Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಮುಟ್ಟನ್ನು ಮುಂದೂಡಲು ಮಾತ್ರೆ ತೆಗೆದುಕೊಂಡರೆ ಈ ಅಡ್ಡಪರಿಣಾಮಗಳಿವೆ!
ಮನೆಯಲ್ಲಿ ಪೂಜೆಯಿದೆ ಅಥವಾ ಟ್ರಾವೆಲ್ ಮಾಡುತ್ತಿದ್ದೇವೆ ಅಥವಾ ಇನ್ಯಾವುದೋ ಕಾರಣಕ್ಕೆ ಮುಟ್ಟಿನ ದಿನಾಂಕವನ್ನು ಮುಂದೂಡುತ್ತಾರೆ. ಮುಟ್ಟಾದರೆ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸುವಂತಿಲ್ಲ ಎಂಬ ನಂಬಿಕೆ ನಮ್ಮಲ್ಲಿ ಇರುವುದರಿಂದ ಹೆಚ್ಚಿನವರು ಪೂಜಾ ಕಾರ್ಯಕ್ರಮಗಳಿರುವಾಗ ಮುಟ್ಟನ್ನು ಮುಂದೂಡುತ್ತಾರೆ. ಕೆಲವರು ವಾರದವರೆಗೆ ಮುಟ್ಟನ್ನು ಮುಂದೂಡುತ್ತಾರೆ. ಈ ರೀತಿ ಮುಟ್ಟನ್ನು ಮುಂದೆಕ್ಕೆ ಹಾಕಲು ಮಾತ್ರೆ ತೆಗೆದುಕೊಳ್ಳಲಾಗುವುದು. ಆದರೆ ಈ ರಿತಿ ತೆಗೆದುಕೊಳ್ಳುವ ಮಾತ್ರೆಗಳು ದೇಹದ ಮೇಲೆ ಅಡ್ಡಪರಿಣಾಮ ಬೀರುವುದು.
ಮುಟ್ಟನ್ನು ಮುಂದೂಡಲು ಮಾತ್ರೆ ತೆಗೆದುಕೊಳ್ಳುವುದರಿಂದ ದೇಹದ ಮೇಲೆ ಬೀರುವ ಅಡ್ಡ ಪರಿಣಾಮಗಳೇನು ಎಂದು ನೋಡೋಣ ಬನ್ನಿ:

* ವಿಶೇಷ ಕಾರ್ಯಕ್ರಮವಿದ್ದಾಗ
* ಪ್ರಯಾಣ ಮಾಡುವಾಗ
* ಕೆಲವೊಂದು ಚಿಕಿತ್ಸೆಯಲ್ಲಿ
ಈ ಬಗೆಯ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಈ ಅಡ್ಡಪರಿಣಾಮಗಳು ಉಂಟಾಗುವುದು:
ಮೊಡವೆ: ಈ ಮಾತ್ರೆಗಳನ್ನು ತೆಗೆದುಕೊಂಡಾಗ ದೇಹದಲ್ಲಿ ಹಾರ್ಮೋನ್‌ಗಳಲ್ಲಿ ವ್ಯತ್ಯಾಸ ಉಂಟಾಗುವುದು. ಇದರಿಂದಾಗಿ ಮೊಡವೆ ಸಮಸ್ಯೆ ಉಂಟಾಗುವುದು.
* ರಕ್ತ ಕಲೆ ಕಂಡು ಬರುವುದು: ಮುಟ್ಟಾಗುವುದಿಲ್ಲ, ಆದರೆ ಸ್ವಲ್ಪ ರಕ್ತದ ಕಲೆಗಳು ಕಂಡು ಬರುವುದು. ಈ ರೀತಿ ಕಂಡು ಬರುವುದು ಅನೇಕ ಆರೋಗ್ಯ ಸಮಸ್ಯೆಯ ಸೂಚನೆ ಕೂಡ ಆಗಿರಬಹುದು.
ಮೂಡ್ ಸ್ವಿಂಗ್ ಉಂಟಾಗುವುದು: ಮುಟ್ಟಿನ ಸಮಯದಲ್ಲಿ ಮೂಡ್ ಸ್ವಿಂಗ್ ಉಂಟಾಗುವುದು. ಈ ರೀತಿಯ ಮಾತ್ರೆ ತೆಗೆದುಕೊಂಡಾಗ ತುಂಬಾ ಜನರಿಗೆ ಮೂಡ್ ಸ್ವಿಂಗ್ ಉಂಟಾಗುವುದು. ಸಿಟ್ಟು ಬರುವುದು, ಬೇಸರ ಈ ರೀತಿ ಭಾವನೆಗಳು ಮೂಡುವುದು, ಕೆಲವರಿಗೆ ಇದರಿಂದಾಗಿ ಖಿನ್ನತೆ ಕೂಡ ಕಾಡುವುದು.
ಲೈಂಗಿಕ ಆಸಕ್ತಿ ಕಡಿಮೆಯಾಗುವುದು
ಮುಟ್ಟನ್ನು ಮುಂದೂಡುವ ಮಾತ್ರೆ ತೆಗೆದುಕೊಂಡಾಗ ಹಾರ್ಮೋನ್‌ಗಳ ಮೇಲೆ ಪ್ರಭಾವ ಬೀರುವುದರಿಂದ ಲೈಂಗಿಕ ಆಸಕ್ತಿ ಕಡಿಮೆಯಾಗುವುದು.
ಸ್ತನಗಳಲ್ಲಿ ನೋವು ಕಂಡು ಬರುವುದು: ಸ್ತನಗಳು ಬಿಗಿಯಾದಂತೆ ಅನಿಸುವುದು, ತುಂಬಾ ನೋವು ಕೂಡ ಇರಬಹುದು. ಮುಟ್ಟಿನ ಸಮಯ ಬಂದಾಗ ಸ್ತನಗಳಲ್ಲಿ ಚಿಕ್ಕದಾಗಿ ನೋವು ಕಂಡು ಬರುವುದು ಸಹಜ, ಆದರೆ ಮುಟ್ಟಿನ ದಿನಾಂಕವನ್ನು ಒತ್ತಡಪೂರ್ವವಾಗಿ ಮುಂದೂಡಿದಾಗ ನೋವು ಹೆಚ್ಚಾಗುವುದು.
ವಾಂತಿ: ಕೆಲವರಿಗೆ ಈ ರೀತಿಯ ಮಾತ್ರೆ ತೆಗೆದುಕಂಡಾಗ ಸುಸ್ತು, ವಾಂತಿ ಈ ರೀತಿಯೆಲ್ಲಾ ಕಂಡು ಬರುವುದು.
ರಕ್ತ ಹೆಪ್ಪುಗಟ್ಟುವ ಅಪಾಯವಿದೆ: ಈ ಬಗೆಯ ಮಾತ್ರೆ ಕೆಲವೊಮ್ಮೆ ರಕ್ತ ಹೆಪ್ಪುಗಟ್ಟಲು ಕೂಡ ಕಾರಣವಾಗುವುದು. ಇದರಿಂದ ಪಾರ್ಶ್ವವಾಯು ಕೂಡ ಉಂಟಾಗುವುದು.
ಈ ಅಡ್ಡಪರಿಣಾಮಗಳನ್ನು ಕಡಿಮೆ ಮಾಡುವುದು ಹೇಗೆ?
* ಡೋಸೇಜ್ ಸರಿಯಾಗಿ ತೆಗೆದುಕೊಳ್ಳಬೇಕು: ಅತಿಯಾದ ಡೋಸೇಜ್ ತೆಗೆದುಕೊಳ್ಳಬೇಡಿ. ನೀವು ಸ್ವತಃ ಈ ಬಗೆಯ ಮಾತ್ರೆಗಳನ್ನು ತೆಗೆದುಕೊಳ್ಳುವುದಕ್ಕಿಂತ ವೈದ್ಯರ ಸಲಹೆ ಪಡೆದು ತೆಗೆದುಕೊಳ್ಳಿ.
* ನೀರನ್ನು ಚೆನ್ನಾಗಿ ಕುಡಿಯಿರಿ: ಈ ರೀತಿಯ ಮಾತ್ರೆ ತೆಗೆದುಕೊಂಡಾಗ ನೀರನ್ನು ಚೆನ್ನಾಗಿ ಕುಡಿಯಿರಿ. ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳಿ.
* ಆಹಾರ ಸೇವಿಸಿದ ಬಳಿಕ ಮಾತ್ರೆ ತೆಗೆದುಕೊಳ್ಳಿ
* ಮದ್ಯ ಸೇವಿಸಬೇಡಿ.
ಕೊನೆಯದಾಗಿ: ನೀವು ಮುಟ್ಟನ್ನು ಮುಂದೂಡುವ ಮಾತ್ರೆ ತೆಗೆದುಕೊಳ್ಳದಿರುವುದು ಒಳ್ಳೆಯದು. ಇದರಿಂದ ಅಡ್ಡಪರಿಣಾಮಗಳು ತುಂಬಾನೇ ಇರುತ್ತದೆ, ಅಲ್ಲದೆ ನಾವು ನೈಸರ್ಗಿಕ ಪ್ರಕೃಯೆ ವಿರುದ್ಧ ಮಾಡುವ ಕಾರ್ಯವಾಗಿದೆ, ಇದರಿಂದ ಖಂಡಿತ ದೇಹಕ್ಕೆ ಒಳ್ಳೆಯದಲ್ಲ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
