Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಊಟ, ತಿಂಡಿ ಬಿಟ್ಟರೂ ತೂಕ ಇಳಿಯುತ್ತಿಲ್ವಾ..? ಕಾರಣ ಏನ್ ಗೊತ್ತಾ?
ತೂಕ ಹೆಚ್ಚಳ ಅನ್ನೋದು ಇತ್ತೀಚಿಗೆ ಕಾಡುತ್ತಿರುವ ಎಲ್ಲರ ಸಮಸ್ಯೆಯಾಗಿದೆ. ಯುವ ಪೀಳಿಗೆ ಇಂದು ಆತಂಕ ಪಡುತ್ತಿರುವ ವಿಚಾರದಲ್ಲಿ ಈ ತೂಕ ಹೆಚ್ಚಳವು ಒಂದು 30ರ ಆಸುಪಾಸಿನಲ್ಲಿಯೇ ಅಧಿಕ ತೂಕ, ಹೊಟ್ಟೆ ಬರುವುದು, ಓಡಾಡಲು ಕಷ್ಟ ಆಗುವಷ್ಟು ತೂಕ ಹೆಚ್ಚಳ ಆಗೋದು ನೋಡಬಹುದು. ಇದೊಂದು ಆಧುನಿಕ ಜೀವನ ಶೈಲಿಯ ಸಮಸ್ಯೆ ಎಂದೇ ಪರಿಗಣಿಸಲಾಗಿದೆ. ನಮ್ಮ ಆಹಾರ ಕ್ರಮ, ಜೀವಕ ಕ್ರಮವೂ ಸೇರಿ ಹಲವು ರೀತಿಯ ಕಾರಣಗಳನ್ನು ಇದಕ್ಕೆ ನೀಡಬಹುದಾಗಿದೆ.
ಅದರಲ್ಲೂ ಕೆಲವರು ತೂಕ ಇಳಿಸಲೆಂದು ಹಲವು ರೀತಿ ಡಯೆಟ್ ಮೊರೆ ಹೋಗುತ್ತಾರೆ. ಮತ್ತೆ ಕೆಲವರು ವ್ಯಾಯಾಮ, ಜಿಮ್, ಶಸ್ತ್ರಚಿಕಿತ್ಸೆಗೂ ಒಳಗಾಗುವುದು ನೋಡಬಹುದು. ಆದ್ರೆ ಇಷ್ಟೆಲ್ಲಾ ಮಾಡಿದರೂ ಅವರ ನಿರೀಕ್ಷೆಯಂತೆ ತೂಕ ಇಳಿಕೆಯಾಗುವುದು ಕಷ್ಟ. ಹಾಗೆ ಮತ್ತೊಂದಿಷ್ಟು ಪ್ರಕರಣದಲ್ಲಿ ತೂಕ ಇಳಿಸಲು ಮುಂದಾದ ಸಮಯದಿಂದ ಮತ್ತೆ ತೂಕ ಹೆಚ್ಚಳ ಆಗುವುದನ್ನು ಕೂಡ ನೋಡಬಹುದು.

ಹೌದು ಇಂತಹ ಸಮಸ್ಯೆಯನ್ನು ಹಲವರು ಅನುಭವಿಸುತ್ತಾರೆ. ತೂಕ ಇಳಿಸಬೇಕು ಎಂಬ ಉದ್ದೇಶದಿಂದ ಅವರು ಊಟ ಬಿಡುವುದು, ಕಡಿಮೆ ತಿನ್ನುವುದು, ಅಥವಾ ವ್ಯಾಯಾಮದಲ್ಲಿ ತೊಡಗುವುದು ಮಾಡುತ್ತಾರೆ, ಆದ್ರೆ ಇದರ ಫಲಿತಾಂಶ ಮಾತ್ರ ತೂಕ ಹೆಚ್ಚಾಗುತ್ತಾ ಹೋಗುವುದು. ಇದರಿಂದ ಮತ್ತಷ್ಟು ಒತ್ತಡ, ಗೊಂದಲಕ್ಕೆ ಒಳಗಾಗುವ ಅವರು ಅನಾರೋಗ್ಯ ಸಮಸ್ಯೆಗೆ ಒಳಗಾಗಿರಬಹುದು ಎಂದು ಚಿಕಿತ್ಸೆಗೂ ಒಳಗಾಗುವುದು ನೋಡಬಹುದು.
ಆದ್ರೆ ತೂಕ ಇಳಿಸುವುದು ಅಂದ್ರೆ ಅದೊಂದು ತಪಸ್ಸಿನಂತೆ. ನೀವು ನಿಮ್ಮ ಇಷ್ಟದ ಪ್ರಕಾರ ತೂಕ ಇಳಿಸಲು ಮುಂದಾದರೆ ಒಂದು ಕೆ,ಜಿ ಇಳಿಸಬೇಕಾದರೆ ತಿಂಗಳು ಕಳೆಯಬಹುದು. ಹಾಗೆ ಊಟ ತಿಂಡಿ ಬಿಡುವುದರಿಂದ ತೂಕ ಇಳಿಸಬಹುದು ಎಂಬುದು ದೊಡ್ಡ ತಪ್ಪು. ಇದರಿಂದ ನಿಮ್ಮ ದೇಹ ತನ್ನ ಸಾಮರ್ಥ್ಯ ಕಳೆದುಕೊಳ್ಳುತ್ತದೆ. ಹಾಗಾದ್ರೆ ಆರೋಗ್ಯಕರ ರೀತಿಯಲ್ಲಿ ತೂಕ ಇಳಿಸುವುದು ಹೇಗೆ?
ಕೆಲವರು ಬೇಗ ತೂಕ ಇಳಿಸಿಕೊಳ್ಳಬೇಕು ಎಂವ ಹಂಬಲದಿಂದಾಗಿ ಅತೀ ಹೆಚ್ಚು ಡಯೆಟ್ ಮೊರೆ ಹೋಗುತ್ತಾರೆ, ಆದ್ರೆ ಇದು ಅವರ ತೂಕ ಇಳಿಕೆಹೆ ಸಹಾಯ ಮಾಡುವ ಬದಲಾಗಿ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ಹಾಗಾದ್ರೆ ತೂಕ ಹೆಚ್ಚಳಕ್ಕೆ ಕಾರಣವಾಗುವ ಅಂಶಗಳೇನು?
ಭಾರೀ ಪ್ರಮಾಣದ ವ್ಯಾಯಾಮ
ಒತ್ತಡ
ತಡವಾಗಿ ಊಟ, ತಿಂಡಿ ಮಾಡುವುದು
ನಿದ್ರೆ ಕಡಿಮೆ ಮಾಡುವುದು
ಸಮಯಕ್ಕೆ ಸರಿಯಾದ ಮಲವಿಸರ್ಜನೆ ಮಾಡದೆ ಇರುವುದು
ಸೋಡಾ ಹಾಕಿರುವ ಊಟ, ತಿಂಡಿ
ಹೆಚ್ಚು ಕಾರ್ಬೋಹೈಡ್ರೇಟ್ಸ್ ಊಟ
ನೀವು ತೂಕ ಇಳಿಸಲು ಇಚ್ಛಿಸಿದ್ದರೆ ಅದಕ್ಕೊಂದು ದಿನಚರಿ ಹಾಕಿಕೊಳ್ಳುವುದು ಬಹಳ ಮುಖ್ಯ. ನಿತ್ಯವೂ ಯಾವ ಸಮಯಕ್ಕೆ ಏನು ಮಾಡಬೇಕು ಅನ್ನೋದನ್ನು ಮೊದಲೇ ನಿರ್ಧರಿಸಬೇಕು. ಬೆಳಗ್ಗೆ ಏಳುವುದರಿಂದ ಹಿಡಿದು ಮತ್ತೆ ರಾತ್ರಿ ಮಲಗುವರೆಗೂ ಕಟ್ಟು ನಿಟ್ಟಿನ ಡಯೆಟ್ ಕ್ರಮ ಅನುಸರಿಸಬೇಕು. ಹಾಗೆ ಊಟ ತಿಂಡಿಯ ಮೇಲೆಯೂ ಕಠಿಣ ನಿಯಮಗಳಿರಬೇಕು.
ಈ ಮೇಲಿನ ಹಲವು ಅಂಶಗಳಲ್ಲಿ ನೀವು ಕೂಡ ಒಂದಿಷ್ಟು ವಿಚಾರಗಳಲ್ಲಿ ಎಡುವುತ್ತಿರಬಹುದು. ಹೀಗಾಗಿ ನೀವು ತೂಕ ಇಳಿಸಲು ಸಾಧ್ಯವಾಗದೆ ಇರಬಹುದು, ಹಾಗೆ ವೇಗವಾಗಿ ತೂಕ ಕಳೆದುಕೊಳ್ಳುವ ಬದಲು ಹೆಚ್ಚಳವಾಗುತ್ತಿರಬಹುದು, ಆದ್ರೆ ನಿರಂತರ ಪ್ರಯತ್ನದ ಮೂಲಕ ಎಂತಹ ಕಠಿಣ ಕೆಲಸವನ್ನು ಮಾಡಬಹುದು. ಹಾಗೆ ತೂಕ ಇಳಿಸಿಕೊಳ್ಳುವುದು ಕೂಡ ಒಂದು ಕಠಿಣ ಕೆಲಸವೇ. ಆದ್ರೆ ನಿಮ್ಮ ಕಠಿಣ ನಿರ್ಧಾರಗಳಿಂದ ಇದನ್ನು ಸಾಧ್ಯ ಮಾಡಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications