Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಕೇರಳದ 40 ವರ್ಷದ ಮಹಿಳೆಯಲ್ಲಿ ನಿಫಾ ವೈರಸ್ ದೃಢ: ಇದು ಹರಡುವುದು ಹೇಗೆ ಗೊತ್ತಾ?
ಹಲವು ವರ್ಷದಿಂದ ಕಾಡುತ್ತಿರುವ ವಿಶ್ವದ ದೊಡ್ಡ ವೈರಸ್‌ಗಳಲ್ಲಿ ನಿಫಾ ಕೂಡ ಆಗಾಗ ಹರಡುತ್ತಿರುವುದು ನೋಡಬಹುದು. ಈಗಕ ಕೇರಳದ ಪಲಪ್ಪುರಂ ಜಿಲ್ಲೆಯ ಮಹಿಳೆಯೊಬ್ಬರಲ್ಲಿ ಈ ನಿಪಾ ವೈರಸ್ ಕಂಡುಬಂದಿದೆ. ವಲಂಚೇರಿಯ 42 ವರ್ಷದ ಮಹಿಳೆಯೊಬ್ಬರಲ್ಲಿ ಈ ವೈರಸ್ ವರದಿಯಾಗಿದೆ ಎಂದು ಆರೋಗ್ಯ ಇಲಾಖೆ ದೃಢಪಡಿಸಿದೆ.
ಪ್ರಸ್ತುತ ಮಹಿಳೆ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಒಂದು ವಾರದ ಹಿಂದೆ ಅವರು ತೀವ್ರ ಜ್ವರದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಹಾಗೆ ಉಸಿರಾಟದ ಸಮಸ್ಯೆಗೂ ಒಳಗಾಗಿದ್ದರು. ನಂತರ ಅವರ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಆರಂಭದಲ್ಲಿ ಕೋಝಿಕ್ಕೋಡ್ ಮೈಕ್ರೋಬಯಾಲಜಿ ಲ್ಯಾಬ್ ಮತ್ತು ನಂತರ ಪುಣೆಯ ವೈರಾಲಜಿ ಲ್ಯಾಬ್‌ಗೆ ಕಳುಹಿಸಲಾಗಿತ್ತು.

ನಿಫಾ ವೈರಸ್ ಎಂದರೇನು?
ನಿಫಾ ವೈರಸ್ ಪ್ರಾಣಿಗಳಿಂದ ಹರಡುವ ವೈರಸ್ ಆಗಿದೆ. ಮುಖ್ಯವಾಗಿ ಬಾವಲಿಗಳು, ಹಂದಿಗಳು, ಮೇಕೆಗಳು, ಕುದುರೆಗಳು, ನಾಯಿಗಳು, ಬೆಕ್ಕುಗಳಿಂದ ಹರಡಬಹುದು ಎಂದು ಹೇಳಲಾಗಿದೆ. ಈ ವೈರಸ್ ಸೋಂಕಿತ ಪ್ರಾಣಿಯ ಮಲ, ಮಾಂಸ, ರಕ್ತ, ಮೂತ್ರ, ಲಾಲಾ ರಸದಂತಹ ದೈಹಿಕ ದ್ರವಗಳೊಂದಿಗೆ ಸಂಪರ್ಕಕ್ಕೆ ಬಂದಾಗ ಹರಡುತ್ತದೆ ಎಂದು ತಿಳಿದುಬಂದಿದೆ.
ಮಹಿಳೆ ಮತ್ತು ಆಕೆಯ ಕುಟುಂಬ ವಲಂಚೇರಿ ಪುರಸಭೆಯ ಎರಡನೇ ವಾರ್ಡ್‌ನಲ್ಲಿ ವಾಸಿಸುತ್ತಿದ್ದಾರೆ. ಅವರು ಸುಮಾರು ಒಂದು ತಿಂಗಳಿನಿಂದ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದರು. ವಿವಿಧ ಪರೀಕ್ಷೆಗಳ ನಂತರ ನಿಪಾ ಪರೀಕ್ಷೆಯನ್ನು ನಡೆಸಲಾಗಿತ್ತು. ಒಂದು ವಾರದಿಂದ ಪೆರಿಂಥಲ್ಮನ್ನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಳೆದ ವರ್ಷ ಮಲಪ್ಪುರಂನಲ್ಲಿ ನಿಪಾದಿಂದ ಇಬ್ಬರು ಮೃತಪಟ್ಟಿದ್ದರು. ಈಗ ಮತ್ತೊಂದು ಪ್ರಕರಣ ದಾಖಲಾಗಿದೆ. ಸದ್ಯ ರೋಗಿಯ ಸಂಪರ್ಕದಲ್ಲಿದ್ದವರು ಮಾದರಿ ಸಹ ಸಂಗ್ರಹಿಸಲಾಗಿದೆ ಎಂದು ವರದಿಯಾಗಿದೆ.
ಮನುಷ್ಯರು ಸೋಂಕಿತ ಪ್ರಾಣಿಯ ರಕ್ತ, ಮಲ, ಮೂತ್ರ ಅಥವಾ ಲಾಲಾರಸದಂತಹ ದೈಹಿಕ ದ್ರವಗಳೊಂದಿಗೆ ಸಂಪರ್ಕದಲ್ಲಿರುವಾಗ. ಅಥವಾ ಸೋಂಕಿತ ಪ್ರಾಣಿ ತಿಂದು ಬಿಟ್ಟ ಆಹಾರ ಸೇವಿಸುವುದು ಕೂಡ ನಿಪಾ ವೈರಸ್ ಹರಡುವಿಕೆಗೆ ಕಾರಣವಾಗಲಿದೆ.
ನಿಫಾ ವೈರಸ್ ಲಕ್ಷಣವೇನು ಗೊತ್ತಾ?
- ಅಧಿಕ ಜ್ವರ
- ತಲೆನೋವು
- ಉಸಿರಾಟದ ತೊಂದರೆಗಳು
- ಕೆಮ್ಮು ಮತ್ತು ಗಂಟಲು ನೋವು
- ಅತಿಸಾರ
- ವಾಂತಿ
- ಸ್ನಾಯು ನೋವು
- ಗೊಂದಲ ಮತ್ತು ದಿಗ್ಭ್ರಮೆ
- ಮಾತು ಅಸ್ಪಷ್ಟತೆ
- ಮೂರ್ಛೆ
- ಕೋಮಾ
- ಉಸಿರಾಟದ ಸಮಸ್ಯೆ
ವೈರಸ್‌ಗೆ ತುತ್ತಾದ ಮಂದಿ 14 ದಿನಗಳಲ್ಲಿ ಈ ಎಲ್ಲಾ ಲಕ್ಷಣಗಳಿಗೆ ಒಳಗಾಗುತ್ತಾರೆ. ಮೊದಲು ಜ್ವರ ಕಾಣಿಸಿಕೊಳ್ಳುತ್ತದೆ. ಹಾಗೆ ತೀವ್ರ ತಲೆನೋವು, ಉಸಿರಾಟ ಸಮಸ್ಯೆ ತೀವ್ರವಾಗುತ್ತದೆ. ತೀವ್ರ ತರವಾದ ಪ್ರಕರಣಗಳಲ್ಲಿ ಮೆದುಳಿನ ಅಸ್ವಸ್ಥತೆ ಅಥವಾ ಕೋಮಾಗೂ ಹೋಗುವ ಸಾಧ್ಯತೆಗಳಿರಲಿದೆ.
ವೈದ್ಯರ ಪ್ರಕಾರ ನಿಫಾ ವೈರಸ್ ಹೆಚ್ಚು ಸಾಂಕ್ರಾಮಿಕವಾಗಿದ್ದು ಲಾಲಾರಸ, ಮಲ, ಮೂತ್ರ ವಿಸರ್ಜನೆ ಮತ್ತು ರಕ್ತದಂತಹ ದೈಹಿಕ ದ್ರವಗಳ ಮೂಲಕ ಹರಡಬಹುದು. ಸೋಂಕಿತ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ, ರಕ್ತದಾನದಂತಹ ಸಮಯದಲ್ಲೂ ಇದು ಹರಡಬಹುದು. ವೈರಸ್ ಮುಖ್ಯವಾಗಿ ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ. ಹಾಗೆ ವ್ಯಕ್ತಿಯಿಂದ ವ್ಯಕ್ತಿಗೂ ಕೂಡ ಹರಡುತ್ತದೆ. ಹೀಗಾಗಿ ಸೋಂಕಿತ ವ್ಯಕ್ತಿ ತೀವ್ರ ನಿಗಾ ಘಟಕದಲ್ಲಿ ಅಥವಾ ಕ್ವಾರಂಟೈನ್‌ನಲ್ಲಿ ಚಿಕಿತ್ಸೆ ಪಡೆಯಬೇಕಾಗುತ್ತದೆ.
ನಿಫಾಗೆ ಚಿಕಿತ್ಸೆ ಏನು?
- ನಿಫಾಗೆ ಯಾವುದೇ ಖಚಿತ ಚಿಕಿತ್ಸೆ ಅಥವಾ ಆಂಟಿ ವೈರಸ್ ಔಷಧಿ ಇಲ್ಲ. ಹೀಗಾಘಿ ರೋಗ ಹರಡದಂತೆ ಎಚ್ಚರಿಕೆ ವಹಿಸುವುದು ಮುಖ್ಯವಾಗುತ್ತದೆ. ಹಾಗೆ ಸಾಮಾನ್ಯ ಜ್ವರಕ್ಕೆ ನೀಡುವ ಚಿಕಿತ್ಸೆ ನೀಡಲಾಗುತ್ತದೆ.
- ನೀರು ಹೆಚ್ಚಾಗಿ ಕುಡಿಯುವುದು
- ರೋಗ ನಿರೋಧಕ ಶಕ್ತಿ ಹೆಚ್ಚಿಸುವಂತಹ ಆಹಾರ ಸೇವಿಸುವುದು
- ಅಸೆಟಾಮಿನೋಫೆನ್ ಅಥವಾ ಐಬುಪ್ರೊಫೇನ್ ತೆಗೆದುಕೊಳ್ಳುವುದು
- ಆಸ್ಪತ್ರೆಯಲ್ಲಿ ವೈದ್ಯರ ಸಲಹೆಯ ಮೇರೆಗೆ ಔಷದೋಪಚಾರ ಪಡೆಯುವುದು
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
