Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಮಹಿಳೆಯರೇ, ಮುಟ್ಟಾದ ಸಂದರ್ಭದಲ್ಲಿ ಈ ತಪ್ಪುಗಳನ್ನು ಅಪ್ಪಿ ತಪ್ಪಿಯೂ ಮಾಡಬೇಡಿ!
ಮಹಿಳೆಯರಿಗೆ ಮುಟ್ಟಾಗುವುದು ಒಂದು ರೀತಿಯ ನೈಸರ್ಗಿಕ ಪ್ರಕ್ರಿಯೆ. ಸಾಮಾನ್ಯವಾಗಿ 10-15 ವರ್ಷದ ಒಳಗಿನ ಹೆಣ್ಣು ಮಕ್ಕಳು ಮುಟ್ಟಾಗುತ್ತಾರೆ. ಆದರೆ ಹೆಚ್ಚಿನ ಹೆಣ್ಣು ಮಕ್ಕಳು ಇದರಿಂದ ತೊಂದರೆಯನ್ನು ಅನುಭವಿಸುತ್ತಾರೆ. ಕಾರಣ ಮುಟ್ಟಿನ ಸಮಯದಲ್ಲಿ ಯಾವ ರೀತಿ ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕು ಎನ್ನುವುದು ಅವರಿಗೆ ತಿಳಿದಿರೋದಿಲ್ಲ. ಇದರಿಂದಾಗಿ ರೋಗಗಳಿಗೆ ತುತ್ತಾಗುವ ಸಾಧ್ಯತೆಗಳು ಇದೆ.
ಅಷ್ಟೇ ಅಲ್ಲ, ನಾವು ಮುಟ್ಟಿದ ಸಂದರ್ಭದಲ್ಲಿ ಕೆಲವೊದು ವಿಚಾರಗಳ ಬಗ್ಗೆ ಜಾಗೃತೆ ವಹಿಸಬೇಕು. ಅಪ್ಪಿ ತಪ್ಪಿಯೂ ಕೆಲವು ಆಹಾರಗಳನ್ನು ಸೇವಿಸಲೇಬಾರದು. ಅಷ್ಟಕ್ಕು ಮುಟ್ಟಾದ ಸಂದರ್ಭದಲ್ಲಿ ಮಹಿಳೆಯರು ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಹೇಗೆ? ಯಾವೆಲ್ಲಾ ಕೆಲಸಗಳನ್ನು ಮಾಡಬಾರದು? ಎಂತಹ ಆಹಾರ ಸೇವಿಸಬಾರದು ಅನ್ನೋದ್ರ ಬಗ್ಗೆ ತಿಳಿದುಕೊಳ್ಳೋಣ.

1. ಸಾಬೂನು ಬಳಕೆ ಮಾಡಬೇಡಿ!
ಮುಟ್ಟಾದ ಸಮಯದಲ್ಲಿ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಎಷ್ಟು ಮುಖ್ಯ ಅನ್ನೋದು ಪ್ರತಿಯೊಬ್ಬರಿಗೂ ಗೊತ್ತಿದೆ. ಹೆಚ್ಚಿನ ಜನ ಮುಟ್ಟಾದ ಸಂದರ್ಭದಲ್ಲಿ ತಮ್ಮ ಗುಪ್ತಾಂಗವನ್ನು ಸ್ವಚ್ಛವಾಗಿಡಲು ಸಾಬೂನು ಬಳಕೆ ಮಾಡುತ್ತಾರೆ. ಇದು ತಪ್ಪು. ಯಾಕಂದ್ರೆ ಗುಪ್ತಾಂಗವನ್ನು ಸ್ವಚ್ಛವಾಗಿಡೋದಕ್ಕೋಸ್ಕರ ವಿಶೇಷವಾದ ಪ್ರಾಡಕ್ಟ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ ಅದನ್ನೇ ಬಳಕೆ ಮಾಡಬೇಕು.
ಗುಪ್ತಾಂಗವನ್ನು ಸ್ವಚ್ಛಗೊಳಿಸೋದಕ್ಕೆ ಅದರದ್ದೇ ಆದ ಕಾರ್ಯವಿಧಾನವಿದೆ. ಅದೇ ರೀತಿ ಸ್ವಚ್ಛಗೊಳಿಸಬೇಕು. ಅದ್ರಲ್ಲೂ ಋತುಚಕ್ರದ ಸಮಯದಲ್ಲಿ ತುಂಬಾನೇ ಜಾಗರೂಕರಾಗಿರಬೇಕು. ಇನ್ನೂ ಈ ಕೃತಕ ನೈರ್ಮಲ್ಯ ಉತ್ಪನ್ನಗಳನ್ನು ಬಳಸೋದ್ರಿಂದ ಇದು ಸೋಂಕುಗಳು ಮತ್ತು ಬ್ಯಾಕ್ಟೀರಿಯಾದ ಬೆಳವಣಿಗೆಗೆ ಕಾರಣವಾಗುವ ನೈಸರ್ಗಿಕ ಪ್ರಕ್ರಿಯೆಗೆ ಅಡ್ಡಿಯಾಗುತ್ತದೆ.
2. ಸ್ಯಾನಿಟರಿ ಪ್ಯಾಡ್ ಗಳನ್ನು 4-6 ಗಂಟೆಗೊಮ್ಮೆ ಬದಲಿಸಿ
ಹೆಚ್ಚಿನವರು ಒಂದೇ ಸ್ಯಾನಿಟರಿ ಪ್ಯಾಡ್ ಅಥವಾ ಟ್ಯಾಂಪೂನ್ ಗಳನ್ನು ಇಡೀ ದಿನ ಬಳಕೆ ಮಾಡುತ್ತಾರೆ, ಈ ರೀತಿ ಮಾಡಬಾರದು. ಮುಟ್ಟಿನ ಸಮಯದಲ್ಲಿ 4-6 ಗಂಟೆಗೊಮ್ಮೆ ಸ್ಯಾನಿಟರಿ ನ್ಯಾಪ್ಕಿನ್ಗಳು ಅಥವಾ ಟ್ಯಾಂಪೂನ್ ಗಳನ್ನು ಬದಲು ಮಾಡಲೇಬೇಕು. ಮುಟ್ಟಿನ ರಕ್ತವು ದೇಹದಿಂದ ಬಿಡುಗಡೆಯಾದಾಗ ನಮ್ಮ ದೇಹದಲ್ಲಿರುವ ವಿವಿಧ ಜೀವಿಗಳನ್ನು ಆಕರ್ಷಿಸುತ್ತದೆ. ಇದರಿಂದ ನಮಗೆ ಕಿರಿಕಿರಿ, ದದ್ದುಗಳು ಅಥವಾ ಮೂತ್ರದ ಸೋಂಕನ್ನು ಉಂಟುಮಾಡುತ್ತದೆ. ಹೀಗಾಗಿ 4-6 ಗಂಟೆಗೊಮ್ಮೆ ಸ್ಯಾನಿಟರಿ ಪ್ಯಾಡ್ ಅಥವಾ ಟ್ಯಾಂಪೂನ್ ಗಳನ್ನು ಬದಲಾಯಿಸುತ್ತಿದ್ದರೆ ಕ್ರಿಮಿಗಳ ಬೆಳವಣಿಗೆಯನ್ನು ತಡೆಗಟ್ಟಬಹುದು.
3. ಗುಪ್ತಾಂಗವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ
ನಮ್ಮ ಗುಪ್ತಾಂಗವನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದು ಬಹಳ ಮುಖ್ಯ, ಏಕೆಂದರೆ ನೀವು ಮಟ್ಟಿನ ಸಮಯದಲ್ಲಿ ಸ್ಯಾನಿಟರಿ ಪ್ಯಾಡ್ ಅಥವಾ ಟ್ಯಾಂಪೂನ್ ಗಳನ್ನು ತೆಗೆದ ನಂತರ ಸೂಕ್ಷ್ಮಣು ಜೀವಿಗಳು ನಿಮ್ಮ ದೇಹಕ್ಕೆ ಅಂಟಿಕೊಳ್ಳುತ್ತವೆ. ಹೀಗಾಗಿ ನಿಯಮಿತವಾಗಿ ಗುಪ್ತಾಂಗವನ್ನು ಸ್ವಚ್ಛಗೊಳಿಸಬೇಕು. ಗುಪ್ತಾಂಗದ ಸ್ವಚ್ಛತೆಗೆ ಕೆಲವೊಂದು ವಿಧಾನವನ್ನು ಅನುಸರಿಸಬೇಕು. ಇಲ್ಲವಾದರೆ ರೋಗ ಉಂಟಾಗುವ ಅಪಾಯ ಹೆಚ್ಚು.
4. ಸ್ಯಾನಿಟರಿ ನ್ಯಾಪ್ಕಿನ್ ಅನ್ನು ಸರಿಯಾಗಿ ವಿಲೇವಾರಿ ಮಾಡಿ
ಮುಟ್ಟಿನ ಸಮಯದಲ್ಲಿ ಸ್ಯಾನಿಟರಿ ಪ್ಯಾಡ್ ಅಥವಾ ಟ್ಯಾಂಪೂನ್ ಗಳನ್ನು ಸರಿಯಾಗಿ ವಿಲೇವಾರಿ ಮಾಡುವುದು ತುಂಬಾನೇ ಮುಖ್ಯ. ನೀವು ಅದನ್ನು ಸರಿಯಾಗಿ ವಿಲೇವಾರಿ ಮಾಡಬೇಕು. ಒಂದು ಪೇಪರ್ ನಲ್ಲಿ ಸುತ್ತಿ ಅವುಗಳನ್ನು ಎಸೆಯಬೇಕು. ಇಲ್ಲವಾದರೆ ಸೂಕ್ಷ್ಮಣು ಜೀವಿಗಳು ಸೋಂಕನ್ನು ಹರಡುವ ಅಪಾಯ ಹೆಚ್ಚಾಗಿದೆ.
ಇನ್ನೂ ಯಾವುದೇ ಕಾರಣಕ್ಕೂ ಸ್ಯಾನಿಟರಿ ಪ್ಯಾಡ್ ಗಳನ್ನು ಬಾತ್ ರೂಂ ನಲ್ಲಿ ಫ್ಲಶ್ ಮಾಡೋದಕ್ಕೆ ಹೋಗಬೇಡಿ. ಅದು ಟಾಯ್ಲೆಟ್ ಒಳಗಡೆ ಬ್ಲಾಕ್ ಆಗುತ್ತದೆ. ಇದರಿಂದ ನೀರಿನಲ್ಲಿ ಬ್ಯಾಕ್ಟೀಯಾ ಹರಡುವ ಸಾಧ್ಯತೆಯೂ ಇದೆ. ಇನ್ನೂ ಸ್ಯಾನಿಟರಿ ಪ್ಯಾಡ್ ಗಳನ್ನು ಸುಡುವುದು ಕೂಡ ಒಳ್ಳೆಯದಲ್ಲ. ಇದರಿಂದ ಪರಿಸರಕ್ಕೆ ಹಾನಿಯುಂಟು ಮಾಡುತ್ತದೆ. ಇನ್ನೂ ಮುಖ್ಯವಾಗಿ ಸ್ಯಾನಿಟರಿ ಪ್ಯಾಡ್ ಗಳನ್ನು ವಿಲೇವಾರಿ ಮಾಡಿದ ನಂತರ ಕೈ ತೊಳೆಯೋದನ್ನು ಮರೆಯಬೇಡಿ.
5. ಒಂದು ವಿಧಾನವನ್ನು ಮಾತ್ರ ಅನುಸರಿಸಿ
ಮಹಿಳೆಯರು ಟ್ಯಾಂಪೂನ್‌ಗಳು ಮತ್ತು ಸ್ಯಾನಿಟರಿ ಪ್ಯಾಡ್ ಗಳನ್ನು ಅಥವಾ ಎರಡು ಸ್ಯಾನಿಟರಿ ಪ್ಯಾಡ್ ಗಳನ್ನು ಏಕಕಾಲದಲ್ಲಿ ಭಾರೀ ಹರಿವಿನ ಸಮಯದಲ್ಲಿ ಬಳಸುತ್ತಾರೆ. ಇದು ಪರಿಣಾಮಕಾರಿ ತಂತ್ರವಾಗಿದೆ. ಈ ರೀತಿ ಮಾಡುವುದು ಅತಿಯಾದ ರಕ್ತಸ್ರಾವವನ್ನು ತಡೆಗಟ್ಟೋದಕ್ಕೆ ತುಂಬಾನೇ ಒಳ್ಳೆಯದು. ಇದರಿಂದ ಆಗುವ ಅನಾನುಕೂಲ ಅಂದ್ರೆ ನಾವು ಸಮಯಕ್ಕೆ ಸರಿಯಾಗಿ ಟ್ಯಾಂಪೂನ್‌ಗಳು ಮತ್ತು ಸ್ಯಾನಿಟರಿ ಪ್ಯಾಡ್ ಗಳನ್ನು ಬದಲಾಯಿಸುವುದನ್ನು ಮರೆತು ಬಿಡುತ್ತೇವೆ.
ಅತಿಯಾದ ರಕ್ತ ಸಂಗ್ರಹವು ರಕ್ತವು ಬ್ಯಾಕ್ಟೀರಿಯಾವನ್ನು ಆಹ್ವಾನಿಸುತ್ತದೆ ಮತ್ತು ಸೋಂಕನ್ನು ಉಂಟುಮಾಡುತ್ತದೆ. ಹೀಗಾಗಿ ಹೆಚ್ಚಿನ ರಕ್ತಸ್ರಾವವಾದ ಸಂದರ್ಭದಲ್ಲಿ ಟ್ಯಾಂಪೂನ್‌ಗಳು ಮತ್ತು ಸ್ಯಾನಿಟರಿ ಪ್ಯಾಡ್ ಗಳನ್ನು ಆಗಾಗ್ಗೆ ಬದಲಾಯಿಸೋದು ತುಂಬಾನೇ ಒಳ್ಳೆಯದು.
ಮುಟ್ಟಿನ ಸಮಯದಲ್ಲಿ ಈ ವಿಚಾರಗಳನ್ನು ಮರೆಯಲೇಬೇಡಿ. ನಿಮ್ಮ ಆರೋಗ್ಯದ ರಕ್ಷಣೆ ನಿಮ್ಮ ಹೊಣೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

