Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಮಸ್ಕ್ಯುಲೋಸ್ಕೆಲಿಟಲ್ ನೋವು(ಮೂಳೆ, ಸ್ನಾಯುಗಳಲ್ಲಿ ನೋವು) ಇದಕ್ಕೆ ಕಾರಣವೇನು?
ಮಸ್ಕ್ಯುಲೋಸ್ಕೆಲಿಟಲ್ ನೋವು ಅಂದರೆ ಮೂಳೆಗಳಲ್ಲಿ, ಸ್ನಾಯುಗಳಲ್ಲಿ ಕಂಡು ಬರುವುದು, ಈ ರೀತಿಯ ನೋವು ದೇಹದ ಮೇಲೆ ತುಂಬಾನೇ ಪರಿಣಾಮ ಬೀರುವುದು, ದಿನನಿತ್ಯ ಕೆಲಸ ಕಾರ್ಯಗಳನ್ನು ಮಾಡಲು ತೊಂದರೆಯಾಗುವುದು. ಅನೇಕ ಕಾರಣಗಳಿಂದ ಈ ಸಮಸ್ಯೆ ಉಂಟಾಗುವುದು. ಈ ಸಮಸ್ಯೆ ದೀರ್ಘ ಸಮಯ ಕಾಡುತ್ತಿದ್ದರೆ ಆ ವ್ಯಕ್ತಿಯಲ್ಲಿ ಖಿನ್ನತೆ, ಜಿಗುಪ್ಸೆ,ಕೋಪ ಉಂಟಾಗುವುದು, ಆರೋಗ್ಯ ಸಮಸ್ಯೆ ಸಂಬಂಧದ ಮೇಲೆ ಕೂಡ ಪರಿಣಾಮ ಬೀರುವುದು.
ಈ ಕಾಯಿಲೆಗೆ ಕಾರಣವೇನು, ಯಾವ ಬಗೆಯ ಚಿಕಿತ್ಸೆ ಪರಿಣಾಮಕಾರಿ ಎಂಬುವುದರ ಬಗ್ಗೆ ಡಾ. ಸುರೇಂದ್ರ ಯು ಕಾಮತ್ (Senior Consultant Orthopaedics, KMC Hospital Dr B R Ambedkar Circle Mangalore) ಇವರು ನೀಡಿರುವ ಹೆಚ್ಚಿನ ಮಾಹಿತಿ ಆಧಾರಿಸಿ ಈ ಲೇಖನ ಪ್ರಕಟಿಸಲಾಗಿದೆ:

ಈ ರೀತಿ ಮೂಳೆ ಮತ್ತು ಸ್ನಾಯುಗಳಲ್ಲಿ ನೋವು ಉಂಟಾಗಲು ಕಾರಣವೇನು?
- ದೇಹದವನ್ನು ತುಂಬಾನೇ ದಂಡಿಸುವುದು: ಇದರಿಂದ ಸ್ನಾಯುಗಳಿಗೆ ಹಾನಿಯುಂಟಾಗಿ ಸ್ನಾಯುಗಳಲ್ಲಿ ನೋವು ಉಂಟಾಗುವುದು, ಕಾಲು ಸಂಧಿಗಳಲ್ಲಿ ನೋವು ಕಂಡು ಬರುವುದು.
- ಅತಿಯಾದ ಮಾನಸಿಕ ಒತ್ತಡ ಆರೋಗ್ಯದ ಮೇಲೆ ತುಂಬಾನೇ ಪರಿಣಾಮ ಬೀರುವುದು: ತುಂಬಾ ಮಾನಸಿಕ ಒತ್ತಡ ಅನುಭವಿಸಿದಾಗ ಇದರಿಂದ ಕಾರ್ಟಿಸೋಲ್ ಎಂಬ ಹಾರ್ಮೋನ್ ಉತ್ಪತ್ತಿಯಾಗುವುದು
- ಮಾನಸಿಕ ಒತ್ತಡ: ಅತಿಯಾದ ಮಾನಸಿಕ ಒತ್ತಡ ಕೂಡ ಶರೀರದ ಮೇಲೆ ಪರಿಣಾಮ ಬೀರುವುದು
- ಸೋಂಕು, ಕಾಯಿಲೆ: ಸೋಂಕು ಮತ್ತು ಕಾಯಿಲೆ ಉಂಟಾದಾಗ ಕೂಡ ಈ ರೀತಿ ನೋವು ಉಂಟಾಗುವ ಸಾಧ್ಯತೆ ಇದೆ.
- ಕೂರುವ ಭಂಗಿ ಸರಿಯಿಲ್ಲದಿದ್ದರೆ, ದೈಹಿಕ ವ್ಯಾಯಾಮ ಇಲ್ಲದಿರುವುದು: ಇದು ಕೂಡ ಶರೀರದ ಮೇಲೆ ತುಂಬಾನೇ ಪರಿಣಾಮ ಬೀರುವುದು. ತುಂಬಾ ಹೊತ್ತು ಕೂತು ಕೆಲಸ ಮಾಡುವಾಗ ನಾವು ಕೂರುವ ಭಂಗಿ ಸರಿಯಿಲ್ಲದಿದ್ದರೆ ಮೂಳೆಗಳ ಮೇಲೆ ಒತ್ತಡ ಉಂಟಾಗಿ ನೋವು ಕಂಡು ಬರುವುದು.
- ನಿದ್ರಾಹೀನತೆ:ನಿದ್ದೆ ತುಂಬಾ ಕಡಿಮೆಯಾದಾಗ ಅದು ಕೂಡ ಶರೀರದ ಮೇಲೆ ಕೆಟ್ಟ ಪರಿಣಾಮ ಬೀರುವುದು, ಇದರಿಂದ ಮೂಳೆಗಳಲ್ಲಿ ನೋವು, ಸ್ನಾಯುಗಳಲ್ಲಿ ನೋವು ಈ ಬಗೆಯ ಸಮಸ್ಯೆ ಕಂಡು ಬರುವುದು.
- ಅಟೋಇಮ್ಯೂನೆ ಕಾಯಿಲೆ: ಅಟೋಇಮ್ಯೂನೆ ಕಾಯಿಲೆಯಿಂದ ಕೂಡ ಸಂಧಿವಾತದ ಸಮಸ್ಯೆ ಉಂಟಾಗುವುದು.
- ವಿಟಮಿನ್‌ಗಳ ಕೊರತೆಯಿಂದ ಕೂಡ ಮೂಳೆಗಳಲ್ಲಿ, ಸ್ನಾಯುಗಳಲ್ಲಿ ನೋವು ಕಂಡು ಬರುವುದು.
- ವಿಟಮಿನ್ ಡಿ, ಬಿ 12, ಕ್ಯಾಲ್ಸಿಯಂ ಮತ್ತು ಮೆಗ್ನಿಷ್ಯಿಯಂ ಕೊರತೆಯಿಂದಾಗಿ ಸ್ನಾಯುಗಳಲ್ಲಿ ನೋವು ಕಂಡು ಬರುವುದು.
- ಸಂಧಿವಾತದ ಸಮಸ್ಯೆ ಇರುವವರಲ್ಲಿ ಈ ಮಸ್ಕ್ಯುಲೋಸ್ಕೆಲಿಟಲ್ ನೋವು ಕಂಡು ಬರುವುದು.
- ಏನಾದರೂ ಸೋಂಕು ಅಥವಾ ಕಾಯಿಲೆಯಿಂದ ನರಗಳಿಗೆ ಹಾನಿಯುಂಟಾದಾಗ ನೋವು ಕಂಡು ಬರುವುದು
ಈ ರೀತಿಯ ಸಮಸ್ಯೆಗೆ ಪರಿಹಾರವೇನು?
- ವೈದ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆ ಪಡೆಯಿರಿ
- ತುಂಬಾನೇ ವಿಶ್ರಾಂತಿಯ ಅವಶ್ಯಕತೆ ಇರುತ್ತದೆ
- ವಿಟಮಿನ್ ಡಿ3, ಬಿ12 ಮತ್ತು ಖನಿಜಾಂಶಗಳನ್ನುಸೇವಿಸಬೇಕು
- ಥೆರಪಿ ಚಿಕಿತ್ಸೆ, ಲಘು ವ್ಯಾಯಾಮ ಬೇಗನೆ ಚೇತರಿಸಿಕೊಳ್ಳಲು ಸಹಕಾರಿ
- ಸಾಕಷ್ಟು ನೀರು ಕುಡಿಯಿರಿ.
- ದೇಹದಲ್ಲಿ ನೀರಿಂಶ ಕಡಿಮೆಯಾದಾಗ ಕೂಡ ಮೈಕೈ ನೋವು ಕಂಡು ಬರುವುದು
- ಇನ್ನು ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಔಷಧಿ ತೆಗೆದುಕೊಳ್ಳುವವರಲ್ಲಿ ಕೂಡ ಈ ಸಮಸ್ಯೆ ಕಂಡು ಬರುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications