Latest Updates
-
ನಿಮ್ಮ ಅತ್ತಿಗೆಗೆ ಈ ಹಾರ್ಟ್ ಟಚಿಂಗ್ ಶಾಯರಿ ಕಳಿಸಿ! ಲವ್ & ಕನೆಕ್ಷನ್ ಡಬಲ್ ಆಗುತ್ತೆ - Happy Holi 2026 -
ಸಿಸ್ಟರ್.. 40ರ ಬಳಿಕ ಪಿಸ್ತಾ ಒಂದು ವರ! ಮೂಳೆ, ಹೃದಯ & ಹಾರ್ಮೋನ್ ಬ್ಯಾಲೆನ್ಸ್.. ಪಿಸ್ತಾನೇ ಏಕೆ ಬೇಕು? -
ಹೋಳಿ ಹಬ್ಬದಂದೇ 4 ಗ್ರಹಗಳ ವಕ್ರ ನಡೆ: ಈ 5 ರಾಶಿಗಳ ಮೇಲೆ ಭಾರೀ ಪರಿಣಾಮ.. ಭರ್ಜರಿ ಧನಲಾಭ! ನೀವೂ ಲಕ್ಕಿನಾ? -
ದೇಸಿ ಮಸಾಲೆಯ ಘಮ, ಮಣ್ಣಿನ ಮಡಕೆಯ ರುಚಿ! ಮನೆಯಲ್ಲೇ ಮಾಡಿ ಛತ್ತೀಸ್ಗಢ ಸ್ಪೆಷಲ್ ಚಿಕನ್ ಕರಿ.. ಈಸಿ ರೆಸಿಪಿ ಇಲ್ಲಿದೆ -
ಮಾತಿನ ಹೋಳಿ.. ಮನದ ಸಂಭ್ರಮ.. ಇದು ಬಣ್ಣಗಳ ಕೇಳಿ! ರೊಮ್ಯಾಂಟಿಕ್ ಶುಭಾಶಯಗಳು ಇಲ್ಲಿವೆ -
ಚಂದ್ರಗ್ರಹಣದ ದಿನ.. ಪ್ರೇಮ ಜೀವನದಲ್ಲಿ ಸಂಕಷ್ಟ! ಪ್ರಣಯ ಸಂಬಂಧಗಳಲ್ಲಿ ಎಚ್ಚರ -
March 03 Horoscope: ವರ್ಷದ ಮೊದಲ ಚಂದ್ರಗ್ರಹಣ.. ಅಪಘಾತ ಸಂಭವಿಸುವ ಸಾಧ್ಯತೆ! ಖರ್ಚುಗಳು ಹೆಚ್ಚಾಗಲಿವೆ -
ಬೆಳಗ್ಗೆ ಮಾಡಿದ ರೊಟ್ಟಿ ಸಂಜೆಯಾದರೂ ಫ್ರೆಶ್ & ಸಾಫ್ಟ್ ಆಗಿರುತ್ತೆ! ಅಮ್ಮನ ಸೂಪರ್ ಕಿಚನ್ ಟಿಪ್ಸ್ ಇಲ್ಲಿದೆ -
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ? ಯಾರಿಗೆ ಸಂಕಷ್ಟ? ನಿಮ್ಮ ರಾಶಿ ಫಲ ಇಲ್ಲಿದೆ -
ಉಳಿದ ಅನ್ನದಿಂದ ಮಾಡಿ ಗರಿಗರಿಯಾದ ಕುರ್ಕುರೆ! ಹೊರಗಿನ ಸ್ನ್ಯಾಕ್ಗೂ ಮೀರಿದ ರುಚಿ.. ಮಾಡೋದು ಹೇಗೆ?
ಮಹಿಳೆಯರೇ, ಪ್ಯಾಂಟಿ ಲೈನರ್ ಹಾಗೂ ಸ್ಯಾನಿಟರಿ ಪ್ಯಾಡ್ ನಡುವಿನ ವ್ಯತ್ಯಾಸವೇನು ಗೊತ್ತೇ ?
ಮನೆಯಲ್ಲಿ ಹೆಣ್ಣು ಮಗು ದೊಡ್ಡವಳಾದ್ಳು ಅಂದ್ರೆ ಹಲವರಿಗೆ ಸಂಭ್ರಮ. ಕೆಲವರು ಮನೆಯ ಹೆಣ್ಣು ಋತುಮತಿ ಆಗುತ್ತಿದ್ದ ಹಾಗೆ ಸಾಂಪ್ರದಾಯಿಕವಾಗಿ ಋತುಚಕ್ರದ ಆಚರಣೆಯನ್ನು ಕೂಡ ಮಾಡುತ್ತಾರೆ. ಈ ಹಿಂದೆ ಒಬ್ಬ ಹೆಣ್ಣು ಮಗಳು ಋತುಮತಿ ಆದರೆ ಸಾಕಷ್ಟು ಕಷ್ಟ ಅನುಭವಿಸಬೇಕಿತ್ತು. ಮೊದಲು ಸ್ಯಾನಿಟರಿ ನ್ಯಾಪ್ಕಿನ್ ಗಳಾಗಲಿ, ಪ್ಯಾಡ್ ಗಳಾಗಲಿ ಇರಲಿಲ್ಲ. ಆದರೆ ಈಗ ನಾವು ಬಹಳ ಮುಂದುವರೆದಿದೆ. ಹೆಣ್ಣು ಮಕ್ಕಳು ಬೆಳೆದು ದೊಡ್ಡವರಾಗುತ್ತಿದ್ದ ಹಾಗೆ ಪ್ರತಿ ಹಂತದಲ್ಲಿಯೂ ಒಂದೊಂದು ದೈಹಿಕ ಬದಲಾವಣೆಗಳು ಆಗುತ್ತವೆ. ಅದೇ ರೀತಿ ಋತುಮತಿ ಆದಾಗ ಹಾರ್ಮೋನ್ ಬದಲಾವಣೆಗಳು ಕೂಡ ಆಗುತ್ತವೆ.
ಹೆಣ್ಣು ಹದಿಹರೆಯದ ವಯಸ್ಸಿಗೆ ಋತುಚಕ್ರದ ಸ್ಥಿತಿಗೆ ಪ್ರವೇಶಿಸುತ್ತಾಳೆ. ಆಗ ದೇಹದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತವೆ ರಕ್ತಸ್ರಾವವನ್ನು ತಡೆಗಟ್ಟಲು ಸಾಧ್ಯವಿಲ್ಲ. ಆದರೆ ಅದಕ್ಕೆ ಸರಿಯಾದ ರೀತಿಯಲ್ಲಿ ನ್ಯಾಪ್ಕಿನ್ ಪ್ಯಾಡ್ ಗಳನ್ನು ಬಳಸಿ ಯಾವುದೇ ಸಮಸ್ಯೆ ಆಗದಂತೆ ಅಥವಾ ರಕ್ತ ಹೊರಗೆ ಚಲ್ಲದಂತೆ ತಡೆಗಟ್ಟಲು ಸಾಧ್ಯ. ಇದು ಬಹಳ ಸಾಮಾನ್ಯವಾಗಿ ವಿಷಯ ಆದರೆ ಸಾಕಷ್ಟು ಜನರಿಗೆ ಸ್ಯಾನಿಟರಿ ಪ್ಯಾಡ್ ಹಾಗೂ ಪ್ಯಾಂಟಿ ಲೈನರ್ ಗಳ ನಡುವಿನ ವ್ಯತ್ಯಾಸ ಗೊತ್ತಿರುವುದಿಲ್ಲ ಹಾಗಾಗಿ ಯಾವ ಸಂದರ್ಭದಲ್ಲಿ ಯಾವುದನ್ನು ಬಳಸಬೇಕು ಎಂಬುದನ್ನ ತಿಳಿದುಕೊಳ್ಳುವುದು ಬಹಳ ಮುಖ್ಯ.

ಪ್ಯಾಂಟಿ ಲೈನರ್ ಹಾಗೂ ಸ್ಯಾನಿಟರಿ ನ್ಯಾಪ್ಕಿನ್ ನಡುವಿನ ವ್ಯತ್ಯಾಸವೇನು?
ನೋಡುವುದಕ್ಕೆ ಸ್ಯಾನಿಟರಿ ನ್ಯಾಪ್ಕಿನ್ ಗಳು ಹಾಗೂ ಪ್ಯಾಂಟಿ ಲೈನರ್ ಒಂದೇ ರೀತಿಯಾಗಿರುತ್ತದೆ ಆದರೆ ಪ್ಯಾಂಟಿ ಲೈನರ್ ಪ್ಯಾಡ್ ಗಳಿಗಿಂತಲೂ ತೆಳ್ಳಗಿರುತ್ತದೆ. ನಿಮ್ಮ ಒಳಉಡುಪನ್ನು ಸ್ವಚ್ಛವಾಗಿಟ್ಟುಕೊಳ್ಳಲು ಸಾಮಾನ್ಯ ಸಂದರ್ಭಗಳಲ್ಲಿಯೂ ಕೂಡ ಪ್ಯಾಂಟಿ ಲೈನರ್ ಗಳನ್ನು ಬಳಸಬಹುದು ಇದು ನೈರ್ಮಲ್ಯ ಕಾಪಾಡಿಕೊಳ್ಳಲು ಬಹಳ ಮುಖ್ಯ ಪಾತ್ರ ವಹಿಸುತ್ತದೆ.
ಸಾಮಾನ್ಯವಾಗಿ ಋತುಚಕ್ರದ ಅವಧಿಯಲ್ಲಿ ಸ್ಯಾನಿಟರಿ ನಾಪ್ಕಿನ್ ಅಥವಾ ಪ್ಯಾಡ್ ಗಳನ್ನ ಬಳಸಲಾಗುತ್ತದೆ ಇದು ಕಾಟನ್ ನಿಂದ ಮಾಡಲ್ಪಟ್ಟಿದ್ದು ತುಸು ದಪ್ಪವಾಗಿರುತ್ತದೆ. ಜೊತೆಗೆ ಹೆಚ್ಚು ಸಾಂದ್ರತೆಯನ್ನು ಹೀರಿಕೊಳ್ಳುವ ಶಕ್ತಿಯನ್ನು ಹೊಂದಿರುತ್ತದೆ. ಅತಿ ಹೆಚ್ಚು ರಕ್ತಸ್ರಾವ ಆಗುವ ಸಂದರ್ಭದಲ್ಲಿ ಪ್ಯಾಡ್ ಗಳನ್ನು ಬಳಸಬಹುದೇ ಹೊರತು ಪ್ಯಾಂಟಿ ಲೈನರ್ ಗಳನ್ನು ಅಲ್ಲ.
ಪ್ಯಾಂಟಿ ಲೈನರ್ ನ್ನು ನೀವು ಯಾವುದೇ ಸಂದರ್ಭದಲ್ಲಿ ಬಳಸಬಹುದು. ಅಂದರೆ ಕೆಲವೊಮ್ಮೆ ಮಹಿಳೆಯರಲ್ಲಿ ವೈಟ್ ಡಿಸ್ಚಾರ್ಜ್ ಕೂಡ ಆಗುವ ಸಂದರ್ಭ ಇರುತ್ತದೆ ಜೊತೆಗೆ ಮೂತ್ರದ ಸಮಸ್ಯೆ ಅಥವಾ ಡಿಸ್ಚಾರ್ಜ್ ಆಗುವುದು, ಮುಟ್ಟಿನ ನಾಲ್ಕು ಮತ್ತು ಐದನೆಯ ದಿನ ಸ್ಪಾಟಿಂಗ್ ಆಗುವುದು ಇಂತಹ ಸಂದರ್ಭದಲ್ಲಿ ನಿಮ್ಮ ಒಳಉಡುಪಿಗೆ ಯಾವುದೇ ದ್ರವ ರೂಪ ಅಂಟುಕೊಳ್ಳದ ಹಾಗೆ ಸ್ಯಾನಿಟರಿ ನಾಪ್ಕಿನ್ ಬದಲು ಪ್ಯಾಂಟಿ ಲೈನರ್ ಗಳನ್ನು ಬಳಸಬಹುದು. ಯಾಕೆಂದರೆ ಪ್ಯಾಂಟಿ ಲೈನರ್ ಗಳು ಬಹಳ ತೆಳುವಾಗಿರುತ್ತದೆ ನಿಮಗೆ ಅದನ್ನ ಬಳಸಿದರೆ ಕಿರಿಕಿರಿ ಆಗುವುದಿಲ್ಲ ಜೊತೆಗೆ ಪ್ಯಾಂಟಿ ಧರಿಸಿದಂತೆಯೇ ಅನುಭವವಾಗುತ್ತದೆ.
ಇನ್ನು ಕೆಲವೊಮ್ಮೆ ಋತುಚಕ್ರದ ಅವಧಿಯಲ್ಲಿ ವ್ಯತ್ಯಾಸವಾಗಬಹುದು ಯಾವಾಗ ಆಗಬಹುದು ಎನ್ನುವ ನಿಖರತೆ ಇಲ್ಲದೆ ಇದ್ದಾಗ ನೀವು ಪ್ಯಾಂಟಿ ಲೈನರ್ ಗಳನ್ನು ಬಳಸಬಹುದು. ಈ ರೀತಿ ಮಾಡುವುದರಿಂದ ಹುಡುಗಿಯರು ಹೊರಗಡೆ ಹೋದಾಗಲೂ ಯಾವುದೇ ರೀತಿಯ ಮುಜುಗರ ಪಟ್ಟುಕೊಳ್ಳುವ ಸಂದರ್ಭ ಎದುರಾಗುವುದಿಲ್ಲ.
ಸ್ಯಾನಿಟರಿ ಪ್ಯಾಡ್ ಗಳು ದಪ್ಪವಾಗಿರುತ್ತದೆ ಹಾಗಾಗಿ ಇದು ಬಹಳ ತೆಳುವಾಗಿರುತ್ತದೆ. ಪ್ಯಾಂಟಿ ಲೈನರ್ ಮಹಿಳೆಯರ ಶುಚಿತ್ವ ಕಾಯ್ದುಕೊಳ್ಳಲು ಬಹಳ ಅತ್ಯುತ್ತಮ ಆಯ್ಕೆಯಾಗಿದೆ. ಮಹಿಳೆಯರು ತಮ್ಮ ಯೋನಿ ಭಾಗವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಶುಷ್ಕವಾಗಿಟ್ಟುಕೊಳ್ಳುವುದು ಬಹಳ ಮುಖ್ಯ ಹಾಗಾಗಿ ಪ್ಯಾಂಟಿ ಲೈನರ್ ಬಳಸಬಹುದು.
ಪ್ಯಾಟಿ ಲೈನರ್ ಆಯ್ದುಕೊಳ್ಳುವುದು ಹೇಗೆ!
ಪ್ಯಾಂಟಿ ಲೈನರ್ ಗಳು ಮಹಿಳೆಯರಿಗೆ ಅತಿ ಉಪಯುಕ್ತವಾಗುತ್ತವೆ ಸ್ಪೋರ್ಟ್ಸ್ ನಲ್ಲಿ ಇರುವವರಿಗೆ ವರ್ಕೌಟ್ ಮಾಡುವವರಿಗೆ ಕೂಡ ಶುಷ್ಕ ಅನುಭವ ನೀಡಲು ಪ್ಯಾಂಟಿ ಲೈನರ್ ಬಳಸುವುದು ಬಹಳ ಒಳ್ಳೆಯದು. ಇದು ಕೂಡ ದೀರ್ಘ ಸಮಯದವರೆಗೆ ದ್ರವವನ್ನು ಲಾಕ್ ಮಾಡುತ್ತದೆ ತೆಳುವಾಗಿದ್ದು ನೀವು ಅತಿ ಹೆಚ್ಚು ರಕ್ತಸ್ರಾವ ಅಥವಾ ಇತರ ಲೀಕೇಜ್ ತಡೆಗಟ್ಟಲು ಸಾಧ್ಯವಿಲ್ಲ. ಹಾಗಾಗಿ ಋತುಚಕ್ರದ ಮುಖ್ಯ ಸಮಯದಲ್ಲಿ ಪ್ಯಾಂಟಿ ಲೈನರ್ ಬಳಸುವುದು ಸೂಕ್ತವಲ್ಲ.
ಇನ್ನು ಪ್ಯಾಂಟಿ ಲೈನರ್ ನಲ್ಲಿ ಸುಗಂಧ ದ್ರವ್ಯ ಲೇಪಿತ ಲೈನರ್ಗಳು ಕೂಡ ಸಿಗುತ್ತವೆ. ಕೆಲವು ಮಹಿಳೆಯರಿಗೆ ಲಘುವಾಗಿ ಪರಿಮಳ ಹೊಂದಿರುವ ಪ್ಯಾಡ್ ಗಳು ಇಷ್ಟ. ಆದರೆ ಇನ್ನೂ ಕೆಲವರು ಈ ರೀತಿ ಸುಗಂಧ ಪ್ಯಾಡ್ ಅಥವಾ ಪ್ಯಾಂಟಿ ಲೈನರ್ ಬಳಸುವುದಿಲ್ಲ ಕಾರಣ ಇದರಿಂದ ದದ್ದು, ತುರಿಕೆ ಮೊದಲಾದವು ಉಂಟಾಗಬಹುದು. ಮಹಿಳೆಯರ ಜನನಾಂಗ ಬಹಳ ಸೂಕ್ಷ್ಮ ಚರ್ಮವನ್ನು ಹೊಂದಿರುವುದರಿಂದ ನಿಮ್ಮ ತ್ವಚೆಗೆ ಹೊಂದಾಣಿಕೆಯಾಗುವ ಅಂತಹ ಪ್ಯಾಂಟಿ ಲೈನರ್ ಅಥವಾ ಸ್ಯಾನಿಟರಿ ಪ್ಯಾಡ್ ಅನ್ನು ಬಳಸಿ. ಸುಗಂಧದ ದ್ರವ್ಯವಿಲ್ಲದ ನೈಸರ್ಗಿಕವಾದ ಹತ್ತಿ ಬಟ್ಟೆಯಿಂದ ಮಾಡಿದ ಪ್ಯಾಂಟಿ ಲೈನರ್ ಆಯ್ದುಕೊಳ್ಳುವುದು ಬಹಳ ಒಳ್ಳೆಯದು.
ಹಾಗೂ ಸ್ಯಾನಿಟರಿ ಪ್ಯಾಡ್ ನೋಡುವುದಕ್ಕೆ ಒಂದೇ ರೀತಿ ಇರುತ್ತದೆ. ಆದರೆ ಇವೆರಡರಲ್ಲಿ ಇರುವ ಬಹುಮುಖ್ಯ ವ್ಯತ್ಯಾಸವೆಂದರೆ ಹೀರಿಕೊಳ್ಳುವ ಸಾಮರ್ಥ್ಯ. ಡಿಸ್ಚಾರ್ಜ್ ಹೆಚ್ಚಾಗಿದ್ದರೆ ನೀವು ಪ್ಯಾಂಟಿ ಲೈನರ್ ಬಳಸಿದರೆ ಪ್ರಯೋಜನವಿಲ್ಲ ಏಕೆಂದರೆ ಇದು ಬಹಳ ತೆಳುವಾಗಿದ್ದು ಹೆಚ್ಚು ದ್ರವ ಹೀರಿಕೊಳ್ಳುವ ಸಾಮರ್ಥ್ಯ ಇರುವುದಿಲ್ಲ. ಆದರೆ ಯೋನಿ ಬಾಗದ ಶುಷ್ಕತೆ, ಸ್ವಚ್ಛತೆ ದೃಷ್ಟಿಯಿಂದ ಸ್ಯಾನಿಟರಿ ಪ್ಯಾಡ್ ಹಾಗೂ ಪ್ಯಾಂಟಿ ಲೈನರ್ ಎರಡು ಅದರದ್ದೇ ಆದ ಕೆಲಸ ಮಾಡುತ್ತವೆ ಹಾಗಾಗಿ ನಿಮ್ಮ ಅಗತ್ಯಕ್ಕೆ ತಕ್ಕ ಹಾಗೆ ಈ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು.
ಪ್ಯಾಂಟಿ ಲೈನರ್ ಅಥವಾ ಸ್ಯಾನಿಟರಿ ಪ್ಯಾಡ್ ಗಳು ಬೇರೆ ಬೇರೆ ಬ್ರಾಂಡ್ ಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯ. ಆದಷ್ಟು ರಾಸಾಯನಿಕ ಕಡಿಮೆ ಇರುವ ನ್ಯಾಚುರಲ್ ಆಗಿರುವ ಪ್ಯಾಂಟಿ ಲೈನರ್ ಹಾಗೂ ಪ್ಯಾಡ್ ಗಳನ್ನೆ ಆಯ್ದು ತನ್ನಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











