Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
PCOS ಸಮಸ್ಯೆವಿರುವ ಹೆಣ್ಮಕ್ಕಳಿಗೆ ಈ ಪಾನೀಯ ತುಂಬಾನೇ ಒಳ್ಳೆಯದು
ಈ ಪಿಸಿಒಎಸ್ ಎಂಬುವುದು ಬಹುತೇಕ ಹೆಣ್ಮಕ್ಕಳನ್ನು ಕಾಡುತ್ತಿರುವ ಸಮಸ್ಯೆಯಾಗಿದೆ, ಕೆಲ ಹೆಣ್ಮಕ್ಕಳಿಗಂತೂ ತುಂಬಾ ಚಿಕ್ಕ ಪ್ರಾಯದಲ್ಲಿಯೇ ಕಂಡು ಬರುತ್ತಿದೆ, ಇದು ಜೀವನಶೈಲಿಗೆ ಸಂಬಂಧಿಸಿದ ಸಮಸ್ಯೆಯಾಗಿದೆ. ದೈಹಿಕ ವ್ಯಾಯಾಮ ಇಲ್ಲದಿರುವುದು, ಅತಿಯಾದ ಮಾನಸಿಕ ಒತ್ತಡ ಇವೆಲ್ಲಾ PCOS ಸಮಸ್ಯೆಗೆ ಪ್ರಮುಖ ಕಾರಣವಾಗಿದೆ.

ಪಿಸಿಒಎಸ್ ಸಮಸ್ಯೆಯ ಪ್ರಮುಖ ಲಕ್ಷಣಗಳೆಂದರೆ
ಹಾರ್ಮೋನ್‌ಗಳ ಅಸಮತೋಲನ
ಅನಿಯಮಿತ ಉಟ್ಟು
ಓವರಿಯನ್ ಸಿಸ್ಟ್ (ಗರ್ಭಾಶಯದಲ್ಲಿ ಗುಳ್ಳೆಗಳು ಏಳುವುದು)
ಗರ್ಭಧಾರಣೆಗೆ ತೊಂದರೆ
ಮುಖ, ಎದೆ ಭಾಗದಲ್ಲಿ ಕೂದಲು ಬೆಳೆಯುವುದು
ಮುಖದಲ್ಲಿ ಮೊಡವೆ
ಕೂದಲು ತೆಳುವಾಗುವುದು
ಗಂಡಸರ ರೀತಿ
ಬಕ್ಕ ತಲೆ
ತ್ವಚೆಯಲ್ಲಿ ಕಪ್ಪು ಕಪ್ಪು ಪ್ಯಾಚ್ ಬರುವುದು
ಪಿಸಿಒಎಸ್ ಸಮಸ್ಯೆ ಇರುವವರು ಚಿಕಿತ್ಸೆ ಜೊತೆಗೆ ಜೀವನಶೈಲಿಯಲ್ಲಿ, ಆಹಾರಶೈಲಿಯಲ್ಲಿ ಬದಲಾವಣೆ ಮಾಡಬೇಕು, ಆವಾಗ ಈ ಪಿಸಿಒಎಸ್ ಸಮಸ್ಯೆ ನಿಯಂತ್ರಿಸಬಹುದು. ಪಿಸಿಒಎಸ್ ಸಮಸ್ಯೆ ಇರುವವರಿಗೆ ಈ ಪಾನೀಯ ತುಂಬಾ ಒಳ್ಳೆಯದು
ನಿಂಬೆ-ಶುಂಠಿ ನೀರು
ನೀವು ನಿಂಬು ಪಾನಿಯ ಮಾಡುವಾಗ ಶುಂಠಿಯನ್ನು ಕೂಡ ಜಜ್ಜಿ ಸೇರಿಸಿ, ಆ ನೀರು ಕುಡಿಯುವುದರಿಂದ ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು, ವಿಟಮಿನ್ ಸಿ ಇರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು. ಈ ಪಾನೀಯ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ತುಂಬಾನೇ ಒಳ್ಳೆಯದು. ಈ ಪಾನೀಯ ದೇಹವನ್ನು ಡಿಟಾಕ್ಸ್ ಮಾಡುತ್ತದೆ, ಮೈ ತೂಕ ನಿಯಂತ್ರಣದಲ್ಲಿಡುತ್ತದೆ.
ಆಪಲ್ ಸೈಡರ್ ವಿನೆಗರ್ ಪಾನೀಯ
ಬಿಸಿ ನೀರಿಗೆ ಒಂದು ಚಮಚ ವಿನೆಗರ್ ಹಾಕಿ ಕುಡಿಯುವುದರಿಂದ ಇದು ಪಿಸಿಒಎಸ್ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ, ಇದಕ್ಕೆ ಸ್ವಲ್ಪ ಚಕ್ಕೆ ಕೂಡ ಸೇರಿಸಿ ಕುಡಿಯಬಹುದು, ಈ ಪಾನೀಯ ಆಹಾರ ಸೇವಿಸುವುದರ ಅರ್ಧ ಗಂಟೆ ಮೊದಲು ಸೇವಿಸುವುದು ಒಳ್ಳೆಯದು.
ಪುದೀನಾ ಮತ್ತು ಸೌತೆಕಾಯಿ ಪಾನೀಯ
ಈ ಡಿಟಾಕ್ಸ್ ಪಾನೀಯ ತೂಕ ಇಳಿಕೆಯ ಜೊತೆಗೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. 2 ಲೀಟರ್ ನೀರಿಗೆ ಒಂದು ಸೌತೆ ಚಿಕ್ಕದಾಗಿ ಕತ್ತರಿಸಿ ಹಾಕಿ, ಅದಕ್ಕೆ ಸ್ವಲ್ಪ ಪುದೀನಾ ಹಾಕಿ, ಒಂದು ತುಂಡು ನಿಂಬೆಹಣ್ಣು ಹಾಕಿ ಈ ನೀರನ್ನು ನಿಮಗೆ ನೀರು ಕುಡಿಯಬೇಕೆನಿಸಿದಾಗ ಕುಡಿಯುತ್ತಾ ಬನ್ನಿ. ಈ ಡಿಟಾಕ್ಸ್ ಪಾನೀಯ ಕುಡಿಯುವುದರಿಂದ ಸುಸ್ತು ಅನಿಸುವುದಿಲ್ಲ, ದಿನದ ಕೆಲಸ ಕಾರ್ಯವನ್ನು ಲವಲವಿಕೆಯಿಂದ ಮಾಡಿ ಮುಗಿಸಲು ಸಹಕಾರಿ.
ಗ್ರೀನ್ ಟೀ
ಮಾಮೂಲಿ ಟೀ ಬದಲಿಗೆ ಗ್ರೀನ್ ಟೀ ಕುಡಿಯುವುದರಿಂದ ಆರೋಗ್ಯಕ್ಕೆ ತುಂಬಾನೇ ಪ್ರಯೋಜನವಿದೆ, ಇದು ಮುಖದ ಹೊಳಪು ಹೆಚ್ಚಿಸುತ್ತದೆ, ತುಕ ಇಳಿಕೆಗೆ ಸಹಕಾರಿ, ತೂಕ ನಿಯಂತ್ರಿಸುತ್ತದೆ. ಆದರೆ ಗ್ರೀನ್ ಟೀ ನೀವು ದಿನದಲ್ಲಿ 2 ಲೋಟಕ್ಕಿಂತ ಹೆಚ್ಚು ಸೇವಿಸಬೇಡಿ.
ಹಾಲಿಗೆ ಅರಿಶಿಣ ಹಾಕಿ ಸೇವಿಸಿ
ದಿನಾ ಒಂದು ಲೋಟ ನೀರಿಗೆ ಸ್ವಲ್ಪ ಅರಿಶಿಣ ಪುಡಿ ಹಾಕಿ ಕುಡಿಯುವುದರಿಂದ ಮೈಕೈ ನೋವು, ಉರಿಯೂತ ಈ ಬಗೆಯ ಸಮಸ್ಯೆ ತಡೆಗಟ್ಟಲು ಸಹಕಾರಿಯಾಗಿದೆ, ಮಲಗುವ ಮುನ್ನ ಈ ಪಾನೀಯ ಕುಡಿದು ಮಲಗುವುದು ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications