Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಬೆಳಗ್ಗೆ ಎದ್ದಾಗ ಶರೀರದಲ್ಲಿ ಈ ಲಕ್ಷಣಗಳು ಕಂಡು ಬಂದರೆ ಕಿಡ್ನಿ ಆರೋಗ್ಯ ಜೋಪಾನ!!
ಯಾವುದೇ ಆರೋಗ್ಯ ಸಮಸ್ಯೆಯಾಗಲಿ ಪ್ರಾರಂಭದಲ್ಲಿ ಗುರುತಿಸಿದರೆ ಅದನ್ನು ಗುಣ ಪಡಿಸಲು ಸುಲಭವಾಗುವುದು, ಅದರಂತೆ ಕಿಡ್ನಿ ಸಮಸ್ಯೆಯೂ ಹೌದು.ಕಿಡ್ನಿ ಸಮಸ್ಯೆ ಪ್ರಾರಂಭದಲ್ಲಿ ಹೆಚ್ಚಿನವರಿಗೆ ಗೊತ್ತೇ ಆಗುವುದಿಲ್ಲ, ಆ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡುತ್ತಾರೆ, ಹೀಗೆ ಮಾಡುವುದರಿಂದ ಕಿಡ್ನಿ ಆರೋಗ್ಯ ಸಂಪೂರ್ಣ ಹಾಳಾದ ಮೇಲಷ್ಟೇ ತಿಳಿಯುವುದು. ಹಾಗಾಗಿ ಕೆಲವೊಂದು ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಲೇಬೇಡಿ, ಅದರಲ್ಲಿಯೂ ಬೆಳಗ್ಗೆ ನಿಮ್ಮ ಶರೀರದಲ್ಲಿ ಈ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷ್ಯ ಮಾಡಲೇಬೇಡಿ.

ಕಣ್ಣುಗಳಲ್ಲಿ ಊತ
ಬೆಳಗ್ಗೆ ಎದ್ದಾಗ ಮುಖದಲ್ಲಿ ಊತ ಕಂಡು ಬಂದರೆ ಕಣ್ಣುಗಳ ಭಾಗದಲ್ಲಿ ಊತ ಕಂಡು ಬರುತ್ತದೆ. ಕಿಡ್ನಿ ಸೋಡಿಯಂ ಮತ್ತು ದ್ರವಾಂಶ ಸಮತೋಲನ ಮಾಡುತ್ತದೆ, ಅದೇ ಕಿಡ್ನಿ ಸಮಸ್ಯೆ ಉಂಟಾದಾಗ ಮುಖದಲ್ಲಿ ಊತ, ಕಣ್ಣುಗಳಲ್ಲಿ ಊತ ಕಂಡು ಬರುವುದು. ಹಾಗಾಗಿ ಬೆಳಗ್ಗೆ ಎದ್ದಾಗ ಮುಖದಲ್ಲಿ ಊತ, ಕಣ್ಣಿನ ಕೆಳ ಭಾಗದಲ್ಲಿ ಊತ ಕಂಡು ಬರುವುದು.
ಮೂತ್ರ ನೊರೆ-ನೊರೆಯಾಗಿ ಹೋಗುವುದು
ನೀವು ಮೂತ್ರ ಮಾಡಲು ಹೋದಾಗ ನಿಮ್ಮ ಮೂತ್ರವನ್ನು ಗಮನಿಸಿ, ಮೂತ್ರ ನೊರೆ-ನೊರೆಯಾಗಿ ಹೋದರೆ ನೀವು ಈ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬೇಡಿ. ಕಿಡ್ನಿಯಲ್ಲಿ ಸಮಸ್ಯೆಯಿದ್ದರೆ ಮೂತ್ರ ತುಂಬಾನೇ ನೊರೆ-ನೊರೆಯಾಗಿ ಬರುವುದು. ಈ ರೀತಿ ಮೂತ್ರ ಬೆಳಗ್ಗೆ ನಾವು ಎದ್ದಾಗ ಹೋದರೆ ಅದು ಸಾಮಾನ್ಯ ಎಂದು ನಿರ್ಲಕ್ಷ್ಯ ಮಾಡಬೇಡಿ. ಒಂದು ವಾರದಿಂದ ನೀವು ಇದೇ ರೀತಿ ಗಮನಿಸಿದರೆ ನೀವು ಒಮ್ಮೆ ಕಿಡ್ನಿ ಆರೋಗ್ಯದ ಬಗ್ಗೆ ತಿಳಿಯಲು ಪರೀಕ್ಷೆ ಮಾಡಿಸುವುದು ಒಳ್ಳೆಯದು.
ಬೆಳಗ್ಗೆ ಎದ್ದಾಗ ತಲೆ ಸುತ್ತು, ಕಣ್ಣುಗಳು ಮಂಜಾಗುವುದು
ಬೆಳಗ್ಗೆ ಎದ್ದಾಗ ಸುಸ್ತು ಅನಿಸುವುದು, ಕಣ್ಣುಗಳು ಮಂಜಾಗುವುದು, ಕಣ್ಣು ಕತ್ತಲು ಬಂದಂತೆ ಅನಿಸುವುದು ಈ ರೀತಿ ಅನಿಸುತ್ತಿದ್ದರೆ ಅದು ಕಿಡ್ನಿ ಸಮಸ್ಯೆಯ ಲಕ್ಷಣವಾಗಿದೆ. ಬೆಳಗ್ಗೆ ಯಾವುದೇ ಕೆಲಸದ ಕಡೆಗೆ ಗಮನಹರಿಸಲು ಕಷ್ಟವಾಗುವುದು, ತುಂಬಾನೇ ಸುಸ್ತು ಅನಿಸುವುದು ಈ ರೀತಿ ಆಗುತ್ತಿದ್ದರೆ ಈ ಬಗೆಯ ಲಕ್ಷಣ ನಿರ್ಲಕ್ಷ್ಯ ಮಾಡಲಬೇಡಿ.
ಮೈಯೆಲ್ಲಿ ತುರಿಗೆ
ತ್ವಚೆ ತುಂಬಾನೇ ಡ್ರೈಯಾಗುವುದು, ತ್ವಚೆಯಲ್ಲಿ ತುರಿಕೆ ಈ ಬಗೆಯ ಸಮಸ್ಯೆ ಕಂಡು ಬಂದಾಗ ತ್ವಚೆ ಸಮಸ್ಯೆವಿರಬಹುದು ಎಂದು ನಿರ್ಲಕ್ಷ್ಯ ಮಾಡಬೇಡಿ, ಕಿಡ್ನಿಗೆ ಹಾನಿಯುಂಟಾದಾಗ ಶರೀರದಿಂದ ಕಶ್ಮಲವನ್ನು ಹೊರ ಹಾಕಲು ಕಷ್ಟವಾಗುವುದು, ಈ ಕಶ್ಮಲಗಳು ದೇಹದಲ್ಲಿಯೇ ಉಳಿದಾಗ ಈ ರಿತಿ ಅಲರ್ಜಿ ಸಮಸ್ಯೆ ಉಂಟಾಗುವುದು, ಮೈ ತುಂಬಾನೇ ತುರಿಸುವುದು.
ಬಾಯಿ ದುರ್ವಾಸನೆ ಬೀರುವುದು
ಬೆಳಗ್ಗೆ ಎದ್ದಾಗ ಎಲ್ಲರ ಬಾಯಿ ಕೂಡ ದುರ್ವಾಸನೆ ಬೀರುತ್ತದೆ, ಆದರೆ ನಿಮ್ಮ ಬಾಯಿ ತುಂಬಾನೇ ದುರ್ವಾಸನೆ ಬೀರಿದರೆ ಈ ಬಗೆಯ ಲಕ್ಷಣ ನಿರ್ಲಕ್ಷ್ಯ ಮಾಡಬೇಡಿ. ಕಿಡ್ನಿ ತನ್ನ ಕಾರ್ಯ ಸರಿಯಾಗಿ ನಿರ್ವಹಿಸದೆ ಹೋದಾಗ ಬಾಯಿ ದುರ್ವಾಸನೆ ಬೀರುತ್ತದೆ.
ಇತರ ಲಕ್ಷಣಗಳು
ಕಾಲುಗಳಲ್ಲಿ ಊತ
ಆಗಾಗ ಮೂತ್ರವಿಸರ್ಜನೆ ಹೋಗುವುದು
ಮೂತ್ರ ಬಂದಂತೆ ಅನಿಸುವುದು ಆದರೆ ಸ್ವಲ್ಪವೇ ಸ್ವಲ್ಪ ಮೂತ್ರ ಹೋಗುವುದು
ಮೂತ್ರದಲ್ಲಿ ರಕ್ತ
ತಲೆನೋವು
ಮೈಕೈ ಸೆಳೆತ
ಉಸಿರಾಟಕ್ಕೆ ತೊಂದರೆ
ಬಾಯಿಯಲ್ಲಿ ಈ ಕಬ್ಬಿಣ ಹಾಕಿದಾಗ ಬರುವ ರುಚಿಯಂತೆ ಅನಿಸುವುದು
ಹಸಿವು ಇಲ್ಲದಿರುವುದು
ಈ ಬಗೆಯ ಲಕ್ಷಣಗಳು ಬಂದರೆ ಏನೂ ದೊಡ್ಡ ಸಮಸ್ಯೆಯಿಲ್ಲ ಎಂದು ನಿರ್ಲಕ್ಷ್ಯ ಮಾಡಬೇಡಿ, ಕಿಡ್ನಿ ತನ್ನ ಆರೋಗ್ಯ ಸರಿಯಾಗಿ ಮಾಡುತ್ತಿಲ್ಲ ಎಂದಾದರೆ ನಿರ್ಲಕ್ಷ್ಯ ಮಾಡುವಂಥದ್ದಲ್ಲ, ಪ್ರಾರಂಭದಲ್ಲಿ ಕಿಡ್ನಿ ಸಮಸ್ಯೆ ಗುರುತಿಸಿದರೆ ಚೇತರಿಸುವುದು ಸುಲಭವಾಗುವುದು, ಆದ್ದರಿಂದ ಆರೋಗ್ಯದ ಬಗ್ಗೆ ಗಮನಹರಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
