳ ಉಪಕಾರಿಯಾಗಿದೆ. ರಕ್ತದೊತ್ತಡ ನಿವಾರಣೆಗೆ ಅತ್ಯಂತ ಮುಖ್ಯವಾಗಲಿದೆ. ರಕ್ತದೊತ್ತಡ ನಿವಾರಣೆಗೆ ಪೊಟ್ಯಾಸಿಯಂ ಅಂಶ ಬಹಳ ಮುಖ್ಯವಾಗಿದೆ. ಈ ಅಂಶವು ಬಾಳೆಹಣ್ಣಿನಲ್ಲಿ ತುಂಬಿರುವ ಕಾರಣ ದಿನ ಬೆಳಗ್ಗೆ ಒಂದೊಂದು ಬಾಳೆಹಣ್ಣನ್ನು ಸೇವಿಸುವುದು ಬಹಳ ಉತ್ತಮ.
ಮೂತ್ರಪಿಂಡದ ಆರೋಗ್ಯ ಸುಧಾರಿಸಲಿದೆ
ಬಾಳೆಹಣ್ಣಿನ ಪೊಟ್ಯಾಸಿಯಂ ಅಂಶವು ಮೂತ್ರಪಿಂಡ ಕಾರ್ಯಕ್ಷಮತೆ ಹೆಚ್ಚಿಸಲಿವೆ. ದೀರ್ಘಕಾಲದ ಮೂತ್ರಪಿಂಡದ ಸಮಸ್ಯೆ ನಿವಾರಣೆಗೆ ಸಹಕಾರಿಯಾಗಲಿದೆ. ಮೂತ್ರಪಿಂಡವು ದೇಹದಲ್ಲಿನ ಕಲ್ಮಶಗಳ ನಿವಾರಣೆ ಮಾಡಲಿವೆ. ಇದಕ್ಕಾಗಿ ಬಾಳೆಹಣ್ಣು ಮೂತ್ರಪಿಂಡ ಆರೋಗ್ಯಕ್ಕೆ ಬಹಳ ಉತ್ತಮ. ಅಲ್ಲದೆ ಬಾಳೆಹಣ್ಣಿನ ಕಾರ್ಬೋಹೈಡ್ರೇಟ್ ತುಂಬರಲಿದೆ, ಇದರಿಂದ ನೀವು ವ್ಯಾಯಾಮ ಮಾಡುವುದು ದೇಹವನ್ನು ಸುಸ್ಥಿತಿಯಲ್ಲಿಡಲು ಸಹಕಾರಿಯಾಗಲಿದೆ. ಸ್ನಾಯುಗಳ ಆರೋಗ್ಯಕ್ಕೂ ಕೂಡ ಬಾಳೆಹಣ್ಣು ಬಹಳ ಮುಖ್ಯ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
