ಶುಗರ್‌ಗೆ ರಾಮಬಾಣ! ರೆಗ್ಯುಲರ್ ರೊಟ್ಟಿಗೆ ಬೈ ಹೇಳಿ.. ಇವುಗಳನ್ನು ತಿಂದರೆ ಸಕ್ಕರೆ ಕಡಿಮೆ ಆಗುತ್ತೆ

ಶುಗರ್.. ಇತ್ತೀಚಿನ ದಿನಗಳಲ್ಲಿ ಸಕ್ಕರೆ ಕಾಯಿಲೆ ಹೆಚ್ಚಿನ ಜನರನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಒಂದಾಗಿದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಅದಕ್ಕಾಗಿ ಕೆಲವು ಆಹಾರ ಕ್ರಮಗಳನ್ನು ಅನುಸರಿಸುವುದು ಅಗತ್ಯ. ಹೌದು, ಮಧುಮೇಹವು (Diabetes) ಒಂದು ದೀರ್ಘಕಾಲೀನ ಕಾಯಿಲೆಯಾಗಿದ್ದು, ದೇಹವು ರಕ್ತದಲ್ಲಿನ ಸಕ್ಕರೆಯ ಅಂಶವನ್ನು ನಿಯಂತ್ರಿಸಲು ಅಸಮರ್ಥವಾದಾಗ ಉಂಟಾಗುತ್ತದೆ. ದೇಹದಲ್ಲಿ ಇನ್ಸುಲಿನ್ ಉತ್ಪಾದನೆಯಲ್ಲಿ ವ್ಯತ್ಯಾಸವಾದಾಗ ಅಥವಾ ದೇಹವು ಇನ್ಸುಲಿನ್‌ಗೆ ಸರಿಯಾಗಿ ಸ್ಪಂದಿಸದಿದ್ದಾಗ ಈ ಸ್ಥಿತಿ ಉಂಟಾಗುತ್ತದೆ. ನಾವಿಂದು ಸಕ್ಕರೆ ಕಾಯಿಲೆಗೆ ಉಪಯುಕ್ತವಾದ ಕೆಲವು ವಿಶೇಷ ರೊಟ್ಟಿಗಳ ಬಗ್ಗೆ ತಿಳಿಸಲಿದ್ದೇವೆ. ಇವುಗಳನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳೇನು ಎಂಬುದನ್ನು ತಿಳಿಯೋಣ ಬನ್ನಿ.

ಮಧುಮೇಹವು ರಕ್ತದಲ್ಲಿ ಗ್ಲೂಕೋಸ್ ಮಟ್ಟ ಹೆಚ್ಚಾದಾಗ ಉಂಟಾಗುವ ಸಮಸ್ಯೆಯಾಗಿದೆ. ಇದನ್ನು ಸಕ್ಕರೆ ಕಾಯಿಲೆ ಎಂದು ಕರೆಯುತ್ತಾರೆ. ಈ ಸಮಸ್ಯೆಯಿಂದಾಗಿ ಇನ್ಸುಲಿನ್ ಹಾರ್ಮೋನ್ ಸಾಕಷ್ಟು ಉತ್ಪತ್ತಿಯಾಗುವುದಿಲ್ಲ. ಅಥವಾ ದೇಹವು ಇನ್ಸುಲಿನ್ ಅನ್ನು ಸರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ಈ ಸಮಸ್ಯೆಗೆ ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಮುಖ್ಯ. ಆಹಾರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಸರಿಯಾದ ಆಹಾರವನ್ನು ಸೇವಿಸಬೇಕು. ಸಕ್ಕರೆ ಕಾಯಿಲೆ ಸಮಸ್ಯೆಯನ್ನು ಕಡಿಮೆ ಮಾಡಲು ಅನೇಕ ಜನರು ರೊಟ್ಟಿಗಳನ್ನು ತಿನ್ನುತ್ತಾರೆ. ಆದರೆ, ರೊಟ್ಟಿಗಳನ್ನು ಸೇವಿಸುವಾಗ ಕೆಲವು ವಿಷಯಗಳ ಬಗ್ಗೆ ಗಮನವಿರಸುವುದು ಅಗತ್ಯ. ಈ ರೋಟಿಗಳನ್ನು (Rotis To Control Diabetes) ತಿಂದರೆ ಶುಗರ್ ಕಡಿಮೆ ಆಗುತ್ತದೆ.

Diabetes Control Rotis

ಕಡಲೆ ಹಿಟ್ಟಿನ ರೊಟ್ಟಿ

ಕಡಲೆ ಹಿಟ್ಟಿನಲ್ಲಿ ಪ್ರೋಟೀನ್ ಮತ್ತು ಫೈಬರ್ ಅಂಶ ಹೆಚ್ಚಾಗಿರುತ್ತದೆ. ಇವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸದಂತೆ ತಡೆಯುತ್ತದೆ. ಇದನ್ನು ಸೇವಿಸುವುದರಿಂದ ಕಫ ದೋಷಕ್ಕೆ ತುಂಬಾ ಒಳ್ಳೆಯದು. ಇದರೊಂದಿಗೆ, ಚಯಾಪಚಯ ಕ್ರಿಯೆ ಹೆಚ್ಚಾಗಿ ತೂಕ ಇಳಿಯುತ್ತದೆ. ಆದ್ದರಿಂದ, ತೂಕ ಇಳಿಸಿಕೊಳ್ಳಲು ಬಯಸುವವರು ಕಡಲೆ ಹಿಟ್ಟಿನ ರೊಟ್ಟಿಗಳನ್ನು ಸೇವಿಸಬಹುದು.

ಜೋಳದ ರೊಟ್ಟಿ

ಜೋಳದ ರೊಟ್ಟಿ ಗ್ಲುಟನ್ ಫ್ರೀ ಆಗಿದ್ದು, ದೇಹವನ್ನು ಶಾಂತಗೊಳಿಸುತ್ತದೆ. ಜೋಳವನ್ನು ತಿನ್ನುವುದರಿಂದ ಸಕ್ಕರೆ ಅಂಶ ನಿಯಂತ್ರಣದಲ್ಲಿರುತ್ತದೆ. ಜೊತೆಗೆ ಲಿವರ್ ಕಾರ್ಯಕ್ಷಮತೆ ಉತ್ತಮವಾಗಿರುತ್ತದೆ. ಇದನ್ನು ಸೇವಿಸುವುದರಿಂದ ಪಿತ್ತ ದೋಷವು ಸಮತೋಲನಗೊಳ್ಳುತ್ತದೆ. ಜೋಳದಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇರುವುದರಿಂದ ಗ್ಲೂಕೋಸ್ ಮಟ್ಟಗಳು ನಿಯಂತ್ರಣದಲ್ಲಿರುತ್ತವೆ. ಮುಖ್ಯವಾಗಿ ಇನ್ಸುಲಿನ್ ಮತ್ತು ಮಾತ್ರೆಗಳನ್ನು ತೆಗೆದುಕೊಳ್ಳುವವರಲ್ಲಿನ ಸಮಸ್ಯೆಗಳು ಕಡಿಮೆಯಾಗುತ್ತವೆ. ಜೋಳದಲ್ಲಿ ಹೆಚ್ಚಿನ ನಾರಿನಂಶ ಇರುವುದರಿಂದ ಬೇಗನೆ ಹಸಿವಾಗುವುದಿಲ್ಲ. ಸ್ವಲ್ಪ ತಿಂದರೂ ಹೊಟ್ಟೆ ತುಂಬಿದಂತಾಗುತ್ತದೆ. ಜೋಳದಲ್ಲಿರುವ ಕಾರ್ಬೋಹೈಡ್ರೇಟ್‌ಗಳು ಗ್ಲೂಕೋಸ್ ರೂಪದಲ್ಲಿ ನಿಧಾನವಾಗಿ ರಕ್ತದಲ್ಲಿ ಸೇರುತ್ತವೆ. ಇದರಿಂದ ರಕ್ತದಲ್ಲಿನ ಶುಗರ್ ಮಟ್ಟ ಕಡಿಮೆಯಾಗುತ್ತದೆ.

ಬಜ್ರಾ ರೊಟ್ಟಿ

ಬಜ್ರಾದಲ್ಲಿ ಮೆಗ್ನೀಸಿಯಮ್ ಹೆಚ್ಚಾಗಿರುತ್ತದೆ. ಅದೇ ರೀತಿ, ಕರಗದ ಫೈಬರ್ ಅಂಶ ಸಹ ಹೆಚ್ಚಾಗಿರುತ್ತದೆ. ಬಜ್ರಾ ರೊಟ್ಟಿ ಇನ್ಸುಲಿನ್ ಸೂಕ್ಷ್ಮತೆಯನ್ನು ಮತ್ತು ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ. ಈ ರೊಟ್ಟಿಗಳನ್ನು ತಿನ್ನುವುದರಿಂದ ದೇಹದಲ್ಲಿ ತೇವಾಂಶ ಕಡಿಮೆಯಾದಾಗ ಉಂಟಾಗುವ ಜೀರ್ಣಕಾರಿ ಸಮಸ್ಯೆಗಳನ್ನು ತಡೆಯಬಹುದು. ಬಜ್ರಾದಲ್ಲಿ ಫೈಬರ್ ಹೆಚ್ಚಾಗಿರುತ್ತದೆ. ಇದನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟಗಳು ಕಡಿಮೆಯಾಗುತ್ತವೆ. ಇದು ಗ್ಲುಟನ್ ರಹಿತವಾಗಿದ್ದು, ಪೋಷಕಾಂಶಗಳು ಸಮೃದ್ಧವಾಗಿವೆ. ಸಕ್ಕರೆ ಕಾಯಿಲೆ ಇರುವವರು ಇದನ್ನು ತಿನ್ನುವುದರಿಂದ ಬಹಳ ಒಳ್ಳೆಯದು.

ಬಾರ್ಲಿ ರೊಟ್ಟಿ

ಬಾರ್ಲಿ ರೊಟ್ಟಿ ಸಕ್ಕರೆ ಕಾಯಿಲೆ ಇರುವವರಿಗೆ ತುಂಬಾ ಒಳ್ಳೆಯದು. ಏಕೆಂದರೆ, ಬಾರ್ಲಿಯಲ್ಲಿ ಫೈಬರ್ ಅಂಶ ಹೆಚ್ಚಾಗಿರುತ್ತದೆ. ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇರುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಬಾರ್ಲಿ ರೊಟ್ಟಿ ತಿನ್ನಲು ಹಗುರವಾಗಿರುತ್ತದೆ. ಮಧುಮೇಹ ಇರುವವರು ತಿಂದರೆ ಹೊಟ್ಟೆ ಹಗುರವಾಗಿರುತ್ತದೆ. ಇದರಿಂದ ಚಯಾಪಚಯ ಕ್ರಿಯೆ ಹೆಚ್ಚಾಗಿ ಕೊಬ್ಬು ಕಡಿಮೆಯಾಗುತ್ತದೆ. ರಕ್ತದಲ್ಲಿನ ಸಕ್ಕರೆ ಕೂಡ ಕಡಿಮೆಯಾಗಿ ಜೀರ್ಣಕ್ರಿಯೆಗೆ ಅನುಕೂಲವಾಗುತ್ತದೆ.

ರಾಗಿ ರೊಟ್ಟಿ

ರಾಗಿಯಲ್ಲಿ ಕ್ಯಾಲ್ಸಿಯಂ ಮತ್ತು ಪಾಲಿಫಿನಾಲ್‌ಗಳು ಹೆಚ್ಚಾಗಿರುತ್ತವೆ. ಇದನ್ನು ಸೇವಿಸುವುದರಿಂದ ದೇಹಕ್ಕೆ ಗ್ಲೂಕೋಸ್ ನಿಧಾನವಾಗಿ ಬಿಡುಗಡೆಯಾಗುತ್ತದೆ. ಅಲ್ಲದೆ, ಈ ರೊಟ್ಟಿ ಮಧುಮೇಹ ಇರುವವರಿಗೆ ಮೂಳೆಗಳ ಬಲವರ್ಧನೆಗೆ ಒಳ್ಳೆಯದು. ಇದು ತೂಕ ಮತ್ತು ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ರಾಗಿಯಲ್ಲಿ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಇರುತ್ತದೆ. ಅಂದರೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಧಾನವಾಗಿ ಹೆಚ್ಚಿಸುತ್ತದೆ. ಸಕ್ಕರೆ ಕಾಯಿಲೆ ಇರುವವರಿಗೆ ಇದು ತುಂಬಾ ಒಳ್ಳೆಯದು. ಏಕೆಂದರೆ, ರಕ್ತದಲ್ಲಿ ಸಕ್ಕರೆ ಮಟ್ಟ ವೇಗವಾಗಿ ಏರುವುದು ಒಳ್ಳೆಯದಲ್ಲ. ಹೀಗಾಗಿ, ರಾಗಿಯನ್ನು ಯಾವುದಾದರೂ ರೂಪದಲ್ಲಿ ಸೇವಿಸುವುದು ಉತ್ತಮ. ರಾಗಿಯಲ್ಲಿನ ಹೆಚ್ಚಿನ ಫೈಬರ್ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಿ, ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ. ಇದರಿಂದ ಹೊಟ್ಟೆ ತುಂಬಿದಂತಾಗುತ್ತದೆ.

ಸಕ್ಕರೆ ಕಾಯಿಲೆ ಇರುವವರು ಉತ್ತಮ ಫಲಿತಾಂಶಗಳಿಗಾಗಿ ಈ 5 ರೀತಿಯ ರೊಟ್ಟಿಗಳನ್ನು ಸೇವಿಸುವುದು ತುಂಬಾ ಒಳ್ಳೆಯದು. ಅವುಗಳನ್ನು ಇನ್ನಷ್ಟು ಆರೋಗ್ಯಕರ ಮತ್ತು ರುಚಿಕರವಾಗಿಸಲು ಜೀರಿಗೆ, ಧನಿಯಾ, ಮೆಂತ್ಯ, ಇಂಗು ಮುಂತಾದ ಪದಾರ್ಥಗಳನ್ನು ಹಿಟ್ಟಿನಲ್ಲಿ ಸೇರಿಸಬಹುದು. ಇದರೊಂದಿಗೆ, ಚಪಾತಿಗಳನ್ನು ಬೇಯಿಸುವಾಗ ಸ್ವಲ್ಪ ತುಪ್ಪವನ್ನು ಸೇರಿಸಿದರೆ, ಜೀರ್ಣಕಾರಿ ಸಮಸ್ಯೆಗಳು ದೂರವಾಗುತ್ತವೆ. ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಇದು ಯಾವುದೇ ರೀತಿಯಲ್ಲಿ ಯಾವುದೇ ಔಷಧ ಅಥವಾ ಚಿಕಿತ್ಸೆಗೆ ಪರ್ಯಾಯವಲ್ಲ. ಇವುಗಳನ್ನು ಅನುಸರಿಸುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

Roti for Diabetes: These Rotis Lower Your Blood Sugar; Which one will you try first?

Roti for Diabetes: Eat These Instead of Regular Ones for Diabetes Control; Which one will you try first?
Story first published: Monday, July 21, 2025, 17:00 [IST]
X
Desktop Bottom Promotion