Latest Updates
-
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ -
ಅಕ್ಷಯ ತೃತೀಯ: ಮದುವೆ ಮತ್ತು ಚಿನ್ನದ ಖರೀದಿಗೆ ಹೀಗೆ ಪ್ಲಾನ್ ಮಾಡಿ -
ಮನೆಯನ್ನು ತಂಪಾಗಿಡಲು ಹೀಟ್ವೇವ್ ಸಮಯದಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ -
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ?
ನೀವು ಮಜ್ಜಿಗೆ ಹೀಗೆ ಬಳಸಿದರೆ ಪೈಲ್ಸ್ ಬರುತ್ತೆ! ಬೇಸಿಗೆಯಲ್ಲಿ ಮೊಸರು ದಿನಾ ಬಳಸಬಹುದಾ?
ಬೇಸಿಗೆಯಲ್ಲಿ ಮಜ್ಜಿಗೆ ತುಂಬಾನೇ ಒಳ್ಳೆಯದು, ದೇಹವನ್ನು ತಂಪು ಮಾಡುತ್ತದೆ, ಆದರೆ ಮಜ್ಜಿಗೆಯನ್ನು ಮಜ್ಜಿಗೆ ರೀತಿಯಲ್ಲಿಯೇ ಕುಡಿಯಬೇಕು, ಇಲ್ಲದಿದ್ದರೆ ಬಾಡಿ ಹೀಟ್ ಹೆಚ್ಚಾಗುವುದು, ಮೂಲವ್ಯಾಧಿ ಸಮಸ್ಯೆ ಬರಬಹುದು. ಹಾಗಾಗಿ ಮಜ್ಜಿಗೆಯನ್ನು ಹೇಗೆ ಕುಡಿಯಬೇಕೆಂಬುವುದು ಕೂಡ ಮುಖ್ಯವಾಗಿರುತ್ತದೆ.
ಮಜ್ಜಿಗೆ ಹೇಗೆ ಬಳಸಬೇಕು?
ಮಜ್ಜಿಗೆಯನ್ನು ತಯಾರಿಸಲು ಹೆಚ್ಚಿನವರು ಪ್ಯಾಕೆಟ್ ಮೊಸರು ಬಳಸುತ್ತಾರೆ. ಮೊಸರು ತಂದು ನೀರು ಹಾಕಿ ಮಿಕ್ಸ್ ಮಾಡಿದರೆ ಮಜ್ಜಿಗೆ ಆಗುತ್ತದೆ ಎಂದು ನಾವು ಅಂದುಕೊಳ್ಳುತ್ತೇವೆ, ಕೆಲವರು ನಾನು ದಿನದಲ್ಲಿ 2-3 ಗ್ಲಾಸ್ ಮಜ್ಜಿಗೆ ಕುಡಿದರೂ ಬಾಡಿ ಹೀಟ್ ಕಡಿಮೆಯಾಗಿಲ್ಲ ಎಂದು ಹೇಳುತ್ತೇವೆ, ಏಕೆ ಮಜ್ಜಿಗೆ ಕುಡಿದರೂ ಬಾಡಿ ಹೀಟ್ ಕಡಿಮೆಯಾಗಲ್ಲ ಎಂದು ನೋಡುವುದಾದರೆ ಅದಕ್ಕೆ ಈ ತಪ್ಪು ಕಾರಣವಾಗಿರುತ್ತದೆ.

ಮೊಸರಿಗೆ ನಾವು ಸೇರಿಸುವ ನೀರಿನ ಅಳತೆ ಎಷ್ಟಿರಬೇಕು?
1/4 ಲೀಟರ್ ಮೊಸರಿಗೆ 1/4 ಲೀಟರ್ ನೀರು ಸೇರಿಸಿ ಮಿಕ್ಸ್ ಮಾಡಿ ಕುಡಿದರೆ ಅದು ಮಜ್ಜಿಗೆಯಾಗುವುದಿಲ್ಲ, ಇಂಥ ಮಜ್ಜಿಗೆ ಕುಡಿಯುವುದರಿಂದ ಬಾಡಿ ಹೀಟ್ ಮತ್ತಷ್ಟು ಹೆಚ್ಚಾಗುವುದು, ಪೈಲ್ಸ್ ಸಮಸ್ಯೆ ಇದ್ದರೆ ಮತ್ತಷ್ಟು ಹೆಚ್ಚಾಗಬಹುದು. ಹಾಗಾಗಿ ಮೊಸರಿನಿಂದ ನೀವು ಮಜ್ಜಿಗೆ ಮಾಡುವಾಗ 1/4 ಲೀಟರ್ ಮೊಸರು ತೆಗೆದುಕೊಂಡರೆ ಅದರ ಮೂರು ಪಟ್ಟು ನೀರು ಸೇರಿಸಬೇಕು, ಅಂದರೆ ಮುಕ್ಕಾಲು ಲೀಟರ್ ನೀರಿಸಿ ಮಜ್ಜಿಗೆ ಮಾಡಬೇಕು, ಇಂಥ ಮಜ್ಜಿಗೆ ಕುಡಿಯುವುದರಿಂದ ದೇಹಕ್ಕೆ ತಂಪು. ಗಟ್ಟಿ ಮಜ್ಜಿಗೆ ದೇಹದ ಉಷ್ಣಾಂಶ ಹೆಚ್ಚು ಮಾಡುತ್ತದೆ.
ತುಂಬಾ ಬಾಡಿ ಹೀಟ್ ಆಗಿದ್ದರೆ ಏನು ಮಾಡಬೇಕು?
ಬಾಡಿ ತುಂಬಾನೇ ಹೀಟ್ ಆಗಿದ್ದರೆ ಮಜ್ಜಿಗೆಗೆ ಸ್ವಲ್ಪ ಕಾಮ ಕಸ್ತೂರಿ ಸೇರಿಸಿ ಕುಡಿದರೆ ದೇಹಕ್ಕೆ ತುಂಬಾನೇ ತಂಪು, ಬಾಡಿ ಹೀಟ್ ಕಡಿಮೆ ಮಾಡಲು ಸಹಕಾರಿ. ಮೈ ಉಷ್ಣಾಂಶ ಹೆಚ್ಚಾದರೆ ಅನೇಕ ರೀತಿಯ ಆರೋಗ್ಯ ಸಮಸ್ಯೆ ಉಂಟಾಗುತ್ತದೆ.
ಎಷ್ಟು ಮಜ್ಜಿಗೆ ಕುಡಿಯಬಹುದು? ದಿನದಲ್ಲಿ 2-3 ಲೋಟ ಮಜ್ಜಿಗೆ ಕುಡಿಯಬಹುದು
ನೀವು ಎಷ್ಟು ಮಜ್ಜಿಗೆ ಕುಡಿಯಬೇಕೆಂಬುವುದಕ್ಕೆ ದೈಹಿಕವಾಗಿ ನೀವೆಷ್ಟು ಚಟುವಟಿಕೆಯಿಂದ ಇರುತ್ತೀರಾ ಎಂಬುವುದು ಕೂಡ ಮುಖ್ಯವಾಗಿರುತ್ತದೆ. ವರ್ಕೌಟ್ ಮಾಡುವವರು, ಹೊಲ ತೋಟಗಳಲ್ಲಿ ಕೆಲಸ ಮಾಡುವವರು ಹೆಚ್ಚು ಬೆವರುವುದು ಅಲ್ಲದೆ ಬಿಸಿಲಿನಲ್ಲಿ ಕೆಲಸ ಮಾಡಿದಾಗ ತುಂಬಾನೇ ಆಯಾಸ ಉಂಟಾಗುವುದು, ಅಂಥವರು 2-3 ಲೋಟ ಮಜ್ಜಿಗೆ ಕುಡಿಯಬೇಕಾಗುತ್ತದೆ. ಅದೇ ಕೂತು ಕೆಲಸ ಮಾಡುವವರಾದರೆ ಒಂದು ಲೋಟ ಸಾಕಾಗುತ್ತೆ. ಕೆಲವರಿಗೆ ಹೆಚ್ಚು ಮಜ್ಜಿಗೆ ಕುಡಿದರೆ ಶೀತ ಉಂಟಾಗುತ್ತದೆ, ಅಂಥವರು ನೋಡಿಕೊಂಡು ಕುಡಿಯಬೇಕಾಗುತ್ತದೆ.
ಮಜ್ಜಿಗೆ ಯಾವಾಗ ಕುಡಿದರೆ ಒಳ್ಳೆಯದು?
ಮಜ್ಜಿಗೆಯನ್ನು ಯಾವಾಗ ಬೇಕಾದರೂ ಕುಡಿಯಬಹುದು, ಆದರೆ ಇದನ್ನು ಮಧ್ಯಾಹ್ನ ಊಟದ ಬಳಿಕ ಕುಡಿದರೆ ತುಂಬಾನೇ ಒಳ್ಳೆಯದು, ಇನ್ನು ಇದನ್ನು ಕುಡಿಯುವುದರಿಂದ ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು. ಜೀರ್ಣಕ್ರಿಯೆ ಸಮಸ್ಯೆ ಇರುವವರು ಸಂಜೆ ಹೊತ್ತು ಒಂದು ಲೋಟ ಮಜ್ಜಿಗೆ ಕುಡಿದರೆ ಒಳ್ಳೆಯದು.
ಮಜ್ಜಿಗೆಯಿಂದ ಅಡ್ಡಪರಿಣಾಮವಿದೆಯೇ?
ಕೆಲವರಿಗೆ ಹಾಲು ಹಾಗೂ ಅದರ ಉತ್ಪನ್ನಗಳನ್ನು ಸೇವಿಸಿದರೆ ಅಲರ್ಜಿ ಉಂಟಾಗುವುದು ಅಂಥವರು ಸೇವಿಸಬಾರದು.
ಅಲ್ಲದೆ ಕೆಲವೊಂದು ಔಷಧಿ ತೆಗೆದುಕೊಳ್ಳುವಾಗ ವೈದ್ಯರು ನಿಮಗೆ ಮಜ್ಜಿಗೆ ಸೇವಿಸಬೇಡಿ ಎಂದು ಹೇಳಿದರೆ ಸೇವಿಸಬೇಡಿ.
ಬೇಸಿಗೆಯಲ್ಲಿ ಮಜ್ಜಿಗೆ ಕುಡಿಯುವುದರಿಂದ ದೊರೆಯುವ ಪ್ರಯೋಜನಗಳು
- ದೇಹದಲ್ಲಿ ಎಲೆಕ್ಟ್ರೋಲೈಟ್ಸ್ ಬ್ಯಾಲೆನ್ಸ್ ಮಾಡುವುದರಿಂದ ನಿರ್ಜಲೀಕರಣ ಎಂಬುವುದು ಉಂಟಾಗುವುದಿಲ್ಲ. ಬಿಸಿಲಿನಲ್ಲಿ ಓಡಾಡುವಾಗ ಒಂದು ಲೋಟ ಮಜ್ಜಿಗೆ ಕುಡಿದರೆ ಸುಸ್ತು ದೂರಾಗುವುದು, ರಿಫ್ರೆಷ್ ಆಗುವಿರಿ.
- ದೇಹವನ್ನು ತಂಪಾಗಿಡುತ್ತದೆ: ಮಜ್ಜಿಗೆಯನ್ನು ಕುಡಿಯುವುದರಿಂದ ಬಾಡಿ ಹೀಟ್ ಕಡಿಮೆ ಮಾಡುತ್ತದೆ, ದೇಹ ತಂಪಾಗಿರುತ್ತದೆ, ಇದರಿಂದಾಗಿ ಹೀಟ್‌ಸ್ಟ್ರೋಕ್‌ನಂಥ ಅಪಾಯ ತಡೆಗಟ್ಟಬಹುದು.
- ಮಲಬದ್ಧತೆ ಸಮಸ್ಯೆ ತಡೆಗಟ್ಟುತ್ತದೆ: ಬೇಸಿಗೆಯಲ್ಲಿ ಮೈ ಹೆಚ್ಚು ಬವೆರುವುದು, ದೇಹದಲ್ಲಿ ನೀರಿನಂಶ ಕಡಿಮೆಯಾಗಿ ಮಲಬದ್ಧತೆ ಸಮಸ್ಯೆ ಉಂಟಾಗುವುದು, ಈ ಮಲಬದ್ಧತೆ ತಡೆಗಟ್ಟಲು ಸಹಕಾರಿಯಾಗಿದೆ.
- ಹೊಟ್ಟೆಯ ಆರೋಗ್ಯಕ್ಕೆ ಒಳ್ಳೆಯದು: ಮಜ್ಜಿಗೆ ಕುಡಿಯುವುದರಿಂದ ಹೊಟ್ಟೆಯಲ್ಲಿ ಆರೋಗ್ಯಕರ ಬ್ಯಾಕ್ಟಿರಿಯಾಗಳ ಸಂಖ್ಯೆ ಹೆಚ್ಚಾಗುವುದು. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು. ಹೊಟ್ಟೆಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಹಸಿ ಮೆಣಸು-ಮೊಸರು ಕರಿ: ಈ ಬೇಸಿಗೆಗೆ ಇಂಥ ಅಡುಗೆಗಳಿದ್ದರೆ ಆಹಾರ ರುಚಿಸುವುದು
ಬೇಸಿಗೆಯಲ್ಲಿ ಮೊಸರು ದಿನಾ ಬಳಸಬಾರದು ಏಕೆ?
ಬೇಸಿಗೆಯಲ್ಲಿ ಮೊಸರು ಒಳ್ಳೆಯದು ಎಂದು ದಿನಾ ಬಳಸಬೇಡಿ, ಆಯುರ್ವೇದ ಪ್ರಕಾರ ಮೊಸರಿನಲ್ಲಿರುವ ಹುಳಿಯಂಶ ಮೈ ಉಷ್ಣಾಂಶ ಹೆಚ್ಚು ಮಾಡುತ್ತದೆ. ಮೊಸರು ಹೆಚ್ಚಾಗಿ ಸೇವಿಸುವುದರಿಂದ ಮುಖದಲ್ಲಿ ಮೊಡವೆ ಸಮಸ್ಯೆ ಹೆಚ್ಚಾಗುವುದು, ಮೂಲವ್ಯಾಧಿ ಸಮಸ್ಯೆ ಹೆಚ್ಚಾಗುವುದು, ಬಾಡಿ ಹೀಟ್ ಹೆಚ್ಚಾಧಾಗ ಹೊಟ್ಟೆನೋವು ಈ ಬಗೆಯ ಸಮಸ್ಯೆ ಕಂಡು ಬರುವುದು. ಹಾಗಾಗಿ ನೀವು ಬೇಸಿಗೆಯಲ್ಲಿ ಮೊಸರು ಹೆಚ್ಚಾಗಿ ಬಳಸುವುದು ಸೂಕ್ತವಲ್ಲ. ಬೇಸಿಗೆಗೆ ಮೊಸರಿಗಿಂತ ಮಜ್ಜಿಗೆ ಬಳಕೆ ಒಳ್ಳೆಯದು.
ಇತರ ಸಲಹೆ:
ನೀವು ಮಜ್ಜಿಗೆ ಸಾದಾ ಮಜ್ಜಿಗೆ ಮಾಡಬಹುದು, ಮಸಾಲೆ ಮಜ್ಜಿಗೆ ಮಾಡಬಹುದು.
ಮಸಾಲೆ ಮಜ್ಜಿಗೆ ಮಾಡುವುದು ಹೇಗೆ?
ಮೊಸರು 1/2 ಕಪ್
ನೀರು ಒಂದೂವರೆ ಕಪ್
ಬ್ಲ್ಯಾಕ್ ಸಾಲ್ಟ್ ಚಿಟಿಕೆಯಷ್ಟು
ರುಚಿಗೆ ತಕ್ಕ ಉಪ್ಪು
ಸ್ವಲ್ಪ ಜೀರಿಗೆ ಪುಡಿ
ಸ್ವಲ್ಪ ಶುಂಠಿ
1 ಹಸಿ ಮೆಣಸು
ಸ್ವಲ್ಪ ಕೊತ್ತಂಬರಿ ಸೊಪ್ಪು
ಈ ಎಲ್ಲಾ ಸಾಮಗ್ರಿ ಹಾಕಿ ಮಿಕ್ಸ್ ಮಾಡಿ
ಈ ಮಸಾಲೆ ಮೊಸರನ್ನು ನೀವು ಮಣ್ಣಿನ ಮಡಿಕೆಯಲ್ಲಿ ಹಾಕಿಟ್ಟರೆ ಮಜ್ಜಿಗೆ ತಂಪಾಗಿರುತ್ತದೆ, ಬಿಸಿಲಿನಲ್ಲಿ ಕುಡಯಲು ತುಂಬಾನೇ ಹಿತ ಅನಿಸುವುದು.
ಮಜ್ಜಿಗೆಯನ್ನು ಎಷ್ಟು ದಿನದವರೆಗೆ ಇಷ್ಟು ಬಳಸಬಹುದು?
ಫ್ರಿಡ್ಜ್‌ನಲ್ಲಿ ಮಜ್ಜಿಗೆಯನ್ನು 14 ದಿನಗಳವರೆಗೆ ಇಟ್ಟು ಬಳಸಬಹುದು
ಮಜ್ಜಿಗೆ ಯಾವಾಗ ಹಾಳಾಗಿದೆ ಎಂದರ್ಥ?
ಮಜ್ಜಿಗೆ ಗಟ್ಟಿ-ಗಟ್ಟಿಯಾಗಿದ್ದರೆ
ದುರ್ವಾಸನೆ ಬರುತ್ತಿದ್ದರೆ
ಮೊಸರಿನ ಬಣ್ಣ ಬದಲಾಗಿದ್ದರೆ
ಮಜ್ಜಿಗೆಯಲ್ಲಿರುವ ಪೋಷಕಾಂಶಗಳು
ಕ್ಯಾಲೋರಿ: 98
ಪ್ರೊಟೀನ್: 8 ಗ್ರಾಂ
ಕಾರ್ಬ್ಸ್: 12 ಗ್ರಾಂ
ಕೊಬ್ಬಿನಂಶ: 3 ಗ್ರಾಂ
ಕ್ಯಾಲ್ಸಿಯಂ: ಶೇ.22ರಷ್ಟಿದೆ
ವಿಟಮಿನ್ ಬಿ 12
ಕೊನೆಯದಾಗಿ: ಬೇಸಿಗೆಯಲ್ಲಿ ನಾವು ನಮ್ಮ ಆಹಾರಕ್ರಮದ ಕಡೆಗೆ ಕೂಡ ತುಂಬಾನೇ ಗಮನಹರಿಸಬೇಕು, ದೇಹವನ್ನು ತಂಪಾಗಿಡುವ ಪಾನೀಯ, ಆಹಾರ ಸೇವಿಸಬೇಕು. ಮಸಾಲೆ ಪದಾರ್ಥ ಹೆಚ್ಚು ಸೇವಿಸಬೇಡಿ, ಅಲ್ಲದ ತಂಪು ಪಾನೀಯ ಬಳಸಬೇಡಿ. ತಂಪಾದ ಮಜ್ಜಿಗೆ, ಎಳನೀರು, ಫ್ರೆಷ್ ಜ್ಯೂಸ್ ಈ ಬಗೆಯ ಪಾನೀಯ ಹೆಚ್ಚು ಸೇವಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications












