Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಬೇಸಿಗೆಯಲ್ಲಿ ಈ ಜ್ಯೂಸ್‌ಗಳು ನಿಮ್ಮ ಚರ್ಮದ ಹೊಳಪು ಕಾಪಾಡಲಿವೆ!
ಬೇಸಿಗೆ ಆರಂಭಗೊಂಡಿದೆ, ಮಧ್ಯಾಹ್ನದ ಸಮಯದಲ್ಲಿ ಮನೆಯಿಂದ ಹೊರಹೋಗುವುದು ಅಂದರೆ ಬಿಸಿಲಿನಲ್ಲಿ ಚರ್ಮವು ಸುಡುವ ಭೀತಿ ಎದುರಾಗುತ್ತೆ. ಬೆಳಗ್ಗೆ 10 ಗಂಟೆಯ ನಂತರ ಹಾಗೆ ಮಧ್ಯಾಹ್ನ 4 ಗಂಟೆಯವರೆಗೂ ಸುಡುವ ಬಿಸಿಲಿನಿಂದ ನೀವು ಸಮಸ್ಯೆ ಎದುರಿಸಬಹುದು. ಈ ಬಿಸಿಲಿನಲ್ಲಿ ನೀವು ಹಲವು ರೀತಿಯ ಸಮಸ್ಯೆಗಳು ಕಾಡುತ್ತವೆ. ಪ್ರಮುಖವಾಗಿ ದೇಹ ದಣಿಯುವುದು ಹಾಗೆ ಚರ್ಮದ ಮೇಲೆ ಸೂರ್ಯನ ಕಿರಣಗಳಿಂದ ಹಾನಿಗೊಳಗಾಗುವುದು ನೋಡಬಹುದು.
ಈ ಸೂರ್ಯನ ಕಿರಣದಿಂದ ಕ್ಯಾನ್ಸರ್ ತರುವ ಗಂಭೀರ ಅಪಾಯದಿಂದ ಹಿಡಿದು ಚರ್ಮ ಕಪ್ಪಾಗುವಂತಹ ಸಾಮಾನ್ಯ ಸಮಸ್ಯೆಗಳನ್ನು ನಾವು ನೋಡಬಹುದು. ಇದಕ್ಕಾಗಿ ಮಾರುಕಟ್ಟೆಯಲ್ಲಿ ಹಲವು ರೀತಿಯ ಸನ್‌ಸ್ಕ್ರೀನ್‌ಗಳು ಸಿಗುತ್ತವೆ. ಕಡಿಮೆ ಬೆಲೆಯ ಹಾಗೆ ದುಬಾರಿ ಬೆಲೆಯ ಕ್ರೀಮ್‌ಗಳು ಕೂಡ ಸಿಗುತ್ತವೆ. ಆದ್ರೆ ಇದ್ಯಾವುದು ಸಹ ನಿಮ್ಮ ಚರ್ಮದ ಆರೋಗ್ಯ ಕಾಪಾಡಲಿವೆ ಎಂಬುದು ಎಷ್ಟು ಪ್ರಮಾಣದಲ್ಲಿ ಸತ್ಯವಾಗಲಿದೆ ಎಂಬುದು ಪ್ರಶ್ನೆಯಾಗಿ ಉಳಿಯಲಿವೆ.

ಆದ್ರೆ ನಾವಿಂದು ಚರ್ಮದ ಆರೋಗ್ಯ ವೃದ್ಧಿಸುವ, ಚರ್ಮದ ಹೊಳಪು ಮರಳಿ ನೀಡುವಂತಹ ಜ್ಯೂಸ್‌ಗಳ ಕುರಿತಾಗಿ ತಿಳಿದುಕೊಳ್ಳೋಣ. ಯಾವೆಲ್ಲಾ ಹಣ್ಣಿನ ಜ್ಯೂಸ್‌ಗಳು ನಿಮಗೆ ನೈಸರ್ಗಿಕವಾಗಿ ಬಿಸಿಲಿನಿಂದ ರಕ್ಷಣೆ ನೀಡಲಿವೆ. ಹಾಗೆ ಯಾವ ಜ್ಯೂಸ್‌ಗಳು ನಿಮ್ಮ ಚರ್ಮವನ್ನು ಈ ಬೇಸಿಗೆಯಲ್ಲಿ ಕಿರಣಗಳಿಂದ ಕಾಪಾಡಲಿವೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಎಳನೀರು
ಬೇಸಿಗೆಯಲ್ಲಿ ಎಳನೀರು ಸೇವನೆ ಚರ್ಮಕ್ಕೆ ಮಾತ್ರವಲ್ಲದೆ ದೇಹಕ್ಕೆ ಬಹಳ ಉತ್ತಮವಾಗಿರಲಿದ. ನೈಸರ್ಗಿಕವಾಗಿ ಎಲೆಕ್ಟ್ರೋಲೈಟ್‌ಗಳ ಸಮೃದ್ಧ ಮೂಲವೆಂದು ಹೆಸರುವಾಸಿಯಾದ ಎಳನೀರು ಚರ್ಮದ ಕೋಶಗಳನ್ನು ಒಳಗಿನಿಂದ ಹೈಡ್ರೇಟ್ ಮಾಡುವ ಮೂಲಕ ಚರ್ಮದ ತೇವಾಂಶ ಮಟ್ಟವನ್ನು ಮರುಪೂರಣಗೊಳಿಸುವಲ್ಲಿ ಅಸಾಧಾರಣವಾಗಿ ಪರಿಣಾಮಕಾರಿಯಾಗಿದೆ.
ನಿಂಬೆಯೊಂದಿಗೆ ಕಬ್ಬಿನ ಜ್ಯೂಸ್
ನೀವು ಬೇಸಿಗೆಯ ಸಮಯದಲ್ಲಿ ಎಲ್ಲಾ ಕಡೆ ಕಬ್ಬಿನ ಜ್ಯೂಸ್ ಅಂಗಡಿ ಕಣ್ಣಿಗೆ ಬೀಳುವುದು ಗಮನಿಸಿರುತ್ತೀರಿ. ಈ ಕಬ್ಬು ನಮ್ಮ ಚರ್ಮಕ್ಕೆ ಬಹಳ ಉತ್ತಮ ಅಂಶಗಳ ಹೊಂದಿದೆ. ನಿಂಬೆಯಲ್ಲಿರುವ ವಿಟಮಿನ್ ಸಿ ದೇಹದ ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ, ಇದು ದೃಢವಾದ, ಹಾಗೆ ಚರ್ಮದ ಆರೋಗ್ಯಕ್ಕೆ ಬಹಳ ಉತ್ತಮ ಎನ್ನಬಹುದು. ಬೇಸಿಗೆಯ ಸಮಯದಲ್ಲಿ ನಿಮ್ ಕಾಂತಿಯುವ ಚರ್ಮಕ್ಕೆ ಕಬ್ಬಿನ ಹಾಲಿನ ಜೊತೆಗೆ ನಿಂಬೆ ರಸ ಸೇರಿಸಿ ಸೇವಿಸುವುದು ಬಹಳ ಉತ್ತಮ.
ನೆಲ್ಲಿಕಾಯಿ ಅರಶಿಣ ಪುಡಿ
ವಿಟಮಿನ್ ಸಿ ನಿಮ್ಮ ಚರ್ಮಕ್ಕೆ ಎಷ್ಟು ಪ್ರಯೋಜನಕಾರಿ ಎಂಬುದನ್ನು ನೀವು ತಿಳಿದಿದ್ದೀರಿ. ಹಾಗೆ ಚರ್ಮಕ್ಕೆ ಅರಶಿಣ ಕೂಡ ಅಷ್ಟೇ ಪ್ರಯೋಜನ ತರಲಿದೆ. ಅರಶಿಣ ಹಚ್ಚಿ ಸ್ನಾನ ಮಾಡುವ ಸಂಪ್ರದಾಯ ಈ ಸಮಯದಲ್ಲಿ ನೆನೆಯಬಹುದು. ಆದ್ರೆ ನೆಲ್ಲಿಕಾಯಿ ಹಾಗೂ ಅರಶಿಣ ಮಿಶ್ರಿತ ಜ್ಯೂಸ್ ಸಹ ನಿಮ್ಮ ಚರ್ಮದ ಆರೋಗ್ಯಕ್ಕೆ ಬಹಳ ಉತ್ತಮ. ಅದ್ರಲ್ಲೂ ಬೇಸಿಗೆಯ ಸಮಯದಲ್ಲಿ ಇದು ಬಹಳ ಪ್ರಯೋಜನಕಾರಿಯಾಗಿರಲಿದೆ. ಅರಿಶಿನವು ಉರಿಯೂತ ನಿವಾರಕ ಮತ್ತು ಆಂಟಿಮೈಕ್ರೊಬಿಯಲ್ ಗುಣಗಳನ್ನು ಹೊಂದಿದ್ದು, ದೇಹದ ಆಂತರಿಕ ಶುದ್ಧೀಕರಣಕ್ಕೆ ಸಹಾಯ ಮಾಡುವಲ್ಲಿ ಮತ್ತು ಚರ್ಮದ ಬಿರುಕುಗಳು ಮತ್ತು ಕಿರಿಕಿರಿಯಂತಹ ಸಾಮಾನ್ಯ ಸಮಸ್ಯೆಗಳನ್ನು ತಡೆಗಟ್ಟುವಲ್ಲಿ ಇದು ಹೆಚ್ಚು ಪರಿಣಾಮಕಾರಿಯಾಗಿದೆ.
ಬೀಟ್ರೂಟ್ ಮತ್ತು ನಲ್ಲಿಕಾಯಿ ರಸ
ಬೀಟ್ರೂಟ್ ಮತ್ತು ನಲ್ಲಿಕಾಯಿಯ ಸಂಯೋಜನೆಯು ಪ್ರಬಲವಾದ ಉತ್ಕರ್ಷಣ ನಿರೋಧಕಗಳಿಂದ ಕೂಡಿರಲಿದೆ. ಇದು ಉರಿಯೂತ ಕಡಿಮೆ ಮಾಡಲು ಹಾಗೆ ಸ್ವತಂತ್ರ ರಾಡಿಕಲ್‌ಗಳ ಹಾನಿಕಾರಕ ಪರಿಣಾಮಗಳನ್ನು ತಟಸ್ಥಗೊಳಿಸಲು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತವೆ. ಇದು ನಿಮ್ಮ ಚರ್ಮದ ಹೊಳಪಿಗೆ ಬಹಳ ಮುಖ್ಯ ಅಂಶವಾಗಿರಲಿದೆ. ಹೀಗಾಗಿ ಈ ಬೇಸಿಗೆಯಲ್ಲಿ ಈ ಜ್ಯೂಸ್ ಅನ್ನು ಹೆಚ್ಚಾಗಿ ಸೇವಿಸುವುದ ನಿಮ್ಮ ಚರ್ಮದ ಆರೋಗ್ಯದ ದೃಷ್ಟಿಯಲ್ಲಿ ಬಹಳ ಉತ್ತಮ.



Click it and Unblock the Notifications
