Menstrual Hygiene Day: ಪ್ಯಾಡ್‌ ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡುವ ಕ್ರಮವಿದು

ಪರ್ಸನಲ್ ಹೈಜೀನ್ (ವೈಯಕ್ತಿಕ ಸ್ವಚ್ಛತೆ) ಎನ್ನುವುದು ನಮ್ಮ ಜೀವನದಲ್ಲಿ ಬಹಳ ಮಹತ್ವದ್ದು. ಆರೋಗ್ಯಕರ ಜೀವನಶೈಲಿಯಲ್ಲಿ ಯೋಗ, ಜಿಮ್ ಗಳಷ್ಟೇ ಮಹತ್ವದ್ದು ಪರ್ಸನಲ್ ಹೈಜೀನ್. ಮಹಿಳೆಯರಲ್ಲಿ ಋತುಚಕ್ರದ ಅವಧಿಯಲ್ಲಿ ಇದು ಇನ್ನೂ ಬಹಳ ಮಹತ್ವದ್ದು.

ಋತುಚಕ್ರದ ಅವಧಿಯಲ್ಲಿ ಬಳಸಿದ ಸ್ಯಾನಿಟರಿ ಪ್ಯಾಡ್ ಗಳನ್ನು ಸರಿಯದ ರೀತಿಯಲ್ಲಿ ವಿಲೇವಾರಿ ಮಾಡುವುದೂ ಬಹಳ ಅಗತ್ಯ. ಸ್ಯಾನಿಟರಿ ಪ್ಯಾಡ್ ಗಳನ್ನು ವಿಲೇವಾರಿ ಮಾಡುವುದು ಅಷ್ಟೇನೂ ಕಷ್ಟದ ವಿಷಯವಲ್ಲ. ಪ್ಯಾಡ್ ಅನ್ನು ಸುತ್ತಿ ಕಸದ ಬುಟ್ಟಿಯಲ್ಲಿ ಇಡಬೇಕು ಅಷ್ಟೇ. ಇದರ ಜೊತೆಗೆ ಸೂಕ್ಶ್ಮ ಜೀವಿಗಳ ಚಟುವಟಿಕೆ ತಡೆಯಲು ಮತ್ತು ವಾಸನೆಯನ್ನು ತಡೆಯಲು ಇದಕ್ಕಾಗಿಯೇ ಇರುವ ವಿಶೇಷ ವಿಲೇವಾರಿ ಚೀಲಗಳನ್ನು ಬಳಸಬಹುದು. ಮೊದಲಿಗೆ ಬಾಥ್ ರೂಮ್ ಕಸದ ಜೊತೆಗೆ ಸ್ಯಾನಿಟರಿ ಪ್ಯಾಡ್ ಗಳನ್ನು ವಿಲೇವಾರಿ ಮಾಡುವುದು ಹೇಗೆ ಎಂದು ನೋಡೋಣ.

Menstrual Hygiene Day: How to Dispose of Sanitary Pads In Correct Way In kannada

1. ಪ್ಯಾಡ್‌ ಬಿಸಾಡುವಾಗ ಸರಿಯಾದ ರೀತಿಯಲ್ಲಿ ಸುತ್ತಿ
ಸ್ಯಾನಿಟರಿ ಪ್ಯಾಡ್ ಅನ್ನು ಬದಲಾಯಿಸಲು ನೀವು ಸಿದ್ಧರಾಗಿದ್ದೀರಿ ಎಂದಾದಾಗ ಒಳ ಉಡುಪಿನಿಂದ ಬಹಳ ಎಚ್ಚರಿಕೆಯಿಂದ ಪ್ಯಾಡ್ ಅನ್ನು ತೆಗೆಯಿರಿ. ಬಿಗಿಯಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಪ್ಯಾಡ್ ಅನ್ನು ಸುತ್ತಲು ಆರಂಭಿಸಿ. ಪ್ಯಾಡ್ ನ ಅಂಟಿಕೊಳ್ಳುವ ಭಾಗವು ಹೊರಭಾಗದಲ್ಲಿ ಇರುವಂತೆ ಪ್ಯಾಡ್ ಅನ್ನು ಸುತ್ತಿ. ಈ ತರಹ ಪ್ಯಾಡ್ ಅನ್ನು ಸುತ್ತುವುದರಿಂದ ಇದು ಕಸದಲ್ಲಿ ಕಡಿಮೆ ಜಾಗ ತೆಗೆದುಕೊಳ್ಳುತ್ತದೆ

2. ಹಾಗೇ ಹಾಕಬೇಡಿ, ಪೇಪರ್‌ನಲ್ಲಿ ಸುತ್ತಿ ಹಾಕಿ
ಪ್ಯಾಡ್ ಅನ್ನು ಸುತ್ತುವುದರಿಂದ ಅದು ಬಹಳ ಕಡಿಮೆ ವಾಸನೆಯನ್ನು ಬೀರುತ್ತದೆ. ಆದರೆ ಇನ್ನೂ ಸ್ವಲ್ಪ ಪ್ರಮಾಣದ ವಾಸನೆ ಬರುತ್ತಿರುತ್ತದೆ. ಕಾಗದದಲ್ಲಿ ಸ್ಯಾನಿಟರಿ ಪ್ಯಾಡ್ ಅನ್ನು ಸುತ್ತುವುದರಿಂದ ಅದನ್ನು ಇನ್ನೂ ಕಡಿಮೆ ಮಾಡಬಹುದು. ಕಾಗದದ ಬದಲಿಗೆ ಹೊಸ ಸ್ಯಾನಿಟರಿ ಪ್ಯಾಡ್ ನ ಹೊರ ಹೊದಿಕೆಯನ್ನೂ ಬಳಸಬಹುದು ಅದರಲ್ಲಿ ಅಂಟು ಇದ್ದರೆ ಅದನ್ನೂ ಕೂಡ ಬಳಸಿ ಪ್ಯಾಡ್ ಅನ್ನು ಮತ್ತಷ್ಟು ಸುರಕ್ಷಿತವನ್ನಾಗಿಸಿ.

3. ಪ್ಯಾಡ್‌ ಅನ್ನು ಸಪರೇಟ್‌ ಹಾಕಿಡಿ, ಇತರ ಕಸದ:
ಸುತ್ತಿದ ಪ್ಯಾಡ್ ಅನ್ನು ಬಾತ್ ರೂಮಿನಲ್ಲಿರುವ ಕಸದ ಡಬ್ಬಿಯಲ್ಲಿಯೇ ಹಾಕಿ. ಬಾತ್ ರೂಮ್ ನಲ್ಲಿರುವ ಕಸದ ಡಬ್ಬಿಗೆ ಮುಚ್ಚಳ ಇದ್ದರೆ ಅದು ವಾಸನೆಯನ್ನು ಮತ್ತಷ್ಟು ಕಡಿಮೆ ಮಾಡುತ್ತದೆ. ಕಸದ ಡಬ್ಬಿಯಲ್ಲಿ ಹಾಕುವ ಬದಲು ಪ್ಯಾಡ್ ಅನ್ನು ಟಾಯ್ಲೆಟ್ ನಲ್ಲಿ ಹಾಕಿ ಫ್ಲಶ್ ಮಾಡಬೇಡಿ. ಇದು ನೀರಿನ ಕೊಳವೆಯನ್ನು ಮುಚ್ಚುತ್ತದೆ ಮತ್ತು ನೀರು ಅಲ್ಲಿ ಸರಾಗವಾಗಿ ಹರಿದು ಹೋಗುವುದಿಲ್ಲ. ಮನೆಯಲ್ಲಿ ಮಾತ್ರವಲ್ಲದೇ ಸಾರ್ವಜನಿಕ ಶೌಚಾಲಯದಲ್ಲೂ ಹಲವು ಕಡೆ ಇಂತಹ ಬಿನ್ ಗಳನ್ನು ಇಟ್ಟಿರುತ್ತಾರೆ ಅವನ್ನೇ ಬಳಸಿ ಪ್ಯಾಡ್ ಗಳನ್ನು ವಿಲೇವಾರಿ ಮಾಡಿ.

4. ಕೈಗಳನ್ನು ಸ್ವಚ್ಚವಾಗಿ ತೊಳೆಯಿರಿ:
ಪ್ಯಾಡ್ ಅನ್ನು ಮೇಲೆ ಹೇಳಿದ ರೀತಿಯಲ್ಲಿ ಕಸದ ಡಬ್ಬಿಯಲ್ಲಿ ಹಾಕಿದ ಮೇಲೆ ಕೈಗಳನ್ನು ಸ್ವಚ್ಚವಾಗಿ ತೊಳೆಯಿರಿ. ಸೋಪ್ ಅಥವಾ ಹ್ಯಾಂಡ್ ವಾಷ್ ಜೊತೆಗೆ ಸಾಧ್ಯವಾದಲ್ಲಿ ಬಿಸಿನೀರನ್ನು ಬಳಸಿ ಕೈಗಳನ್ನು ತೊಳೆಯಿರಿ. ಇದು ನಮ್ಮ ಕೈಗೆ ತಾಗಿರಬಹುದಾದ ಸೂಕ್ಷ್ಮಾಣು ಜೀವಿಗಳನ್ನು ನಾಶಗೊಳಿಸಲು ಸಹಾಯಕ. ಇದೇ ರೀತಿ ಪ್ಯಾಡ್ ಬದಲಾಯಿಸುವ ಮೊದಲು ಕೂಡ ಕೈಗಳನ್ನು ತೊಳೆಯುವುದು ಅವಶ್ಯಕ. ಇದರಿಂದ ಕೈಗಳಲ್ಲಿರುವ ಸೂಕ್ಷ್ಮ ಜೀವಿಗಳು ಆಕಸ್ಮಿಕವಾಗಿ ಜನನಾಂಗದಲ್ಲಿ ಸೇರುವುದನ್ನು ತಡೆಯಬಹುದು.

5. ಕಸವನ್ನು ಆದಷ್ಟು ಬೇಗ ಎಸೆಯಿರಿ, ತುಂಬಾ ದಿನ ಇಡಬೇಡಿ
ಮೊದಲಿಗೆ ವಾಸನೆ ಬಾರದ ಕಸದ ಬುಟ್ಟಿ ನೀವು ಹೆಚ್ಚು ಹೊತ್ತು ಹಾಗೆಯೇ ಇಟ್ಟಲ್ಲಿ ವಾಸನೆ ಬರಲು ಪ್ರಾರಂಭವಾಗಬಹುದು. ಹೆಚ್ಚು ಹೊತ್ತು ಇಟ್ಟ ಹಾಗೆ ಸೂಕ್ಷ್ಮಾಣು ಜೀವಿಗಳ ಚಟುವಟಿಕೆ ಹೆಚ್ಚಾಗಲು ಆರಂಭವಾಗುತ್ತದೆ. ಕಸದ ಬುಟ್ಟಿಯಲ್ಲಿ ಗಾರ್ಬೇಜ್ ಬ್ಯಾಗ್ ಅನ್ನು ಹಾಕಿ ಮತ್ತು ಅದರ ಬಾಯಿಯನ್ನು ಗಟ್ಟಿಯಾಗಿ ಕಟ್ಟುವುದರಿಂದ ವಾಸನೆ ಬರುವುದು ಮತ್ತು ಪ್ರಾಣಿಗಳು ಆ ಪ್ಯಾಡ್ ಗಳನ್ನು ಚೆಲ್ಲಾಪಿಲ್ಲಿಯನ್ನಾಗಿಸುವುದನ್ನು ತಡೆಯಬಹುದು.

ವಿಶೇಷ ವಿಲೇವಾರಿ ಚೀಲದೊಂದಿಗೆ ಸ್ಯಾನಿಟರಿ ಪ್ಯಾಡ್ ಗಳ ವಿಲೇವಾರಿ ಹೇಗೆ ಎನ್ನುವುದನ್ನು ತಿಳಿಯೋಣ.
1. ಮಹಿಳೆಯರ ನೈರ್ಮಲ್ಯಕ್ಕಾಗಿ ವಿನ್ಯಾಸಗೊಳಿಸಲಾದ ವಿಲೇವಾರಿ ಚೀಲಗಳನ್ನು ಖರೀದಿಸಿ: ಔಷಧಿ ಅಂಗಡಿಗಳಲ್ಲಿ ಅಥವಾ ಆನ್ಲೈನ್ ನಲ್ಲಿ ಮಹಿಳೆಯರ ಸ್ಯಾನಿಟರಿ ಪ್ಯಾಡ್ ಗಳ ವಿಲೇವಾರಿಗೆಂದೇ ತಯಾರಿಸಿದ ಚೀಲಗಳು ಇರುತ್ತವೆ. ಅವುಗಳನ್ನು ಖರೀದಿಸಿ. ಇದರ ಬದಲಿಗೆ ಡೈಪರ್ ವಿಲೇವಾರಿ ಚೀಲಗಳೂ ಸಿಗುತ್ತವೆ. ಅವನ್ನೂ ಬಳಸಬಹುದು.
2. ಪ್ಯಾಡ್ ಅನ್ನು ತೆಗೆದು ಸುತ್ತಿ: ಪ್ಯಾಡ್ ತೆಗೆಯಲು ಸಿದ್ಧವಾದಾಗ ತೆಗೆದು ಅದನ್ನು ಮೇಲೆ ಹೇಳಿದಂತೆ ಸರಿಯಾಗಿ ಸುತ್ತಿ.
3. ಪ್ಯಾಡ್ ಅನ್ನು ವಿಶೇಷ ವಿಲೇವಾರಿ ಚೀಲದಲ್ಲಿ ಇಡಿ: ತೆಗೆದು ಸುತ್ತಿ ಸಿದ್ಧಪಡಿಸಿದ ಪ್ಯಾಡ್ ಅನ್ನು ಈ ಮೊದಲೇ ಖರೀದಿಸಿದ ವಿಶೇಷ ವಿಲೇವಾರಿ ಚೀಲದಲ್ಲಿ ಇಡಿ. ಕೆಲವು ಉತ್ತಮ ದರ್ಜೆಯ ಚೀಲಗಳು ಹ್ಯಾಂಡಲ್ ಗಳು ಅಥವಾ ಟ್ವಿಸ್ಟ್ ಟೈ ನೊಂದಿಗೆ ಬರುತ್ತವೆ. ಇನ್ನೂ ಕೆಲವು ಚೀಲಗಳು ಅಂಟಿಕೊಳ್ಳುವ ಸ್ಟಿಕ್ಕರ್ ಜೊತೆಗೆ ಬರುತ್ತವೆ. ನಿಮಗೆ ಅನುಕೂಲವಾಗುವ ಚೀಲಗಳನ್ನು ಬಳಸಿ. ಎಲ್ಲಾ ಚೀಲಗಳಲ್ಲೂ ಹೇಗೆ ಬಳಸಬೇಕು ಎಂಬ ವಿವರ ನೀಡಿರುತ್ತಾರೆ ಅದನ್ನು ಓದಿ ಹಾಗೆಯೇ ಮಾಡಿ.
4. ಚೀಲಗಳನ್ನು ಮುಚ್ಚಳ ಇರುವ ಕಸದ ಡಬ್ಬಕ್ಕೆ ಹಾಕಿ.
5. ಕೈಗಳನ್ನು ಸ್ವಚ್ಛವಾಗಿ ತೊಳೆಯಿರಿ.
ಈ ರೀತಿ ಸ್ಪಚ್ಛತೆಯ ಬಗ್ಗೆ ತುಸು ಗಮನವಹಿಸಿದರೆ ಈ ಸಮಯ ನಿಮಗೂ ಇತರರಿಗೂ ಕಿರಿಕಿರಿಯಾಗುವುದಿಲ್ಲ.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

Menstrual Hygiene Day: How to Dispose of Sanitary Pads In Correct Way In kannada

Menstrual Hygiene Day: Follow these tips to dispose sanitary pads, read on.
Story first published: Sunday, May 28, 2023, 17:00 [IST]
X
Desktop Bottom Promotion