Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹೊಕ್ಕುಳಿಗೆ ಎಣ್ಣೆ ಏಕೆ ಹಚ್ಚಬೇಕು? ರಾತ್ರಿ ಮಲಗುವ ಮುನ್ನ ನಾಭಿಗೆ ಎಣ್ಣೆ ಹಾಕಿ.. ಈ ಅಚ್ಚರಿ ಪ್ರಯೋಜನ ನೋಡಿ
ಹೊಕ್ಕುಳಿಗೆ ಎಣ್ಣೆ ಹಾಕುವುದು ಏಕೆ ಮುಖ್ಯ? ಮಲಗುವ ಮುನ್ನ ನಾಭಿಗೆ ಎಣ್ಣೆ ಹಾಕುವ ಅಭ್ಯಾಸವಿದ್ದರೆ ಅದರ ಅದ್ಭುತ ಪ್ರಯೋಜನಗಳನ್ನು ತಿಳಿಯಿರಿ. ಹೌದು, ಹೊಕ್ಕುಳು ಮಾನವ ದೇಹದ ಶಕ್ತಿ ಕೇಂದ್ರ ಎಂದೇ ಗುರುತಿಸಿಕೊಂಡಿದೆ. ಇದು ಪ್ರಾಚೀನ ಆಯುರ್ವೇದದಲ್ಲಿ ತನ್ನದೇ ಆದ ಮಹತ್ವವನ್ನು ಪಡೆದುಕೊಂಡಿದೆ. ನಮ್ಮ ದೇಹದ ಹಲವಾರು ಪ್ರಮುಖ ನರನಾಳಗಳಿಗೆ ನೇರವಾಗಿ ಸಂಪರ್ಕಗೊಂಡಿರುವ ಹೊಕ್ಕಳಿಗೆ ರಾತ್ರಿ ಮಲಗುವ ಮುನ್ನ ಎಣ್ಣೆ (Oil in Navel) ಹಚ್ಚುವ ಅಭ್ಯಾಸ, ಆರೋಗ್ಯ ಮತ್ತು ಸೌಂದರ್ಯಕ್ಕೆ ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ.
ಹೊಕ್ಕುಳನ್ನು ಆರೋಗ್ಯದ ಮೂಲ ಎಂದು ಕರೆಯಲಾಗುತ್ತದೆ. ಹಿಂದಿನ ಕಾಲದಲ್ಲಿ ಜನರು ರಾತ್ರಿ ಮಲಗುವ ಮುನ್ನ ತಮ್ಮ ಹೊಕ್ಕಳಿಗೆ ಎಣ್ಣೆ ಹಾಕುವ ಅಭ್ಯಾಸವನ್ನು ಹೊಂದಿದ್ದರು. ಇದನ್ನು ತಮ್ಮ ಜೀವನದ ಒಂದು ಪ್ರಮುಖ ಭಾಗವಾಗಿ ಮಾಡಿಕೊಂಡಿದ್ದರು. ತಜ್ಞರು ಹೇಳುವಂತೆ, ಇದು ಕೇವಲ ಒಂದು ಸಾಂಪ್ರದಾಯಿಕ ಪರಿಹಾರವಲ್ಲ. ಬದಲಾಗಿ, ನಿಮ್ಮ ದೇಹ ಮತ್ತು ಮನಸ್ಸನ್ನು ಸಮತೋಲನದಲ್ಲಿಡಲು ಸಹ ಅತ್ಯಗತ್ಯ. ಈ ಲೇಖನದಲ್ಲಿ ಪ್ರತಿದಿನ ರಾತ್ರಿ ಮಲಗುವ ಮೊದಲು ಹೊಕ್ಕಳಿಗೆ ಎಣ್ಣೆ ಹಾಕುವುದರಿಂದ ಸಿಗುವ ಕೆಲವು ಪ್ರಯೋಜನಗಳ (Oil in Navel Benefits) ಬಗ್ಗೆ ತಿಳಿಸಲಾಗಿದೆ.

ಹೊಕ್ಕುಳಿಗೆ ಎಣ್ಣೆ ಹಚ್ಚುವುದರ ಪ್ರಯೋಜನಗಳು
ಸೌಂದರ್ಯ ವೃದ್ಧಿ ಅಥವಾ ಹೆಚ್ಚಿಸುತ್ತದೆ
ಅನೇಕ ಜನರು ತಮ್ಮ ಸೌಂದರ್ಯವನ್ನು ಹೆಚ್ಚಿಸಲು ಸಾವಿರಾರು ರೂಪಾಯಿಗಳ ಸೌಂದರ್ಯ ಉತ್ಪನ್ನಗಳನ್ನು ಬಳಸುತ್ತಾರೆ. ದುಬಾರಿ ಸೌಂದರ್ಯ ಉತ್ಪನ್ನಗಳಿಗೆ ಸಾವಿರಾರು ರೂಪಾಯಿ ಖರ್ಚು ಮಾಡುವ ಬದಲು, ಈ ನೈಸರ್ಗಿಕ ವಿಧಾನವು ಆಂತರಿಕ ಸೌಂದರ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಚರ್ಮದ ಶುಷ್ಕತೆ ನಿವಾರಿಸಿ, ನೈಸರ್ಗಿಕವಾಗಿ ಮೃದು ಮತ್ತು ಕಾಂತಿಯುತಗೊಳಿಸುತ್ತದೆ.
ಕೀಲು ನೋವಿನಿಂದ ಮುಕ್ತಿ
ಸಂಧಿವಾತ ಅಥವಾ ಸಾಮಾನ್ಯ ಕೀಲು ನೋವಿನಿಂದ ಬಳಲುತ್ತಿರುವವರಿಗೆ ಈ ಅಭ್ಯಾಸ ಉತ್ತಮ ಪರಿಹಾರ ನೀಡಬಲ್ಲದು. ಒಂದು ತಿಂಗಳ ಕಾಲ ನಿಯಮಿತವಾಗಿ ಹೊಕ್ಕುಳಿನ ಮೇಲೆ ಎಣ್ಣೆ ಹಾಕಿ ಮಸಾಜ್ ಮಾಡುವುದರಿಂದ ಕೀಲು ನೋವು ಕಡಿಮೆಯಾಗಿ, ಶಕ್ತಿ ದೊರೆಯುತ್ತದೆ. ಇದು ಮಸಾಜ್‌ನ ಶಾಂತಗೊಳಿಸುವ ಪರಿಣಾಮದಿಂದಾಗಿ ದೇಹದ ಬಿಗಿತವನ್ನು ಸಹ ಕಡಿಮೆ ಮಾಡುತ್ತದೆ. ಪ್ರತಿ ರಾತ್ರಿ ಮಲಗುವ ಮುನ್ನ ಹೊಕ್ಕುಳಿಗೆ ಎಣ್ಣೆ ಹಾಕಿ. ಇದನ್ನು ನಿಯಮಿತವಾಗಿ ಮಾಡುವುದರಿಂದ ಕೆಲವೇ ದಿನಗಳಲ್ಲಿ ಕೀಲು ನೋವಿನಿಂದ ಮುಕ್ತಿ ಸಿಗುತ್ತದೆ.
ಸೋಂಕುಗಳಿಂದ ರಕ್ಷಣೆ
ದೇಹದಲ್ಲಿ ಪದೇ ಪದೆ ಸೋಂಕುಗಳು ಬಿದ್ದರೆ ಅಥವಾ ಉಂಟಾಗುತ್ತಿದ್ದರೆ, ರಾತ್ರಿ ಮಲಗುವ ಮುನ್ನ ಹೊಕ್ಕುಳಿಗೆ ಎಣ್ಣೆ ಹಾಕುವುದು ಉತ್ತಮ. ಬೇವಿನ ಎಣ್ಣೆಯಂತಹ ಆ್ಯಂಟಿಬ್ಯಾಕ್ಟೀರಿಯಲ್ ಗುಣಲಕ್ಷಣಗಳಿರುವ ಎಣ್ಣೆಗಳು ಬ್ಯಾಕ್ಟೀರಿಯಾ ಬೆಳವಣಿಗೆಯನ್ನು ತಡೆಯಲು ಸಹಾಯ ಮಾಡುತ್ತವೆ. ಕೇವಲ ಒಂದು ತಿಂಗಳ ಕಾಲ ಈ ಅಭ್ಯಾಸವನ್ನು ಅನುಸರಿಸುವುದರಿಂದ ಸೋಂಕುಗಳಿಂದ ಉಂಟಾಗುವ ಸಮಸ್ಯೆಗಳನ್ನು ತಡೆಯಬಹುದು. ನಿಮ್ಮನ್ನು ರಕ್ಷಿಸಿಕೊಳ್ಳಬಹುದು.

ಮನಸ್ಸು ಮತ್ತು ದೇಹದ ಸಮತೋಲನ
ಎಣ್ಣೆ ಮಸಾಜ್‌ನ ಶಾಂತಗೊಳಿಸುವ ಪರಿಣಾಮದಿಂದಾಗಿ ಇದು ಮನಸ್ಸು ಮತ್ತು ದೇಹದ ಸಮತೋಲನವನ್ನು ಕಾಪಾಡುತ್ತದೆ. ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ.
ಬಳಸುವ ವಿಧಾನ ಮತ್ತು ಸೂಕ್ತ ಎಣ್ಣೆಗಳು
ಪ್ರತಿದಿನ ರಾತ್ರಿ ಮಲಗುವ ಮುನ್ನ 2-3 ಹನಿ ಎಣ್ಣೆಯನ್ನು ಹೊಕ್ಕುಳಿನ ಮೇಲೆ ಹಾಕಿ, ವೃತ್ತಾಕಾರದಲ್ಲಿ ನಿಧಾನವಾಗಿ ಒಂದು ನಿಮಿಷ ಮಸಾಜ್ ಮಾಡಿ.
• ಸಾಮಾನ್ಯ ಚರ್ಮ ಮತ್ತು ಸೌಂದರ್ಯಕ್ಕೆ: ತೆಂಗಿನ ಎಣ್ಣೆ, ಬಾದಾಮಿ ಎಣ್ಣೆ, ಆಲಿವ್ ಎಣ್ಣೆ ಅಥವಾ ಶುದ್ಧ ತುಪ್ಪ.
• ಕೀಲು ನೋವುಗಳಿಗೆ: ಸಾಸಿವೆ ಎಣ್ಣೆ ಅಥವಾ ಹರಳು ಎಣ್ಣೆ.
ಒಟ್ಟಾರೆ, ಹೊಕ್ಕುಳನ್ನು 'ಸೇಹತ್ ಕಿ ಜಡ್' ಅಂದರೆ 'ಆರೋಗ್ಯದ ಮೂಲ' ಎಂದು ಕರೆಯಲಾಗುತ್ತದೆ. ಇಲ್ಲಿ ಎಣ್ಣೆ ಹಚ್ಚುವುದರಿಂದ ( Sleeping with Oil in Navel) ಅದು ನರಗಳ ಮೂಲಕ ದೇಹದ ಆಳಕ್ಕೆ ಇಳಿದು, ನಿರ್ದಿಷ್ಟ ಸಮಸ್ಯೆಗಳಿರುವ ಭಾಗಗಳನ್ನು ಪೋಷಿಸುತ್ತದೆ. ಈ ಅಭ್ಯಾಸವು ದೇಹ ಮತ್ತು ಮನಸ್ಸನ್ನು ಸಮತೋಲನದಲ್ಲಿಡಲು ಅತ್ಯಗತ್ಯ. ಈ ಅದ್ಭುತ ಪ್ರಯೋಜನಗಳನ್ನು ತಿಳಿದ ನಂತರ, ನಾಭಿಗೆ ಎಣ್ಣೆ ಹಚ್ಚುವ ಅಭ್ಯಾಸವನ್ನು ನಿಮ್ಮ ದಿನಚರಿಯಲ್ಲಿ ಸೇರಿಸಿಕೊಳ್ಳಿ. ಇದರಿಂದ ಆರೋಗ್ಯಕ್ಕೆ ಖಂಡಿತವಾಗಿಯೂ ಉತ್ತಮ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


