Latest Updates
-
ಬಿಸಿಲಿನ ತಾಪಕ್ಕೆ ದಂಪತಿಗಳ ನಡುವೆ ಜಗಳವೇ? ಸಂಬಂಧ ಗಟ್ಟಿಯಾಗಿರಲು ಇಲ್ಲಿವೆ ನೋಡಿ ಸರಳ ಉಪಾಯಗಳು -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ವಿದ್ಯುತ್ ಬಿಲ್ ಇಲ್ಲದೆ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲ ಬೇಗೆಗೆ ರೆಡ್ ಅಲರ್ಟ್: ಹೀಟ್ ಸ್ಟ್ರೋಕ್ನಿಂದ ಪಾರಾಗಲು ಈ ಮನೆಮದ್ದುಗಳನ್ನು ಇಂದೇ ಟ್ರೈ ಮಾಡಿ! -
ಮಳೆಗಾಲದಲ್ಲಿ ಸ್ಟೈಲಿಶ್ ಆಗಿ ಕಾಣಬೇಕಾ? ಈ ಸಿಂಪಲ್ ಟಿಪ್ಸ್ ನಿಮ್ಮನ್ನು ಮಳೆಗಾಲದ ಫ್ಯಾಷನ್ ಐಕಾನ್ ಮಾಡೋದು ಗ್ಯಾರಂಟಿ! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಕುತ್ತು ತಪ್ಪಿದ್ದಲ್ಲ! -
ಸೋಷಿಯಲ್ ಮೀಡಿಯಾದಲ್ಲಿ ಪ್ರೀತಿಯನ್ನು ತೋರಿಸುವ ಹೊಸ ಟ್ರೆಂಡ್: 'ಸಾಫ್ಟ್ ಲಾಂಚ್' ಮೂಲಕ ನಿಮ್ಮ ಸಂಬಂಧವನ್ನು ಭದ್ರಪಡಿಸಿಕೊಳ್ಳಿ! -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಲ್ಲೂ ನಿಮ್ಮ ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಉಳಿಸಲು ಈ ಟಿಪ್ಸ್ ಸಾಕು! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಆಹಾರ ಕ್ರಮಗಳನ್ನು ಮರೆಯದೆ ಪಾಲಿಸಿ! -
ಮುಟ್ಟಿನ ನೈರ್ಮಲ್ಯ ದಿನ: ಕೇವಲ 200 ರೂಪಾಯಿಗೂ ಕಡಿಮೆ ಬೆಲೆಯಲ್ಲಿ ಸಿಗುತ್ತಿವೆ ಈ ಅಗತ್ಯ ಉತ್ಪನ್ನಗಳು, ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ಮದುವೆ ಮಾಡ್ತಿದ್ದೀರಾ? ಅತಿಥಿಗಳ ಆರೋಗ್ಯಕ್ಕಾಗಿ ಈ 5 ಬದಲಾವಣೆಗಳನ್ನು ಮರೆಯಬೇಡಿ!
ರಷ್ಯಾದಲ್ಲಿ ನಿಗೂಢ ವೈರಸ್ ಪತ್ತೆ..! ಉಸಿರಾಟ ಸಮಸ್ಯೆಗೆ ತುತ್ತಾದವರಿಂದ ಆಸ್ಪತ್ರೆಗಳು ಫುಲ್..!
ನೀವು ಇತ್ತೀಚಿಗೆ ವೈರಲ್ ಫೀವರ್‌ಗಳು, ವೈರಲ್ ಸೋಂಕುಗಳಿಗೆ ಒಳಗಾಗುವುದು ನೋಡಬಹುದು. ಇತ್ತೀಚಿಗೆ ಅಮೆರಿಕ, ಜಪಾನ್, ಚೀನಾದಲ್ಲೂ ಕೂಡ ಹೊಸ ರೀತಿಯ ವೈರಸ್‌ಗಳು ಹರಡುವಿಕೆ ನೋಡಿರಬಹುದು. ಹವಾಮಾನದ ಬದಲಾವಣೆಯಂತೆಯೇ ವೈರಸ್‌ಗಳು ಕೂಡ ಹರಡುತ್ತಿರುವುದು ಸಾಮಾನ್ಯ ಎನ್ನುವಂತಾಗಿದೆ. ಹಾಗೆ ಈಗ ರಷ್ಯಾದಲ್ಲಿಯೂ ಕೂಡ ವೈರಸ್ ಹರಡುತ್ತಿರುವುದು ಆತಂಕ ಹೆಚ್ಚಾಗುವಂತೆ ಮಾಡಿದೆ.
ರಷ್ಯಾದ ಅಧಿಕಾರಿಗಳು ತೀವ್ರ ಜ್ವರ ಮತ್ತು ರಕ್ತಸಿಕ್ತ ಕೆಮ್ಮಿನಂತಹ ಲಕ್ಷಣಗಳನ್ನು ಹೊಂದಿರುವ ನಿಗೂಢ ವೈರಸ್ ಹರಡುವಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. ಎಲ್ಲಾ ಸೋಂಕಿತರಲ್ಲೂ ಒಂದೇ ರೀತಿಯ ಲಕ್ಷಣಗಳು ಕಂಡುಬಂದಿದೆ. ರಷ್ಯಾದ ಮಾಧ್ಯಮಗಳಲ್ಲಿ ಈ ಕುರಿತಂತೆ ವರದಿಗಳಾಗಿದ್ದು ಆಸ್ಪತ್ರೆಗಳಲ್ಲಿ ಈ ವೈರಸ್ ಪ್ರಕರಣಗಳಲ್ಲಿ ದಿಢೀರ್ ಏರಿಕೆಯಾಗಿರುವುದು ವರದಿಯಾಗಿದೆ.

ಈ ಸೋಂಕು ಕೋವಿಡ್‌ನಂತೆ ಹರಡುತ್ತಿದೆ ಎಂದು ತಿಳಿದುಬಂದಿದೆ. ಏಕೆಂದರೆ ಈ ಸೋಂಕು ಕೂಡ ಆರಂಭದಲ್ಲಿ ಜ್ವರದಿಂತಹ ಲಕ್ಷಣದಿಂದ ಆರಂಭವಾಗುತ್ತಿದೆ. ಹಲವು ರೋಗಿಗಳು ಕೆಮ್ಮುವಾಗ ರಕ್ತ ಬರುತ್ತಿರುವುದು ಆತಂಕ ಹೆಚ್ಚುವಂತೆ ಮಾಡಿದೆ. ಹೀಗಾಗಿ ಕ್ಲೀನಿಕಲ್ ಪರೀಕ್ಷೆಗಳು ಹೆಚ್ಚಾಗಿವೆ. ಸೋಂಕಿತರ ಸ್ವಾಬ್ ಪರೀಕ್ಷೆ ಹೆಚ್ಚಿಸಲಾಗಿದ್ದು, ಇದು ಸಾಮಾನ್ಯ ಉಸಿರಾಟ ಸಮಸ್ಯೆಯ ಸೋಂಕು ಎಂಬುದನ್ನು ತಳ್ಳಿಹಾಕಲಾಗಿದೆ.
ಆದ್ರೆ ಈ ವೈರಸ್ ಅನ್ನು ವರ್ಗೀಕರಿಸುವಲ್ಲಿ ತಜ್ಞರು ಹರಸಾಹಸ ಪಡುತ್ತಿದ್ದಾರೆ. ಏಕೆಂದರೆ ಹೊಸದಾಗಿ ಕಂಡುಬಂದಿರುವ ಈ ವೈರಸ್‌ನ ಮೂಲ ಹಾಗೂ ಅದರ ಲಕ್ಷಣಗಳ ಪತ್ತೆಗೆ ಮುಂದಾಗಲಾಗಿದ್ದು, ಆ ಕುರಿತ ಅಧ್ಯಯನಗಳು ನಡೆಯುತ್ತಿವೆ. ಅದರ ಮೂಲ ಹಾಗೂ ಲಕ್ಷಣಗಳು ನಿಖರವಾಗಿ ಕಂಡುಬರದ ಹೊರತು ಸೂಕ್ತ ಹಾಗೂ ಪರಿಣಾಮಕಾರಿ ಚಿಕಿತ್ಸೆ ನೀಡುವುದು ಅಸಾಧ್ಯವಾಗುತ್ತದೆ.
ತೀವ್ರವಾದ ಉಸಿರಾಟದ ಸೋಂಕು, ಜ್ವರ, ಆಯಾಸ ರಕ್ತದ ಕೆಮ್ಮು ಹೊಂದಿರುವ ಈ ಲಕ್ಷಣಗಳು ಉಳಿದೆಲ್ಲಾ ಸೋಂಕುಗಳಿಗಿಂತ ಭಿನ್ನ ಎನಿಸಿದೆ. ಕೆಲವು ವೈದ್ಯಕೀಯ ಮೂಲಗಳ ಪ್ರಕಾರ ಕಾಯಿಲೆಯು ಮೈಕೋಪ್ಲಾಸ್ಮಾ ನ್ಯುಮೋನಿಯಾಕ್ಕೆ ಸಂಬಂಧಿಸಿರಬಹುದು ಎಂದು ಊಹಿಸಲಾಗಿದೆ. ಇದು ಮನುಷ್ಯರಿಗೆ ಸೋಂಕು ತಗುಲಿಸುವ ಬ್ಯಾಕ್ಟೀರಿಯಾ. ಇದು ಸಾಮಾನ್ಯವಾಗಿ ಶ್ವಾಸೇಂದ್ರಿಯ ಪ್ರದೇಶದ ಸೋಂಕುಗಳಿಗೆ ಕಾರಣವಾಗುತ್ತದೆ. ಈ ಸೋಂಕು ಕಳೆದ ವರ್ಷದ ಕೊನೆಯಲ್ಲಿ ರಷ್ಯಾದಲ್ಲಿ ಪತ್ತೆಯಾಗಿತ್ತ. ಆದರೆ ಇದೇ ಸೋಂಕು ಪತ್ತೆ ಹರಡಿದೆ ಎಂಬುದನ್ನು ವೈದ್ಯರು ದೃಢಪಡಿಸಿಲ್ಲ.
ಈಗ ಆರೋಗ್ಯ ಅಧಿಕಾರಿಗಳು ಯಾವುದೇ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಸಹ ಘೋಷಿಸಿಲ್ಲ. ಆದರೆ ಅಪಾಯಕಾರಿ ಮಟ್ಟದಲ್ಲಿ ಈ ಸೋಂಕಿನ ಪ್ರಮಾಣ ಹೆಚ್ಚಳ ಆಗುತ್ತಿರುವುದು ಎಲ್ಲರಲ್ಲೂ ಆತಂಕಕ್ಕೆ ಕಾರವಾಗಿದೆ. ಏಕೆಂದರೆ ಸೋಂಕಿನ ಮೂಲ ತಿಳಿದಿಲ್ಲವಾಗಿರುವುದರಿಂದ ಅದರ ಹರಡುವಿಕೆಯನ್ನು ತಡೆಯುವುದು ಕೂಡ ಕಷ್ಟವಾಗಿದೆ. ಸದ್ಯ ರಷ್ಯಾದ ಹಲವು ನಗರದಲ್ಲಿ ಈ ಸೋಂಕಿಗೆ ತುತ್ತಾಗಿರುವ ಮಂದಿಯ ಸಂಖ್ಯೆ ಹೆಚ್ಚಾಗುತ್ತಲೇ ಇದೆ.
ಅಧಿಕೃತ ರೋಗನಿರ್ಣಯದ ಅನುಪಸ್ಥಿತಿಯಲ್ಲಿ ಆರೋಗ್ಯದ ಕಡೆಗೆ ಹೆಚ್ಚು ಗಮನ ನೀಡುವಂತೆ ಹಾಗೆ ಕೋವಿಡ್ ಸಮಯದಲ್ಲಿ ವೈರಸ್ ಹರಡದಂತೆ ತೆಗೆದುಕೊಂಡ ಮುನ್ನೆಚ್ಚರಿಕೆಯನ್ನೇ ತೆಗೆದುಕೊಳ್ಳುವಂತೆ ಸಿಬ್ಬಂದಿ ಸೂಚಿಸಿದ್ದಾರೆ. ಸದ್ಯದಲ್ಲೇ ಈ ವೈರಸ್ ಹರಡುವಿಕೆ ಹಾಗೆ ಅದರ ಸ್ವರೂಪದ ಕುರಿತಂತೆ ಅಧ್ಯಯನದ ಮೂಲಕ ತಿಳಿದುಬರಬೇಕಿದೆ.
ಈ ವೈರಸ್‌ನಿಂದಾಗಿ ಸಾವು ಸಂಭವಿಸಿರುವ ಕುರಿತು ಯಾವುದೇ ವರದಿಯಾಗಿಲ್ಲ. ಆದ್ರೆ ಬಹುತೇಕ ಆಸ್ಪತ್ರೆಗಳಲ್ಲಿ ಜನರು ಈ ಸೋಂಕಿನ ಕಾರಣಕ್ಕೆ ಚಿಕಿತ್ಸೆ ಪಡೆಯುತ್ತಿರುವುದು ನೋಡಬಹುದು. ಇದಕ್ಕೂ ಮೊಲದು ಜಪಾನ್ ಹಾಗೂ ಚೀನಾದಲ್ಲಿಯೂ ಕೂಡ ಹೊಸ ರೀತಿಯ ವೈರಸ್ ಕಂಡುಬಂದಿತ್ತು. ಇದು ಕೂಡ ಕೋವಿಡ್ ರೀತಿಯ ಲಕ್ಷಣ ಹೊಂದಿತ್ತು ಹಾಗೆ ಕೋಲ್ಕತಾದಲ್ಲಿ ಮಹಿಳೆಯೊಬ್ಬರು ಹ್ಯೂಮನ್ ಕೊರೊನಾ ವೈರಸ್‌ಗೆ ಒಳಗಾಗಿದ್ದ ಕುರಿತು ವರದಿಯಾಗಿತ್ತು. HKU1 ಎಂದು ವರ್ಗೀಕರಿಸಲಾಗಿದ್ದ ಹ್ಯೂಮನ್ ಕೊರೊನಾ ವೈರಸ್ ಇದಾಗಿತ್ತು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications