Latest Updates
-
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ!
ಪಥರ್ಚಟ್ಟಾ ಎಲೆ ಕಿಡ್ನಿ ಸ್ಟೋನ್ ಹೋಗಲಾಡಿಸಲು ತುಂಬಾನೇ ಒಳ್ಳೆಯದು, ಬಳಸುವುದು ಹೇಗೆ?
ಸಾಮಾನ್ಯವಾಗಿ ಮನೆಗಳಲ್ಲಿ ಈ ಪಥರ್ಚಟ್ಟಾ ಗಿಡವಿರುತ್ತದೆ, ಇದನ್ನು ಹೂ ಗಿಡ ರೀತಿ ಬೆಳೆಸಿರುತ್ತಾರೆ, ಇದನ್ನು ಕಾಡು ಬಸಳೆ ಎಂದು ಕೂಡ ಕರೆಯಲಾಗುವುದು. ಇದು ಅದ್ಭುತ ಔಷಧೀಯ ಗುಣವಿರುವ ಗಿಡವಾಗಿದೆ. ಸಾಕಷ್ಟು ಜನರಿಗೆ ಇದರ ಪ್ರಯೋಜನಗಳ ಬಗ್ಗೆ ಗೊತ್ತೇ ಇರುವುದಿಲ್ಲ. ಇದೊಂದು ಅದ್ಭುತ ಔಷಧೀಯ ಗುಣವಿರುವ ಗಿಡವಾಗಿದೆ. ಕಿಡ್ನಿ ಸ್ಟೋನ್ ಕರಗಿಸಲು ಇದು ಅತ್ಯುತ್ತಮವಾದ ಮನೆಮದ್ದಾಗಿದೆ.
ಈ ಕಾಡು ಬಸಳೆಯನ್ನು ಕಿಡ್ನಿಸ್ಟೋನ್ ಕರಗಿಸಲು ಹೇಗೆ ಬಳಸಬೇಕು, ಈ ಎಲೆಯ ಇತರ ಪ್ರಯೋಜನಗಳೇನು ಎಂದು ನೋಡೋಣ ಬನ್ನಿ:

ಗಾಲ್ ಬ್ಲೇಡರ್ ಸ್ಟೋನ್‌ಗೆ
ಗಾಲ್ ಬ್ಲೇಡರ್ ಸ್ಟೋನ್ ಇರುವವರು ಇದರ ಜ್ಯೂಸ್ ಮಾಡಿ ಕುಡಿಯುವುದರಿಂದ ತುಂಬಾನೇ ಪ್ರಯೋಜನ ಪಡೆಯಬಹುದು. ನೀವು ಪಥರ್ಚಟ್ಟಾದ 3-4 ಎಲೆಗಳನ್ನು ತೆಗೆದುಕೊಂಡು ತೊಳೆದು ಅದನ್ನು ಮಿಕ್ಸಿ ಜಾರ್‌ಗೆ ಹಾಕಿ ಒಂದು ಲೋಟ ನೀರು ಹಾಕಿ ಗ್ರೈಂಡ್ ಮಾಡಿ ಆ ಜ್ಯೂಸ್ ಸಂಜೆ ಹೊತ್ತೊಗೆ ತೆಗೆದುಕೊಳ್ಳಿ, ಈ ರೀತಿ ನೀವು 1-2 ತಿಂಗಳು ತೆಗೆದುಕೊಂಡರೆ ಗಾಲ್‌ಬ್ಲೇಡರ್ ಸಮಸ್ಯೆ ದೂರಾಗುವುದು. ಇದು ದೇಹದಲ್ಲಿರುವ ಬೇಡದ ಕಶ್ಮಲ ಹೊರ ಹಾಕಲು ಸಹಕಾರಿಯಾಗಿದೆ.
ಕಿಡ್ನಿ ಸ್ಟೋನ್‌ಗೆ
ಕಿಡ್ನಿ ಸ್ಟೋನ್ ಸಮಸ್ಯೆ ಇದ್ದರೆ ನೀವು 2 ಪಥರ್ಚಟ್ಟಾ ಎಲೆ ತೆಗೆದು ಸ್ವಚ್ಛಗೊಳಿಸಿ ನಂತರ ಅದನ್ನು ಒಂದು ಲೋಟ ನೀರಿನಲ್ಲಿ ಹಾಕಿ ಕುದಿಸಿ ನಂತರ ಸೋಸಿ ನಂತರ ಆ ನೀರನ್ನು ಕುಡಿಯಿರಿ. ನಂತರ ಒಂದು ಎಲೆಯನ್ನು ಜಗಿದು ತಿನ್ನಿ, ಹೀಗೆ ಮಾಡುವುದರಿಂದ ಕಿಡ್ನಿ ಸ್ಟೋನ್ ಕರಗಿ ಮೂತ್ರದಲ್ಲಿ ಹೊರ ಹೋಗುತ್ತದೆ. ಕಿಡ್ನಿ ಸ್ಟೋನ್ ಇರುವವರೆಗೆ ಇದು ಅತ್ಯುತ್ತಮವಾದ ಮನೆಮದ್ದಾಗಿದೆ.
ಈ ಎಲೆಯ ಜ್ಯೂಸ್ ಮಾಡಿ ಕುಡಿಯುವುದರಿಂದ ಮೂತ್ರದಲ್ಲಿ ಕಲ್ಲು ಉಂಟಾಗಿ ನೋವು ಬರುತ್ತಿದ್ದರೆ ಆ ಸಮಸ್ಯೆಗೆ ಪರಿಹಾರ ಸಿಗುತ್ತದೆ.
ಪಥರ್ಚಟ್ಟಾ ಎಲೆಯಿಂದ ಈ ಪ್ರಯೋಜನಗಳಿವೆ
ಮೂತ್ರ ಉರಿಗೆ ತುಂಬಾನೇ ಒಳ್ಳೆಯದು: ಆಗಾಗ ಮೂತ್ರವಿಸರ್ಜನೆ, ಮೂತ್ರ ಹೋಗುವಾಗ ಉರಿಯಾಗುವುದು ಈ ಬಗೆಯ ಸಮಸ್ಯೆ ಉಂಟಾದರೆ ಈ ಎಲೆಯ ಜ್ಯೂಸ್ ಕುಡಿಯುವುದರಿಂದ ಮೂತ್ರ ಉರಿ ಸಮಸ್ಯೆ ಕಡಿಮೆಯಾಗುವುದು.
ಹೊಟ್ಟೆಯನ್ನು ಶುದ್ಧಿ ಮಾಡುತ್ತದೆ: ಹೊಟ್ಟೆಯಲ್ಲಿರುವ ಬೇಡದ ಕಶ್ಮಲವನ್ನು ಹೊರ ಹಾಕಲು ಸಹಕಾರಿಯಾಗಿದೆ.
ಪಥರ್ಚಟ್ಟಾ ಗಿಡ ಬೆಳೆಸುವುದು ಹೇಗೆ?
ಪಥರ್ಚಟ್ಟಾ ಗಿಡ ಬಿಸಿಲಿನಲ್ಲಿ ಬೆಳೆಯುವುದು ಕಷ್ಟ, ಸ್ವಲ್ಪ ನೆರಳಿನಲ್ಲಿ ಗಿಡವನ್ನು ನೆಟ್ಟು ಬಳಸಿ.
ಹೆಚ್ಚು ತಂಪು ಅಥವಾ ಹೆಚ್ಚು ಉಷ್ಣಾಂಶ ಇರುವ ಕಡೆ ಇದು ಬೆಳೆಯುವುದು ಕಷ್ಟ
ದಿನಾ ನೀರು ಹಾಕಬೇಡಿ, ಹೂ ಕುಂಡದಲ್ಲಿ ಮಣ್ಣು ಸ್ವಲ್ಪ ಒಣಗುವಾಗ ನೀರು ಹಾಕಿದರೆ ಸಾಕು
ನೀರು ತುಂಬಾ ಹಾಕಬೇಡಿ
ಗಿಡವನ್ನು ಹೇಗೆ ನೆಡುವುದು
ಇದರ ಕಾಂಡ ಬೇಕಾಗಿಲ್ಲ, ಇದರ ಎಲೆ ನೆಟ್ಟರೆ ಸಾಕಾಗುತ್ತೆ, ಚೆನ್ನಾಗಿ ಚಿಗುರು ಒಡೆದು ಬರುತ್ತದೆ. ಇ
ಇದಕ್ಕೆ ಮಿತ ಗೊಬ್ಬರ ಹಾಕಿ
ಇತರ ಸಲಹೆ
ಒಣಗಿದ ಎಲೆಯನ್ನು ತೆಗೆಯಿರಿ
ಬಿಸಿಲು ನೇರವಾಗಿ ಬೀಳುವ ಕಡೆ ಇಡಬೇಡಿ
ಇದಕ್ಕೆ ಸಾಮಾನ್ಯವಾಗಿ ಯಾವುದೇ ರೋಗ ಬರಲ್ಲ, ಬಂದ್ರೆ ಇತರ ಗಿಡಕ್ಕೆ ಕೀಟನಾಶಕ ಸಿಂಪಡಿಸಿ ಆರೈಕೆ ಮಾಡುವಂತೆಯೇ ಮಾಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications