Latest Updates
-
ಮಳೆಗಾಲದ ಪ್ರಯಾಣ: ಟ್ರಾಫಿಕ್ ಮತ್ತು ಕ್ಯಾಬ್ ಸಮಸ್ಯೆಗಳ ನಡುವೆ ದಂಪತಿಗಳು ನೆಮ್ಮದಿ ಕಾಪಾಡಿಕೊಳ್ಳುವುದು ಹೇಗೆ? -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ಇಂದಿನ ಪರಿಷ್ಕೃತ ಪಟ್ಟಿ ಮತ್ತು ನಿಮ್ಮ ಪ್ರಕರಣದ ಸ್ಥಿತಿ ಪರಿಶೀಲಿಸಿ -
ಓಣಂ ಹಬ್ಬ: ಮಳೆಗೆ ಹಾಳಾಗದ, ₹500ರೊಳಗೆ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್! -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಜಾಗ ಉಳಿಸುವ ಸುಂದರ ಪೂಕಳಂ ಐಡಿಯಾಗಳು -
ಓಣಂ ಸದ್ಯದ ಸಂಭ್ರಮ: ಡಯಾಬಿಟಿಸ್ ಇದ್ದರೂ ಆರೋಗ್ಯಕರವಾಗಿ ಸವಿಯುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ಮೊಟ್ಟೆ ದರ ಏರಿಕೆ ಚಿಂತೆಯೇ? ಕಡಿಮೆ ಬಜೆಟ್ನಲ್ಲಿ ಪ್ರೋಟೀನ್ ಪಡೆಯಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ಕುಟುಂಬದೊಂದಿಗೆ ಸಂಭ್ರಮಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಪ್ಲಾನ್! -
ವರ್ಕ್ ಫ್ರಮ್ ಹೋಮ್ ಜೊತೆ ಭಾರತ-ಶ್ರೀಲಂಕಾ ಟೆಸ್ಟ್ ಮ್ಯಾಚ್: ಲೈವ್ ಸ್ಕೋರ್ ಮತ್ತು ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
ದೆಹಲಿ ಟಫ್ಮನ್ ಹಾಫ್ ಮ್ಯಾರಥಾನ್: ತೇವಾಂಶದ ನಡುವೆಯೂ ಓಟದಲ್ಲಿ ಮಿಂಚಲು ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರು ರನ್ನಿಂಗ್ ಡೇ: ಮಳೆಗಾಲದಲ್ಲಿ ಓಡುವಾಗ ಈ ತಪ್ಪುಗಳನ್ನು ಮಾಡಬೇಡಿ, ಸುರಕ್ಷಿತವಾಗಿರಿ!
ಉಗುರಿನ ಮೇಲೆ ಕಪ್ಪು ಗೆರೆಗಳಿಂದ ತಿಳಿದಿತ್ತು ಕ್ಯಾನ್ಸರ್..! ಮೆಲನೋಮ್ ಗೆದ್ದ ಮಹಿಳೆ..!
ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವು ಲಕ್ಷಣಗಳು, ಹಲವು ರೀತಿಯ ಸೂಚನೆಗಳು ನಮ್ಮ ದೇಹದಲ್ಲಿ ಕಂಡುಬರುವುದು ನೋಡಬಹುದು. ಉದಾಹರಣೆಗೆ ಹೇಳುವುದಾದರೆ ಕಣ್ಣುಗಳು ಕೆಂಪಾಗುವುದು, ಮೂತ್ರ ಹಳದಿಯಾಗುವುದು, ಕಣ್ಣುಗಳ ಬಣ್ಣ ಹಳದಿಯಾಗುವುದು ಬೇರೆ ಬೇರೆ ರೀತಿಯ ಅನಾರೋಗ್ಯದ ಸೂಚಕಗಳಾಗಿವೆ. ಹಾಗೆ ಹಲವು ರೀತಿಯ ದೈಹಿಕ ಬದಲಾವಣೆಗಳು ನಮ್ಮ ದೇಹದಲ್ಲಿ ಇರುವ ಅನಾರೋಗ್ಯದ ಸೂಚಕಗಳಾಗಿರುತ್ತವೆ ಎಂಬುದನ್ನು ನಾವೆಲ್ಲಾ ತಿಳಿದಿದ್ದೇವೆ.
ಅದರಲ್ಲೂ ನಮ್ಮ ದೇಹದಲ್ಲಿನ ಹಲವು ಅಂಗಗಳು ಒಂದೊಂದು ರೀತಿಯಲ್ಲಿ ಈ ಕುರಿತಂತೆ ಸೂಚನೆಗಳ ನೀಡುತ್ತಲೆ ಇರುತ್ತವೆ. ನಮ್ಮ ಅರಿವಿಗೆ ಬಾರದಂತೆ ಕಾಡುತ್ತಿರುವ ಹಲವು ಸಮಸ್ಯೆಗಳನ್ನು ದೇಹದ ಅಂಗಗಳ ಮೂಲಕ ನಾವು ತಿಳಿಯಬಹುದು. ಅದರಲ್ಲಿ ನಾವಿಂದು ಉಗುರುಗಳ ಮೇಲಿನ ಕಲೆಗಳು, ಗೆರೆಗಳ ಮೂಲಕ ನಮ್ಮ ಆರೋಗ್ಯದ ಕುರಿತು ತಿಳಿಯಬಹುದು.

ಅದರಲ್ಲೂ ಉಗುರುಗಳ ಮೇಲೆ ಬಿಳಿ ಗೆರೆಗಳು ಹಾಗೆ ಬಿಳಿ ಮಚ್ಚೆಗಳು ಕಂಡುಬರುವುದು ಅನಾರೋಗ್ಯದ ಕಾರಣಗಳಿಂದಾಗಿ ಎಂದು ತಿಳಿಬಂದಿದೆ. ಇದು ಲಿವರ್ ಅಥವಾ ಕಿಡ್ನಿ ಸಮಸ್ಯೆಯ ಸೂಚಕ ಇರಬಹುದು. ಹಾಗೆ ಕಬ್ಬಿಣ ಹಾಗೂ ಜಿಂಕ್ ಅಂಶಗಳ ಕೊರತೆಯೂ ಕಾರಣವಾಗಿರಬಹುದು. ಹಾಗೆ ದೇಹದಲ್ಲಿ ಕ್ಯಾಲ್ಸಿಯಂ ಕಡಿಮೆ ಆಗಿದೆ ಎಂಬ ಸೂಚಕ ಕೂಡ ಇದಾಗಿರಲಿದೆ.
ಆದ್ರೆ ಉಗುರುಗಳ ಮೇಲೆ ನೇರವಾದ ಕಪ್ಪು ಬಣ್ಣದ ಗೆರೆಗಳು ಮೂಡುವುದರ ಹಿಂದಿರುವ ಸತ್ಯ ನಿಮಗೆ ತಿಳಿದಿದ್ಯಾ? ನಿಮಗಿದು ಅಚ್ಚರಿ ಎನಿಸಬಹುದು ಏಕೆಂದರೆ ಈ ರೀತಿಯ ಕಪ್ಪು ಗೆರೆಗಳು ಅಪಾಯಕಾರಿಯಾದ ಕ್ಯಾನ್ಸರ್‌ನ ಸೂಚಕವಾಗಿರಬಹುದು ಎಂಬ ಸತ್ಯ ನಿಮಗೆ ಗೊತ್ತಾ? ಹೌದು ಅಮೆರಿಕದ ಓಹಿಯೋದಲ್ಲಿನ ಮಹಿಳೆಯೊಬ್ಬರ ಪ್ರಕರಣದಲ್ಲಿ ಈ ರೀತಿಯ ಬೆಳವಣಿಗೆ ಆಗಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ಉಗುರುಗಳ ಮೇಲೆ ಸಣ್ಣದಾದ ಎರಡು ಕಪ್ಪು ಬಣ್ಣದ ಗೆರೆಗಳನ್ನು ಗಮಿನಿಸಿದ್ದ ಆಕೆ ಮೊದಲು ನಿರ್ಲಕ್ಷಿಸಿದ್ದರು. 58 ವರ್ಷದ ಮಿಚೆಲ್ ಟ್ಯಾಗ್ಲಿಯಾಮೊಂಟೆ ಎಂಬಾಕೆಗೆ ಮೆಲನೋಮ ಕ್ಯಾನ್ಸರ್ ಇರುವುದು ಬಳಿಕೆ ಪತ್ತೆಯಾಗಿತ್ತು. ಮಿಚೆಲ್ ಟ್ಯಾಗ್ಲಿಯಾಮೊಂಟೆ ಅವರ ಬಲಗೈನ ಹೆಬ್ಬೆರಳ ಉಗುರಿನ ಮೇಲೆ ಕಪ್ಪು ಬಣ್ಣದ ಗೆರೆಗಳಿದ್ದವು. ಆಕೆ ಪ್ರತಿ ತಿಂಗಳು ಪಾರ್ಲರ್‌ಗೆ ಹೋಗಿ ಉಗುರುಗಳ ಕತ್ತರಿಸುವಾಗ ಈ ಗೆರೆಗಳ ಗಮನಿಸಿದ್ದರು. ಇವು ದಿನದಿಂದ ದಿನಕ್ಕೆ ಗಾಢವಾಗುತ್ತಾ ಹೋಗುತ್ತಿದ್ದವು.
ಆಕೆ ಇದು ನೈಸರ್ಗಿಕವಾಗಿ ಉಂಟಾಗಿರುವ ಗೆರೆಗಳು ಎಂದೇ ಭಾವಿಸಿದ್ದರು. ಹೀಗಾಗಿ ಹೆಚ್ಚು ಗಮನ ನೀಡಿರಲಿಲ್ಲ. ಆದ್ರೆ ಈ ಬಣ್ಣ ಗಾಢವಾಗುತ್ತಾ ಸಾಗಿತ್ತು. ನಂತರ ಆಕೆ ವೈದ್ಯರ ಭೇಟಿಯಾಗಲು ನಿರ್ಧರಿಸಿದಳು. ಉಗುರಿನ ಮೇಲೆ ಬಣ್ಣ ಕಾಣಿಸಿಕೊಂಡು ಸುಮಾರು 3 ತಿಂಗಳ ಬಳಿಕ ಆಕೆ ವೈದ್ಯರನ್ನು ಭೇಟಿ ಮಾಡಿದರು. ಆದರೆ ವೈದ್ಯರು ಈ ಕಲೆಗಳು ನೈಸರ್ಗಿಕ ಪ್ರಕಾರವಾಗಿ ಮೂಡಿರುವುದಲ್ಲ ಎಂಬುದನ್ನು ಅರಿತುಕೊಂಡರು. ಬಳಿಕ ಆಕೆಯ ದೇಹದ ಸ್ಕ್ಯಾನಿಂಗ್ ಮಾಡಲು ಮುಂದಾದರು.
ಅಚ್ಚರಿ ಏನೆಂದರೆ ಇದು ಮೆಲನೋಮ್ ಎಂಬ ಸಮಸ್ಯೆಯ ಸೂಚಕವಾಗಿದೆ. ಇದು ಉಗುರಿನ ಕೆಳಗೆ ಬೆಳೆಯುತ್ತಿದ್ದ ಚಿಕ್ಕದಾದ ಕ್ಯಾನ್ಸರ್ ಕೋಶದ ಪ್ರತೀಕವಾಗಿತ್ತು. ಇದನ್ನು ಸಾಮಾನ್ಯವಾಗಿ ಮೆಲನೋಮ ಇನ್ ಸಿತು ಎಂದು ಕರೆಯಲಾಗುತ್ತದೆ, ಇದು ಕ್ಯಾನ್ಸರ್ ಕೋಶಗಳು ಎಪಿಡರ್ಮಿಸ್ ಅನ್ನು ಮೀರಿ ಬೆಳವಣಿಗೆಯಾಗಿರಲಿಲ್ಲ ಎಂದು ತಿಳಿದುಬಂದಿದೆ.
ಈ ಕ್ಯಾನ್ಸರ್ ಹರಡುವುದನ್ನು ತಡೆಯಲು ಜನವರಿಯಲ್ಲಿ ಮಿಚೆಲ್ ಅವರಿಗೆ ಸತತ 4 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿತ್ತು. ನಂತರ ಈ ಕ್ಯಾನ್ಸರ್ ಕೋಶ ಬೆಳೆಯುತ್ತಿದ್ದ ಭಾಗವನ್ನು ಕತ್ತರಿಸಲಾಗಿತ್ತು, ಈ ಮೂಲಕ ಕ್ಯಾನ್ಸರ್ ಹರಡುವಿಕೆ ತಡೆಗಟ್ಟಲಾಗಿತ್ತು. ಆದ್ರೆ ಉಗುರು ಮೇಲಿನ ಎಲ್ಲಾ ರೀತಿಯ ಕಪ್ಪು ಗೆರೆಗಳು ಈ ಕ್ಯಾನ್ಸರ್‌ನ ಲಕ್ಷಣವಾಗಿರುವುದಿಲ್ಲ. ಹಾಗೆ ಅದನ್ನು ನಿರ್ಲಕ್ಷ್ಯ ಮಾಡುವುದು ಕೂಡ ಸಮಂಜಸವಲ್ಲ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications