Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬಾವಲಿಯಿಂದ ಹರಡುವ ಕೋವಿಡ್ ರೀತಿಯ ಹೊಸ ವೈರಸ್ ಪತ್ತೆ.! ವಿಜ್ಞಾನಿಗಳು ಹೇಳೋದೇನು?
ಬಾವಲಿಗಳಿಂದ ಹತ್ತು ಹಲವು ರೀತಿಯ ರೋಗಗಳು ಹರಡುವುದು ನೋಡಬಹುದು. ಅದರಲ್ಲೂ ಬಾವಲಿಗಳಿಂದ ಹರಡುವ ವೈರಾಣುಗಳು ಜೀವಕ್ಕೆ ಅಪಾಯ ತರುವಂತಹ ಕಾಯಿಲೆಗಳಿಗೆ ಕಾರಣವಾಗುತ್ತವೆ. ಈಗ ಬಾವಲಿಗಳಿಂದ ಹೊಸ ಕೊರೊನಾ ವೈರಸ್ ಹರಡುವಿಕೆ ಆರಂಭವಾಗಿದೆ ಎಂದು ವರದಿಯಾಗಿದೆ. ಬ್ರೆಜಿಲ್‌ನಲ್ಲಿ ಈ ರೀತಿ ಹೊಸ ಕೊರೊನಾ ವೈರಸ್ ಕಂಡುಬಂದಿದೆ.
ಈ ಹೊಸ ಕೊರೊನಾ ಕೊರೊನಾ ವೈರಸ್ ಮಾರಕ MERS ವೈರಸ್‌ನೊಂದಿಗೆ ಹೋಲಿಕೆ ಕಂಡುಬಂದಿದೆ ಎಂದು ವರದಿಯಾಗಿದೆ. ಆದರೆ ಮಾನವರಿಗೆ ಇದು ಹರಡುತ್ತಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಸಾವೊ ಪಾಲೊ ಸಂಶೋಧಕರು ಈ ಹೊಸದಾಗಿ ಕಾಣಿಸಿಕೊಂಡಿರುವ ಕೊರೊನಾ ವೈರಸ್ ಉಸಿರಾಟದ ಸಮಸ್ಯೆ ತರುವಂತಹ Mers-CoV ನೊಂದಿಗೆ ಹೋಲಿಕೆ ಹೊಂದಿದೆ. ಅಂದರೆ ಇದು ಕುಡ ಕೋವಿಡ್ -19 ಗೆ ಕಾರಣವಾಗುವ ವೈರಸ್‌ನಂತೆಯೇ ಜೀವಕೋಶಗಳನ್ನು ಪ್ರವೇಶಿಸುತ್ತದೆ ಎಂದು ಹೇಳಿದ್ದಾರೆ.

ಈ ಮೊದಲು 2012 ರಲ್ಲಿ ಸೌದಿ ಅರೇಬಿಯಾದಲ್ಲಿ ಗುರುತಿಸಲಾಯಿತು ಮತ್ತು 850ಕ್ಕೂ ಹೆಚ್ಚು ಜನರ ಪ್ರಾಣಹಾನಿಗೆ ಕಾರಣವಾಗಿತ್ತು. ಎರಡು ಡಜನ್‌ಗಿಂತಲೂ ಹೆಚ್ಚು ದೇಶಗಳಲ್ಲಿ ಸೋಂಕಿನ ಪ್ರಕರಣಗಳು ಕೂಡ ವರದಿಯಾಗಿತ್ತು. ಹಾಗೆ ಈ ವೈರಸ್‌ನಿಂದ ಉಂಟಾಗಲಿರುವ ಹಾನಿಗಳು ಹಾಗೂ ಅದರ ಪ್ರಭಾವವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅಧ್ಯಯನಕ್ಕೊಳಪಡಿಸಲು ಹಾಂಗ್‌ಕಾಂಗ್‌ನಲ್ಲಿ ಪ್ರಯೋಗ ನಡೆಸಲು ಮುಂದಾಗಲಾಗಿದೆ ಎಂದು ತಿಳಿದುಬಂದಿದೆ.
ಈ ಅಧ್ಯಯನದಲ್ಲಿ ಹೊಸ ವೈರಸ್‌ನ ಲಕ್ಷಣವೇನು? ಯಾವೆಲ್ಲಾ ಪ್ರಾಣಿಗಳಿಗೆ ಹರಡಬಹುದು, ಹಾಗೆ ಮನುಷ್ಯರಿಗೆ ಹರಡುವ ಅಪಾಯ ಎಷ್ಟಿದೆ ಎಂಬುದನ್ನು ಪತ್ತೆ ಮಾಡಲು ಸಹಕಾರಿಯಾಗಲಿದೆ. ಹಾಗೆ ಈ ವೈರಸ್ ಮೆರ್ಸ್ ಕೊವಿ ಜೀನೋಮ್‌ಗೆ ಸುಮಾರು ಶೇ. 72ರಷ್ಟು ಹೋಲಿಕೆಯಾಗುವಂತಹ ಅನುವಂಶೀಯ ಅನುಕ್ರಮಗಳ ಹೊಂದಿದೆ ಅಂತಲೂ ತಿಳಿದುಬಂದಿದೆ. ಹಾಗೆ ಈ ಪರೀಕ್ಷೆಗಳಲ್ಲಿ ಬಾವಲಿಯಲ್ಲಿ ಕಂಡುಬಂದಿರುವ ವೈರಸ್ ರೂಪಾಂತರವಾಗಲಿವೆಯೇ ಎಂಬ ಕುರಿತಂತೆಯೂ ಅಧ್ಯಯದನ ಮೂಲಕ ತಿಳಿಯಲು ಮುಂದಾಗಲಾಗಿದೆ.
ಸದ್ಯ ಈ ಅಧ್ಯಯನಕ್ಕಾಗಿ 16 ವಿಭಿನ್ನ ಬಾವಲಿ ಜಾತಿಗಳಿಂದ 423 ಮೌಖಿಕ ಮತ್ತು ಗುದನಾಳದ ಸ್ವ್ಯಾಬ್‌ಗಳನ್ನು ಪರೀಕ್ಷಿಸಲಾಗಿದೆ ಮತ್ತು ಈಶಾನ್ಯ ಬ್ರೆಜಿಲ್‌ನ ಫೋರ್ಟಲೆಜಾ ನಗರದಲ್ಲಿ ಸಂಗ್ರಹಿಸಲಾದ ಬಾವಲಿಗಳ 5 ಮಾದರಿಗಳಲ್ಲಿ 7 ಕೊರೊನಾ ವೈರಸ್ ಮಾದರಿಯ ಇರುವುದು ಪತ್ತೆಯಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಇದು ಮಾನವರು ಹಾಗೂ ಒಂಟೆಗಳಲ್ಲಿ ಕಂಡುಬರುವ ಮೆರ್ಸ್ ಸಂಬಂಧಿತ ಕೊರೊನಾ ವೈರಸ್ ತಳಿಗಳಿಗೆ ಹೆಚ್ಚಿನ ಹೋಲಿಕೆ ಹೊಂದಿದೆ ಎಂದು ವಿಜ್ಙಾನಿಗಳು ಕಂಡುಕೊಂಡಿದ್ದಾರೆ.
ಆತಂಕ ಹುಟ್ಟಿಸಿತ್ತು ಬಾವಲಿಯಿಂದ ಹರಡುವ ನಿಪಾ
ನಿಪಾ ವೈರಸ್ ಭಾರತದಲ್ಲಿ ಆತಂಕ ಹುಟ್ಟಿಸಿತ್ತು ಇದು ಕೂಡ ಬಾವಲಿಗಳಿಂದಲೇ ಹರಡುತ್ತಿದ್ದ ಕಾರಣದಿಂದಾಗಿ ಅದರ ಹರಡುವಿಕೆಯ ವೇಗ ಹೆಚ್ಚಾಗಿತ್ತು, ಅದರಲ್ಲೂ ಕೇರಳದಲ್ಲಿ ಇದು ಬಹಳ ಆತಂಕಕ್ಕೆ ಕಾರಣವಾಗಿತ್ತು. ಮಲಪ್ಪುರಂನ ಖಾಸಗಿ ಆಸ್ಪತ್ರೆಯಲ್ಲಿ 24 ವರ್ಷದ ವ್ಯಕ್ತಿ ನಿಪಾ ವೈರಸ್‌ಗೆ ಮೃತಪಟ್ಟಿದ್ದ ಇದು ನಿಪಾದಿಂದ ಉಂಟಾಗಿದ್ದ 2ನೇ ಸಾವಿನ ಪ್ರಕರಣ ಆಗಿತ್ತು. ಇದಕ್ಕೂ ಮೊದಲು 14 ವರ್ಷದ ಬಾಲಕನೊಬ್ಬ ನಿಪಾ ವೈರಸ್ ತಗುಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದ. ಇದು ಭಾರತದಲ್ಲಿ ವರದಿಯಾಗಿದ್ದ ಮೊದಲ ಪ್ರಕರಣವಾಗಿತ್ತು.
ಸದ್ಯ ಈಗ ಪತ್ತೆ ಮಾಡಲಾಗಿರುವ ವೈರಸ್ ಕೂಡ ಹೆಚ್ಚು ಅಪಾಯಕಾರಿಯಾಗಬಹುದೇ ಎಂಬ ಆತಂಕ ಕೂಡ ಇದೆ. ಇನ್ನು ತಿಂಗಳ ಆರಂಭದಲ್ಲಿ ಚೀನಾದಲ್ಲಿ ಸಹ ಈ ರೀತಿಯ ಹೊಸ ವೈರಸ್ ಪತ್ತೆಯಾಗಿತ್ತು. ಬ್ಯಾಟ್‌ವುಮನ್ ಎಂದು ಕರೆಯಲ್ಪಡುವ ಪ್ರಸಿದ್ಧ ವಿಜ್ಞಾನಿ ಶಿ ಝೆಂಗ್ಲಿ ನೇತೃತ್ವದ ವೈರಾಲಜಿಸ್ಟ್‌ಗಳ ತಂಡವು ಹೊಸದಾಗಿ HKU5-CoV-2 ಎಂಬ ವೈರಸ್ ಪತ್ತೆ ಮಾಡಿದ್ದರು. ಇದು ಕೂಡ ಕೋವಿಡ್ ಮಾದರಿಯನ್ನೇ ಹೋಲುತ್ತಿತ್ತು. ಇದು ಕೋವಿಡ್ ಮಾಡಿದಂತೆಯೇ ACE2 ಎಂಬ ಮಾನವ ಜೀವಕೋಶಗಳಿಗೆ ನುಸುಳಬಹುದು ಎಂದು ಕೂಡ ಹೇಳಲಾಗಿತ್ತು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications









