Latest Updates
-
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು
ದೇಹಕ್ಕೆ ಹಾನಿ ಮಾಡದ ಸ್ನೇಹಮಯಿ ವೈರಸ್ ಪತ್ತೆ..! ಕ್ಯಾನ್ಸರ್ ವಿರುದ್ಧವೂ ಹೋರಾಡಲಿದೆ!
ವೈರಸ್‌ಗಳು ಎಂದರೆ ಅವು ಅನಾರೋಗ್ಯ ತರುವಂತಹ ಗುಣ ಹೊಂದಿರುವುದು ಎಂಬುದು ನಿಮಗೆ ತಿಳಿದಿದೆ. ವೈರಸ್‌ಗಳಿಂದಲೇ ವಿಶ್ವದ ಬಹುತೇಕ ಅನಾರೋಗ್ಯ ಸಮಸ್ಯೆಗಳು ಕಾಡುವುದು ನೋಡಬಹುದು. ಆದ್ರಲ್ಲೂ ಹಲವು ವೈರಸ್‌ಗಳು ಜೀವಕ್ಕೆ ಅಪಾಯ ತರುವಂತ ರೀತಿಯಲ್ಲಿ ಸಮಸ್ಯೆಗಳ ತರುವುದು ನೋಡಬಹುದು.
ಇನ್ನು ಮತ್ತೊಂದಿಷ್ಟು ವೈರಸ್‌ಗಳು ನಮ್ಮ ನಡುವೆ ಇದ್ದರೂ ಅವುಗಳಿಂದ ತುಂಬಾ ಕಡಿಮೆ ಹಾನಿಯಾಗುವುದು ನೋಡಬಹುದು. ಆದ್ರೆ ಈಗ ವಿಜ್ಞಾನಿಗಳು ಕಂಡು ಹಿಡಿದಿರುವ ವೈರಸ್ ನಿಮ್ಮನ್ನು ಅನಾರೋಗ್ಯಕ್ಕೆ ತಳ್ಳುವ ಬದಲಾಗಿ ನಿಮ್ಮನ್ನು ಶಕ್ತಿಶಾಲಿಯನ್ನಾಗಿ ಮಾಡಲು ಸಹಕಾರಿಯಾಗಿವೆ ಎಂಬ ಅಚ್ಚರಿಯ ವಿಚಾರ ಹೊರಬಿದ್ದಿದೆ.

ಬರಿಗಣ್ಣಿಗೆ ಕಾಣದಂತಹ ಈ ವೈರಸ್ ಕ್ಯಾನ್ಸರ್ ವಿರುದ್ಧವೂ ಹೋರಾಡಬಲ್ಲದು ಎಂದು ಹೇಳಲಾಗಿದೆ. ಸಿಪಿಎಂವಿ (CPMV) ಎಂದು ಕರೆಯಲಾಗಿರುವ ಈ ವೈರಸ್‌ಗಳು ಮಾನವ ಜೀವಕೋಶಗಳಿಗೆ ಸೋಂಕು ಹರಡಿ ಹಾನಿ ಮಾಡುವುದಿಲ್ಲ ಬದಲಿಗೆ ಇದು ನಿಮ್ಮ ರೋಗ ನಿರೋಧಕ ಶಕ್ತಿ ಪ್ರಚೋದಿಸಲಿದೆ, ಅದ್ರಲ್ಲೂ ಕ್ಯಾನ್ಸರ್ ಕೋಶಗಳ ಪತ್ತೆ ಮಾಡಿ ನಾಶಮಾಡಲು ದೇಹಕ್ಕೆ ತರಬೇತಿ ನೀಡುತ್ತದೆ ಎಂದು ಹೇಳಲಾಗಿದೆ.
ವಿಶೇಷ ಏನೆಂದರೆ ಈ ವೈರಸ್‌ಗಳು ತರಕಾರಿಗಳಲ್ಲಿ ಕಂಡುಬರಲಿದೆಯಂತೆ ಅದ್ರಲ್ಲೂ ಅಲಸಂದೆ ಕಾಳುಗಳಲ್ಲಿ ಈ ವೈರಸ್‌ಗಳು ನೆಲೆಸಲಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ರಾಸಾಯನಿಕ ಮತ್ತು ನ್ಯಾನೊ ಎಂಜಿನಿಯರ್‌ಗಳ ತಂಡದ ನೇತೃತ್ವದಲ್ಲಿ ಕ್ಯಾಲಿಫೋರ್ನಿಯಾ ಸ್ಯಾನ್ ಡಿಯಾಗೋ ವಿಶ್ವವಿದ್ಯಾಲಯದ ಸಂಶೋಧಕರು ಇತ್ತೀಚೆಗೆ ಸೆಲ್ ಬಯೋಮೆಟೀರಿಯಲ್ಸ್‌ನಲ್ಲಿ ಅಧ್ಯಯನವನ್ನು ಪ್ರಕಟಿಸಿದರು. ಅದರಲ್ಲಿ ಈ ವೈರಸ್ ಕುರಿತ ಮಾಹಿತಿ ಹಂಚಿಕೊಳ್ಳಲಾಗಿದೆ. ಕೌಪಿ ಮೊಸಾಯಿಕ್ ವೈರಸ್ (CPMV) ಮಾನವ ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ. ಹಾಗೆ ಹೇಗೆ ಪ್ರಚೋದಿಸಲ್ಪಡುತ್ತದೆ ಎಂಬುದನ್ನು ಅಧ್ಯಯನ ಮಾಡಲಾಗುತ್ತದೆ.
ಪ್ರಯೋಗಲಯದಲ್ಲಿ ಕ್ಯಾನ್ಸರ್ ಹೊಂದಿರುವ ಇಲಿಗಳು ಹಾಗೆ ನಾಯಿಗಳ ಮೇಲೆ ಈ ಅಧ್ಯಯನ ನಡೆಸಲಾಗಿದೆ. ಅದರಲ್ಲಿ ಕೌಪಿ ವೈರಸ್ ಆಂಟಿ ಟ್ಯೂಮರ್ ರೀತಿಯಾಗಿ ಕೆಲಸ ಮಾಡಿದೆ ಎಂದು ತಿಳಿದುಬಂದಿದೆ. ಗಡ್ಡೆಗಳಿಗೆ ನೇರವಾಗಿ ಚುಚ್ಚಿದಾಗ ವೈರಸ್ ನ್ಯೂಟ್ರೋಫಿಲ್‌ಗಳು, ಮ್ಯಾಕ್ರೋಫೇಜ್‌ಗಳು ಮತ್ತು ನೈಸರ್ಗಿಕ ಕೋಶಗಳ ನಾಶಗಳು ಸೇರಿದಂತೆ ವಿವಿಧ ಸಹಜ ರೋಗನಿರೋಧಕ ಕೋಶಗಳನ್ನು ಆ ಪ್ರದೇಶಕ್ಕೆ ಇದು ಸೆಳೆಯುತ್ತದೆ. ಹೀಗಾಗಿ ಕ್ಯಾನ್ಸರ್ ಕೋಶಗಳು ಅಲ್ಲಿ ಬೆಳವಣಿಯಾಗುವುದನ್ನು ತಡೆಯುತ್ತದೆ. ಹಾಗೆ ದೀರ್ಘಕಾಲದ ರೋಗ ನಿರೋಧಕ ಕ್ರಿಯೆಗೆ ಒಳಗಾಗಲು ಬಿ ಜೀವ ಜೋಶಗಳು ಹಾಗೂ ಟಿ ಕೋಶಗಳನ್ನು ಸಕ್ರೀಯಗೊಳಿಸುತ್ತದೆ. ಈ ಜೀವಕೋಶಗಳು ಕ್ಯಾನ್ಸರ್ ಕೋಶ ಮತ್ತಷ್ಟು ಅಭಿವೃದ್ಧಿ ಹೊಂದದಂತೆ ನೋಡಿಕೊಳ್ಳುತ್ತವೆ. ಹಾಗೆ ಇದು ಮೂಲ ಕ್ಯಾನ್ಸರ್ ಕೋಶ ತೆಗೆಯಲು ಹಾಗೂ ದೇಹದ ಬೇರೆ ಹರಡದಂತೆ ಮಾಡಲು ಪ್ರತಿರಕ್ಷಣಾ ವ್ಯವಸ್ಥೆಯನ್ನು ಸಿದ್ದ ಮಾಡಲಿದೆ.
ಪ್ರಸ್ತುತ ಅಧ್ಯಯನವು CPMV ಯ ಕ್ರಿಯೆಯ ಕಾರ್ಯವಿಧಾನದ ಬಗ್ಗೆ ಪ್ರಮುಖ ಒಳನೋಟಗಳನ್ನು ಒದಗಿಸುತ್ತದೆ. ಹಾಗೆ ಈ ಕುರಿತಾದ ಹೆಚ್ಚಿನ ಅಧ್ಯಯನಗಳ ಅಗತ್ಯವೂ ಇದೆ. ಆಂಟಿ ಟ್ಯೂಮರ್ ಪರಿಣಾಮಕಾರಿತ್ವ ಮತ್ತು ಸುರಕ್ಷತೆಯನ್ನು ಸಾಧಿಸಲು ಅತ್ಯಂತ ಪ್ರಬಲವಾದ ವಸ್ತುಗಳ ಆಯ್ಕೆ ಮಾಡಿಕೊಳ್ಳಬೇಕಿದೆ. ಹಾಗೆ ಮುಂದಿನ ಹಂತದಲ್ಲಿ ಮತ್ತಷ್ಟು ಪ್ರಗತಿ ಸಾಧಿಸಿರುವ ಅಧ್ಯಯನ ನಡೆಯಬೇಕಿದೆ. ಈ ಅಧ್ಯಯನಗಳು ಕ್ಲೀನಿಕಲ್ ಮಟ್ಟದಲ್ಲಿ ನಡೆದಿದ್ದರೂ ಅದರ ಫಲಿತಾಂಶವು ಕ್ಯಾನ್ಸರ್ ಕ್ಷೇತ್ರದಲ್ಲಿ ಹೊಸ ಆಶಾಭಾವ ತರಲಿದೆ.
ಕ್ಯಾನ್ಸರ್ ತಡೆಯುವಲ್ಲಿ ಈಗಾಗಲೇ ಹಲವು ರೀತಿಯ ಅಧ್ಯಯನಗಳು ನಡೆಯುತ್ತಲೇ ಇದೆ. ಚಿಕಿತ್ಸಾ ಹಂತದಲ್ಲಿ ನಿತ್ಯ ಹೊಸ ರೀತಿಯ ವಿಧಾನಗಳು ಹೊರಬರುತ್ತಿವೆ. ಈಗ ಈ ವೈರಸ್ ಮೂಲಕ ಕ್ಯಾನ್ಸರ್ ತಡೆಗೆ ಅವಕಾಶವಿರುವುದು ಈ ವಲಯದಲ್ಲಿ ಮತ್ತಷ್ಟು ಅಧ್ಯಯನ, ಹಾಗೆ ಚಿಕಿತ್ಸಾ ವಿಧಾನಗಳ ಪ್ರಗತಿಗೆ ಕಾರಣವಾಗುತ್ತಿದೆ.



Click it and Unblock the Notifications
