Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಶಿಶುಗಳಿಗೆ ಆ್ಯಂಟಿಬಯೋಟಿಕ್ ನೀಡುವ ಮುನ್ನ ಎಚ್ಚರ..! ಭವಿಷ್ಯದಲ್ಲಿದೆ ದೊಡ್ಡ ಸಮಸ್ಯೆ!
ಇತ್ತೀಚಿಗೆ ಸಣ್ಣ ಪುಟ್ಟ ಅನಾರೋಗ್ಯ ಸಮಸ್ಯೆಗಳು ಎದುರಾದಾಗಲು ನಾವು ಆ್ಯಂಟಿಬಯೋಟಿಕ್ ಸೇವಿಸುವುದು ನೋಡಬಹುದು. ಅದರಲ್ಲೂ ಆಸ್ಪತ್ರೆ, ಮೆಡಿಕಲ್, ವೈದ್ಯರ ಸಲಹೆ ಇಲ್ಲದೆಯೂ ಹಲವರು ಆ್ಯಂಟಿಬಯೋಟಿಕ್ ಸೇವಿಸುತ್ತಾರೆ. ಹಾಗೆ ಮಕ್ಕಳಿಗೂ ಕೂಡ ಸಣ್ಣ ಪುಟ್ಟ ಸಮಸ್ಯೆಗಳಿದ್ದರೆ ಆ್ಯಂಟಿಬಯೋಟಿಕ್ ನೀಡುವುದು ಇತ್ತಿಚಿಗೆ ಹೆಚ್ಚಾಗುತ್ತಿದೆ. ಆದರೆ ಮಕ್ಕಳಿಗೆ ಆ್ಯಂಟಿಬಯೋಟಿಕ್ ನೀಡಬಹುದೇ? ಎಷ್ಟು ಪ್ರಮಾಣದಲ್ಲಿ ನೀಡಬೇಕು? ಇದರಿಂದಾಗುವ ಅಡ್ಡ ಪರಿಣಾಮವೇನು ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.
2 ವರ್ಷಕ್ಕಿಂತ ಕಡಿಮೆ ವಯಸ್ಸಿನ ಶಿಶುಗಳಿಗೆ ಈ ರೀತಿ ಆ್ಯಂಟಿಬಯೋಟಿಕ್ ಹೆಚ್ಚಾಗಿ ನೀಡುವುದು ಅವರ ಭವಿಷ್ಯದ ದಿನಗಳಲ್ಲಿ ಅಸ್ತಮಾ, ಫುಡ್ ಅಲರ್ಜಿಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಂತೆ. ಈ ಆ್ಯಂಟಿಬಯೋಟಿಕ್ ಈ ವಯಸ್ಸಿನವರಲ್ಲಿನ ಕರುಳು ಬ್ಯಾಕ್ಟೀರಿಯಾಗಳ ಮೇಲೆ ದಾಳಿ ಮಾಡುವುದಿಲ್ಲದೆ ತೊಂದರೆಗಳಿಗೆ ಕಾರಣವಾಗಬಹುದಂತೆ.

ಜರ್ನಲ್ ಆಫ್ ಇನ್ಫೆಕ್ಷಿಯಸ್ ಡಿಸೀಸಸ್‌ನಲ್ಲಿ ಪ್ರಕಟವಾದ ಅಧ್ಯಯನವು ಇಂಗ್ಲೆಂಡ್‌ನಲ್ಲಿ 1 ಮಿಲಿಯನ್‌ಗಿಂತಲೂ ಹೆಚ್ಚು ಮಕ್ಕಳ ಆರೋಗ್ಯ ದಾಖಲೆಗಳನ್ನು ಅಧ್ಯಯನಕ್ಕೊಳಪಡಿಸಿದೆ. 2 ವರ್ಷ ತುಂಬುವ ಮುನ್ನವೇ ಆ್ಯಂಟಿಬಯೋಟಿಕ್ ನೀಡಲಾದ ಮಕ್ಕಳಲ್ಲಿ ಅಸ್ತಮದ ಅಪಾಯ ಶೇ.24ರಷ್ಟು ಹಾಗೆ ಈ ಅಲರ್ಜಿಗಳ ಅಪಾಯ ಶೇ.33ರಷ್ಟು ಹೆಚ್ಚಾಗಿರುವುದು ಅಧ್ಯಯನದಿಂದ ತಿಳಿದುಬಂದಿದೆ. ಹಾಗೆ ಅವರಲ್ಲಿ ಜ್ವರ, ಕಾಲೋಚಿತ ಅಲರ್ಜಿಗಳ ಅಪಾಯ ಕೂಡ ಶೇ.6 ರಷ್ಟು ಹೆಚ್ಚಾಗಿದೆ ಎಂದು ವರದಿಯಾಗಿದೆ.
ವಿವಿಧ ರೀತಿಯ ಸೋಂಕುಗಳ ವಿರುದ್ಧ ಹೋರಾಡಲು ಆ್ಯಂಟಿಬಯೋಟಿಕ್ ಬಹಳ ಮುಖ್ಯ. ಆದರೆ ಅವುಗಳನ್ನು ಯಾವ ಸಮಯದಲ್ಲಿ ಎಷ್ಟು ಪ್ರಮಾಣದಲ್ಲಿ ಬಳಸಬೇಕು ಎಂಬುದು ಮತ್ತಷ್ಟು ಮುಖ್ಯವಾಗುತ್ತದೆ. ಆ್ಯಂಟಿಬಯೋಟಿಕ್‌ಗಳು ಜೀವ ಉಳಿಸುವ ಔಷಧಿಗಳಾಗಿದ್ದರೂ, ಶಿಶುಗಳಲ್ಲಿ ಅವುಗಳನ್ನು ಅತಿಯಾಗಿ ಬಳಸುವುದರಿಂದ ಅವರ ಕರುಳಿನ ಸೂಕ್ಷ್ಮಜೀವಿ - ಜೀರ್ಣಾಂಗ ವ್ಯವಸ್ಥೆಯಲ್ಲಿರುವ ಉತ್ತಮ ಬ್ಯಾಕ್ಟೀರಿಯಾ ಗಳ ಬೆಳವಣಿಗೆಯ ಮೇಲೆ ಪರಿಣಾಮ ಬೀರಬಹುದು. ರೋಗ ನಿರೋಧಕ ಶಕ್ತಿ ಉತ್ತೇಜಿಸಲು, ಅಲರ್ಜಿಗಳಿಂದ ರಕ್ಷಿಸಲು, ಜೀರ್ಣಕ್ರಿಯೆಗೆ ಈ ಕುರುಳಿನ ಬ್ಯಾಕ್ಟೀರಿಯಾಗಳು ಬಹಳ ಮುಖ್ಯವಾಗುತ್ತವೆ.
ಹೀಗಾಗಿ ಕೆಲವು ಚಿಕ್ಕಪುಟ್ಟ ಸಮಸ್ಯೆಗಳಿಗೆ ಆ್ಯಂಟಿಬಯೋಟಿಕ್ ನೀಡುವ ಬದಲಾಗಿ ವೈದ್ಯರ ಸಂಪರ್ಕಿಸುವುದು ಬಹಳ ಮುಖ್ಯ. ಹಾಗೆ ಆ್ಯಂಟಿಬಯೋಟಿಕ್‌ಗಳನ್ನು ಕೂಡ ವೈದ್ಯರ ಸಲಹೆ ಪಡೆಯುವುದು ಕೂಡ ಅತ್ಯವಶ್ಯಕ. ಹಾಗಾದ್ರೆ ಪೋಷಕರು ಯಾವಾಗ ವೈದ್ಯರ ಸಲಹೆ ಪಡೆದು ಆ್ಯಂಟಿಬಯೋಟಿಕ್ ನೀಡಬೇಕು. ಅಥವಾ ಆ್ಯಂಟಿಬಯೋಟಿಕ್ ನೀಡುವ ಬದಲಾಗಿ ಯಾವಾಗ ನೇರ ವೈದ್ಯರ ಬಳಿಯೇ ಸಲಹೆ ಪಡೆಯಬೇಕು ಎಂಬುದನ್ನು ನಾವಿಲ್ಲಿ ನೋಡೋಣ.
ತಮ್ಮ ಮಗುವಿನಲ್ಲಿ ತೀವ್ರ ಜ್ವರ ಕಾಣಿಸಿಕೊಂಡಾಗ
ಅನಾರೋಗ್ಯ ಕೆಲವು ದಿನಗಳಿಂದ ಕಡಿಮೆಯಾಗದೇ ಇದ್ದಾಗ
ಕಿವಿ ಸೋಂಕು, ಗಂಟಲು ಉರಿಯೂತ, ಅತಿಸಾರ ಅಥವಾ ನ್ಯುಮೋನಿಯಾದಂತಹ ಲಕ್ಷಣಗಳು ಕಂಡುಬಂದಾಗ
ಮಗುವಿನಲ್ಲಿ ಉಸಿರಾಟದ ಸಮಸ್ಯೆಗಳು ಕಂಡುಬಂದಾಗ
ನಿದ್ರಾಹಿನತೆಗೆ ಒಳಗಾದಾದ, ಮಗು ಸರಿಯಾದ ಸಮಯಕ್ಕೆ ನಿದ್ರೆ ಮಾಡದೆ ಇರುವಾಗ
ಈ ಮೇಲಿನ ಎಲ್ಲಾ ಸಮಯದಲ್ಲೂ ನೀವು ಆ್ಯಂಟಿಬಯೋಟಿಕ್ ನೀಡುವ ಬದಲಾಗಿ ವೈದ್ಯರ ಸಲಹೆ ಪಡೆಯಬೇಕಾಗುತ್ತದೆ. ಇದು ಆ್ಯಂಟಿಬಯೋಟಿಕ್ ನೀಡುವ ಬದಲಾಗಿ ಹಾಗೆ ವೈದ್ಯರಿಂದ ಸೂಕ್ತ ರೀತಿಯ ಚಿಕಿತ್ಸೆ ಪಡೆಯುವುದು ಮಕ್ಕಳ ಆರೋಗ್ಯ ಸುಧಾರಿಸಲು ಕಾರಣವಾಗುವ ಅಂಶವಾಗಿದೆ.
ಆದ್ರೆ ಕೋವಿಡ್ ನಂತರದ ಸಮಯದಲ್ಲಿ ಆ್ಯಂಟಿಬಯೋಟಿಕ್ ಬಳಕೆ ವಿಶ್ವದಾದ್ಯಂತ ಹೆಚ್ಚಳವಾಗಿರುವುದನ್ನು ಕೂಡ ನಾವು ಗಮನಿಸಹುದು. ಏಕೆಂದರೆ ಕೋವಿಡ್ ಸಮಯದಲ್ಲಿ ಎಲ್ಲಾ ಸಮಸ್ಯೆಗೂ ಆ್ಯಂಟಿಬಯೋಟಿಕ್ ಸೇವಿಸಲು ಮುಂದಾಗುವವರ ಸಂಖ್ಯೆ ಹೆಚ್ಚಾಗಿತ್ತು. ಇದರಿಂದ ತಕ್ಷಣದ ಪರಿಹಾರ ಪಡೆದರೂ ಕೂಡ ಭವಿಷ್ಯದಲ್ಲಿ ದೊಡ್ಡ ಸಮಸ್ಯೆಗಳ ತರಲು ಇದು ಕಾರಣವಾಗಲಿದೆ. ಅದರಲ್ಲೂ ಮಕ್ಕಳಿಗೆ ಈ ಆ್ಯಂಟಿಬಯೋಟಿಕ್ ಔಷಧಿ ನೀಡು ಮುನ್ನ ಎಚ್ಚರಿಕೆ ವಹಿಸುವುದು ಬಹಳ ಮುಖ್ಯ ಎನಿಸಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
