Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅಚ್ಚರಿಯಾದ್ರು ಇದು ಸತ್ಯ..! ಬೆಕ್ಕಿನಿಂದ ಮನೋವ್ಯಾಧಿ ಹೆಚ್ಚಳ..!
ಬೆಕ್ಕುಗಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಇತ್ತೀಚಿಗೆ ಬೆಕ್ಕುಗಳು ಸಹ ಮನೆಯ ಒಂದು ಸದಸ್ಯನಂತೆ ಆಗಿದೆ. ಪ್ರತಿ ಮನೆಯಲ್ಲೂ ಬೆಕ್ಕುಗಳ ಸಾಕುವುದು ಸರ್ವೇ ಸಾಮಾನ್ಯ ಎಂಬಂತಾಗಿದೆ. ಅದರಲ್ಲೂ ವಿದೇಶಿ ಬೆಕ್ಕುಗಳ ಸಾಕುವುದು ಈಗ ಹೊಸ ಫ್ಯಾಶನ್ ಆಗಿದೆ. ಆದರೆ ಬೆಕ್ಕುಗಳಿಂದಲೂ ಮಾನಸಿಕ ಆರೋಗ್ಯ ಹದಗೆಡುತ್ತದೆ ಎಂದರೆ ನಂಬುತ್ತೀರಾ?
ಅಚ್ಚರಿ ಎನಿಸಿದರು ಇದು ನಿಜ. ಬೆಕ್ಕುಗಳಿಂದ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಹಾಗಾದ್ರೆ ಏನಿದು ಅಧ್ಯಯನ? ಬೆಕ್ಕುಗಳಿಂದ ಯಾವ ರೀತಿ ಮಾನಸಿಕ ಸಮಸ್ಯೆಗೆ ಕಾರಣವಾಗಲಿದೆ ಎಂಬುದನ್ನು ನೋಡಿ.
ಬೆಕ್ಕುಗಳನ್ನು ಮನೆಯಲ್ಲಿ ಸಾಕುವುದು ಹೊಸದಾಗಿ ಹುಟ್ಟುಕೊಂಡ ಹವ್ಯಾಸವಲ್ಲ. ಪ್ರಾಚೀನ ಕಾಲದಲ್ಲೇ ಬೆಕ್ಕುಗಳು ಮನೆಯ ಸದಸ್ಯನಾಗಿತ್ತು ಎಂಬುದು ಹಲವು ಬಾರಿ ಉಲ್ಲೇಖವಿದೆ. ಆದರೆ ಬೆಕ್ಕುಗಳಿಂದಲೂ ಮಾನಸಿಕ ಆರೋಗ್ಯ ಹದಗೆಡುತ್ತದೆ ಎಂಬುದು ಇತ್ತೀಚಿಗೆ ತಜ್ಞರು ಕಂಡುಕೊಂಡಿರುವ ಸತ್ಯವಾಗಿದೆ. ಬೆಕ್ಕುಗಳು ಸ್ಕಿಜೋಫ್ರೇನಿಯಾ (ಮನೋವ್ಯಾದಿ) ಎಂಬ ಮೆದುಳಿನ ಸಂಕೀರ್ಣ ಮಾನಸಿಕ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್ ವಿಶ್ವವಿದ್ಯಾಲಯದ ಸಂಶೋಧಕರ ಇತ್ತೀಚಿನ ಅಧ್ಯಯನವು ತಿಳಿಸಿದೆ.

ಏನಿದು ಅಧ್ಯಯನ?
ಸಂಶೋಧಕರ ಇತ್ತೀಚಿನ ಅಧ್ಯಯನವು ಕಳೆದ 44 ವರ್ಷಗಳಲ್ಲಿ 17 ಅಧ್ಯಯನಗಳ ಸಮಗ್ರ ವಿಶ್ಲೇಷಣೆಯ ನಂತರ ಮತ್ತು ಯುನೈಟೆಡ್ ಸ್ಟೇಟ್ಸ್ ಮತ್ತು ಯುನೈಟೆಡ್ ಕಿಂಗ್‌ಡಮ್‌ನಂತಹ 11 ದೇಶಗಳ ಡೇಟಾವನ್ನು ಒಳಗೊಂಡಂತೆ ಈ ವರದಿಯನ್ನು ತಯಾರು ಮಾಡಲಾಗಿದೆ.
ಸ್ಕಿಜೋಫ್ರೇನಿಯಾ ಎಂದರೇನು?
ಸ್ಕಿಜೋಫ್ರೇನಿಯಾವು ಸಂಕೀರ್ಣವಾದ ಮಾನಸಿಕ ರೋಗವಾಗಿದೆ. ಅದು ವ್ಯಕ್ತಿಯ ವರ್ತನೆ, ಅನುಭವಿಸುವ ಮತ್ತು ಯೋಚಿಸುವ ರೀತಿ ಮೇಲೆ ಪರಿಣಾಮ ಬೀರುತ್ತದೆ. ಇದು ಹಲವಾರು ಸಮಸ್ಯೆಗಳನ್ನು ಒಳಗೊಂಡಿರುತ್ತದೆ ಮತ್ತು ಪರಿಸರ, ತಳಿಶಾಸ್ತ್ರ ಮತ್ತು ಬದಲಾದ ಮೆದುಳಿನ ರಚನೆಯಂತಹ ಹಲವಾರು ಅಂಶಗಳ ಪರಿಣಾಮವಾಗಿದೆ.
ಈ ಮನೋವ್ಯಾದಿಯಲ್ಲಿ ಸಾಮಾನ್ಯವಾಗಿ ಭ್ರಮೆಗೆ ಒಳಗಾಗಿರುತ್ತಾರೆ. ತಮ್ಮ ಎದುರು ಇಲ್ಲದ ವಿಚಾರವನ್ನು ಇದ್ದಂತೆ. ಯಾವುದೋ ಶಬ್ದ ಕಿವಿಗೆ ಬಿದ್ದಂತೆ ಅಥವಾ ಯಾರು ಇಲ್ಲದಿದ್ದರೂ ಅವರ ಜೊತೆ ಮಾತನಾಡುತ್ತಿರುವಂತೆ ಭ್ರಮಿಸುತ್ತಾರೆ. ಅಲ್ಲದೆ ನೈಜವಲ್ಲದ ವಸ್ತುಗಳನ್ನು ನೋಡುವ, ಕೇಳುವ, ವಾಸನೆ ಗ್ರಹಿಸುವ ಅಥವಾ ಅನುಭವಿಸುವ ಭ್ರಮೆಗಳನ್ನು ಒಳಗೊಂಡಿರುತ್ತದೆ.
ಅಧ್ಯಯನ ನಡೆಸಿದ್ದು ಹೇಗೆ?
ಸ್ಕಿಜೋಫ್ರೇನಿಯಾ ಲಕ್ಷಣ ಹೊಂದಿದ್ದ ಎರಡು ಗುಂಪುಗಳನ್ನು ಪ್ರತ್ಯೇಕಿಸಿ ಒಂದು ಗುಂಪಿಗೆ ಬೆಕ್ಕಿನ ಜೊತೆ ವ್ಯವಹರಿಸಲು ಅವಕಾಶ ನೀಡಲಾಗಿತ್ತು. ಇದಾದ ಬಳಿಕ ಬೆಕ್ಕಿನ ಜೊತೆ ಬೆರೆತ್ತಿದ್ದ ಗುಂಪಿನಲ್ಲಿ ಸ್ಕಿಜೋಫ್ರೇನಿಯಾ ಲಕ್ಷಗಳು ಗಣನೀಯವಾಗಿ ಏರಿಕೆಯಾಗಿತ್ತು. ಈ ಗುಂಪಿನಲ್ಲಿ ರೋಗದ ಲಕ್ಷಣಗಳು ಎರಡು ಪಟ್ಟು ಹೆಚ್ಚಳವಾಗಿತ್ತು.
ಬೆಕ್ಕಿನಲ್ಲಿದೆ ಪರಾವಲಂಬಿ ಸೂಕ್ಷ್ಮಾಣು!
ಬೆಕ್ಕಿನ ಜೊತೆಗಿನ ಅವಲಂಬಿತರಲ್ಲಿ ಈ ಲಕ್ಷಣ ಹೆಚ್ಚಲು ಕಾರಣವೂ ಪತ್ತೆಯಾಗಿತ್ತು. ಟಾಕ್ಸೊಪ್ಲಾಸ್ಮಾ ಗೊಂಡಿ (ಟೊಕ್ಸೊಪ್ಲಾಸ್ಮಾ ಗೊಂಡಿ ಎಂಬುದು ಕರುಳಿನ ಕೋಕ್ಸಿಡಿಯಮ್ ಆಗಿದ್ದು, ಇದು ಬೆಕ್ಕಿನ ಜಾತಿಗೆ ಸೇರಿರುವ ಪ್ರಾಣಿಗಳನ್ನು ಸದಸ್ಯರಾಗಿ ಹೊಂದಿದೆ) ಎಂಬ ಪರಾವಲಂಬಿ ಸೂಕ್ಷ್ಮಾಣುವಿನಿಂದ ಹರಡಿದೆ ಎಂದು ತಿಳಿದುಬಂದಿದೆ.
ಪರಾವಲಂಬಿ ಸೂಕ್ಷ್ಮಾಣುಗಳು ತಮ್ಮ ಶಕ್ತಿ ಹೆಚ್ಚಳ ಅಥವಾ ಬಲ ಹೆಚ್ಚಿಸಿಕೊಳ್ಳಲು ಮತ್ತೊಂದು ದೇಹದ ಅಗತ್ಯವಿರುತ್ತದೆ. ಇವು ಬಿಸಿ ರಕ್ತ ಜೀವಿಗಳ ಆಶ್ರಯ ಪಡೆದು ಜೀವ ಕಣಗಳ ಮೇಲೆ ಹಾನಿ ಮಾಡುತ್ತವೆ ಎಂದು ಸಾಬೀತಾಗಿದೆ. ಈ ಪರಾವಲಂಬಿಗಳು ಬೆಕ್ಕಿನಿಂದ ಸ್ಕಿಜೋಫ್ರೇನಿಯಾ ಲಕ್ಷಣ ಹೊಂದಿದ್ದವರ ದೇಹ ಸೇರಿರಬಹುದು ಎಂದು ಅಂದಾಜಿಸಲಾಗಿದೆ.
ಬೆಕ್ಕು ಕಚ್ಚಿದರೆ ಅಪಾಯವೇ?
ಈ ಪರಾವಲಂಬಿಯು ಬೆಕ್ಕಿನ ಕಚ್ಚುವಿಕೆಯ ಮೂಲಕ ದೇಹವನ್ನು ಪ್ರವೇಶಿಸಬಹುದು ಅಥವಾ ಬೆಕ್ಕಿನ ಜೊಲ್ಲು, ಮೂತ್ರ, ಕಲುಷಿತ ನೀರು ಅಥವಾ ಬೇಯಿಸದ ಮಾಂಸದ ಮೂಲಕ ಆಶ್ರಯಿತ ದೇಹ ಸೇರಬಹುದು. ಹೀಗಾದರೆ ಬೆಕ್ಕುಗಳು ಕಚ್ಚಿದಾಗ ಅವುಗಳ ದೇಹದಲ್ಲಿರುವ ಪರಾವಲಂಬಿ ಸೂಕ್ಷ್ಮಾಣುಗಳು ನಮ್ಮ ದೇಹ ಸೇರಲಿವೆ. ಆದರೆ ಈ ಪರಾವಲಂಬಿಗಳ ವಿರುದ್ಧ ನಮ್ಮ ದೇಹದಲ್ಲಿ ಹೋರಾಡಲು ಅಗತ್ಯ ಸೈನಿಕ ಕಣಗಳೂ ಇವೆ.
ಸ್ಕಿಜೋಫ್ರೇನಿಯಾಕ್ಕೆ ಚಿಕಿತ್ಸೆ
ಸಾಮಾನ್ಯವಾಗಿ ಪ್ರೌಢಾವಸ್ಥೆಯಲ್ಲಿ ಸ್ಕಿಜೋಫ್ರೇನಿಯಾ ಸಮಸ್ಯೆಗೆ ಒಳಗಾಗುವವರೇ ಹೆಚ್ಚು. ಈ ಕಾಯಿಲೆಯನ್ನು ತಕ್ಷಣ ಗುಣಪಡಿಸಲು ಸಾಧ್ಯವಿಲ್ಲ. ನಿಯಮಿತ ಚಿಕಿತ್ಸೆ, ಆಪ್ತ ಸಮಾಲೋಚನೆಯ ಬಳಿಕ ಮನೋವ್ಯಾಧಿಯಿಂದ ದೂರಾಗಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications