Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಮುಟ್ಟಿನ ಸಮಯದಲ್ಲಿ ಪತಿ-ಪತ್ನಿ ದೈಹಿಕವಾಗಿ ಒಂದಾಗ ಬಯಸುವಿರಾ?
ಮುಟ್ಟಿನ ಸಮಯದಲ್ಲಿ ಬಹುತೇಕ ದಂಪತಿ ಲೈಂಗಿಕಕ್ರಿಯೆಯಲ್ಲಿ ತೊಡಗಿಕೊಳ್ಳುವುದಿಲ್ಲ, ರಕ್ತಸ್ರಾವದ ಸಮಯದಲ್ಲಿ ಲೈಂಗಿಕ ಕ್ರಿಯೆ ನಡೆಸಬಹುದೇ ಎಂಬ ಗೊಂದಲ ಹಲವರಲ್ಲಿದೆ, ಆದರೆ ನೀವು ವೈದ್ಯರ ಬಳಿ ಕೇಳಿದರೆ ಈ ನೀವು ಕಂಫರ್ಟ್ ಆಗಿದ್ದರೆ ಈ ಸಮಯದಲ್ಲೂ ಲೈಂಗಿಕ ಕ್ರಿಯೆ ನಡೆಸುವುದರಲ್ಲಿ ಯಾವುದೇ ಸಮಸ್ಯೆಯಿಲ್ಲ ಎಂಬುವುದಾಗಿ ವೈದ್ಯರು ಹೇಳುತ್ತಾರೆ.

ಇನ್ನು ಸಂತಾನೋತ್ಪತ್ತಿ ಚಿಕಿತ್ಸೆ ಪಡೆಯುತ್ತಿದ್ದವರಲ್ಲಿ ಈ ದಿನಗಳಲ್ಲೂ ಒಂದಾಗಲು ವೈದ್ಯರು ಸೂಚಿಸುವುದುಂಟು. ಕೆಲವರಿಗೆ ಈ ಸಮಯದಲ್ಲಿ ಬೆಡ್‌ಶೀಟ್‌ನಲ್ಲಿ ರಕ್ತಕಲೆಗಳು ಉಂಟಾಗುತ್ತದೆ ಎಂದು ಹಿಂಜರಿಕೆ ಉಂಟಾಗುವುದು, ಆದರೆ ಅದರ ಬಗ್ಗೆ ಹೆಚ್ಚಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ ಅಥವಾ ಆ ಸಮಯದಲ್ಲಿ ಹಳೆಯ ಟವಲ್ ಬಳಸಿ ಒಂದಾಗುತ್ತೇವೆ ಎಂದು ಹೇಳುವವರು ಇದ್ದಾರೆ.
ಇನ್ನು ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ ಇದು ಸುರಕ್ಷಿತವೇ ಎಂದು ಕೇಳುವುದಾದರೆ ನೀವು ನಿಮ್ಮ ವೈದ್ಯರನ್ನು ಕೇಳಿದಾಗ ಅವರು ಇದೇ ಅಭಿಪ್ರಾಯ ಹೇಳುವುದರಿಂದ ಯಾವುದೇ ಸಮಸ್ಯೆ ಇರುವುದಿಲ್ಲ. ಒಂದೇ ಸಂಗಾತಿ ಜೊತೆ ಸಂಪರ್ಕ ಹೊಂದಿರುವವರು ಈ ಕುರಿತು ಹೆಚ್ಚು ತಲೆಕೆಡಿಸಿಕೊಳ್ಳಬೇಕಾಗಿಲ್ಲ.
ಪತಿ-ಪತ್ನಿ ಈ ಕುರಿತು ಓಪನ್ ಆಗಿ ಮಾತನಾಡಬೇಕು?
ಈ ದಿನಗಳಲ್ಲಿ ಒಂದಾಗಲು ಇಬ್ಬರು ಕಂಫರ್ಟ್ ಆಗಿರಬೇಕು, ಇಬ್ಬರಿಗೆ ಒಕೆ ಅಂದರೆ ಯಾವುದೇ ಸಮಸ್ಯೆ ಇರಲ್ಲ. ಈ ಸಮಯದಲ್ಲಿ ಶುಚಿತ್ವ ಕಾಪಾಡಲು ಏನು ಮಾಡಬೇಕು ಎಂದು ನೋಡೋಣ ಬನ್ನಿ:
ಮೆನ್‌ಸ್ಟ್ರೊಲ್ ಕಪ್ ಅಥವಾ ಫೀಮೆಲ್ ಕಾಂಡೋಮ್ ಬಳಸಿದರೆ ಒಳ್ಲೆಯದು
ಇದರಿಂದ ರಕ್ತಸ್ರಾವ ಬೆಡ್‌ಶೀಟ್‌ಗೆ ಹರಡುವುದು ತಡೆಗಟ್ಟಬಹುದು. ಮುಟ್ಟಿನ ಕಪ್ ಧರಿಸಿದರೆ ಮುಟ್ಟಿನ ಅನುಭವ ಉಂಟಾಗುವುದಿಲ್ಲ, ಇತರ ಸಮಯದಂತೆ ಆರಾಮವಾಗಿ ಒಂದಾಗಬಹುದು.
ಟ್ಯಾಂಫೂನ್ ಬಳಸಬಹುದು
ಟ್ಯಾಂಫೂನ್ ಧರಿಸಿದರೆ ನಿಮ್ಮ ಚಟುವಟಿಕೆಯತ್ತ ಗಮನಹರಿಸಬಹುದು. ಎಲ್ಲಿ ರಕ್ತಸ್ರಾವವಾಗುವುದೋ ಎಂಬ ಆತಂಕವಿರಲ್ಲ.
ಸುರಕ್ಷತೆ ವಿಧಾನ ಬಳಸಿ
ನೀವು ಗರ್ಭಧಾರಣೆ ತಡೆಗಟ್ಟಬೇಕು, ಲೈಂಗಿಕ ಸೋಂಕಿನ ಆತಂಕವಿರಬಾರದು ಎಂದು ಭಯಸುವುದಾದರೆ ಸುರಕ್ಷಿತ ಕ್ರಮ ಅನುಸರಿಸಿ. ಮಹಿಳೆಯರು ಈ ಸಮಯದಲ್ಲಿ ಸುರಕ್ಷತೆ ಕ್ರಮ ಅನುಸರಿಸಿದರೆ ಮೂತ್ರ ಸೋಂಕು ಸೇರಿ ಅನೇಕ ಸಮಸ್ಯೆ ತಡೆಗಟ್ಟಬಹುದು.
ಸ್ನಾನ ಮಾಡಿ
ಮುಟ್ಟಿನ ಸಮಯದಲ್ಲಿ ಲೈಂಗಿಕ ಕ್ರಿಯೆ ಮೂಲಕ ಶುಚಿತ್ವ ಕಾಪಾಡಲು ಸ್ನಾನ ಮಾಡಿ, ಇದು ತಾಜಾತನದ ಅನುಭವ ನೀಡುವುದು, ಅಲ್ಲದೆ ಮುಟ್ಟಿನ ಸ್ವಚ್ಛತೆ ಕಾಪಾಡಲು ಬೆಡ್‌ಶೀಟ್ ಬದಲಾಯಿಸಿ. ಇಷ್ಟು ಮಾಡಿದರೆ ಈ ಸಮಯದಲ್ಲಿ ಗಂಡ-ಹೆಂಡತಿ ದೂರ ಇರಬೇಕಾಗಿಲ್ಲ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
