Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ತಾಯಂದಿರ ಮಾನಸಿಕ ಆರೋಗ್ಯ ಕಾಪಾಡೋದು ಹೇಗೆ? ಆರೈಕೆ ಹೇಗಿರಬೇಕು
ಮಹಿಳೆ ಇಡೀ ಕುಟುಂಬದ ಆರೈಕೆ ಹಾಗೆ ಜವಾಬ್ದಾರಿ ತೆಗೆದುಕೊಳ್ಳುವ ಮೂಲಕ ಪುರುಷರ ಸರಿಯಾಗಿ ಸಮಾಜದಲ್ಲಿ ಬದುಕು ನಡೆಸುವುದು ನೋಡಬಹುದು. ಹಾಗೆ ಪುರುಷರಷ್ಟೇ ಎಲ್ಲಾ ವಿಚಾರದಲ್ಲಿಯೂ ತಾವೂ ಕೂಡ ಒಂದು ಹೆಜ್ಜೆ ಮುಂದೆ ಹೋಗಿ ಎಲ್ಲಾ ಕ್ಷೇತ್ರದಲ್ಲೂ ಈಗ ತಮ್ಮನ್ನು ತಾವು ತೊಡಗಿಸಿಕೊಂಡವರನ್ನು ನೋಡಬಹುದು. ಹೀಗಾಗಿ ಮಹಿಳೆ ಈಗ ಮನೆಯ ನಾಲ್ಕು ಗೋಡೆ ನಡುವೆ ಬಂಧಿಯಾಗಿಲ್ಲ ಬದಲಾಗಿ ತನ್ನ ಕುಟುಂಬ, ಮಕ್ಕಳು ಎಲ್ಲಾ ಆರೈಕೆಗಾಗಿ ಆಕೆಯೂ ಎಲ್ಲರಂತೆ ಸಮಾಜದಲ್ಲಿ ಸೇರಿದ್ದಾಳೆ.
ಹಾಗೆ ಎಲ್ಲರಂತೆ ಆಕೆಯೂ ಬಹಳಷ್ಟು ದೈಹಿಕ ಹಾಗೂ ಮಾನಸಿಕ ಸಮಸ್ಯೆಯ ಎದುರಿಸುತ್ತಾಳೆ. ಅದರಲ್ಲೂ ನಾವಿಂದು ಈ ವಿಶ್ವ ಮಹಿಳಾ ದಿನಾಚರಣೆ ಹತ್ತಿರವಾಗುತ್ತಿರುವ ಸಮಯದಲ್ಲಿ ನಾವು ಮಹಿಳೆಯರ ಅದರಲ್ಲೂ ತಾಯಂದಿರ ಮಾನಸಿಕ ಆರೋಗ್ಯದ ಕುರಿತು ಹಾಗೆ ಅವರ ಆರೈಕೆ ಕುರಿತಂತೆ ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ.

ತಾಯಂದಿರು ಇಂದು ಹತ್ತು ಹಲವು ರೀತಿಯ ಮಾನಸಿಕ ಸಮಸ್ಯೆಗಳ ಎದುರಿಸುತ್ತಿದ್ದಾರೆ, ಆದ್ರೆ ಅದನ್ನು ಗುರುತಿಸಿ ಅವರ ಆರೈಕೆ ಮಾಡುವುದು ಇಂದು ಬಹಳ ಮುಖ್ಯ ಎನಿಸಿದೆ. ಅದರಲ್ಲೂ ಮನೆಯ ಇಡೀ ಜವಾಬ್ದಾರಿ ಹೊರುವ ತಾಯಂದಿರ ಮಾನಸಿಕ ಆರೋಗ್ಯ ಕುರಿತು ಕಾಳಜಿ ವಹಿಸಬೇಕಾಗಿರುವುದು ಮಕ್ಕಳ ಕರ್ತವ್ಯವಾಗಿದೆ.
ಆಕೆ ಮನೆಯ ಕೆಲಸ ಹಾಗೆ ಹೊರಗಿನ ಸವಾಲುಗಳ ಜೊತೆಗೆ ಕುಟುಂಬ ನಿರ್ವಹಣೆಗೂ ನಿಲ್ಲುವವಳು, ಹೀಗಾಗಿ ಆಕೆ ಆರೋಗ್ಯವಾಗಿದ್ದರೆ ಇಡೀ ಕುಟುಂಬ ಆರೋಗ್ಯವಾಗಿದ್ದಂತೆ. ಆದ್ರೆ ಆಕೆ ಅದೆಷ್ಟೋ ಸಮಯದಲ್ಲಿ ಮಾನಸಿಕ ಸಮಸ್ಯೆಗಳ ಎದುರಿಸಿರುತ್ತಾಳೆ. ಅದರಲ್ಲೂ ಮಕ್ಕಳು, ಪತಿ, ಭವಿಷ್ಯದ ದಿನಗಳ ಕುರಿತು ಆಕೆಗೆ ಯಾವಾಗಲು ಚಿಂತೆ ಇದ್ದೇ ಇರುತ್ತೆ. ಈ ಚಿಂತೆಗಳು ಅವರ ಮಾನಸಿಕ ಆರೋಗ್ಯ ಹದಗೆಡಿಸದಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ ಆಗಿರಲಿದೆ.
ಹಾಗಾದ್ರೆ ತಾಯಂದಿರ ಮಾನಸಿಕ ಆರೋಗ್ಯ ಕುರಿತು ಮಕ್ಕಳು ಯಾವ ರೀತಿ ಜಾಗೃತೆ, ಕಾಳಜಿ ವಹಿಸಬೇಕು ಅನ್ನೋದನ್ನು ಕ್ಲೀನಿಕಲ್ ಸೈಕಾಲಜಿಸ್ಟ್ ಆಗಿರುವ ಅರುಣ್ ಎನ್ ಆರ್ ಅವರು ಹಂಚಿಕೊಂಡಿರುವ ಮಾಹಿತಿ ಇಲ್ಲಿವೆ.
ಅವರ ಕೆಲಸವನ್ನೂ ಅರಿತುಕೊಳ್ಳಿ
ನಿಮ್ಮ ಮನೆಯಲ್ಲಿ ತಾಯಿ ಬಹಳಷ್ಟು ಕೆಲಸ ಮಾಡುತ್ತಿದ್ದರೆ ಹಾಗೆ ವರ್ಕಿಂಗ್ ವುಮೆನ್ ಆಗಿದ್ದರೆ ಅವರ ಕೆಲಸದ ಕುರಿತಂತೆ ನೀವು ಕೂಡ ಅರಿತುಕೊಳ್ಳುವುದು ಬಹಳ ಮುಖ್ಯ. ಇದು ಅವರ ಮಾನಸಿಕ ನೆಮ್ಮದಿಯನ್ನು ಹೆಚ್ಚಿಸುತ್ತದೆ. ಮನೆಯ ಜವಾಬ್ದಾರಿಯ ಜೊತೆಗೆ ಅವರು ಹೊರಗಿನ ಕೆಲಸವನ್ನೂ ಮಾಡುವುದರಿಂದ ಆ ಕುರಿತು ಅರಿವಿರಬೇಕಾಗುತ್ತದೆ. ಇದು ಅವರಲ್ಲಿ ದೃಢ ಸಂಕಲ್ಪಕ್ಕೆ ನೆರವಾಗುತ್ತದೆ. ಹಾಗೆ ನಿಮಗೂ ಕೂಡ ಅವರ ಕೆಲಸದ ಕುರಿತು ಅವರ ಕಷ್ಟದ ಕುರಿತಂತೆ ಒಂದಿಷ್ಟು ಮಾಹಿತಿ ಸಿಗಲಿದೆ.
ಮನೆ ಕೆಲಸದಲ್ಲಿ ಸಹಾಯ ಮಾಡಿ
ಮನೆಯಲ್ಲಿ ನಿಮ್ಮ ತಾಯಿಯ ಮಾನಸಿಕ ಕಿರಿಕಿರಿ ಅಥವಾ ಮಾನಸಿಕ ಸ್ಥಿತಿ ಕೆಡಲು ಮನೆಯ ಕೆಲಸದಲ್ಲಿನ ಒತ್ತಡ ಕೂಡ ಕಾರಣವಾಗಬಹುದು. ಹೀಗಾಗಿ ಅವರ ಕೆಲಸದಲ್ಲಿ ನಿಮ್ಮ ಸಹಾಯ ಅತ್ಯಂತ ಅವಶ್ಯಕ. ಇದು ಅವರಲ್ಲಿ ಸಂತೋಷ ಉಂಟುಮಾಡುವ ಜೊತೆಗೆ ಒಂದಿಷ್ಟು ಒತ್ತಡ ಕಡಿಮೆ ಮಾಡುತ್ತದೆ. ಇದರಿಂದ ಅವರ ಮಾನಸಿಕ ಆರೋಗ್ಯ ಉತ್ತಮವಾಗೋದು ನೋಡಬಹುದು.
ಅಗತ್ಯ ಆರೈಕೆ ಸಿಗುವಂತೆ ಮಾಡಿ
ಮನೆಯಲ್ಲಿ ತಾಯಂದಿರು ಇಡೀ ದಿನವೂ ಕೆಲಸದಲ್ಲಿ ತೊಡಗಿರುತ್ತಾರೆ. ಹೀಗಾಗಿ ಅವರಿಗೆ ಸೂಕ್ತ ಆರೈಕೆಯ ಅಗತ್ಯ ಇದ್ದೇ ಇರುತ್ತೆ. ಅಂದರೆ ಅವರು ಸರಿಯಾದ ಸಮಯಕ್ಕೆ ನಿದ್ರೆ ಮಾಡುತ್ತಿದ್ದಾರಾ? ಸೂಕ್ತ ಸಮಯಕ್ಕೆ ಆಹಾರ ಸೇವಿಸುತ್ತಿದ್ದಾರಾ? ಹಾಗೆ ಅವರ ವೈದ್ಯಕೀಯ ಆರೋಗ್ಯದ ಕುರಿತು ವಿಚಾರಿಸಿಕೊಳ್ಳುವುದು ಬಹಳ ಮುಖ್ಯ. ಇದು ಕೂಡ ಅವರ ಮಾನಸಿಕ ಆರೋಗ್ಯ ಸುಧಾರಿಸಲು ಸಹಕಾರಿಯಾಗಲಿದೆ.
ದೈಹಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವಂತೆ ಮಾಡುವುದು
ತಾಯಂದಿರಲ್ಲಿ ಕೆಲವರು ಮನೆಯಲ್ಲೇ ಉಳಿದಿರುತ್ತಾರೆ. ಗೃಹಿಣಿಯಲ್ಲಿ ಕುಟುಂಬ ನಿರ್ವಹಣೆಯ ಕೆಲಸ ಮಾಡುತ್ತಾರೆ, ಆದ್ರೆ ಅವರಲ್ಲೂ ಮನಸ್ಸಿಗೆ ಸಂಬಂಧಿಸಿದಂತೆ ಒಂದಿಷ್ಟು ಸಮಸ್ಯೆ ಕಾಡಬಹುದು. ಹೀಗಾಗಿ ಅವರಿಗೆ ದೈಹಿಕ ಚಟುವಟಿಕೆಯ ಅಗತ್ಯವಿರುತ್ತದೆ. ವ್ಯಯಾಮ, ಯೋಗ, ವಾಕ್ ಹೀಗೆ ಲಘು ಚಟುವಿಟಿಕೆಗಳು ಅವರ ಮಾನಸಿಕ ಆರೋಗ್ಯ ಉತ್ತೇಜಿಸಲು ಸಹಕಾರಿಯಾಗಿವೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications