Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಕರ್ನಾಟಕ: ಉದ್ಯೋಗಸ್ಥ ಮಹಿಳೆಯರಿಗೆ ಸಿಗಲಿದೆ 6 ದಿನಗಳ ವೇತನ ಸಹಿತ ಮುಟ್ಟಿನ ರಜೆ
ಹದಿಹರೆಯದ ಪ್ರಾಯದಲ್ಲಿ ಋತು ಚಕ್ರ ಪ್ರಾರಂಭವಾದಾಗಿನಿಂದ ಮೆನೋಪಸ್ ಹಂತ ಅಂದರೆ ಮುಟ್ಟು ನಿಲ್ಲುವವರೆಗೆ ಹೆಣ್ಮಕ್ಕಳಿಗೆ ಪ್ರತಿ ತಿಂಗಳು ಮುಟ್ಟಾಗುತ್ತಿರುತ್ತದೆ. ಕೆಲವರಿಗೆ ಮುಟ್ಟು ಎಂಬುವುದು ಅಂಥ ದೊಡ್ಡ ಸಮಸ್ಯೆಯಾಗಲ್ಲ, ಆದರೆ ಕೆಲ ಹೆಣ್ಮಕ್ಕಳಿಗೆ ಆ ಎರಡು-ಮೂರು ದಿನ ನರಕ.

ನಿಲ್ಲಲು ಸಾಧ್ಯವಾಗಲ್ಲ, ವಿಪರೀತ ಹೊಟ್ಟೆನೋವು, ವಾಂತಿ-ಬೇಧಿ ಹೀಗೆ ಆ ದಿನಗಳಲ್ಲಿ ಅವಳು ಪಡುವ ಸಂಕಷ್ಟ ಅಷ್ಟಿಷ್ಟಲ್ಲ. ಹೆಣ್ಮಕ್ಕಳಿಗೆ ಈ ಕಷ್ಟದ ದಿನಗಳಲ್ಲಿ ವೇತನ ಸಹಿತ ಮುಟ್ಟಿನ ರಜೆ ನೀಡಲು ಕರ್ನಾಟಕ ಸರ್ಕಾರ ಮುಂದಾಗಿರುವುದು ನಿಜವಾಗಲೂ ಸ್ವಾಗತಾರ್ಹ.
18 ಸದಸ್ಯರ ಕಮಿಟಿ ರಚನೆ ಮಾಡಿದ್ದು ಅದರಲ್ಲಿ ಮೀಟಿಂಗ್ ಕರೆದು ಮಹಿಳಾ ಉದ್ಯೋಗಿಗಳು ಎದುರಿಸುತ್ತಿರುವ ಸಮಸ್ಯೆಗಳು, ಆ ಸಮಯದಲ್ಲಿ ಅವರು ಅನುಭವಿಸುವ ತೊಂದರೆಗಳು ಇದರ ಬಗ್ಗೆ ಚರ್ಚೆ ಮಾಡಲಾಗಿದೆ, ಅಲ್ಲದೆ ಆ ದಿನಗಳಲ್ಲಿ ಮಹಿಳೆಯರಿಗೆ ಅಗ್ಯತಬಿದ್ದರೆ ರಜೆ ತೆಗೆದುಕೊಳ್ಳಲು ಅವಕಾಶ ನೀಡಲಾಗುವುದು ಎಂದು ಕರ್ನಾಟಕದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗೆ ಬಗ್ಗೆ ಹೇಳಿದ ಸಂತೋಷ್ ಲಾಡ್
ಇದೊಂದು ಒಳ್ಳೆಯ ನಿರ್ಧಾರವಾಗಿದೆ, ಮಹಿಳೆಯರು ಅದರಲ್ಲಿಯೂ ಮದುವೆಯಾಗಿ ಮಕ್ಕಳಾದ ಮೇಲೆ ಅನೇಕ ಸವಾಲುಗಳನ್ನು ಎದುರಿಸುತ್ತಾರೆ, ಇವೆಲ್ಲಾ ಪರಿಗಣಿಸಬೇಕಾಗಿದೆ ಎಂದು ಸಚಿವರು ಹೇಳಿದ್ದಾರೆ.
ವರ್ಷಕ್ಕೆ 6 ಮುಟ್ಟಿನ ರಜೆಯನ್ನು ವೇತನ ಸಹಿತ ನೀಡಲು ತೀರ್ಮಾನಿಸಲಾಗಿದೆ
ಕರ್ನಾಟಕದಲ್ಲಿ 6 ಮುಟ್ಟಿನ ರಜೆಯನ್ನು ವೇತನ ಸಹಿತ ನೀಡಲು ಸರ್ಕಾರ ತೀರ್ಮಾನ ತೆಗೆದುಕೊಂಡಿದೆ. ಕೇರಳದ ಯೂನಿವರ್ಸಿಟಿಯಲ್ಲಿ 2023ರಿಂದಲೇ ಮುಟ್ಟಿನ ರಜೆ ನೀಡಲಾಗುತ್ತಿದೆ, ಬಿಹಾರದಲ್ಲಿ 1992ರಿಂದ ತಿಂಗಳಿಗೆ ಎರಡು ದಿನ ಮುಟ್ಟಿನ ರಜೆ ನೀಡಲಾಗುತ್ತಿದೆ, ಕಳೆದ ತಿಂಗಳು ಒಡಿಸ್ಸಾ ಸರ್ಕಾರ ಮುಟ್ಟಿನ ರಜೆ ಘೋಷಣೆ ಮಾಡಿದೆ, ಇದೀಗ ಕರ್ನಾಟಕ ಸರ್ಕಾರ ಮುಟ್ಟಿನ ರಜೆ ನೀಡುವುದಾಗಿ ಘೋಷಿಸಿರುವುದರಿಂದ ಅನೇಕ ಮಹಿಳಾ ಉದ್ಯೋಗಿಗಳಿಗೆ ತುಂಬಾನೇ ಸಹಾಯವಾಗಲಿದೆ.
ವರ್ಷಕ್ಕೆ 12 ತಿಂಗಳು, 6 ಮುಟ್ಟಿನ ರಜೆ ಸಾಕೆ?
ಈ ಪ್ರಶ್ನೆ ಹಲವರಲ್ಲಿ ಮೂಡಬಹುದು. ಪ್ರತಿತಿಂಗಳು ಮುಟ್ಟಿನ ಸಮಯದಲ್ಲಿ ನೋವು ಒಂದೇ ರೀತಿ ಇರುತ್ತದೆ ಎಂದು ಹೇಳಲಾಗುವುದಿಲ್ಲ, ಕೆಲವರಿಗಷ್ಟೇ ಪ್ರತಿಬಾರಿಯೂ ಸಾಕಷ್ಟು ನೋವಿರುತ್ತದೆ, ಹೆಚ್ಚಿನವರಿಗೆ ಕೆಲವೊಮ್ಮೆ ಮಾತ್ರ ವಿಪರೀತ ನೋವು ಕಾಣಿಸಿಕೊಳ್ಳುವುದು, ಆವಾಗ ಇಂಥ ರಜೆಯನ್ನು ಬಳಸಿಕೊಳ್ಳಬಹುದು. ಇನ್ನು ವೀಕೆಂಡ್ ರಜೆಯ ಸಮಯದದಲ್ಲಿ ಮುಟ್ಟಾದರೆ ಆವಾಗ ಈ ರಜೆಯ ಅವಶ್ಯಕತೆ ಬೀಳುವುದಿಲ್ಲ, ಹಾಗಾಗಿ ಈ 6 ರಜೆಯನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿದರೆ ಖಂಡಿತ ಉದ್ಯೋಗದಲ್ಲಿರುವ ಮಹಿಳೆಯರಿಗೆ ತುಂಬಾನೇ ಪ್ರಯೋಜನವಾಗಲಿದೆ.
ಮುಟ್ಟಿನ ದಿನಗಳಲ್ಲಿ ಕೆಲಸದ ಕಡೆಗೆ ಗಮನಹರಿಸಲು ಕಷ್ಟವಾಗುವುದು
ಮುಟ್ಟಾದ ಒಂದು ಅಥವಾ ಎರಡು ದಿನ ತುಂಬಾನೇ ಕಷ್ಟಪಡುತ್ತಾರೆ, ಯಾವ ಕೆಲಸದ ಕಡೆಗೆ ಗಮನಹರಿಸುವುದು ಕಷ್ಟವಾಗುವುದು, ಅದರಲ್ಲಿಯೂ ಟ್ರಾವೆಲ್ ಮಾಡಿ ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಈ ಸಮಯ ನರಕ ಅನಿಸುವುದು. ನನಗೆ ಮುಟ್ಟಾಗಿದೆ ಕೆಲಸಕ್ಕೆ ಬರಲು ಸಾಧ್ಯವಿಲ್ಲ ಎಂದು ಹೇಳುವುದು ಕೂಡ ಕಷ್ಟ, ಆದರೆ ಮುಟ್ಟಿನ ರಜೆ ಕಡ್ಡಾಯವಾಗಿ ನೀಡಬೇಕು ಎಂಬ ನಿಯಮ ಬಂದರೆ ಅವಳ ಆ ದಿನಗಳಲ್ಲಿ ಯಾವುದೇ ಸಂಕೋಚವಿಲ್ಲದೆ ಬಳಸಿಕೊಳ್ಳಬಹುದಾಗಿದೆ.
ಮುಟ್ಟಿನ ನೋವಿನ ವಿಚಾರದಲ್ಲಿ ಹೋಲಿಕೆ ಬೇಡ
ಅವಳು ನಿನ್ನಂತೆ ಹೆಣ್ಮಗಳು ತಾನೆ? ನೀನು ಮಾತ್ರ ಮುಟ್ಟಿನ ಸಮಯದಲ್ಲಿ ಹೀಗ್ಯಾಕೆ ಮಾಡ್ತಿ? ಅಂತ ಹೋಲಿಕೆ ಮಾಡಬೇಡಿ. ಎಲ್ಲಾ ಹೆಣ್ಮಕ್ಕಳಿಗೆ ಮುಟ್ಟಿನ ಆ 3-4 ದಿನಗಳು ಒಂದೇ ರೀತಿ ಇರಲ್ಲ. ಕೆಲವರಿಗೆ ಎದ್ದು ನಿಲ್ಲಲು ಸಾಧ್ಯವಾಗದಷ್ಟು ನೋವು ಅನುಭವಿಸಿದರೆ ಇನ್ನು ಕೆಲವರು ಈ ದಿನಗಳಲ್ಲಿ ಆರಾಮವಾಗಿಯೇ ಇರುತ್ತಾರೆ. ಹಾಗಾಗಿ ಕೆಲವರಿಗಂತೂ ಈ ಮುಟ್ಟಿನ ರಜೆ ಅವಶ್ಯಕವಾಗಿದೆ, ಹಾಗಾಗಿ ಮುಟ್ಟಿನ ನೋವಿನ ವಿಚಾರದಲ್ಲಿ ಹೋಲಿಕೆ ಬೇಡ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
