Latest Updates
-
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ! -
ಬಿಸಿಲಿನ ಬೇಗೆಗೆ ದಂಪತಿಗಳ ನಡುವೆ ಜಗಳವೇ? ಈ ಸಣ್ಣ ಬದಲಾವಣೆಗಳು ನಿಮ್ಮ ಸಂಬಂಧವನ್ನು ಬಿರುಕಿನಿಂದ ಕಾಪಾಡುತ್ತವೆ! -
ಉತ್ತರ ಭಾರತದಲ್ಲಿ ಸುಡುವ ಬಿಸಿಲು: ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಬಚಾವ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ನಿಮಗೆ ರಾಮಬಾಣ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ಬೇಸಿಗೆಯಲ್ಲೂ ನೀವು ಕೂಲ್ ಆಗಿರಬಹುದು! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಹೃದಯದ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ!
ಮಕ್ಕಳಲ್ಲಿ ಮಲೇರಿಯಾ: ಹೇಗೆ ಬರುತ್ತದೆ, ಇದರ ಲಕ್ಷಣಗಳೇನು? ತಡೆಗಟ್ಟುವುದು ಹೇಗೆ?
ಏಪ್ರಿಲ್ ಏಪ್ರಿಲ್ 25 ರಂದು ʼವಿಶ್ವ ಮಲೇರಿಯಾ ದಿನʼ ಆಚರಿಸಲಾಗುವುದು. ಈ ವರ್ಷ ʼಜಗತ್ತಿನಾದ್ಯಂತ ಮಲೇರಿಯಾ ವಿರುದ್ಧದ ಹೋರಾಟಕ್ಕೆ ಒತ್ತುʼ ಎಂಬ ಥೀಮ್‌ನೊಂದಿಗೆ ವಿಶ್ವ ಮಲೇರಿಯಾ ದಿನ ಆಚರಿಸಲಾಗುವುದು.
ಮಲೇರಿಯಾ ಸೊಳ್ಳೆ ಕಚ್ಚುವುದರಿಂದ ಹರಡುವುದು, ಮಕ್ಕಳಿಗೆ ಮಲೇರಿಯಾ ಕಾಯಿಲೆಯಿಂದ ರಕ್ಷಣೆ ಮಾಡುವುದು ಹೇಗೆ ಎಂದು ಬೆಂಗಳೂರಿನ ಕಿಂಡರ್ ಆಸ್ಪತ್ರೆಯ ಮಕ್ಕಳ ತಜ್ಞರಾದ ಶಿಲ್ಪಾ ಪಾಂಡ್ಯ ಅವರು ವಿವರಿಸಿದ್ದಾರೆ ನೋಡಿ.

ಮಲೇರಿಯಾ ಕಾಯಿಲೆ ಹೇಗೆ ಹರಡುತ್ತದೆ?
ಮಲೇರಿಯಾ ಸೊಳ್ಳೆಯಿಂದ ಹರಡುವ ಕಾಯಿಲೆಯಾಗಿದೆ. ಪ್ಲಾಸ್ಮೋಡಿಯಂ ಫಾಲ್ಸಿಪಾರಮ್ ಎಂಬುದು ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದು ತಜ್ಞರು ಹೇಳುತ್ತಾರೆ . ಈ ಮಲೇರಿಯಾ ಕಾಯಿಲೆಯು ಮಕ್ಕಳು ಹಾಗೂ ವಯಸ್ಕರಿಗೆ ಹೆಚ್ಚು ಅಪಾಯಕಾರಿಯಾಗಿದೆ, ಏಕೆಂದರೆ ಇವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರಲಿದೆ, ಹೀಗಾಗಿ ಅವರಿಗೆ ಈ ಕಾಯಿಲೆ ಭೀಕರ ಪರಿಣಾಮ ಬೀರಬಹುದು.
ಮಲೇರಿಯಾ ಸೋಂಕು ಇರುವ ಸೊಳ್ಳೆಯು ಕಚ್ಚಿದಾಗ ಅದು ಯಕೃತ್ ಸೇರಿಕೊಂಡು ಯಕೃತ್ತಿನ ಜೀವಕೋಶಗಳಲ್ಲಿ ದ್ವಿಗುಣಗೊಂಡು ಕೆಂಪು ರಕ್ತ ಕಣಗಳ ಮೇಲೆ ದಾಳಿ ನಡೆಸುತ್ತದೆ. ಇದರಿಂದ ಜ್ವರ, ತಲೆನೋವು, ವಾಕರಿಕೆ, ವಾಂತಿ ಈ ರೀತಿಯ ಸಮಸ್ಯೆ ಕಂಡು ಬರುವುದು, ವಿಪರೀತ ಬೇಧಿಯಾಗುವುದು ಈ ಕಾಯಿಲೆಯ ಲಕ್ಷಣಗಳಲ್ಲಿ ಒಂದಾಗಿದೆ. ಕಾಯಿಲೆ ಅತಿಯಾದಾಗ ಅಂಗಾಂಗ ವೈಫಲ್ಯ ಕೂಡ ಉಂಟಾಗುವುದು. ಹೀಗಾಗಿ ಸಕಾಲಕ್ಕೆ ಚಿಕಿತ್ಸೆ ತೆಗೆದುಕೊಳ್ಳುವುದು ಬಹುಮುಖ್ಯ ಅಂತಾರೆ ಮಕ್ಕಳ ತಜ್ಞರಾದ ಶಿಲ್ಪಾ ಪಾಂಡ್ಯ.
ಮಕ್ಕಳಲ್ಲಿ ಮಲೇರಿಯಾ ಲಕ್ಷಣಗಳೇನು?
ಜ್ವರ
ಶೀತ
ತಲೆನೋವು
ವಾಕರಿಕೆ
ವಾಂತಿ
ಭೇದಿ
ಸೂಚನೆ: ಮುಖ್ಯವಾದ ಅಂಶವೆಂದರೆ ಮಲೇರಿಯಾ ಹೊಂದಿರುವ ಎಲ್ಲಾ ಮಕ್ಕಳು ಜ್ವರದ ಜೊತೆಗೆ ಶೀತವನ್ನು ಹೊಂದಿರುವುದಿಲ್ಲ. ಆದರೆ ಅಸ್ವಸ್ಥತೆ ಅಥವಾ ಆಯಾಸದಂತಹ ಇತರ ರೋಗಲಕ್ಷಣಗಳು ಅವರಲ್ಲಿ ಕಂಡು ಬರುವುದು.
ಮಲೇರಿಯಾ ಬಂದರೆ ಮಗುವನ್ನು ಹೇಗೆ ಆರೈಕೆ ಮಾಡಬೇಕು?
ಮಗುವಿಗೆ ಮಲೇರಿಯಾ ಬಂದರೆ ಮಗುವನ್ನು ತುಂಬಾ ಜಾಗ್ರತೆಯಿಂದ ನೋಡಿಕೊಳ್ಳಬೇಕು. ವೈದ್ಯರಿಗೆ ತೋರಿಸಬೇಕು, ಅವರು ಸೂಚಿಸುವ ಔಷಧಗಳನ್ನು ಸರಿಯಾದ ಸಮಯಕ್ಕೆ ಕೊಡಬೇಕು. ಮಗುವಿಗೆ ಸಾಕಷ್ಟು ವಿಶ್ರಾಂತಿ ಬೇಕಾಗಿರುತ್ತದೆ, ಮಗುವಿಗೆ ಏನಾದರೂ ದ್ರವಾಂಶದ ಆಹಾರ ನೀಡಿ. ಮಗು ಸಂಪೂರ್ಣ ಚೇತರಿಸಿಕೊಳ್ಳುವವರಿಗೆ ಮಗುವನ್ನು ಹೆಚ್ಚು ಆಟವಾಡಲು ಬಿಡಬೇಡಿ, ಏಕೆಂದರೆ ವಿಶ್ರಾಂತಿ ತುಂಬಾನೇ ಮುಖ್ಯ.
ಯಾವ ಲಕ್ಷಣಗಳು ಅಪಾಯಕಾರಿ?
ಮಗುವಿನ ಕಣ್ಣು, ತ್ವಚೆ ಹಳದಿ ಬಣ್ಣಕ್ಕೆ ತಿರುಗುವುದು.
ಮೂತ್ರ ಅಥವಾ ಮಲದಲ್ಲಿ ರಕ್ತ ಕಂಡುಬರುವುದು
ಜ್ವರ ಕಡಿಮೆಯಾಗದೇ ಇರುವುದು
ಇವೆಲ್ಲಾ ಅಪಾಯಕಾರಿ ಲಕ್ಷಣಗಳು
ಪೋಷಕರೇ ಈ ತಪ್ಪು ಕಲ್ಪನೆ ಬೇಡ?
ಮಕ್ಕಳ ತಜ್ಞೆ ಶಿಲ್ಪಾ ಪಾಂಡ್ಯ ಅವರು ಪೋಷಕರು ಈ ತಪ್ಪು ಕಲ್ಪನೆ ಬಿಡಬೇಕು ಎಂದು ಹೇಳುತ್ತಾರೆ
- ಮಲೇರಿಯಾ ಕಾಯಿಲೆ ಕಲುಷಿತ ನೀರು ಕುಡಿಯುವುದರಿಂದ ಅಥವಾ ಸೋಂಕಿತ ವ್ಯಕ್ತಿಯ ಸಂಪರ್ಕದಿಂದ ಹರಡುತ್ತದೆ.
- ಸತ್ಯಾಂಶ: ಮಲೇರಿಯಾವು ಸೊಳ್ಳೆ ಸೊಂಕು ಇರುವ ವ್ಯಕ್ತಿಯನ್ನು ಕಚ್ಚಿ ಆ ಸೊಳಲೆ ಬೇರೆಯವರನ್ನು ಕಚ್ಚಿದಾಗ ಬರುವುದು.
- ಮಲೇರಿಯಾ ಸೋಂಕು ಇದ್ದರೆ ತಾಯಿ ಎದೆಹಾಲು ಕೊಡಬಾರದು ಎಂಬುವುದು ತಪ್ಪು ಕಲ್ಪನೆ, ಎದೆ ಹಾಲಿನ ಮೂಲಕ ಹರಡುವುದಿಲ್ಲ.
- ಸೋಂಕಿತ ಮಗುವಿನ ಸಂಪರ್ಕದಿಂದ ಬೇರೆ ಮಕ್ಕಳಿಗೆ ಮಲೇರಿಯಾ ಬರುತ್ತದೆ
- ಸೋಂಕಿತ ಮಗು ಬಳಸಿದ ಬಟ್ಟೆ ಅಥವಾ ಪಾತ್ರೆಗಳಂತಹ ವಸ್ತುಗಳನ್ನು ಹಂಚಿಕೊಳ್ಳುವುದರಿಂದ ಮಕ್ಕಳಿಗೆ ಮಲೇರಿಯಾ ಹರಡುವುದಿಲ್ಲ.
- ಒಮ್ಮೆ ಮಲೇರಿಯಾ ಬಂದರೆ ಮತ್ತೆ ಬರಲ್ಲ
- ವಿಭಿನ್ನ ಜಾತಿಯ ಪರಾವಲಂಬಿಗಳಿಂದ ಮನುಷ್ಯರಲ್ಲಿ ಮತ್ತೆ ಮಲೇರಿಯಾ ಸೋಂಕು ಕಾಣಿಸಿಕೊಳ್ಳಬಹುದು.
ಮಲೇರಿಯಾಗೆ ಲಸಿಕೆ ಇದೆಯೇ?
ಮಲೇರಿಯಾ ಕಾಯಿಲೆಗೆ ನಿರ್ಧಿಷ್ಟ ಲಸಿಕೆ ಇಲ್ಲ, ರೋಗ ಲಕ್ಷಣ ನೋಡಿ ಚಿಕಿತ್ಸೆ ನೀಡಲಾಗುವುದು.
ಮಕ್ಕಳಿಗೆ ಮಲೇರಿಯಾ ಬರದಂತೆ ತಡೆಗಟ್ಟುವುದು ಹೇಗೆ?
ಸೊಳ್ಳೆ ನಿವಾರಕಗಳು ಮತ್ತು ಸೊಳ್ಳೆ ಬತ್ತಿಗಳನ್ನು ಬಳಸಿ
ಮಕ್ಕಳಿಗೆ ತುಂಬು ತೋಳಿನ ಬಟ್ಟೆ ಧರಿಸಿ
ಮನೆಯ ಆವರಣದಲ್ಲಿ ನೀರು ನಿಂತಿದ್ದರೆ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಹಾಗಾಗಿ ಮನೆಯ ಸುತ್ತ ಮುತ್ತ ನೀರು ನಿಲ್ಲದಂತೆ ಜಾಗ್ರತೆವಹಿಸಿ
ಮಕ್ಕಳನ್ನು ಸೊಳ್ಳೆ ಪರದೆ ಒಳಗಡೆ ಮಲಗಿಸಿ
ಸೊಳ್ಳೆ ಹೆಚ್ಚಿರುವಾಗ ಹೊರಗಡೆ ಆಡಲು ಬಿಡಬೇಡಿ. ಬೆಳಗ್ಗೆ ಮತ್ತು ಸಂಜೆ ಸೊಳ್ಳೆ ಹೆಚ್ಚಾಗಿ ಬರುತ್ತದೆ, ಈ ಸಮಯದಲ್ಲಿ ಸೊಳ್ಳೆ ಕಚ್ಚದಂತೆ ಜಾಗ್ರತೆವಹಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications