Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಳೆಯೊಂದಿಗೆ ಚಿಕುನ್ ಗುನ್ಯಾ ಪ್ರಕರಣ ಏರಿಕೆ: ಈ ರಾಜ್ಯಗಳಲ್ಲಿ ಹೆಚ್ಚಾಗುತ್ತಿವೆ ಕೇಸ್
ವೈರಸ್ ಫಿವರ್‌ಗಳು, ವೈರಸ್‌ನಿಂದ ಹರಡುವಂತಹ ಅನಾರೋಗ್ಯಗಳು ಎಷ್ಟು ರೀತಿಯಲ್ಲಿ ಸಮಸ್ಯೆಗಳ ತರಲಿವೆ ಎಂಬುದನ್ನು ನೀವೆಲ್ಲಾ ತಿಳಿದಿದ್ದೀರಿ. ಅದ್ರಲ್ಲೂ ಈ ಕಾಲೋಚಿತ ವೈರಸ್‌ಗಳ ಹರಡುವಿಕೆಯಿಂದ ಎಷ್ಟೊಂದು ಅನಾರೋಗ್ಯಗಳು ಇತ್ತೀಚಿಗೆ ಕಾಡುತ್ತಿವೆ. ಮುಖ್ಯವಾಗಿ ಮಳೆಗಾಲದ ಆರಂಭದಲ್ಲಿ ಡೆಂಗ್ಯೂಯಿಂದ ಆರಂಭಗೊಂಡು ಮಳೆಗಾಲದ ಅಂತ್ಯವಾದ ಬಳಿಕ ಹಲವು ರೀತಿಯ ಸಮಸ್ಯೆಗಳು ಎದುರಾಗುವುದು ನಾವು ನೋಡಬಹುದು.
ಈಗ ಮಳೆಗಾಲದ ಸಮಯದಲ್ಲೇ ಭಾರತದ ಹಲವು ಭಾಗದಲ್ಲಿ ಚಿಕುನ್ ಗುನ್ಯ ಸಮಸ್ಯೆ ದೊಡ್ಡದಾಗುತ್ತಿದೆ. ಜೂನ್‌ಗೆ ಹೋಲಿಸಿದರೆ ಈ ಜುಲೈನಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದು, ಆಸ್ಪತ್ರೆಗೆ ದಾಖಲಾಗುತ್ತಿರುವವರ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ. ಇದು ಭಾರತದಲ್ಲಿ ಮಾತ್ರದಲ್ಲಿ ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಈ ಪ್ರಮಾಣ ಏರಿಕೆಯಾಗಿರುವುದು ಗಮನಿಸಬಹುದು.

ಜೂನ್ ಅಂತ್ಯದಿಂದ ಚೀನಾ ಮಾತ್ರ ಸುಮಾರು 7,000 ಚಿಕುನ್‌ಗುನ್ಯಾ ಸೋಂಕುಗಳ ದೃಢೀಕರಿಸಿದೆ. ಆದ್ರೆ ಜುಲೈ ಆರಂಭದಲ್ಲೇ ಏಷ್ಯಾದಲ್ಲಿ ಸುಮಾರು 34 ಸಾವಿರಕ್ಕೂ ಅಧಿಕ ಚಿಕುನ್ ಗುನ್ಯಾ ಕೇಸ್‌ಗಳು ವರದಿಯಾಗಿವೆ ಎಂದು ಯುರೋಪಿಯನ್ ರೋಗ ತಡೆಗಟ್ಟುವಿಕೆ ಹಾಗೂ ನಿಯಂತ್ರಣ ಕೇಂದ್ರ ಮಾಹಿತಿ ಹಂಚಿಕೊಂಡಿದೆ. ಭಾರತದಲ್ಲಿಯೂ ಜುಲೈನಲ್ಲಿಯೇ ಈ ಪ್ರಮಾಣ ಏರಿಯಾಗಿರುವುದು ಹೊಸ ಆತಂಕಕ್ಕೆ ಕಾರಣವಾಗಿದೆ.
ಚಿಕುನ್ ಗುನ್ಯಾ ಎಂದರೇನು ಹರಡುವುದು ಹೇಗೆ?
ವೈರಲ್ ಫೀವರ್‌ಗಳು ಹೆಚ್ಚಾಗಿ ಸೊಳ್ಳೆಗಳಿಂದ, ಅನ್ಯ ಜೀವಿಯ ಮೂಲಕ ಹರಡುವಂತೆಯೇ ಇದು ಕೂಡ ಸೊಳ್ಳೆಗಳಿಂದಲೇ ಹರಡುವ ವೈರಸ್ ಆಗಿದೆ. ಈಡಿಸ್ ಸೊಳ್ಳೆಗಳಿಂದ ಚಿಕುನ್ ಗುನ್ಯಾ ಹರಡುತ್ತದೆ. ಡೆಂಗ್ಯೂ ಹಾಗೂ ಚಿಕುನ್‌ಗುನ್ಯಾ ಒಂದೇ ರೀತಿಯ ಲಕ್ಷಣಗಳಿಂದ ಕೂಡಿವೆ. ಹಠಾತ್ ಜ್ವರ, ಕೀಲು ನೋವು ಈ ರೋಗದ ಲಕ್ಷಣವಾಗಿದೆ.
ಭಾರತದಲ್ಲಿ ಈ ಚಿಕುನ್ ಗುನ್ಯಾ ದೆಹಲಿ, ಮಹಾರಾಷ್ಟ್ರ, ತಮಿಳುನಾಡು ಹಾಗೆ ಕರ್ನಾಟಕದಲ್ಲಿ ಹೆಚ್ಚಾಗಿ ವರದಿಯಾಗುತ್ತದೆ. ಈ ಪ್ರಕರಣಗಳಲ್ಲಿ ಹಲವು ಆಸ್ಪತ್ರೆಯ ವರೆಗೂ ಬರುವುದಿಲ್ಲ. ಹಾಗೆ ಮತ್ತೆ ಕೆಲವು ತಡವಾಗಿ ಬೆಳಕಿಗೆ ಬರುವುದು, ಇಲ್ಲವೆ ಪತ್ತೆಯಾಗದೆ ಹೋಗುವುದು ಹೆಚ್ಚು ಎಂದು ತಿಳಿದುಬಂದಿದೆ.
ಚಿಕುನ್ ಗುನ್ಯಾ ವಿರುದ್ಧ ಹೋರಾಡಿ ಗೆದ್ದ ಚೀನಾ
ಚೀನಾದಲ್ಲಿ ಕೋವಿಡ್ ವೈರಸ್‌ನಂತೆ ಈ ಚಿಕುನ್ ಗುನ್ಯಾ ಕೂಡ ಅಪಾಯಕಾರಿಯಾಗಿ ಹೊರಹೊಮ್ಮಿತ್ತು. ಆದ್ರೆ ಚೀನಾ ವೈಜ್ಞಾನಿಕವಾಗಿ ಸೊಳ್ಳೆಗಳ ಸಂಖ್ಯೆಯನ್ನೇ ಕಡಿಮೆ ಮಾಡುವ ಮೂಲಕ ರೋಗವನ್ನು ತಡೆಗಟ್ಟಿದೆ. ಅಲ್ಲಿನ ವಿಜ್ಞಾನಿಗಳು ಈಡಿಸ್ ಸೊಳ್ಳೆಗಳ ವಿರುದ್ಧ ಹೋರಾಡಲು ಸೊಳ್ಳೆಗಳನ್ನೇ ಸೃಷ್ಟಿಸಿದರು.
ಅದ್ರಲ್ಲೂ ಎಲಿಫ್ಯಾಂಟ್ ಸೊಳ್ಳೆಗಳೆಂಬ ತುಸು ದೊಡ್ಡ ಗಾತ್ರದ ಸೊಳ್ಳೆಗಳ ಸೃಷ್ಟಿಸಿ ಅವುಗಳನ್ನು ಸಣ್ಣ ಸೊಳ್ಳೆಗಳ ಮೇಲೆ ದಾಳಿ ಮಾಡಲು ಬಿಡುಗಡೆ ಮಾಡಿದರು. ಇವು ಮಾನವರಿಗೆ ಹಾಗೆ ಬೇರೆ ಪ್ರಾಣಿಗಳಿಗೆ ಕಚ್ಚುವುದಿಲ್ಲ, ಹಾನಿಯೂ ಮಾಡುವುದಿಲ್ಲ. ಆದ್ರೆ ಗಾತ್ರದಲ್ಲಿ ಸಣ್ಣದಾದ ಸೊಳ್ಳೆಗಳ ಮೇಲೆ ದಾಳಿ ಮಾಡಿ ಅವುಗಳ ನಾಶಕ್ಕೆ ಕಾರಣವಾದವು. ಆದ್ರೆ ಈಗ ಈ ಸೊಳ್ಳೆಗಳ ಜೀವಿತಾವಧಿ ಮುಗಿದಿರಬಹುದು ಎಂದು ಕೂಡ ಹೇಳಲಾಗಿದೆ. ಏಕೆಂದರೆ ಒಂದು ತಿಂಗಳಲ್ಲಿ ಚೀನಾದಲ್ಲಿ 7 ಸಾವಿರ ಚಿಕುನ್ ಗುನ್ಯಾ ಪ್ರಕರಣ ವರದಿಯಾಗಿದೆ, ಈದು ಈವರೆಗೆ ದಾಖಲಾದ ಅತೀ ಹೆಚ್ಚು ಪ್ರಕರಣ ಎಂದ ತಿಳಿದುಬಂದಿದೆ.
ಭಾರತದಲ್ಲಿ ಹೇಗಿದೆ ಪರಿಸ್ಥಿತಿ
ಭಾರತದ ಹಲವು ನಗರಗಳಲ್ಲಿ ಈ ಪ್ರಕರಣಗಳ ಸಂಖ್ಯೆ ಸದ್ದಿಲ್ಲದೆ ಹೆಚ್ಚಳವಾಗುತ್ತಿದೆ. ಭಾರತದಲ್ಲಿ ಸೊಳ್ಳೆಗಳು ಯಾವ ಪ್ರದೇಶದಲ್ಲಿ ಹೆಚ್ಚಿವೆ ಹಾಗೂ ಅದರ ಪರಿಹಾರ ಕ್ರಮಗಳೇ ಕಷ್ಟವಾಗಿದೆ. ಆದ್ರೆ ಕೆಲವು ಜಿಲ್ಲೆಗಳಲ್ಲಿ ಸೊಳ್ಳೆಗಳ ಸಂಖ್ಯೆಯನ್ನು ಪತ್ತೆ ಹಚ್ಚಲಾಗುತ್ತದೆ. ಆದ್ರೆ ಇದರಿಂದ ರೋಗಗಳು ಹರಡುವಿಕೆ ಅಥವಾ ಮುಂಜಾಗೃತಾ ಕ್ರಮಕ್ಕೆ ಈ ದತ್ತಾಂಶ ಬಳಸಲಾಗುತ್ತಿಲ್ಲ.



Click it and Unblock the Notifications
