Latest Updates
-
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ?
ಒಂದೇ ವಾರದಲ್ಲಿ ನಿಪಾ ವೈರಸ್ ಏರಿಕೆ, ಇಬ್ಬರು ಐಸಿಯುಗೆ; 100 ಮಂದಿಗೆ ಹೋಮ್ ಕ್ವಾರಂಟೈನ್
ವೈರಸ್‌ಗಳು ಹರಡುವಿಕೆಯಿಂದ ಉಂಟಾಗುವ ಅನಾರೋಗ್ಯವು ಹಲವು ಸಮಸ್ಯೆಗಳ ತರುವುದು ನೋಡಿರುತ್ತೇವೆ. ಹತ್ತಾರು ರೀತಿಯ ವೈರಸ್‌ಗಳು ಈಗ ಜನರನ್ನು ಕಾಡುತ್ತಿವೆ. ಅದ್ರಲ್ಲೂ ಕೆಲ ವರ್ಷದಿಂದ ನಿಪಾ ವೈರಸ್ ಜನರ ಹಿಂದೆ ಬಿದ್ದಿದೆ. ಇತ್ತಿಚಿಗೆ ಮತ್ತೆ ನಿಪಾ ವೈರಸ್ ಹರಡುವಿಕೆ ಕೇಳಿಬಂದಿದೆ. ಈಗ ಪಶ್ಚಿಮ ಬಂಗಾಳದಲ್ಲಿ 5 ನಿಫಾ ವೈರಸ್ ಪ್ರಕರಣ ವರದಿಯಾಗಿದೆ.
ಪಶ್ಚಿಮ ಬಂಗಾಳದಲ್ಲಿ ಕೇವಲ ಒಂದು ವಾರದಲ್ಲಿ ಐದು ನಿಪಾ ವೈರಸ್ ವರದಿಯಾಗಿದೆ. ಹಾಗೆ ಉತ್ತರ ಪ್ರದೇಶದ 24 ಪರಗಣ ಜಿಲ್ಲೆಯ ಬರಾಸತ್ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಸಿಬ್ಬಂದಿಯಲ್ಲಿ ಈ ವೈರಸ್ ವರದಿಯಾಗಿದ್ದು, ಇಬ್ಬರು ಈಗ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಇದರ ಜೊತೆಗೆ ಮೂರು ಹೊಸ ಪ್ರಕರಣಗಳು ಕೂಡ ವರದಿಯಾಗಿವೆ.

ಈ ಪ್ರಕರಣಗಳು ವರದಿಯಾಗುತ್ತಿದ್ದಂತೆಯೇ ಅಧಿಕಾರಿಗಳು ಅಲರ್ಟ್ ಆಗಿದ್ದು ಸುಮಾರು 100 ಜನರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಇದು ಅಲ್ಲಿನ ಜನರಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ. ಐಸಿಯುನಲ್ಲಿರುವ ಓರ್ವ ಪುರುಷ ಹಾಗೆ ಮತ್ತೋರ್ವ ಮಹಿಳಾ ನರ್ಸ್ ಸ್ಥಿತಿ ಗಂಭೀರ ಎಂದು ತಿಳಿದುಬಂದಿದೆ.
ನಿಪಾ ವೈರಸ್ ಕೆಲವು ಜಾತಿಯ ಬಾವಲಿಗಳಿಂದ ಹರಡುತ್ತದೆ. ಈ ಹರಡುವಿಕೆಯನ್ನು ಝೂನೋಸಿಸ್ ಎಂದು ಕರೆಯಲಾಗುತ್ತದೆ.
ಈ ಸಮಸ್ಯೆ ನಗರಕ್ಕಿಂತ ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ವರದಿಯಾಗುತ್ತದೆ. ಆದ್ರೆ ಗ್ರಾಮೀಣ ಭಾಗದಲ್ಲಿ ಬೆಳೆದ ಹಣ್ಣು, ತರಕಾರಿ ನಗರ ಸೇರುವುದು ಸಹ ಈ ಭಾಗದಲ್ಲು ಪ್ರಕರಣ ಏರಿಕೆಗೆ ಕಾರಣವಾಗುತ್ತಿದೆ. ಬಾವಲಿಗಳು ತಿನ್ನುವ ಹಣ್ಣು, ತರಕಾರಿಗಳನ್ನು ಸೇವಿಸುವುದು ಪ್ರಾಥಮಿಕ ಸಂಪರ್ಕ ಎಂದು ಪರಿಗಣಿಸಲಾಗಿದೆ.
ಇತ್ತೀಚನ ಕೆಲ ವರ್ಷದಿಂದ ಕೇರಳದಲ್ಲಿ ಈ ಪ್ರಕರಣಗಳ ಸಂಖ್ಯೆ ಹೆಚ್ಚಾಗಿತ್ತು. ಆದ್ರೆ ಈಗ ದೇಶದ ಎಲ್ಲಾ ಭಾಗದಲ್ಲು ಇದು ಹರಡಿಕೊಂಡಿದೆ. ನಿಪಾ ವೈರಸ್ (NiV) ಪ್ರಾಣಿಗಳು ಮತ್ತು ಜನರ ನಡುವೆ ಹರಡುವ ವೈರಸ್ ಆಗಿದೆ. ಹಾಗೆ ವ್ಯಕ್ತಿಯಿಂದ ವ್ಯಕ್ತಿಗೆ ಸಹ ಇದು ನೇರವಾಗಿ ಹರಡಬಹುದು. ಯಕ್ತಿಗೆ ಹರಡಬಹುದು. ಈ ವೈರಸ್ ಸೋಂಕಿತರಲ್ಲಿ ಉಸಿರಾಟ ಸಮಸ್ಯೆಯಿಂದ ಹಿಡಿದು ಹಲವು ರೀತಿ ಸಮಸ್ಯೆ ಎದುರಾಗಲಿದೆ. ಹಾಗೆ ಕೆಲವರಲ್ಲಿ ಇದು ಲಕ್ಷಣ ರಹಿತ ಸಮಸ್ಯೆಗಳು ಸಹ ಕಂಡುಬರುತ್ತದೆ.
ಈ ವೈರಸ್ ಲಾಲಾರಸ, ಮಲ, ಮೂತ್ರ ಮತ್ತು ರಕ್ತದಂತಹ ದೈಹಿಕ ದ್ರವಗಳ ಮೂಲಕ ಹರಡಬಹುದು. ಈ ಸೋಂಕಿಗೆ ತುತ್ತಾದ ವ್ಯಕ್ತಿಯು ಸೀನಿದಾಗ, ಕೆಮ್ಮಿದಾಗ ಅಥವಾ ಆತನೊಂದಿಗೆ ನೀವು ಸಂಪರ್ಕದಲ್ಲಿದ್ದಾಗ ಈ ರೀತಿ ಸಮಸ್ಯೆ ಎದುರಿಸಬಹುದು. ಹಾಗೆ ಈ ವೈರಸ್ ಸಮಸ್ಯೆಯಿಂದ ಬಳಲುವ ವ್ಯಕ್ತಿ ಸೂಕ್ತ ಸಮಯದಲ್ಲಿ ಚಿಕಿತ್ಸೆಗೆ ಒಳಗಾಗದಿದ್ದರೆ ಪ್ರಾಣಕ್ಕೂ ಸಂಚಕಾರ ಬರಲಿದೆ.
ನಿಪಾ ವೈರಸ್ ಲಕ್ಷಣಗಳು
ಮೆದುಳಿನಲ್ಲಿ ಉರಿಯೂತದ ಸಮಸ್ಯೆ ಉಂಟಾಗುವುದು.
ನಿಪಾ ವೈರಸ್ ತಗುಲಿದ ವ್ಯಕ್ತಿಯಲ್ಲಿ ಸೋಂಕಿನ ಲಕ್ಷಣಗಳು 4-14 ದಿನಗಳಲ್ಲಿ ಕಂಡು ಬರುವುದು. ಕಾಯಿಲೆಯ ಲಕ್ಷಣಗಳು 3-14 ದಿನಗಳವರೆಗೆ ಇರುತ್ತದೆ.
ಜ್ವರ, ತಲೆನೋವು, ಸುಸ್ತು, ತಲೆ ಸುತ್ತು, ಗೊಂದಲ ಕಂಡು ಬರುವುದು.
ಈ ಲಕ್ಷಣಗಳು ಕಂಡು ಬಂದರೆ 24-48 ಗಂಟೆಗಳಲ್ಲಿಯೇ ವ್ಯಕ್ತಿ ಕೋಮಾಕ್ಕೆ ಜಾರಬಹುದು.
ಕೆಲ ಸೋಂಕಿತರಲ್ಲಿ ರೋಗ ಲಕ್ಷಣಗಳು ಕಂಡು ಬಂದಾಗಲೇ ಉಸಿರಾಟದ ತೊಂದರೆ ಕೂಡ ಕಾಣಿಸುವುದು.
ತುಂಬಾ ರೋಗಿಗಳಲ್ಲಿ ನರದ ಸಮಸ್ಯೆ ಹಾಗೂ ಶ್ವಾಸಕೋಶದ ಸಮಸ್ಯೆ ಕಂಡು ಬರುವುದು.
ನಿಪಾ ವೈರಸ್ ಹರಡುವಿಕೆ ತಡೆಯುವುದು ಹೇಗೆ?
ಕೈಗಳನ್ನು ಆಗಾಗ್ಗೆ ತೊಳೆಯುವುದು
ಅನಾರೋಗ್ಯ ಪೀಡಿತ ಹಂದಿಗಳು ಅಥವಾ ಬಾವಲಿಗಳೊಂದಿಗಿನ ಸಂಪರ್ಕ ತಡೆಯುವುದು
ಹಂದಿ ಸಾಕಣೆ ಕೇಂದ್ರಗಳನ್ನು ಸ್ವಚ್ಛಗೊಳಿಸಿ ಮತ್ತು ಸೋಂಕುರಹಿತಗೊಳಿಸುವುದು
ಬಾವಲಿಗಳು ವಾಸವಿರುವ ಮರಗಳು, ಅದರ ಹಣ್ಣುಗಳಿಂದ ಅಂತರ ಕಾಪಾಡಕೊಳ್ಳುವುದು
ಹಣ್ಣುಗಳನ್ನು ತೊಳೆದು ಸವಿಯುವುದು ಉತ್ತಮ.



Click it and Unblock the Notifications