Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಸಾವರ್ಜನಿಕ ಸ್ಥಳದಲ್ಲಿ ಪಿರಿಯಡ್ ಕಲೆಯಾದರೆ ಆ ಮುಜುಗರದಿಂದ ತಪ್ಪಿಸಿಕೊಳ್ಳುವುದು ಹೇಗೆ?
ಮುಟ್ಟು ಎಂಬುವುದು ನಿಸರ್ಗದತ್ತವಾದ ಕ್ರಿಯೆ, ಅದರಲ್ಲಿ ಅವಳು ಸಂಕೋಚ ಪಡಬೇಕಾದ ಯಾವುದೇ ಅಗ್ಯತವಿಲ್ಲ, ಆದರೆ ಕೆಲವೊಮ್ಮೆ ಮುಟ್ಟಾದಾಗ ಲೀಕ್ ಆಗಿ ಬಟ್ಟೆ ಮೇಲೆ ಕರೆಯಾಗುವುದು, ಈ ರೀತಿಯಾದಾಗ ನೋಡಿದವರು ಏನೆಂದುಕೊಳ್ಳುತ್ತಾರೋ ಎಂಬ ಅಂಜಿಕೆ ಪ್ರತಿಯೊಬ್ಬ ಹೆಣ್ಣು ಮಗಳಿಗೆ ಕಾಡುತ್ತದೆ. ಅದರಲ್ಲೂ ಎಷ್ಟೇ ಜಾಗ್ರತೆವಹಿಸಿದರೂ ಕೆಲವೊಮ್ಮೆ ಈ ರೀತಿ ಲೀಕ್ ಆಗುವುದು ಸಹಜ. ಈ ರೀತಿ ಲೀಕ್ ಆದಾಗ ಅದು ಸಾರ್ವಜನಿಕ ಸ್ಥಳದಲ್ಲಿ ಈ ರೀತಿಯಾದಾಗ ಆ ಮುಜುಗರ ಹ್ಯಾಂಡಲ್ ಮಾಡುವುದು ಹೇಗೆ ಎಂದು ನೋಡೋಣ:

ಪಿರಿಯಡ್ ಲೀಕ್‌ಗೆ ಕಾರಣವೇನು?
ಒಂದು ವೇಳೆ ಆ ದಿನ ಋತುಚಕ್ರ ಪ್ರಾರಂಭವಾಗಬಹುದು ಎಂಬ ಯಾವುದೇ ಆಲೋಚನೆ ಇಲ್ಲದಿದ್ದಾಗ(ಕೆಲವರಿಗೆ ನಿಗದಿತ ದಿನಾಂಕಕ್ಕಿಂತ 5-6 ದಿನ ಮೊದಲು ಆಗಬಹುದು) ಅಥವಾ ಮುಟ್ಟಿನ ಸಮಯದಲ್ಲಿ ಪ್ಯಾಡ್ ಇಟ್ಟದ್ದು ಸರಿಯಿಲ್ಲದಿದ್ದರೆ ಅಥವಾ ತುಂಬಾ ಹೊತ್ತು ಒಂದೇ ಪ್ಯಾಡ್ ಬಳಸಿದಾಗ ಈ ರೀತಿ ಲೀಕ್ ಉಂಟಾಗುವುದು.
ಈ ರೀತಿ ಮುಜುಗರ ತಪ್ಪಿಸುವುದು ಹೇಗೆ?
ಮುಟ್ಟು ಇದ್ದಕ್ಕಿದ್ದಂತೆ ಬರುವುದಿಲ್ಲ, ಬರುವ ಒಂದು ದಿನ ಮೊದಲೇ ಅದರ ಲಕ್ಷಣ ಸೂಚಿಸುತ್ತದೆ, ಆವಾಗ ಸ್ವಲ್ಪ ಜಾಗ್ರತೆವಹಿಸಿ. ಅದಲ್ಲದೆ ಮುಟ್ಟಿನ ದಿನಗಳಲ್ಲಿ ಅಷ್ಟೇ ಅಲ್ಲ ಎಲ್ಲಾ ದಿನ ಒಂದು ಪ್ಯಾಡ್ ನಿಮ್ಮ ಬ್ಯಾಗ್ , ಪರ್ಸ್‌ನಲ್ಲಿದ್ದರೆ ಹೆಚ್ಚು ಸುರಕ್ಷಿತ.
* ಮುಟ್ಟಿನ ದಿನಗಳಲ್ಲಿ ಗಾಢ ಬಣ್ಣದ ಬಟ್ಟೆ ಧರಿಸಿ
ತೆಳು ಬಣ್ಣದ ಬಟ್ಟೆಯಲ್ಲಿ ಚಿಕ್ಕ ಕಲೆಯಾದರೆ ಕೂಡ ಎದ್ದು ಕಾಣುವುದು. ಆದ್ದರಿಂದ ಗಾಢ ಬಣ್ಣದ ಬಟ್ಟೆ ಧರಿಸಬೇಕು, ಆವಾಗ ಸ್ವಲ್ಪ ಕಲೆಯಾದರೆ ಎದ್ದು ಕಾಣುವುದಿಲ್ಲ.
* ಮುಟ್ಟಿನ ದಿನಗಳಲ್ಲಿ ಓವರ್ ಕೋಟ್ ಧರಿಸುವುದು ಸುರಕ್ಷಿತ
ಸ್ವೆಟರ್ ಅಥವಾ ಓವರ್ ಕೋಟ್ ಧರಿಸಿದರೆ ಒಂದು ವೇಳೆ ಕರೆಯಾದರೆ ಅದನ್ನು ಸೊಂಟಕ್ಕೆ ಕಟ್ಟಿ ಆರಾಮವಾಗಿ ಹೋಗಬಹುದು, ಇದರಿಂದ ಮುಜುಗರ ಎದುರಿಸಬೇಕಾದ ಸ್ಥಿತಿ ತಪ್ಪಿಸಬಹುದು. ಅಲ್ಲದೆ ಈ ರೀತಿ ಕಟ್ಟುವುದು ಫ್ಯಾಷನ್ ಕೂಡ ಹೌದು.
* ಮಲಗುವಾಗ ಮಂದವಾದ, ಗಾಢ ಬಣ್ಣದ ಟವಲ್ ಹಾಸಿ ಮಲಗಿ
ನೀವು ಮಲಗುವಾಗ ಬೆಡ್‌ಶೀಟ್‌ನಲ್ಲಿ ಕಲೆ ಉಂಟಾಗಬಹುದೇ ಎಂಬ ಆತಂಕವಿದ್ದಾಗ ಅಥವಾ ಇತರ ಕಡೆ ಹೋದಾಗ ಅವರ ಬೆಡ್‌ನಲ್ಲಿ ಕಲೆ ಉಂಟಾದರೆ ಎಂಬ ಆತಂಕವಿದ್ದಾಗ ಬೆಡ್‌ಶೀಟ್ ಮೇಲೆ ದಪ್ಪವಾದ ಟವಲ್ ಹಾಸಿ ಮಲಗಿ ಇದರಿಂದ ಹೆಚ್ಚು ತಲೆಕೆಡಿಸಿಕೊಳ್ಳಬೇಕಾಗಿಲ್ಲ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
