Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Doctors Day 2025: ಹೆಲ್ತ್ ಸೀಕ್ರೆಟ್! ಯಾವ ರೋಗಕ್ಕೆ ಯಾವ ಡಾಕ್ಟರ್ ಸೂಕ್ತ?
ಜ್ವರ ಬಂದಾಗಲೂ ಗ್ಯಾಸ್ಟ್ರಿಕ್ ಆದಾಗಲೂ ಒಂದೇ ವೈದ್ಯರನ್ನು ಸಂಪರ್ಕಿಸುತ್ತೀರಾ? ಎಲ್ಲರಿಗೂ ಒಂದೇ ಸ್ಪೆಷಲಿಸ್ಟ್ ಅಲ್ಲ! ಹೌದು, ನಿಮಗೆ ಯಾವ ರೋಗಕ್ಕೆ ಯಾವ ಡಾಕ್ಟರ್ (Doctor) ಸೂಕ್ತ ಎಂದು ತಿಳಿದಿದೆಯೇ? ಸಾಮಾನ್ಯ ಜ್ವರದಿಂದ ಹಿಡಿದು ಹೃದ್ರೋಗದವರೆಗೂ, ಪ್ರತಿ ಕಾಯಿಲೆಗೂ ಒಬ್ಬ ನಿರ್ದಿಷ್ಟ ತಜ್ಞ ವೈದ್ಯರಿರುತ್ತಾರೆ. ಎಲ್ಲಾ ವ್ಯಕ್ತಿಗಳೂ ಎಲ್ಲ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ. ಅದೇ ರೀತಿ, ಒಬ್ಬ ವೈದ್ಯರು ಎಲ್ಲ ರೀತಿಯ ರೋಗಗಳಿಗೂ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ಆದ್ದರಿಂದ, ಯಾವ ಕಾಯಿಲೆಗೆ ಯಾವ ತಜ್ಞರು ಸೂಕ್ತ ಎಂಬುದನ್ನು ತಿಳಿದುಕೊಂಡು, ಅವರಲ್ಲಿ ಚಿಕಿತ್ಸೆ ಪಡೆಯುವುದು ಮುಖ್ಯ. ಹಾಗಿದ್ರೆ, ಯಾವ ರೋಗಕ್ಕೆ ಯಾವ ವೈದ್ಯರು ಸೂಕ್ತ? ತಿಳಿಯೋಣ ಬನ್ನಿ.
ಪ್ರತಿ ವರ್ಷ ಜುಲೈ 1 ರಂದು ರಾಷ್ಟ್ರೀಯ ವೈದ್ಯರ ದಿನವನ್ನು (National Doctors Day 2025) ಆಚರಿಸಲಾಗುತ್ತದೆ. ಈ ದಿನವು ವೈದ್ಯರಿಗೆ ಸಮರ್ಪಿತವಾಗಿದ್ದು, ಸಮಾಜದಲ್ಲಿ ಅವರ ಕೊಡುಗೆಯನ್ನು ಗೌರವಿಸುತ್ತದೆ. ವೈದ್ಯರನ್ನು ದೇವರ ಸ್ವರೂಪವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ವೈದ್ಯರು (Doctors) ರೋಗಿಗಳಿಗೆ ಹೊಸ ಜೀವನವನ್ನು ನೀಡುತ್ತಾರೆ. ಯಾವುದೇ ಆರೋಗ್ಯ ಸಮಸ್ಯೆ ಉಂಟಾದಾಗ, ಜನರು ತಕ್ಷಣವೇ ವೈದ್ಯರ ಬಳಿ ಹೋಗುತ್ತಾರೆ. ಆದರೆ, ಪ್ರತಿಯೊಂದು ಕಾಯಿಲೆಗೂ ಬೇರೆ ಬೇರೆ ತಜ್ಞ ವೈದ್ಯರು ಇರುತ್ತಾರೆ ಎಂಬುದು ಹಲವರಿಗೆ ತಿಳಿದಿಲ್ಲ. ಒಂದು ನಿರ್ದಿಷ್ಟ ರೋಗಕ್ಕೆ ಪರಿಣಿತ ವೈದ್ಯರ ಬಳಿ ಚಿಕಿತ್ಸೆ ಪಡೆಯುವುದರಿಂದ, ಪರಿಣಾಮಕಾರಿ ಮತ್ತು ನಿಖರವಾದ ಚಿಕಿತ್ಸೆಯನ್ನು ಪಡೆಯಬಹುದು.

ಯಾವ ರೋಗಕ್ಕೆ ಯಾವ ವೈದ್ಯರು ಸೂಕ್ತ?
ದೇಹದ ಪ್ರತಿಯೊಂದು ಭಾಗಕ್ಕೂ ನಿರ್ದಿಷ್ಟ ತಜ್ಞ ವೈದ್ಯರು ಇರುತ್ತಾರೆ. ಅವರ ಪರಿಣತಿಯನ್ನು ಅನುಸರಿಸಿ, ನಾವು ಅವರನ್ನು ಸಂಪರ್ಕಿಸಬೇಕು. ಇದರಿಂದ ನೀವು (ರೋಗಿಗಳು) ಸೂಕ್ತ ಸಮಯದಲ್ಲಿ ಸರಿಯಾದ ಚಿಕಿತ್ಸೆಯನ್ನು ಪಡೆಯಲು ಸಾಧ್ಯವಾಗುತ್ತದೆ.
ಕಣ್ಣಿನ ಸಮಸ್ಯೆ: ಕಣ್ಣಿನ ಸಮಸ್ಯೆಗಳಿಗೆ ನೇತ್ರ ತಜ್ಞರು ಅಥವಾ ಐ ಸ್ಪೆಷಲಿಸ್ಟ್ (Ophthalmologist) ಅತ್ಯಂತ ಸೂಕ್ತ. ಕಣ್ಣುಗಳಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಯಿದ್ದರೂ, ನೇತ್ರ ತಜ್ಞರನ್ನು ಸಂಪರ್ಕಿಸುವುದು ಉತ್ತಮ. ದೃಷ್ಟಿ ದೋಷ, ಕಣ್ಣಿನ ಸೋಂಕು, ಗ್ಲುಕೋಮಾ ಸೇರಿದಂತೆ ಇತರೆ ಕಣ್ಣಿನ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತಾರೆ.
ಹೃದಯ ಸಂಬಂಧಿ ಕಾಯಿಲೆ: ಹೃದಯ ಸಂಬಂಧಿ ಕಾಯಿಲೆಗಳಿಗೆ ಹೃದಯ ತಜ್ಞರು ಅಥವಾ ಕಾರ್ಡಿಯೋಲಜಿಸ್ಟ್ (Cardiologist) ಪರಿಣಿತರು. ಇವರು ಹೃದಯದ ಸಣ್ಣಪುಟ್ಟ ಸಮಸ್ಯೆಗಳನ್ನು ಪತ್ತೆಹಚ್ಚಿ, ಸೂಕ್ತ ಚಿಕಿತ್ಸೆ ನೀಡುತ್ತಾರೆ. ಹೃದಯಾಘಾತ, ಅಧಿಕ ರಕ್ತದೊತ್ತಡ, ಎದೆ ನೋವು, ನಾಡಿಮಿಡಿತದ ಸಮಸ್ಯೆಗೆ ಇವರು ಅತ್ಯಂತ ಸೂಕ್ತ. ಹೃದ್ರೋಗ ತಜ್ಞರು ಹೃದಯ ಮತ್ತು ರಕ್ತನಾಳಗಳ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತಾರೆ.
ಕಿವಿ, ಮೂಗು, ಗಂಟಲು ಸಮಸ್ಯೆ: ಕಿವಿ, ಮೂಗು, ಗಂಟಲು (ENT Specialist / Otolaryngologist) ಸಮಸ್ಯೆಗಳಿಗೆ ಇಎನ್ಟಿ ತಜ್ಞರನ್ನು ಸಂಪರ್ಕಿಸಬೇಕು. ಇಎನ್‌ಟಿ ತಜ್ಞರು ಈ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತಾರೆ.
ಕ್ಯಾನ್ಸರ್ ಕಾಯಿಲೆ: ಕ್ಯಾನ್ಸರ್‌ನಂತಹ ಕಾಯಿಲೆಗಳಿಗೆ ಕ್ಯಾನ್ಸರ್ ತಜ್ಞರು ಅಥವಾ ಆಂಕೊಲಜಿಸ್ಟ್ (Oncologist) ಚಿಕಿತ್ಸೆ ನೀಡುತ್ತಾರೆ. ಕಾರ್ಸಿನೋಮ, ಲ್ಯುಕೇಮಿಯಾ ಸೇರಿದಂತೆ ಕ್ಯಾನ್ಸರ್‌ನ ಎಲ್ಲಾ ವಿಧಗಳಿಗೆ ಚಿಕಿತ್ಸೆ ನೀಡುತ್ತಾರೆ.
ಮಹಿಳೆಯರ ಆರೋಗ್ಯ ಸಮಸ್ಯೆ: ಮಹಿಳೆಯರಿಗೆ ಗರ್ಭಧಾರಣೆ, ಮುಟ್ಟಿನ ಸಮಸ್ಯೆಗಳು ಅಥವಾ ಪಿಸಿಒಡಿ (ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್) ನಂತಹ ಸಮಸ್ಯೆಗಳಿದ್ದರೆ, ಸ್ತ್ರೀರೋಗ ತಜ್ಞರನ್ನು (Gynecologist) ಸಂಪರ್ಕಿಸುವುದು ಅಗತ್ಯ. ಸೂತಿ ಮತ್ತು ಸ್ತ್ರೀರೋಗ ತಜ್ಞರು ಗರ್ಭಧಾರಣೆ, ಹೆರಿಗೆ ಮತ್ತು ಮಹಿಳೆಯರ ಸಂತಾನೋತ್ಪತ್ತಿ ವ್ಯವಸ್ಥೆಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡುತ್ತಾರೆ.
ಮಾನಸಿಕ ಸಮಸ್ಯೆ: ಒತ್ತಡ ಅಥವಾ ಮಾನಸಿಕ ತೊಂದರೆಗಳಿಂದ ಬಳಲುತ್ತಿದ್ದರೆ, ಮಾನಸಿಕ ತಜ್ಞರು ಅಥವಾ ಸೈಕಾಲಜಿಸ್ಟ್ (Psychologist) ಸಹಾಯ ಪಡೆಯುವುದು ಮುಖ್ಯ. ಇವರು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಔಷಧಗಳು ಮತ್ತು ಚಿಕಿತ್ಸೆಯ ಮೂಲಕ ನಿರ್ವಹಿಸುತ್ತಾರೆ.
ಮೆದುಳಿನ ಕಾಯಿಲೆ: ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳಿಗಾಗಿ, ಮೊದಲು ನರರೋಗ ತಜ್ಞರು ಅಥವಾ ನ್ಯೂರೊಲೊಜಿಸ್ಟ್ (Neurologist) ಭೇಟಿ ಮಾಡಬೇಕು. ನರರೋಗ ತಜ್ಞರು ಮೆದುಳು, ಬೆನ್ನುಹುರಿ ಮತ್ತು ನರಮಂಡಲದ (ಪಾರ್ಶ್ವವಾಯು, ಮೈಗ್ರೇನ್, ಅಪಸ್ಮಾರ, ಪಾರ್ಕಿನ್ಸನ್) ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತಾರೆ.
ಇತರೆ ಆರೋಗ್ಯ ಸಲಹೆಗಳು
ಹೊಟ್ಟೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿದ್ದರೆ, ಗ್ಯಾಸ್ಟ್ರೋಎಂಟರಾಲಜಿಸ್ಟ್ (ಜಠರ ತಜ್ಞರು) ಬಳಿ ಚಿಕಿತ್ಸೆ ಪಡೆಯಬೇಕು. ಮಕ್ಕಳ ಆರೋಗ್ಯ ಸಮಸ್ಯೆಗಳಿಗೆ (ಜ್ವರ, ಸೋಂಕು, ಬೆಳವಣಿಗೆಯ ಸಮಸ್ಯೆಗಳು) ಶಿಶುವೈದ್ಯರು (Pediatrician) ಉತ್ತಮ. ಇವರು ಜನನದಿಂದ ಹದಿಹರೆಯದವರೆಗಿನ ಮಕ್ಕಳ ಆರೋಗ್ಯಕ್ಕೆ ಚಿಕಿತ್ಸೆ ನೀಡುತ್ತಾರೆ.
ಒಟ್ಟಾರೆ, ವೈದ್ಯಕೀಯ ಜಗತ್ತು ವಿಶಾಲವಾಗಿದ್ದು, ಪ್ರತಿ ರೋಗಕ್ಕೂ ಒಬ್ಬ ನಿರ್ದಿಷ್ಟ ತಜ್ಞರು ಇರುತ್ತಾರೆ. ರಾಷ್ಟ್ರೀಯ ವೈದ್ಯರ ದಿನದಂದು, ಪ್ರತಿಯೊಬ್ಬ ರೋಗಿಗಳು ತಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು. ಸೂಕ್ತ ಸಮಯದಲ್ಲಿ ಸರಿಯಾದ ತಜ್ಞರನ್ನು ಸಂಪರ್ಕಿಸಿ, ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
