Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಮದರ್ಸ್ ಡೇ 2023 : ಅಮ್ಮನ ಮುಖದಲ್ಲಿ ಸುಕ್ಕು ಹೆಚ್ಚಾಗಿದ್ಯಾ? ಇಲ್ಲಿದೆ ಪರಿಹಾರ
ನಲ್ವತ್ತು ದಾಟಿದ್ರೆ ಸಾಕು ಮುಖದಲ್ಲಿ ಸುಕ್ಕು ಕಾಣಿಸಿಕೊಳ್ಳೋದಕ್ಕೆ ಶುರುವಾಗುತ್ತದೆ. ಅಮ್ಮಂದಿರು ಈ ಬಗ್ಗೆ ತಲೆ ಕೆಡಿಸಿಕೊಳ್ಳೋದಿಲ್ಲ. ತನ್ನಿಡೀ ಜೀವನವನ್ನು ಕುಟುಂಬ ಸಂಸಾರಕ್ಕಾಗಿ ಮೀಸಲಿಟ್ಟಿರೋ ಅಮ್ಮ ಅವಳ ಬಗ್ಗೆ ಎಂದಿಗೂ ಯೋಚಿಸೋದೇ ಇಲ್ಲ. ಗಂಡ, ಮಕ್ಕಳು ಬಿಟ್ಟರೆ ಬೇರೆ ಪ್ರಪಂಚವೇ ಆಕೆಗೆ ಗೊತ್ತಿರೋದಿಲ್ಲ. ಇನ್ನೂ ಆಕೆಯ ಸೌಂದರ್ಯದ ಬಗ್ಗೆ ತಲೆಕೆಡಿಸಿಕೊಳ್ಳುತ್ತಾಳಾ? ಖಂಡಿತ ಇಲ್ಲ.
ನಲ್ವತ್ತರ ನಂತರ ಮುಖದಲ್ಲಿ ಸುಕ್ಕು ಕಾಣಿಸಿಕೊಳ್ಳುವುದು ಸಹಜ. ನಮಗೆ ಒತ್ತಡ ಹೆಚ್ಚಾದಷ್ಟು ನಮ್ಮ ಮುಖದ ಮೇಲೆ ವಯಸ್ಸಾದ ಲಕ್ಷಣಗಳು ಬೇಗನೆ ಕಾಣಿಸಿಕೊಳ್ಳುತ್ತದೆ. ಅಮ್ಮಂದಿರು 6-7 ಗಂಟೆಗಳ ಕಾಲ ಸರಿಯಾಗಿ ನಿದ್ದೆಯನ್ನು ಮಾಡುವುದಿಲ್ಲ. ಸರಿಯಾದ ಪೋಷಕಾಂಶಯುಕ್ತ ಆಹಾರ ಸೇವಿಸೋದನ್ನು ಅವರು ಮರೆತು ಬಿಡುತ್ತಾರೆ. ಹೀಗಾಗಿ ಅವರಲ್ಲಿ ವಯಸ್ಸಾದ ಲಕ್ಷಣಗಳು ಬಹು ಬೇಗನೇ ಕಾಣಿಸಿಕೊಳ್ಳುತ್ತದೆ. ಈ ಅಮ್ಮಂದಿರ ದಿನಕ್ಕೆ ನೀವು ಸ್ಪೆಷಲ್ ಆಗಿ ಅಮ್ಮಂದಿರ ಚರ್ಮದ ಬಗ್ಗೆ ಯಾವ ರೀತಿ ಕಾಳಜಿಯನ್ನು ಮಾಡಬಹುದು ಅನ್ನೋದನ್ನು ತಿಳಿಯೋಣ.

1. ತೆಂಗಿನ ಎಣ್ಣೆಯನ್ನು ಬಳಕೆ ಮಾಡಿ
ತೆಂಗಿನ ಎಣ್ಣೆ ಪ್ರತಿಯೊಬ್ಬರ ಚರ್ಮಕ್ಕೂ ಹೋಲಿಕೆಯಾಗುತ್ತದೆ. ಇದು ತ್ವಚೆಯನ್ನು ಉತ್ತಮವಾಗಿ ಮೋಶ್ಚರ್ ಮಾಡುತ್ತದೆ. ದಿನ ನಿತ್ಯ ತೆಂಗಿನ ಎಣ್ಣೆಯಿಂದ ಮಸಾಜ್ ಮಾಡೋದ್ರಿಂದ ದಿನ ಕಳೆದಂತೆ ನಿಮ್ಮ ಚರ್ಮವು ಕಾಂತಿಯುತವಾಗುತ್ತದೆ. ಇನ್ನೂ ತೆಂಗಿನ ಎಣ್ಣೆಯನ್ನು ಹಚ್ಚೋದ್ರಿಂದ ನಿಮ್ಮ ಮುಖದ ಮೇಲಿನ ಪೋರ್ಸ್‌ಗಳಿಗೂ ಪರಿಹಾರ ಸಿಗುತ್ತದೆ. ಜೊತೆಗೆ ಚರ್ಮವು ಮೃದು ಮತ್ತು ಹೈಡ್ರೇಟ್ ಆಗುತ್ತದೆ.
2. ಅಮ್ಮನಿಗಾಗಿ ಮೇಕ್ ಒವರ್ ಮಾಡಿಸಿ
ಅಮ್ಮಂದಿರು ತುಂಬಾನೇ ಸಿಂಪಲ್ ಆಗಿ ಇರುತ್ತಾರೆ. ಗಂಡ ಹಾಗೂ ಮಕ್ಕಳ ಖುಷಿಯಲ್ಲೇ ಸಂತೋಷವನ್ನು ಕಾಣುತ್ತಾರೆ. ಈ ಅಮ್ಮಂದಿರ ದಿನಕ್ಕೆ ಸ್ಪೆಷಲ್ ಆಗಿ ಅವರಿಗಾಗಿ ಮೇಕ್ ಒವರ್ ಮಾಡಿಸಿ. ಅಮ್ಮನಿಗಾಗಿ ಮಾರ್ಡನ್ ಡ್ರೆಸ್ ಶಾಪಿಂಗ್ ಮಾಡಿ, ಜೊತೆಗೆ ಅವರಿಗಾಗಿ ಫೇಶಿಯಲ್, ಹಾಗೂ ಕೂದಲನ್ನು ಕಲರಿಂಗ್ ಮಾಡಿಸಿದರೆ ಖಂಡಿತ ಅವರಿಗೆ ಇಷ್ಟವಾಗುತ್ತದೆ. ಅವರಿಗೂ ಒಂದು ರೀತಿ ಹೊಸ ಅನುಭವವಾಗುತ್ತದೆ.
3. ಅಮ್ಮನೊಂದಿಗೆ ಯೋಗ ಮಾಡಿ
ಯೋಗ ಮಾಡುವುದರಿಂದ ಅನೇಕ ರೀತಿಯ ಲಾಭವನ್ನು ಪಡೆದುಕೊಳ್ಳಬಹುದು. ಯೋಗ ದೇಹದ ಆರೋಗ್ಯ ಮಾತ್ರವಲ್ಲದೇ ಮಾನಸಿಕ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು. ನಿಮಗೆ ದಿನ ನಿತ್ಯ ಬೆಳಗ್ಗೆ ಎದ್ದು ಯೋಗ ಮಾಡುವ ಅಭ್ಯಾ ಇದ್ದರೆ ನಿಮ್ಮ ಅಮ್ಮನನ್ನು ನಿಮ್ಮ ಜೊತೆಗೆ ಯೋಗ ಮಾಡೋದಕ್ಕೆ ತಿಳಿಸಿ. ಯೋಗ ಮಾಡುವುದರಿಂದ ಮುಖದ ಸುಕ್ಕು ಹಾಗೂ ಇತರ ಸಮಸ್ಯೆಗಳನ್ನು ತೆಗೆದು ಹಾಕಲು ಸಹಾಯವಾಗುತ್ತದೆ.
4. ಅಮ್ಮನಿಗಾಗಿ ಅಡುಗೆ ಮಾಡಿ
ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಅಮ್ಮನೇ ಮಕ್ಕಳಿಗಾಗಿ ರುಚಿ ರುಚಿಯಾಗಿ ಅಡುಗೆಯನ್ನು ಮಾಡಿ ಬಡಿಸುತ್ತಾಳೆ. ನಾವು ತಿಂದಿರೋ ತಟ್ಟೆ, ಲೋಟವನ್ನೂ ಕೂಡ ಆಕೆಯೇ ಕ್ಲೀನ್ ಮಾಡುತ್ತಾಳೆ. ಹೀಗಿರುವಾಗ ಅಮ್ಮಂದಿರ ದಿನದಂದು ಅಮ್ಮನಿಗೆ ನೀವು ಸ್ಪೆಷಲ್ ಆಗಿ ಊಟವನ್ನು ಮಾಡಿ ಬಡಿಸಿ. ಅದು ಕೂಡ ಪೋಷಕಾಂಶಯುಕ್ತ ರುಚಿಕರ ಆಹಾರವನ್ನೇ ಮಾಡಿ ಆಕೆಗೆ ಸತ್ಕಾರ ಮಾಡಿ. ಇದು ಆರೋಗ್ಯಕ್ಕೂ ಒಳ್ಳೆಯದು. ಹಾಗೂ ಆಕೆ ತುಂಬಾನೇ ಇಷ್ಟ ಪಡುತ್ತಾಳೆ.
5. ಆಹಾರದಲ್ಲಿ ವಿಟಮಿನ್ ಎ ಸಮೃದ್ಧವಾಗಿರಲಿ
ವಿಟಮಿನ್ ಎ ಯುಕ್ತ ಆಹಾರವನ್ನು ಸೇವಿಸೋದ್ರಿಂದ ಅದು ನಮ್ಮ ಚರ್ಮದಲ್ಲಿ ಕಾಣಿಸಿಕೊಳ್ಳುವ ವಯಸ್ಸಾದ ಗುಣ ಲಕ್ಷಣಗಳನ್ನು ತಡೆಯುತ್ತದೆ. ಇನ್ನೂ ವಿಟಮಿನ್ ಸಿ ಯಲ್ಲಿರುವ ಬೀಟಾ ಕ್ಯಾರೋಟಿನ್ ಸೂರ್ಯನ ನೇರಳಾತೀತವನ್ನು ತಡೆಯುತ್ತದೆ. ಹಾಗೂ ಚರ್ಮಕ್ಕೆ ರಕ್ಷಣೆಯನ್ನು ನೀಡುತ್ತದೆ. ನಿಮ್ಮ ಅಮ್ಮನಿಗೆ ವಿಟಮಿನ್ ಸಿ ಸಮೃದ್ಧವಾಗಿರುವ ಆಹಾರವನ್ನೇ ನೀಡಿ.
ಇಷ್ಟು ವರ್ಷದಿಂದ ಅಮ್ಮ ನಿಮ್ಮ ಆರೋಗ್ಯದ ಕಾಳಜಿ ಮಾಡುತ್ತಿದ್ದರು ಈ ವರ್ಷದಿಂದ ನೀವು ನಿಮ್ಮ ಅಮ್ಮನ ಆರೋಗ್ಯದ ಕಾಳಜಿಯನ್ನು ಮಾಡಿ. ಅದ್ರಲ್ಲೂ ಮುಖ್ಯವಾಗಿ ಆಕೆಯ ತ್ವಚೆಯ ಆರೈಕೆಯ ಬಗ್ಗೆ ಹೆಚ್ಚಿನ ಗಮನ ಕೊಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

