Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ಈ ಬ್ಲಡ್ ಗ್ರೂಪ್‌ನವರ ಸೌಂದರ್ಯ ಬೇಗನೆ ಮಾಸುವುದಿಲ್ವಂತೆ? ನಿಮ್ಮ ಬ್ಲಡ್ ಗ್ರೂಪ್ ಇದರಲ್ಲಿ ಇದೆಯೇ?
ಯೌವನದ ಕಳೆ ಬೇಗನೆ ಮಾಸಬಾರದು ಎಂದು ಎಲ್ಲರೂ ಬಯಸುತ್ತಾರೆ. ಅದಕ್ಕಾಗ ದುಬಾರಿ ಟ್ರೀಟ್ಮೆಂಟ್ ಮಾಡಿಸುತ್ತಾರೆ, ಜೀವನಶೈಲಿ ಕಡೆಗೆ ಗಮನಹರಿಸುತ್ತಾರೆ, ನೆರಿಗೆ ತಡೆಗಟ್ಟಲು ಇರುವ ಚುಚ್ಚು ಮದ್ದು ಪಡೆಯುತ್ತಾರೆ, ಹೀಗೆ ಬ್ಯೂಟಿ ಕಾಪಾಡಲು ತುಂಬಾನೇ ಕಸರತ್ತು ಮಾಡುವವರು ತುಂಬಾನೇ ಇದ್ದಾರೆ. ಇನ್ನು ಈ ಫ್ಯಾಷನ್, ಸಿನಿಮಾ, ಮಾಡೆಲಿಂಗ್ ಕ್ಷೇತ್ರದಲ್ಲಿ ತಮಗೆ ವಯಸ್ಸಾಗುತ್ತಿದೆ, ಮುಖದಲ್ಲಿ ನೆರಿಗೆ ಬಿದ್ದಿದೆ ಎಂದರೆ ತುಂಬಾನೇ ಚಿಂತೆ ಮಾಡುತ್ತಾರೆ, ಹಾಗಾಗಿ ಸೌಂದರ್ಯವರ್ಧಕ ಚಿಕಿತ್ಸೆಗಳ ಮೊರೆ ಹೋಗುತ್ತಾರೆ.

ಆದರೆ ರಕ್ತದ ಗ್ರೂಪ್‌ಗೂ ನಾವು ಯೌವನದ ಕಳೆಯಿಂದ ಕಾಣುವುದಕ್ಕೂ ಸಂಬಂಧವಿದೆ ಎಂದು ಸಂಶೋಧನೆ ಹೇಳುತ್ತದೆ. ರಕ್ತದಲ್ಲಿ A, B, O ಮತ್ತು AB ಗ್ರೂಪ್ ಅಂತ ಇದೆ. ಅದರಲ್ಲಿ ಯಾರ ಬ್ಲೆಡ್ ಗ್ರೂಪ್ B ಇದೆಯೋ ಅವರಿಗೆ ಬೇಗ ವಯಸ್ಸು ಕಾಣುವುದಿಲ್ಲವಂತೆ. ಈ ಬ್ಲಡ್ ಗ್ರೂಪ್‌ನವರ ಮುಖದಲ್ಲಿ ಬೇಗನೆ ನೆರಿಗೆ ಬೀಳುವುದಿಲ್ಲ, ಇವವರ ಸಂದರ್ಯ ಬೇಗನೆ ಮಾಸುವುದಿಲ್ಲವಂತೆ.
ಬಿ ರಕ್ತದ ಗುಂಪು ಇತರ ರಕ್ತದ ಗುಂಪಿಗಿಂತ ಭಿನ್ನವಾದದ್ದು
2004ರಲ್ಲಿ ಈ ಬಗ್ಗೆ ನಡೆಸಿದ ಸಂಶೋಧನೆಯಲ್ಲಿ 269 ಜನರನ್ನು ಒಳಪಡಿಸಲಾಗಿತ್ತು, ಟೋಕಿಯೋದಲ್ಲಿರುವ ಸುಮಾರು 269 ಜನರನ್ನು ತುಂಬಾ ವರ್ಷಗಳವರೆಗೆ ಪರೀಕ್ಷೆಗೆ ಒಳಪಡಿಸಲಾಗಿತ್ತು, ಆವಾಗ ಈ ಅಚ್ಚರಿಯ ಸಂಗತಿ ತಿಳಿದು ಬಂದಿದೆ.
ಬಿ ಗುಂಪಿನವರಿಗೆ ಬೇಗ ನೆರಿಗೆ ಬೀಳುವುದಿಲ್ಲ ಏಕೆ?
ರಕ್ತದ ಗುಂಪು ಬಿ ಆಗಿರವವರಲ್ಲಿ antigen ಉತ್ಪತ್ತಿ ಹೆಚ್ಚಾಗುವುದು. ಇದರಿಂದಾಗಿ ಅವರ ಮುಖದ ಸೌಂದರ್ಯ ತುಂಬಾ ಚೆನ್ನಾಗಿರಲಿದೆ. ಅಲ್ಲದೆ ಇವರ ದೇಹವು ಮಾನಸಿಕ ಒತ್ತಡವನ್ನು ನಿಭಾಯಿಸಲು ಸಾಧ್ಯವಾಗುವುದು, ಅಲ್ಲದೆ ಇವರಿಗೆ ಬೇಗನೆ ವಯಸ್ಸಾದಂತೆ ಕಾಣುವುದಿಲ್ಲ, ವಯಸ್ಸು 50 ಆದರೂ ನೋಡಲು 35 ಆಸುಪಾಸಿನವರಂತೆ ಕಾಣುತ್ತಾರೆ.
ಯಾವ ಬ್ಲಡ್ ಗ್ರೂಪ್‌ನವರಿಗೆ ಪಾರ್ಶ್ವವಾಯು ಅಪಾಯ ಹೆಚ್ಚು?
ಮತ್ತೊಂದು ಅಧ್ಯಯನದಲ್ಲಿ ರಕ್ತದ ಗ್ರೂಪ್ A ಇರುವವರೆಗೆ 60 ವರ್ಷದ ಬಳಿಕ ಪಾರ್ಶ್ವವಾಯು ಅಪಾಯ ಹೆಚ್ಚು ಎಂಬುವುದು ತಿಳಿದು ಬಂದಿದೆ. O ರಕ್ತ ಗ್ರೂಪ್‌ನವರಿಗಿಂತ ಗ್ರೂಪ್ Aಯವರೆಗೆ ಪಾರ್ಶ್ವವಾಯು ಅಪಾಯ ಹೆಚ್ಚು ಎಂದು 2022ರಲ್ಲಿ ಯೂನಿವರ್ಸಿಟಿ ಆಫ್ ಮ್ಯಾರಿಲ್ಯಾಂಡ್ ಸ್ಕೂಲ್ ಆಫ್ ಮೆಡಿಸಿನ್ ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ. ಈ ಅಧ್ಯಯನದಲ್ಲಿ 18-59 ವರ್ಷದೊಳಗಿನವರನ್ನು ಈ ಅಧ್ಯಯನದಲ್ಲಿ ಒಳಪಡಿಸಲಾಯ್ತು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
