Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಭಾರತೀಯ ಯುವಜನತೆಯಲ್ಲಿ ಪಾಪ್‌ಕಾರ್ನ್ ಬ್ರೈನ್ ಸಿಂಡ್ರೋಮ್..! ಹೀಗಂದ್ರೆ ಏನು ಗೊತ್ತಾ?
ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ರೀತಿ ಅನಾರೋಗ್ಯ ಸಮಸ್ಯೆಗಳು ಬಂದೊದಗುವುದು ನೋಡುತ್ತಿದ್ದೇವೆ. ಅದ್ರಲ್ಲೂ ಆನ್‌ಲೈನ್ ತಂತ್ರಜ್ಞಾನದ ಯುಗದಲ್ಲಿ ನೀವೆಂದು ಕೇಳಿರದಂತಹ ಸಮಸ್ಯೆಗಳು ಎದುರಾಗುತ್ತಿರುವುದು ಸಹ ನೋಡಬಹುದು. ಅದ್ರಲ್ಲೂ ಯುವಜನತೆ ಇತ್ತೀಚಿಗೆ ಹೊಸ ಹೊಸ ರೀತಿಯ ಅನಾರೋಗ್ಯ ಸಮಸ್ಯೆಗಳನ್ನು ಹೊಂದಿರುವುದು ಸಹ ನಾವು ನೋಡುತ್ತಿದ್ದೇವೆ.
ಹಾಗೆ ಇತ್ತೀಚಿನ ದಿನಗಳಲ್ಲಿ ಸ್ಕ್ರೀನ್ ಅಥವಾ ಡಿಜಿಟಲ್ ಪರದೆಯ ಕಾರಣದಿಂದಾಗಿಯೇ ಹಲವು ರೀತಿ ಸಮಸ್ಯೆಗಳನ್ನು ನಾವು ಎದುರಿಸುತ್ತಿದ್ದೇವೆ. ಅದ್ರಲ್ಲೂ ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳು, ಮೆದುಳು, ನಿದ್ರೆ, ಪಂಚೇಂದ್ರಿಯ ಸಂಬಂಧಿ ಸಮಸ್ಯೆಗಳು ಸೇರಿದಂತೆ ಹಲವು ರೀತಿಯ ದೈಹಿಕ ಸಮಸ್ಯೆಗಳಿಗೆ ಈ ಸ್ಕ್ರೀನ್ ಟೈಮ್ ಕಾರಣವಾಗುತ್ತಿದೆ.

ಈ ಯುವ ಸಮುದಾಯ ಹೆಚ್ಚು ಸಮಯ ಸ್ಕ್ರಿನ್ ಮುಂದೆ ಕಳೆಯುತ್ತಿರುವುದು ಕಳವಳ ಹುಟ್ಟಿಸುವಂತಿದೆ. ಅದ್ರಲ್ಲೂ ಅವರು ಟಿವಿ, ಮೊಬೈಲ್, ಲ್ಯಾಪ್ ಟಾಪ್, ಕಂಪ್ಯೂಟರ್, ಹೀಗೆ ಹಲವು ಪರಿಕರಗಳ ಮುಂದೆ ಅವರು ಹೆಚ್ಚಿನ ಸಮಯ ಕಳೆಯುತ್ತಾರೆ. ಇದು ಒಂದಿಷ್ಟು ಸಮಸ್ಯೆಗಳ ತರುವುದು ಸಾಮಾನ್ಯ. ಆದ್ರೆ ಈಗ ಹೊಸ ಸಮಸ್ಯೆಯೊಂದನ್ನು ಪತ್ತೆ ಮಾಡಲಾಗಿದೆ. ಅದೇ ಪಾಪ್‌ಕಾರ್ನ್ ಬ್ರೈನ್ ಸಿಂಡ್ರೋಮ್.
ಈ ಸಮಸ್ಯೆಯ ಹೆಸರು ಎಷ್ಟು ವಿಚಿತ್ರವಾಗಿದೆಯೋ ಹಾಗೆ ಅದರ ಪರಿಣಾಮ ಹಾಗೂ ಲಕ್ಷಣಗಳು ಕೂಡ ಅಷ್ಟೇ ವಿಚಿತ್ರ ಎನಿಸುತ್ತಿದೆ. ಪಾಪ್‌ಕಾರ್ಕ್ ಬ್ರೈನ್ ಸಿಂಡ್ರೋಮ್ ಎಂಬುದು ಈಗ ಯುವ ಜನತೆಯಲ್ಲಿ ದೊಡ್ಡ ಪಿಡುಗಾಗಿ ಕಾಡುವ ಎಲ್ಲಾ ಆತಂಕ ಎದುರಾಗಿದೆ. ಹಾಗಾದ್ರೆ ಈ ಪಾಪ್‌ಕಾರ್ನ್ ಬ್ರೈನ್ ಸಿಂಡ್ರೋಮ್ ಎಂದರೇನು? ಅದರಿಂದ ಆಗುವ ಹಾನಿ ಏನು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಪಾಪ್‌ಕಾರ್ನ್ ಬ್ರೈನ್ ಸಿಂಡ್ರೋಮ್ ಎಂದರೇನು?
2011 ರಲ್ಲಿ ವಾಷಿಂಗ್ಟನ್ ವಿಶ್ವವಿದ್ಯಾಲಯದ ಸಂಶೋಧಕ ಡೇವಿಡ್ ಲೆವಿ ರಚಿಸಿದ 'ಪಾಪ್‌ಕಾರ್ನ್ ಬ್ರೈನ್' ಎಂಬ ಪದವು ಗಮನ ಮತ್ತು ಗಮನದ ಕೊರತೆಯಿಂದ ನಿರೂಪಿಸಲ್ಪಟ್ಟ ಸ್ಥಿತಿಯನ್ನು ಸೂಚಿಸುತ್ತದೆ, ಇದು ವ್ಯಕ್ತಿಯ ಆಲೋಚನೆಗಳು ಒಂದು ವಿಷಯದಿಂದ ಇನ್ನೊಂದಕ್ಕೆ ಜಿಗಿಯುವಂತೆ ಮಾಡುವ ಸ್ಥಿತಿ. ಸರಳವಾಗಿ ಹೇಳುವುದಾದರೆ ನೀವು ಪಾಪ್ ಕಾರ್ನ್ ಸವಿದಂತೆ ಇದರ ರೂಪ ಇರಲಿದೆ. ಒಂದು ಪಾಪ್‌ಕಾರ್ನ್ ಬಾಯಲ್ಲಿ ಹಾಕಿಕೊಂಡು ತಕ್ಷಣ ಮತ್ತೊಂದು ಸವಿಯಲು ಮುಂದಾಗುತ್ತೀರಿ. ಇದೇ ಪ್ರವೃತ್ತಿ ಡಿಜಿಟಲ್ ವಸ್ತುಗಳ ಬಳಕೆಯ ಮೇಲೂ ಪರಿಣಾಮ ಬೀರುವುದು ನೋಡಬಹುದು. ಒಮ್ಮೆ ಮೊಬೈಲ್ ಬಳಸುತ್ತಿದ್ದರೆ ಇನ್ನೊಂದು ಕ್ಷಣದಲ್ಲಿ ಗೇಮ್ ಆಡುವುದು, ಮತ್ತೆ ಟಿವಿ ನೋಡುವುದು, ಲ್ಯಾಪ್ ಟಾಪ್ ನೋಡುವುದು, ಮತ್ತೆ ಮೊಬೈಲ್ ಬಳಸಲು ಮುಂದಾಗುವುದು ನೋಡಬಹುದು.
ಈ ಸಿಂಡ್ರೋಮ್‌ನಲ್ಲಿ ಏನಾಗಲಿದೆ?
ಮಾನಸಿಕವಾಗಿ ಅತಿಯಾಗಿ ಮುಳುಗಿರುವ ಭಾವನೆ, ನಿಧಾನಗತಿಯ ಕಾರ್ಯಗಳಿಗಿಂತ ತ್ವರಿತ-ಗತಿಯ, ವೈವಿಧ್ಯಮಯ ಮಾಹಿತಿಗೆ ಆದ್ಯತೆ
ಇದು ಔಪಚಾರಿಕ ವೈದ್ಯಕೀಯ ರೋಗನಿರ್ಣಯವಲ್ಲದಿದ್ದರೂ, ತಜ್ಞರು ಈ ಸ್ಥಿತಿಯು - ಅತ್ಯಂತ ಗಂಭೀರವಾಗಿದೆ ಎಂದು ಹೇಳುತ್ತಾರೆ. ಇದಕ್ಕೆ ನಿರ್ದಿಷ್ಟ ಲಕ್ಷಣಗಳಿಲ್ಲದಿದ್ದರೂ ಇದರ ಹಾನಿ ಕೂಡ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರಲಿದೆ.
ಪಾಪ್‌ಕಾರ್ನ್ ಬ್ರೈನ್ ಸಿಂಡ್ರೋನ್ ಲಕ್ಷಣವೇನು?
ದಿನವಿಡಿ ಡಿಜಿಟಲ್ ಸ್ಕ್ರೀನ್ ಬಳಸುವುದು. ಹೆಚ್ಚಾಗಿ ಹಲವು ಡಿಜಿಟಲ್ ಉಪಕರಣಗಳನ್ನು ಒಂದೇ ಬಾರಿಗೆ ಬಳಸುವುದು, ಇದು ಗೀಳಾಗಿ ಪರಿಣಮಿಸುವುದು, ಡಿಜಿಟಲ್ ವಸ್ತುಗಳು ಅಥವಾ ಕೆಲಸವನ್ನು ಬಿಟ್ಟು ಬೇರೆ ವಸ್ತು ಅಥವಾ ವಿಷಯಗಳ ಮೇಲೆ ಆಸಕ್ತಿ ಕಡಿಮೆಯಾಗುವುದು, ಒಂದೆ ಕೆಲಸದ ಮೇಲೆ ನೀವು ಏಕಾಗೃತೆ ವಹಿಸುವುದು ಕಷ್ಟವಾಗುವುದು.
ಹೆಚ್ಚುತ್ತಿರುವ ಕಿರಿಕಿರಿ ಮತ್ತು ಆತಂಕ
ನಿದ್ರಾಹೀನತೆ
ಏಕಾಗೃತೆಯ ಕೊರತೆ
ಅತಿಯಾದ ಅಜಾಗರೂಕತೆ
ಒತ್ತಡ ಅನುಭವಿಸುವುದು
ಆಫ್‌ಲೈನ್ ಜೀವನವು ನೀರಸ ಎನಿಸುವುದು
ಗ್ಯಾಜೆಟ್ ಬಿಟ್ಟು ಇರಲು ಆಗದೆ ಇರುವುದು
ಜ್ಞಾಪನಾ ಶಕ್ತಿ ಕೊರತೆ
ಅತಿಯಾದ ಸಿಟ್ಟು
ಪಾಪ್‌ಕಾರ್ನ್ ಬ್ರೈನ್ ಸಿಂಡ್ರೋಮ್ ಯಾರಲ್ಲಿ ಹೆಚ್ಚು?
ಪಾಪ್‌ಕಾರ್ನ್ ಬ್ರೈನ್ ಸಿಂಡ್ರೋಮ್ ಹದಿಹರೆಯದವರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಈ ಸ್ಥಿತಿಯು ಈಗ 30 ರಿಂದ 45 ವರ್ಷ ವಯಸ್ಸಿನವರಲ್ಲಿಯೂ ಸಾಮಾನ್ಯವಾಗಿ ಕಂಡುಬರುತ್ತಿದೆ. ಇದು ಇಂಟರ್ನೆಟ್ ವ್ಯಸನದಂತೆಯೇ ಅಲ್ಲ, ಆದರೆ ಇದು ಕೆಲಸ, ಸಂಬಂಧಗಳು ಮತ್ತು ದೈನಂದಿನ ಜೀವನಕ್ಕೆ ಅಡ್ಡಿಯಾಗುವುದು ನೋಡಬಹುದು. ನಿಮ್ಮ ಭಾವನಾತ್ಮಕ ಯೋಗಕ್ಷೇಮಕ್ಕೂ ಕೂಡ ಇದು ಸಮಸ್ಯೆಗಳ ತರಲಿದೆ.
ಪಾಪ್‌ಕಾರ್ನ್ ಬ್ರೈನ್ ಸಿಂಡ್ರೋಮ್‌ಗೆ ಚಿಕಿತ್ಸೆ ಏನು?
- ನಿತ್ಯ ಡಿಜಿಟಲ್ ಗ್ಯಾಜೆಟ್ ಬಳಕೆಗೆ ಸಮಯ ನಿಗದಿ ಮಾಡುವುದು
- ಧ್ಯಾನ ಹಾಗೂ ಯೋಗ ಅಭ್ಯಾಸ ಮಾಡುವುದು
- ದಿನವಿಡಿ ಬೇರೆ ಕೆಲಸದಲ್ಲಿ ತೊಡಗುವುದು
- ಪ್ರವಾಸ
- ಡಿಜಿಟಲ್ ಡಿಟಾಕ್ಸ್



Click it and Unblock the Notifications
