Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕೆಲಸದ ಒತ್ತಡದಿಂದ ಹೊರಬರುವುದು ಹೇಗೆ? ಮಹಿಳೆಯರ ಈ ಸಮಸ್ಯೆಗೆ ಪರಿಹಾರವೇನು?
ಆಧುನಿಕ ಯುಗದಲ್ಲಿ ಅದರಲ್ಲೂ ಯಾಂತ್ರಿಕ ಯುಗದಲ್ಲಿ ಪ್ರತಿಯೊಬ್ಬರು ಮಾನಸಿಕ ಸಮಸ್ಯೆಗಳ ಎದುರಿಸುವುದು ಸಾಮನ್ಯ ಎನ್ನುವಷ್ಟು ಕಠಿಣ ದಿನಗಳು ಎದುರಿಸಬೇಕಾಗಿದೆ. ಅದರಲ್ಲೂ ನಗರದಲ್ಲಿ ನೆಲೆಸಿರುವವರ ಮಾನಸಿಕ ಆರೋಗ್ಯ ಬಹಳಷ್ಟು ಕಾರಣಗಳಿಂದ ಏರುಪೇರಾಗುವುದು ನೋಡಬಹುದು. ಅದರಲ್ಲೂ ಇತ್ತಿಚಿಗೆ ಮಹಿಳೆಯರ ಮಾನಸಿಕ ಆರೋಗ್ಯದಲ್ಲಿ ಅತ್ಯಂತ ದೊಡ್ಡ ಮಟ್ಟದಲ್ಲಿನ ಬದಲಾವಣೆ ಚರ್ಚಾ ವಿಷಯವಾಗುತ್ತಿದೆ.
ಮಹಿಳೆ ಕುಟುಂಬ ನಿರ್ವಹಣೆ ಹಾಗೂ ಕಂಪನಿ ಕೆಲಸ, ವೈಯಕ್ತಿಕ ಆರೋಗ್ಯದ ನಡುವೆ ಸಿಲುಕಿ ಪರದಾಡುವ ಸ್ಥಿತಿಗೆ ತಲುಪಿದ್ದಾಳೆ. ಅದರಲ್ಲೂ ಭಾರತದಲ್ಲಿ ಕೆಲಸದ ಸ್ಥಳದಲ್ಲಿ ಮಹಿಳೆಯರ ಮಾನಸಿಕ ಆರೋಗ್ಯ ಪುರುಷರಿಗಿಂತ ಕೆಳಮಟ್ಟದಲ್ಲಿದೆ ಎಂದು ಅಧ್ಯಯನಗಳು ಹೇಳುತ್ತಿವೆ. ಇದಕ್ಕೆ ಹತ್ತು ಹಲವು ಕಾರಣಗಳನ್ನು ಪಟ್ಟಿ ಮಾಡಬಹುದಾಗಿದೆ.

ಮಹಿಳೆಯರು ಮನೆಯಲ್ಲಿ ಪತಿ, ಮಕ್ಕಳು, ತಂದೆ-ತಾಯಿ ಹೀಗೆ ಎಲ್ಲಾ ಜವಾಬ್ದಾರಿಗಳ ನಡುವೆ ಕೆಲಸದ ಒತ್ತಡದ ದಿನಗಳನ್ನೇ ಕಳೆಬೇಕಾಗಿದೆ. ಇದು ಅವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಭಾರತದಲ್ಲಿ ಮಹಿಳೆಯರು ಸಾಮಾನ್ಯವಾಗಿ ತಾರತಮ್ಯ ಮತ್ತು ಅಸಮಾನತೆಯನ್ನು ಎದುರಿಸುತ್ತಾರೆ ಮತ್ತು ಅವರಿಗೆ ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗದಲ್ಲಿ ಸಮಾನ ಅವಕಾಶಗಳ ಕೊರತೆ ನಾವು ನೋಡಬಹುದು.
ಇಂತಹ ಹಲವು ಪ್ರತಿಕೂಲ ಪರಿಣಾಮಗಳಿಂದಾಗಿ ಮಹಿಳೆಯರ ಮಾನಸಿಕ ಆರೋಗ್ಯ ಇಂದು ಪುರುಷರಿಗಂತ ಹೆಚ್ಚು ಆರೈಕೆಯ ಅವಶ್ಯಕತೆ ಇದೆ ಎಂದು ಹೇಳಲಾಗಿದೆ. ಹಾಗೆ ನಾವಿಂದು ಕೆಲಸದ ಸ್ಥಳದಲ್ಲಿ ಮಹಿಳೆಯರು ಎದುರಿಸುವ ಒತ್ತಡದಿಂದಾಗಿ ಹೊರಬರುವುದು ಹೇಗೆ? ಈ ಒತ್ತಡ ನಿಭಾಯಿಸುವಲ್ಲಿ ಅವರು ಯಾವ ರೀತಿ ಕ್ರಮಕ್ಕೆ ತೆಗೆದುಕೊಳ್ಳಬೇಕು ಎಂಬುದನ್ನು ನಾವಿಂದು ಕ್ಲೀನಿಕಲ್ ಸೈಕಾಲಜಿಸ್ಟ್ ಅರುಣ್ ಎನ್ ಆರ್ ಬಳಿ ತಿಳಿಯೋಣ.
ಕೆಲಸದ ಸ್ಥಳದಲ್ಲಿನ ಒತ್ತಡ ನಿರ್ವಹಣೆಗೆ ವೈಯಕ್ತಿಕ ಬೆಂಬಲ ಹಾಗೆ ಬಾಹ್ಯ ಬೆಂಬಲದ ಅವಶ್ಯಕತೆ ಇದೆ. ಅದರಲ್ಲೂ ಕುಟುಂಬದಿಂದ ಸಿಗುವಂತಹ ಬೆಂಬಲ ಪ್ರಮುಖ ಎನಿಸುತ್ತದೆ. ಆರೋಗ್ಯಕರ ಮನೆಯ ವಾತಾವರಣವು ನೀವು ಎಂತಹ ಸಮಸ್ಯೆಯೊಳಗೆ ಸಿಲುಕಿದರು ಹೊರಬರಲು ಒಂದು ಮಾರ್ಗವಾಗುತ್ತದೆ. ಹೀಗಾಗಿ ಮನೆಯ ವಾತಾವರಣ ಬಹಳ ಸುಂದರವಾಗಿ ಇರುವಂತೆ ಮಾಡಿಕೊಳ್ಳುವ ಜವಾಬ್ದಾರಿ ನಿಮ್ಮದಾಗಿರಲಿದೆ.
ನಿಮ್ಮ ಒತ್ತಡಕ್ಕೆ ಕಾರಣವಾಗುವ ಅಂಶ ಯಾವುದು ಎಂಬುದನ್ನು ಮೊದಲು ನೀವು ಪತ್ತೆ ಮಾಡಿಕೊಳ್ಳಿ. ಒಂದು ವೇಳೆ ಆ ಕಾರಣವನ್ನು ಇನ್ನೆಂದು ಅನುಭವಿಸದಿರುವಂತೆ ನೀವೇ ಒಂದು ಬೌಂಡರಿ ಹಾಕಿಕೊಳ್ಳಿ ಇದು ಕೆಲಸದ ಒತ್ತಡ ಕಡಿಮೆ ಮಾಡುವಂತಿರಲಿ. ಹಾಗೆ ಆಫಿಸ್‌ನ ಒತ್ತಡ ಎಷ್ಟೇ ಇದ್ದರೂ ಅದನ್ನು ಅಲ್ಲಿಯೇ ಬಿಟ್ಟು ಬರುವಂತಹ ಅಭ್ಯಾಸ ರೂಢಿಸಿಕೊಳ್ಳಿ. ನೀವೊಮ್ಮೆ ಮನೆ ತಲುಪಿದರೆ ಪತ್ನಿಯಾಗಿ, ತಾಯಿಯಾಗಿ ಮಾತ್ರ ಮನೆಯಲ್ಲಿ ಕಾಣಿಸಿಕೊಳ್ಳುವ ಅಭ್ಯಾಸ ಮಾಡಿ. ಇದು ನಿಮ್ಮ ಮಾನಸಿಕ ಒತ್ತಡ ನಿವಾರಣೆಯ ಸುಲಭ ದಾರಿ.
ನಿತ್ಯ ಪೋಷಕಾಂಶ ಯುಕ್ತ ಆಹಾರ ಸೇವಿಸಿ, ಸಮತೋಲನ ಆಹಾರ, ಯೋಗ, ವ್ಯಯಾಮ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ. ನಿಮಗೆ ಹೆಚ್ಚು ಒತ್ತಡದ ಕೆಲಸವಿದೆ ಎಂದಾದರೆ ಬೇಗ ಮಲಗಿ ಬೇಗ ಏಳುವ ಅಭ್ಯಾಸ ಮಾಡುವುದು ಅತ್ಯುತ್ತಮ ಈ ಸಮಯದಲ್ಲಿ 7ರಿಂದ 8 ಗಂಟೆಯ ನಿದ್ರೆ ಅವಶ್ಯಕ. ಕೊಬ್ಬಿನಾಂಶ ಭರಿತ ಆಹಾರ, ಕರಿದ ತಿಂಡಿಗಳು, ಜಂಕ್ ಫುಡ್‌ಗಳಿಂದ ಆದಷ್ಟು ದೂರವಿರಿ. ಇವು ನಿಮ್ಮ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತವೆ.
ದೇಹದ ತೂಕದ ಕಡೆಗೆ ಗಮನವಿಡಿ, ನಿಯಮಿತವಾಗಿ ಆರೋಗ್ಯ ತಪಾಸಣೆ ನಡೆಸುವುದು ಬಹಳ ಉತ್ತಮ. ಧ್ಯಾನ, ಪ್ರವಾಸ, ಮಕ್ಕಳ ಚಟುವಟಿಕೆಯಲ್ಲಿ ತೊಡಗುವುದು, ಸಿನಿಮಾ ಇಂತಹ ಕೆಲಸಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ. ಒಬ್ಬರೇ ಇರುವುದನ್ನು ಆದಷ್ಟು ತಪ್ಪಿಸಿ. ಹೊಸ ಹೊಸ ಸ್ಥಳಗಳನ್ನು ನೋಡಲು ಯಾವಾಗಲು ಉತ್ಸುಕರಾಗಿರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications