Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಲಕ್ಷಣ ಏನು ಗೊತ್ತಾ? ನೀವು ಕೂಡ ತಪ್ಪಾಗಿ ತಿಳಿದಿರಬಹುದು.!
ಇಡೀ ವಿಶ್ವದಲ್ಲಿ ಅತೀ ಹೆಚ್ಚು ಮಂದಿಗೆ ಕಾಡುವಂತಹ ಅನಾರೋಗ್ಯ ಸಮಸ್ಯೆ ತರುತ್ತಿರುವುದು ಕ್ಯಾನ್ಸರ್ ಎಂಬುದು ನಿಮಗೂ ತಿಳಿದಿರಬಹುದು. ಅಮೆರಿಕ ಹಾಗೂ ಭಾರತದಲ್ಲಿ ಈ ಕ್ಯಾನ್ಸರ್‌ಗೆ ತುತ್ತಾಗುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಹಾಗೆ ಸಾವಿನ ಪ್ರಮಾಣದಲ್ಲೂ ಕೂಡ ಕ್ಯಾನ್ಸರ್ ಮೊದಲ ಸ್ಥಾನ ಎನ್ನಬಹುದು. ಇನ್ನು ಭಾರತದಲ್ಲಿ ವಯಸ್ಸಿನ ಅಂತರವೇ ಇಲ್ಲದೇ ಕ್ಯಾನ್ಸರ್ ಹರಡುತ್ತಿರುವುದು ಹೊಸ ರೀತಿಯ ಆತಂಕಕ್ಕೆ ಕಾರಣವಾಗಿದೆ.
ಹೃದಯ ಸಂಬಂಧಿ ಹಾಗೂ ಮಧುಮೇಹದಂತಹ ಸಮಸ್ಯೆ ಹೊರತುಪಡಿಸಿ ಈ ಕ್ಯಾನ್ಸರ್ ಸಮಸ್ಯೆ ಹೊಂದಿರುವವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಅದ್ರಲ್ಲೂ ಕ್ಯಾನ್ಸರ್‌ನಲ್ಲಿ ಈಗ ಹೊಸ ಹೊಸ ಪ್ರಕಾರಗಳು, ವಿಧಗಳು ನೋಡುತ್ತಿದ್ದೇವೆ. ಕ್ಯಾನ್ಸರ್ ವಿಶ್ವದ 2ನೇ ಮಾರಕ ಕಾಯಿಲೆ ಎಂಬ ಹಣೆಪಟ್ಟಿ ಕೂಡ ಪಡೆದುಕೊಂಡಿದೆ. ದೇಹದ ಆರೋಗ್ಯವಂತ ಜೀವಕೋಶಗಳು ಹಾನಿಗೊಳಗಾಗಿ ಜೀವಕೋಶಗಳು ನಿಧಾನವಾಗಿ ಸಾಯುವ ಪ್ರಕ್ರಿಯೆಯಾಗಿದೆ. ಹಾಗೆ ಈ ಕೋಶಗಳು ದೇಹದ ತುಂಬೆಲ್ಲಾ ಹರಡುವುದು ಜೀವಹಾನಿಗೆ ಕಾರಣವಾಗಲಿದೆ.

ಆದ್ರೆ ನಿಮಗೆ ಮೇದೋಜ್ಜೀರಕ ಗ್ರಂಥಿ ಕ್ಯಾನ್ಸರ್ ಕುರಿತು ಕಡಿಮೆ ತಿಳಿದಿರಬಹುದು, ಏಕೆಂದರೆ ಈ ಕ್ಯಾನ್ಸರ್ ಅಪರೂಪವಾಗಿ ಹಾಗೆ ಲಕ್ಷಣಗಳು ಕೂಡ ಉಳಿದ ಕ್ಯಾನ್ಸರ್‌ಗಳಿಗಿಂತ ಭಿನ್ನಾಗಿವೆ. ನಮ್ಮ ಜೀರ್ಣಕ್ರಿಯೆ ಪ್ರಕ್ರಿಯೆಯಲ್ಲಿ ಮೇದೋಜ್ಜೀಕರ ಗ್ರಂಥಿ ಬಹಳ ಮುಖ್ಯ ಪಾತ್ರ ವಹಿಸಲಿದೆ. ಮೇದೋಜ್ಜೀರಕ ಗ್ರಂಥಿಯು ನಮ್ಮ ಬೆನ್ನಿನ ಭಾಗದಲ್ಲಿ ಇರುವ ಒಂದು ಪ್ರಮುಖ ಅಂಗವಾಗಿದೆ. ನಾವು ಆಹಾರ ಸೇವಿಸಿದ ನಂತರ ಅದು ಜೀರ್ಣವಾಗಬೇಕಾದೆ ಅಗತ್ಯವಾಗಿ ಬೇಕಾಗಿರುವ ಪ್ಯಾಂಕ್ರಿಯಾಟಿಕ್ ದ್ರಾವಣವನ್ನು ಬಿಡುಗಡೆ ಮಾಡಲಿದೆ.
ಈ ಅಂಗಕ್ಕೆ ಕ್ಯಾನ್ಸರ್ ತಗುಲಿದರೆ ಹಲವು ರೀತಿಯ ಲಕ್ಷಣಗಳು ಗೋಚರವಾಗಲು ಆರಂಭಿಸುತ್ತದೆ. ಆದ್ರೆ ಹಲವರಿಗೆ ಇದರ ಲಕ್ಷಣಗಳು ಯಾವುದು ಎಂಬುದನ್ನು ಅರಿಯಲಾಗದೆ ಕ್ಯಾನ್ಸರ್ ಅಪಾಯ ಹೆಚ್ಚಾಗಲು ಕಾರಣವಾಗುತ್ತಿದೆ. ಆದರೆ ಯಾವ ಲಕ್ಷಣ ಕಂಡುಬಂದರೆ ಅದನ್ನು ನಾವು ನಿರ್ಲಕ್ಷಿಸಬಾರದು. ಹಾಗಾದ್ರೆ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಇದ್ದರೆ ಕಾಣಿಸಿಕೊಳ್ಳಬಹುದಾದ ಕೆಲವು ಆರಂಭಿಕ ಲಕ್ಷಣಗಳು ಮತ್ತು ಈ ಕ್ಯಾನ್ಸರ್ ಉಂಟಾಗಲು ಕಾರಣಗಳು ಇಲ್ಲಿವೆ.
ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಉಂಟಾಗಲು ಕೆಲವು ಸಂಭಾವ್ಯ ಕಾರಣಗಳಿವು
ಧೂಮಪಾನ
ಮಧುಮೇಹ
ದೀರ್ಘಕಾಲದ ಪ್ಯಾಂಕ್ರಿಯಾಟೈಟಿಸ್ ಉರಿಯೂತ
ಕೌಟುಬಿಕ ಹಿನ್ನಲೆ
ಅನುವಂಶೀಯ ಸಮಸ್ಯೆಗಳು
ಇನ್ನು ಮೇದೋಜ್ಜೀರಕ ಗ್ರಂಥಿ ಕ್ಯಾನ್ಸರ್‌ನ ಲಕ್ಷಣಗಳು ತಿಳಿಯುವುದು ಬಹಳ ಕಷ್ಟವಾಗಬಹುದು. ಹಾಗಾದ್ರೆ ಈ ಕ್ಯಾನ್ಸರ್‌ನ ಲಕ್ಷಣಗಳೇನು ಅನ್ನುವುದನ್ನು ನಾವು ತಿಳಿದುಕೊಳ್ಳೋಣ.
ದಿಢೀರ್ ತೂಕ ಇಳಿಕೆ
ವ್ಯಕ್ತಿಯಲ್ಲಿ ಆರಂಭಿಕ ಹಂತದಲ್ಲಿ ದಿಢೀರ್ ತೂಕ ಇಳಿಕೆ ಉಂಟಾಗುವುದು ನೋಡಬಹುದು. ಕೆಲವರು ತೂಕ ಕಳೆದುಕೊಳ್ಳುವುದರಿಂದ ಸಂತೋಷ ಪಡುತ್ತಾರೆ. ವ್ಯಾಯಾಮ ಹಾಗು ಡಯೆಟ್‌ನಿಂದಾಗಿ ತೂಕ ಕಳೆದುಕೊಳ್ಳತ್ತಿರಬಹುದು ಎಂಬ ತಪ್ಪು ಭಾವನೆ ಅವರಲ್ಲಿರಬಹುದು, ಆದ್ರೆ ಇದು ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಆಗಿದ್ದರೆ ದಿಢೀರ್ ತೂಕ ಇಳಿಕೆಯಾಗುವುದು ನೋಡಬಹುದು. ಮೇದೋಜ್ಜೀರಕ ಗ್ರಂಥಿಯಲ್ಲಿ ಕ್ಯಾನ್ಸರ್ ಇದ್ದರೆ, ಅದು ದೇಹದ ಪೋಷಕಾಂಶಗಳನ್ನು ಜೀರ್ಣಿಸಿಕೊಳ್ಳುವ ಮತ್ತು ಹೀರಿಕೊಳ್ಳುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಇದು ತೂಕ ನಷ್ಟಕ್ಕೆ ಕಾರಣವಾಗುತ್ತದೆ.
ಹೊಟ್ಟೆಯ ಹಿಂಭಾಗ ನೋವು
ಹೊಟ್ಟೆ ಹಿಂಭಾಗದಲ್ಲಿ ಆಗಾಗ ನೋವು ಕಾಣಿಸಿಕೊಳ್ಳುವುದು ಈ ಕ್ಯಾನ್ಸರ್ ಲಕ್ಷಣ. ಆದ್ರೆ ಹಲವರು ಇದನ್ನು ಗ್ಯಾಸ್ಟ್ರಿಕ್ಟ್ ಅಥವಾ ಬೆನ್ನು ನೋವು ಎಂದು ತಪ್ಪಾಗಿ ಅರ್ಥೈಸುತ್ತಾರೆ.
ಹಸಿವಾಗದೆ ಇರುವುದು
ನೀವು ಸ್ವಲ್ಪ ಆಹಾರ ಸವಿದರು ನಿಮಗೆ ಹೊಟ್ಟೆ ತುಂಬಿರುವ ಅನುಭವ ಆಗದೇ ಇದ್ದರೂ ಮತ್ತೆ ಆಹಾರ ಸೇವಿಸಲು ಮನಸಾಗದೆ ಇರಬಹುದು, ಏಕೆಂದರೆ ಜೀರ್ಣ ಕ್ರಿಯೆ ಪ್ರಕ್ರಿಯೆಯಲ್ಲಿನ ಏರುಪೇರಾಗುವ ಕಾರಣದಿಂದಾಗಿ ಈ ಸಮಸ್ಯೆ ಉಂಟಾಗುತ್ತದೆ. ಇದಕ್ಕೆ ಮೇದೋಜ್ಜೀರಕ ಗ್ರಂಥಿಯ ಕಾರ್ಯ ನಿರ್ವಹಣೆಯ ಲೋಪದೋಷ ಎಂದು ತಿಳಿದುಬರುತ್ತದೆ.
ಇದಿಷ್ಟೇ ಅಲ್ಲದೆ ಆಯಾಸ, ಕಾಮಾಲೆ ಕಾಣಿಸಿಕೊಳ್ಳುವುದು, ಆಗಾಗ ಜ್ವರ, ಮಧುಮೇಹ ಕೂಡ ಈ ಕ್ಯಾನ್ಸರ್‌ನ ಲಕ್ಷಣ ಆಗಿರಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
