Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅನಿಯಮಿತ ಮುಟ್ಟಿಗೆ ಕಾರಣವೇನು? ಮುಟ್ಟಿನ ಚಕ್ರ ಸರಿಯಾಗಲು ಏನು ಮಾಡಬೇಕು?
ಮುಟ್ಟು ಸರಿಯಾಗಿ ಆಗುತ್ತಿಲ್ಲ ಎಂಬುವುದು ತುಂಬಾ ಮಹಿಳೆಯರ ಸಮಸ್ಯೆಯಾಗಿದೆ. ಅನೇಕ ಕಾರಣಗಳಿಂದ ಅನಿಯಮಿತ ಮುಟ್ಟಿನ ಸಮಸ್ಯೆ ಉಂಟಾಗುತ್ತಿದೆ. ಜೀವನ ಶೈಲಿ, ಅನಾರೋಗ್ಯ ಸಮಸ್ಯೆಯಿಂದಾಗಿ ಈ ರೀತಿ ಮುಟ್ಟಿನ ಸಮಸ್ಯೆ ಉಂಟಾಗುವುದು. ಅನಿಯಮಿತ ಮುಟ್ಟಿನ ಸಮಸ್ಯೆಗೆ ಕಾರಣಗಳೇನು? ಮುಟ್ಟನ್ನು ನಿಯಮಿತವಾಗಿಸಲು ಏನು ಮಾಡಬೇಕು ಎಂದು ನೋಡೋಣ ಬನ್ನಿ:

ಅನಿಯಮಿತ ಮುಟ್ಟಿನ ಸಮಸ್ಯೆಗೆ ಕಾರಣವೇನು?
1. ಮಾನಸಿಕ ಒತ್ತಡ
ಇತ್ತೀಚಿನ ದಿನಗಳಲ್ಲಿ ಮಾನಸಿಕ ಒತ್ತಡ ಎಂಬುವುದು ಸರ್ವೇ ಸಾಮಾನ್ಯವಾಗಿದೆ. ಮಾನಸಿಕ ಒತ್ತಡ ಹೆಚ್ಚಾದಾಗ ಹಾರ್ಮೋನ್‌ಗಳಲ್ಲಿ ಬದಲಾವಣೆಯಾಗುವುದು. ಹಾರ್ಮೋನ್‌ಗಳ ಬದಲಾವಣೆಯಾದಾಗ ಅನಿಯಮಿತ ಮುಟ್ಟಿನ ಸಮಸ್ಯೆ ಉಂಟಾಗುವುದು.
2. ಮೈ ತೂಕದಲ್ಲಿನ ಬದಲಾವಣೆಯಾಗುವುದು
ಅತ್ಯಧಿಕ ಮೈ ತೂಕ ಅಥವಾ ಅತಿ ಕಡಿಮೆ ಮೈ ತೂಕದಿಂದ ಹಾರ್ಮೋನ್‌ಗಳಲ್ಲಿ ವ್ಯತ್ಯಾಸ ಉಂಟಾಗುವುದು. ಇದರಿಂದ ಕೂಡ ಮುಟ್ಟಿನ ಸಮಸ್ಯೆ ಉಂಟಾಗುವುದು.
3. ಪಿಎಸ್‌ಒಎಸ್
ಪಿಎಸ್‌ಒಎಸ್ ಎಂಬವುದು ಹದಿಹರೆಯದವರಲ್ಲಿ ಕೂಡ ಕಂಡು ಬರುತ್ತಿದೆ. ಹಾರ್ಮೋನ್‌ಗಳಲ್ಲಿ ಬದಲಾವಣೆ ಉಂಟಾಗುವುದರಿಂದ ಪಿಎಸ್‌ಒಎಸ್ ಸಮಸ್ಯೆ ಉಂಟಾಗುವುದು.
4. ಥೈರಾಯ್ಡ್ ಸಮಸ್ಯೆ
ಥೈರಾಯ್ಡ್ ಹಾರ್ಮೋನ್‌ಗಳಲ್ಲಿ ವ್ಯತ್ಯಾಸ ಉಂಟಾದರೆ ಥೈರಾಯ್ಡ್ ಸಮಸ್ಯೆ ಉಂಟಾಗುವುದು. ಥೈರಾಯ್ಡ್ ಸಮಸ್ಯೆ ಉಂಟಾದರೆ ಕೂಡ ಮುಟ್ಟಿನಲ್ಲಿ ಸಮಸ್ಯೆ ಉಂಟಾಗುವುದು.
5. ಅತ್ಯಧಿಕ ವ್ಯಾಯಾಮ: ಆರೋಗ್ಯವಾಗಿರಲು ವ್ಯಾಯಾಮ ತುಂಬಾ ಮುಖ್ಯ. ಆದರೆ ಅತಿಯಾದ ವ್ಯಾಯಾಮ ಒಳ್ಳೆಯದಲ್ಲ. ಅತಿಯಾದ ವ್ಯಾಯಾಮ ಮಾಡುವುದರಿಂದ ಕೂಡ ಹಾರ್ಮೋನ್‌ಗಳಲ್ಲಿ ವ್ಯತ್ಯಾಸ ಉಂಟಾಗಿ ಮುಟ್ಟಿನಲ್ಲಿ ಸಮಸ್ಯೆ ಉಂಟಾಗುವುದು.
6. ಪೋಷಕಾಂಶಗಳ ಕೊರತೆ ಉಂಟಾದಾಗ
ಆರೋಗ್ಯಕರ ಆಹಾರಕ್ರಮ ಪಾಲಿಸದಿದ್ದರೆ ಪೋಷಕಾಂಶಗಳ ಕೊರತೆ ಉಂಟಾಗುವುದು. ಈ ರೀತಿ ಪೋಷಕಾಂಶಗಳ ಕೊರತೆ ಇರುವವರಿಗೆ ಕೂಡ ಮುಟ್ಟಿನ ಸಮಸ್ಯೆ ಕಂಡು ಬರುವುದು.
7. ಅವಧಿಪೂರ್ವ ಮೆನೋಪಾಸ್
ಕೆಲವರಿಗೆ ಅವಧಿಪೂರ್ವ ಮೆನೋಪಾಸ್ ಸಮಸ್ಯೆ ಉಂಟಾಗುವುದು. ಸಾಮಾನ್ಯವಾಗಿ 50 ವರ್ಷದ ನಂತರ ಮೆನೋಪಾಸ್ ಕಂಡು ಬರುವುದು, ಆದರೆ ಕೆಲವರಿಗೆ 30 ಆಸುಪಾಸಿನಲ್ಲಿಯೇ ಮೆನೋಪಾಸ್ ಸಮಸ್ಯೆ ಉಂಟಾಗುವುದು ಈ ರೀತಿಯಾದಾಗ ಮುಟ್ಟಿನಲ್ಲಿ ಸಮಸ್ಯೆ ಕಂಡು ಬರುವುದು.
ಮುಟ್ಟು ನಿಯಮಿತವಾಗಲು ಏನು ಮಾಡಬೇಕು
ಮುಟ್ಟು ನಿಯಮಿತವಾಗಲು ಮೊದಲಿಗೆ ಹಾರ್ಮೋನ್‌ಗಳು ಸಮತೋಲನದಲ್ಲಿರಬೇಕು.
* ಆರೋಗ್ಯಕರ ಮೈ ತೂಕ ಹೊಂದಿ: ಮೈ ತೂಕ ಹೆಚ್ಚಾಗಿದ್ದರೆ ಕಡಿಮೆ ಮಾಡಿ, ತುಂಬಾ ಕಡಿಮೆಯಾಗಿದ್ದರೆ ಸ್ವಲ್ಪ ಮೈ ತೂಕ ಹೆಚ್ಚಿಸಲು ಪ್ರಯತ್ನಿಸಿ, ಇದರಿಂದ ಮುಟ್ಟು ನಿಯಮಿತವಾಗುವುದು.
* ಮಾನಸಿಕ ಒತ್ತಡ ಕಡಿಮೆ ಮಾಡಿ: ಮಾನಸಿಕ ಒತ್ತಡ ಅನೇಕ ಸಮಸ್ಯೆ ಉಂಟು ಮಾಡುತ್ತದೆ. ಮಾನಸಿಕ ಒತ್ತಡ ಕಡಿಮೆ ಮಾಡಲು ಧ್ಯಾನ ಸಹಾಯ ಮಾಡುತ್ತದೆ.
* ಆಹಾರಕ್ರಮದಲ್ಲಿ ಬದಲಾವಣೆ ಮಾಡಿ
ಜಂಕ್ ಫುಡ್‌ಗೆ ಗುಡ್ ಬೈ ಹೇಳಿ, ನೀವು ನಿಮ್ಮ ಆಹಾರದಲ್ಲಿ ಪೋಷಕಾಂಶಗಳಿರುವ ಆಹಾರ ಇದೆಯೇ ಎಂದು ಗಮನಿಸಿ. ಫಾಸ್ಟ್‌ಫುಡ್‌ಗಳಿಂದ ದೂರವಿರಿ.
* ನಿಯಮಿತವಾಗಿ ವ್ಯಾಯಾಮ ಮಾಡಿ
ಅತಿಯಾದ ವ್ಯಾಯಾಮ ಒಳ್ಳೆಯದಲ್ಲ, ಆದರೆ ಮಿತಿಯಾದ ವ್ಯಾಯಾಮ ಅವಶ್ಯಕ.
ವಿಟಮಿನ್ ಸಿ
ವಿಟಮಿನ್ ಸಿ ಈಸ್ಟ್ರೋಜಿನ್ ಉತ್ಪತ್ತಿಗೆ ಸಹಾಯ ಮಾಡುತ್ತೆ. ಸಿಟ್ರಸ್ ಆಹಾರಗಳಲ್ಲಿ ವಿಟಮಿನ್ ಸಿ ಅಧಿಕವಿದೆ.
ಆರೋಗ್ಯಕರ ಕೊಬ್ಬು ಸೇವಿಸಿ
ಬೆಣ್ಣೆ ಹಣ್ಣು, ಬಟ್ಸ್, ಮೀನು ಈ ಬಗೆಯ ಆಹಾರಗಳಲ್ಲಿ ಆರೋಗ್ಯಕರ ಕೊಬ್ಬಿನಂಶವಿರುತ್ತದೆ, ಆರೋಗ್ಯಕರ ಕೊಬ್ಬಿನಂಶವಿರುವ ಆಹಾರ ಸೇವಿಸಿ.
ಚೆನ್ನಾಗಿ ನಿದ್ದೆ ಮಾಡಿ
ಅತಿ ಕಡಿಮೆ ನಿದ್ದೆ ಆರೋಗ್ಯ ಸಮಸ್ಯೆಯನ್ನು ಹೆಚ್ಚಿಸುತ್ತದೆ. ದಿನದಲ್ಲಿ 8 ಗಂಟೆ ವ್ಯಾಯಾಮ ಮಾಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
