Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಹುಟ್ಟು ಹಬ್ಬದಲ್ಲಿ ಈ ಕ್ಯಾಂಡಲ್ ಹಚ್ಚುತ್ತೀರಾ..? ಎಚ್ಚರ..! ಕಾದಿದೆ ಅಪಾಯ.!
ಹುಟ್ಟು ಹಬ್ಬ ಆಚರಿಸಿಕೊಳ್ಳೋದು ಅಂದ್ರೆ ಯಾರಿಗೆ ತಾನೆ ಇಷ್ಟ ಇರಲ್ಲ ಹೇಳಿ. ಅದ್ರಲ್ಲೂ ಕೆಲವರ ಹುಟ್ಟುಹಬ್ಬಕ್ಕೆ ಲಕ್ ಷಲಕ್ಷ ರೂಪಾಯಿಯನ್ನೂ ಖರ್ಚು ಮಾಡಲಾಗುತ್ತದೆ. ಮತ್ತೆ ಕೆಲವರು ಮನೆಯಲ್ಲಿ ಸಣ್ಣದಾಗಿ ಡೆಕೋರೇಶನ್ ಮಾಡಿಕೊಂಡು ಕೇಕ್ ಕತ್ತರಿಸಿ ಸಂತಸ ಹಂಚಿಕೊಳ್ಳುತ್ತಾರೆ.
ಇನ್ನು ಹುಟ್ಟುಹಬ್ಬ ಅಂದ ಮೇಲೆ ಅಲ್ಲಿ ಕೇಕ್ ಕತ್ತರಿಸೋದೇ ಬಹುಮುಖ್ಯ ಕೆಲಸ. ಈಗಂತು ಚಿತ್ರ ವಿಚಿತ್ರ ಕೇಕ್‌ಗಳಿಂದ ಹಿಡಿದು ಹತ್ತು ಹಲವು ರುಚಿಯ ಕೇಕ್ ಸಿಗುತ್ತವೆ. ಜೊತೆಗೆ ಕೇಕ್ ಮೇಲೆ ನಾವು ಕ್ಯಾಂಡಲ್ ಇಟ್ಟು ಅದನ್ನು ಹಚ್ಚಿ ಬಳಿಕ ಸೆಲೆಬ್ರೇಟ್ ಮಾಡುತ್ತೇವೆ. ಆದರೆ ಈ ರೀತಿ ಕೇಕ್ ಮೇಲೆ ಅನಾರ್ ಕ್ಯಾಂಡಲ್ ಹಚ್ಚುವುದು ಅಪಾಯಕಾರಿ.

ಹೌದು ಕೇಕ್ ಮೇಲೆ ಇಟ್ಟು ಹಚ್ಚುವ ಈ ಅನಾರ್ ಕ್ಯಾಂಡಲ್‌ಗಳು ಆರೋಗ್ಯಕ್ಕೆ ತುಂಬಾನೆ ಅಪಾಯಕಾರಿಯಂತೆ. ಈ ಕುರಿತು ಯೂಟ್ಯೂಬರ್ ಒಬ್ಬರು ವಿಡಿಯೋ ಹಂಚಿಕೊಂಡಿದ್ದು, ಎಲ್ಲರನ್ನು ಆತಂಕಕ್ಕೆ ದೂಡಿದೆ. ಇತ್ತೀಚಿಗೆ ಮೇಣದ ದೀಪ ಹಚ್ಚುವ ಬದಲಿಗೆ ಈ ಅನಾರ್ ಕ್ಯಾಂಡಲ್ ಹಚ್ಚಲಾಗುತ್ತದೆ. ಇದು ಹಚ್ಚಿದ ತಕ್ಷಣ ಬಣ್ಣದ ಬಣ್ಣದ ಸ್ಪಾರ್ಕಲ್‌ನಂತೆ ಉರಿದು ಬಿಡುತ್ತದೆ.
ಹೀಗಾಗಿ ಎಲ್ಲರು ತಮ್ಮ ಹುಟ್ಟುಹಬ್ಬದಲ್ಲಿ ಈ ಅನಾರ್ ಕ್ಯಾಂಡಲ್ ಹೆಚ್ಚಾಗಿ ಬಳಸುತ್ತಾರೆ. ಅಶು ಘಾಯ್ ಎಂದು ಕರೆಯಲ್ಪಡುವ ಯೂಟ್ಯೂಬರ್ ಒಬ್ಬರು ಈ ಅನಾರ್ ಕ್ಯಾಂಡಲ್‌ನ ಬಳಸೋದ್ರಿಂದ ಆಗುವ ದುಷ್ಪರಿಣಾಮದ ಕುರಿತು ವಿವರಿಸಿದ್ದಾರೆ. ಈ ಅನಾರ್ ಕ್ಯಾಂಡಲ್ ಕಬ್ಬಿಣ, ತಾಮ್ರ, ಸತು, ಅಲ್ಯೂಮಿನಿಯಂ ಮತ್ತು ಮೆಗ್ನೀಸಿಯಮ್ ಸಂಯುಕ್ತಗಳಂತಹ ಅಂಶಗಳನ್ನು ಒಳಗೊಂಡಿರುತ್ತದೆ.
ಕೆಲವು ಪಟಾಕಿಗಳಲ್ಲೂ ಇದೇ ಅಂಶ ಬಳಸಲಾಗುತ್ತದೆ. ಇಲ್ಲಿ ಯೂಟ್ಯೂಬರ್ ಈ ಕ್ಯಾಂಡಲ್ ಅನ್ನು ಬಿಳಿ ಹಾಳೆಯ ಮೇಲೆ ಹಚ್ಚಿದಾಗ ಹಾಳೆಯ ಸುತ್ತಲೂ ಅದು ಉರಿದ ಬೂದಿ ಬಿದ್ದಿರುವುದು ಕಾಣಬಹುದು. ಇದರಲ್ಲಿ ಈ ರಾಸಾಯನಿಕ ಅಂಶಗಳಿವೆ. ಈ ರಾಸಾಯನಿಕಗಳು ಬೆಂಕಿಯ ಸಂಪರ್ಕಕ್ಕೆ ಬಂದಾಗ ಅದು ಕಾರ್ಬೋನೇಟ್‌ಗಳಾಗಿ ರೂಪಾಂತರವಾಗುತ್ತವೆ ಎಂಬುದನ್ನು ಈ ವಿಡಿಯೋ ವಿವರಿಸುತ್ತದೆ. ಇದು ಆರೋಗ್ಯದ ದೃಷ್ಟಿಯಿಂದ ತುಂಬಾನೆ ಅಪಾಯಕಾರಿಯಾಗಿದೆ.
ಆದರೆ ನೀವು ಕೇಕ್ ಮೇಲೆ ಇಟ್ಟು ಈ ಕ್ಯಾಂಡಲ್ ಹಚ್ಚಿದಾಗ ಕೇಕ್ ಮೇಲೆ ಇದರ ಬೂದಿ ಬೀಳುವುದು ನಿಮಗೆ ತಿಳಿಯುವುದೇ ಇಲ್ಲ. ಜೊತೆಗೆ ನೀವು ಈ ರಾಸಾಯನಿಕವನ್ನ ಕೇಕ್‌ನಿಂದ ಬೇರ್ಪಡಿಸಲು ಸಹ ಸಾಧ್ಯವಿಲ್ಲ. ಹೀಗಾಗಿ ಕೇಕ್ ಅನ್ನು ಹಾಗೆಯೇ ಕತ್ತರಿಸಿ ಸವಿಯುತ್ತೀರಿ. ಆದರೆ ಈ ಎಲ್ಲಾ ರಾಸಾಯನಿಕ ನಿಮ್ಮ ಹೊಟ್ಟೆಗೆ ಸೇರಿಕೊಳ್ಳುತ್ತದೆ.
ಈ ವಿಡಿಯೋ ನೋಡಿದ ಮಂದಿ ಶಾಕ್ ಜೊತೆಗೆ ಇದೊಂದು ಒಳ್ಳೆಯ ಮಾಹಿತಿ ಎಂದು ಅವರಿಗೆ ಧನ್ಯವಾದ ಹೇಳುತ್ತಿದ್ದಾರೆ. ವರ್ಷಗಳಿಂದ ಹುಟ್ಟು ಹಬ್ಬ ಆಚರಿಸಿಕೊಳ್ಳುವ ಮಂದಿ ಇಂತಹ ವಿಚಾರಗಳ ಬಗ್ಗೆ ಎಂದಿಗೂ ಗಮನ ಹರಿಸಿರುವುದಿಲ್ಲ. ಆದರೆ ಈ ವಿಡಿಯೋದಿಂದ ಒಂದಿಷ್ಟು ಮಂದಿಗೆ ಈ ವಿಚಾರ ತಿಳಿಯಲಿದೆ ಅವರು ಮುಂದಿನ ಹುಟ್ಟುಹಬ್ಬದಲ್ಲಿ ಎಚ್ಚರಿಕೆ ವಹಿಸಲಿದ್ದಾರೆ.
ಆದರೆ ಈ ಕ್ಯಾಂಡಲ್ ಅನ್ನು ಕೇಕ್ ಮೇಲೆ ಹಚ್ಚುವುದಕ್ಕಿಂತಲೂ ಬೇರೆ ಕಡೆ ಇಟ್ಟು ಹಚ್ಚಿವುದು ಉತ್ತಮ. ಹೀಗಾದಾಗ ನಿಮ್ಮ ಸೆಲೆಬ್ರೇಶನ್ ಸಹ ಯಾವ ಅಡ್ಡಿ ಇಲ್ಲದೆ ನಡೆಯುತ್ತೆ. ಜೊತೆಗೆ ಸುರಕ್ಷತೆಯ ದೃಷ್ಟಿಯಿಂದಲೂ ಉತ್ತಮ ಎಂಬುದು ವಿಡಿಯೋದ ಸಾರಾಂಶವಾಗಿದೆ.
ಇದಲ್ಲದೆ ಕೇಕ್ ಕತ್ತರಿಸುವ ಮುನ್ನ ಹಲವು ರೀತಿಯ ಅಲಂಕಾರಿಕಾ ವಸ್ತುಗಳು, ಕ್ರ್ಯಾಕರ್‌ಗಳು, ನಕಲಿ ಸ್ನೋಗಳನ್ನು ಸಿಡಿಸಲಾಗುತ್ತದೆ. ಇದರ ಅಂಶಗಳು ಕೂಡ ಕೇಕ್ ಮೇಲೆ ಬೀಳುತ್ತದೆ. ಇದನ್ನು ಸಹ ಆದಷ್ಟು ತಡೆದರೆ ಉತ್ತಮ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
