Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಅಮೀರ್ ಖಾನ್ ಮಗಳು ಇರಾ ಖಾನ್ ಇಷ್ಟೆಲ್ಲಾ ಕಷ್ಟ ಅನುಭವಿಸಿದ್ರಾ, ಅವರು ಅನುಭವಿಸಿದ್ದರು ಭಯಾನಕ ಯಾತನೆ
ಇರಾ ಖಾನ್ ಖ್ಯಾತ ನಟ ಅಮೀರ್ ಖಾನ್‌ರ ಏಕೈಕ ಪುತ್ರಿ, ಇಬ್ಬರು ಪುತ್ರರಿದ್ದಾರೆ, ಈಗ ಇರಾ ಖಾನ್ ತಾವು ಅನುಭವಿಸಿದ ಖಿನ್ನತೆ ಎಂಬ ಕಾಯಿಲೆ ಬಗ್ಗೆ ಮುಕ್ತವಾಗಿ ಹಂಚಿಕೊಂಡಿದ್ದಾರೆ, ಅವರ ಮಾತುಗಳನ್ನು ಕೇಳುತ್ತಿದ್ದರೆ ಅಂಥ ನಟನ ಮಗಳ ಬಾಳಲ್ಲಿ ಇಂಥದ್ದೊಂದು ಕಷ್ಟವಿತ್ತಾ ಎಂದು ನಮಗೆ ಅಚ್ಚರಿ ಉಂಟು ಮಾಡುತ್ತದೆ.

ಜೀವನದ ಮೇಲೆ ಆಸಕ್ತಿಯೇ ಕಳೆದುಕೊಂಡಿದ್ದರು ಇರಾ ಖಾನ್
ಅವರೇ ಹೇಳಿರುವಂತೆ ಅವರು 12 ಗಂಟೆ 13 ಗಂಟೆ ಮಲಗಿಯೇ ಇರ್ತಾ ಇದ್ದರು. ಅವರಿಗೆ ಎದ್ದೇಳಬೇಕು ಎಂದು ಅನಿಸುತ್ತಲೇ ಇರಲಿಲ್ಲ. ನಾನು ಒಂಟಿ ಎಂಬ ಭಾವನೆ ತುಂಬಾನೇ ಕಾಡ್ತಾ ಇತ್ತು, ಯಾವ ವಿಷಯದ ಕಡೆಗೆ ಗಮನಹರಿಸಲು ಸಾಧ್ಯವಾಗುತ್ತಿರಲಿಲ್ಲ, ಯಾರ ಜೊತೆ ಮಾತನಾಡಲು ಇಷ್ಟವಾಗ್ತಾ ಇರಲಿಲ್ಲ.
ನಾನು ಕೋಮಾಗೆ ಜಾರಿದರೆ ಎಷ್ಟು ಚೆನ್ನಾಗಿತ್ತು ಎಂದು ಯೋಚಿಸುತ್ತಿದ್ದರಂತೆ
ಅವರ ಸ್ಥಿತಿ ಹೇಗಿತ್ತು ಎಂದರೆ ಅವರಿಗೆ ಮಲಗಿದರೆ ಎದ್ದೇಳಬೇಕೆಂದು ಅನಿಸುತ್ತಲೇ ಇರಲಿಲ್ವಂತೆ , ಹೀಗೆ ಒಂದು ಐದು ವರ್ಷ ಕೋಮಾಗೆ ಜಾರಿದ್ದರೆ ಚೆನ್ನಾಗಿತ್ತು, ನಾನು ಕೋಮಾದಿಂದ ಎದ್ದಾಗ ಎಲ್ಲವೂ ಸರಿಯಾದರೆ ಚೆನ್ನಾಗಿತ್ತು ಎಂದೆಲ್ಲಾ ಯೋಚಿಸುತ್ತಿದ್ದೆ ಎಂದು ಹೇಳಿದ್ದಾರೆ. ಒಬ್ಬ ಖ್ಯಾತ ನಟನ ಅಲ್ಲದೆ ಸತ್ಯಮೇವ ಜಯತೆ ಅಂಥ ಕಾರ್ಯಕ್ರಮ ನಡೆಸಿಕೊಟ್ಟಿದ್ದ ವ್ಯಕ್ತಿಯ ಮಗಳ ಬದುಕು ಹೀಗೆ ಆಗಿತ್ತೇ ಎಂದು ಯೋಚಿಸಿದರೆ ಖಂಡಿತ ಅಚ್ಚರಿ ಉಂಟಾಗುತ್ತೆ.
ಹೊರ ನೋಟಕ್ಕೆ ಎಲ್ಲವೂ ಚೆನ್ನಾಗಿದೆ ಎಂದು ಕಾಣುತ್ತೆ ಆದರೆ ಹಾಗೆ ಇರಲ್ಲ ಅವರ ಬದುಕು
ನಾವು ಸಾಮಾನ್ಯ ಮನುಷ್ಯರು ಸೆಲೆಬ್ರಿಟಿಗಳನ್ನು, ಅವರ ಮಕ್ಕಳನ್ನು ನೋಡಿದಾಗ ಅವರ ಬದುಕು ಎಷ್ಟು ಚೆನ್ನಾಗಿದೆ ಅಲ್ವಾ ಎಂದನಿಸುತ್ತೆ, ಐಷಾರಾಮಿ ಬದುಕು,ಖ್ಯಾತಿ ಎಲ್ಲವೂ ಇದೆ ಮತ್ತೇನು ಬೇಕು ಎಂದು ನಮಗನಿಸುತ್ತೆ, ಆದರೆ ಪ್ರತ್ಯೇಕವಾದ ಅಪ್ಪ-ಅಮ್ಮ, ಇತರ ಒಂದಿಷ್ಟೂ ಸಮಸ್ಯೆಗಳು ಇವೆಲ್ಲಾ ಮಕ್ಕಳ ಮೇಲೆ ಗಾಢ ಪರಿಣಾಮ ಬೀರಿರಬಹುದು.
ಇರಾ ಬೆಳೆದ ಪರಿಸ್ಥಿತಿ ಆಕೆಯನ್ನು ಇಂಥ ಖಿನ್ನತೆಗೆ ದೂಡಿರಲೂಬಹುದು
ಇದರ ಬಗ್ಗೆ ಇರಾ ಪಬ್ಲಿಕ್ ಆಗಿ ಏನೂ ಹೇಳಿಲ್ಲ, ಆದರೆ ಖಿನ್ನತೆ ಎಂಬುವುದು ಎಷ್ಟೊಂದು ಭೀಕರವಾಗಿ ಕಾಡಿತ್ತು ಎಂಬುವುದು ಅವರ ಮಾತುಗಳಲ್ಲಿ ತಿಳಿಯುತ್ತೆ. ಅವರು ಖಿನ್ನತೆಯಿಂದ ಹೊರ ಬರಲು ಸ್ವಲ್ಪ ಸಮಯ ಹಿಡಿಯಿತು ಎಂಬುವುದಾಗಿ ಹೇಳಿದ್ದಾರೆ. ಅವರೀಗ ಖಿನ್ನತೆಯಿಂದ ಬಳಲುತ್ತಿರುವವರೆಗೆ ನೆರವಾಗಲು ಹೆಲ್ಪ್‌ಲೈನ್ ಸ್ಥಾಪಿಸಿದ್ದಾರೆ, ಮಗಳ ಉತ್ತಮ ಕಾರ್ಯಕ್ಕೆ ತಂದೆ ಅಮೀರ್‌ಖಾನ್ ಕೂಡ ಕೈಜೋಡಿಸಿದ್ದಾರೆ.
Helplines:
14416 Tele manas helpline
1800-599-0019 Kiran helpline
9999666555 Vandrevala
011 4119866 (10am to 6pm) Sangath
ಹಾಗಾಗಿ ಖಿನ್ನತೆ ಎಂಬುವುದು ಇವರಿಗೆ ಬರುತ್ತೆ, ಇವರಿಗೆ ಬರಲ್ಲ ಅಂತಲ್ಲ
ಖಿನ್ನತೆಯಿಂದ ಬಳಲುತ್ತಿರುವವರು ಸಾಕಷ್ಟು ಜನರಿದ್ದಾರೆ , ಅವರ ಸುತ್ತ ಮುತ್ತ ಇರುವವರು ಇದನ್ನು ಗುರುತಿಸಿದರೆ ಅವರ ಜೀವನದಲ್ಲಿ ಆತ್ಮಹತ್ಯೆ ಆಲೋಚನೆ ಮಾಡುವುದನ್ನು ತಡೆಗಟ್ಟಬಹುದು ಅಲ್ಲದೆ ಖಿನ್ನತೆಯಿಂದ ಬಳಲುತ್ತಿರುವವರು ಈ ರೀತಿ ಹೆಲ್ಪ್‌ಲೈನ್ ಸಹಾಯ ಪಡೆದರೆ ಈ ಸಮಯದಿಂದ ಹೊರ ಬರಲು ಸಹಾಯವಾಗುತ್ತೆ.
ಖಿನ್ನತೆ ನಿರ್ಲಕ್ಷ್ಯ ಮಾಡುವಂಥ ಕಾಯಿಲೆ ಅಲ್ವೇ ಅಲ್ಲ
ಖಿನ್ನತೆಯನ್ನು ಯಾರೂ ನಿರ್ಲಕ್ಷ್ಯ ಮಾಡಬಾರದು, ಅನೇಕ ಕಾರಣಗಳಿಂದ ಖಿನ್ನತೆ ಉಂಟಾಗಹುದು. ಖಿನ್ನತೆ ಈ ಲಕ್ಷಣ ನಿಮ್ಮ ಮನೆಯವರಲ್ಲಿ, ಸ್ನೇಹಿತರಲ್ಲಿ ಕಂಡು ಬಂದರೆ ಅವರನ್ನು ಅದರಿಂದ ಹೊರಬರಲು ನೆರವಾಗಿ:
ತುಂಬಾನೇ ಬೇಸರ ಉಂಟಾಗುವುದು, ಕಾರಣವಿಲ್ಲದೆ ಅಳು, ಚಿಕ್ಕ ವಿಷಯಕ್ಕೆ ಕೋಪಗೊಳ್ಳುವುದು
ಕೆಲಸ ಕಾರ್ಯಗಳಲ್ಲಿ ಗಮನಹರಿಸಲು ಸಾಧ್ಯವಾಗದಿರುವುದು
ನಿದ್ದೆ ಬಾರದೆ ಇರುವುದು ಅಥವಾ ತುಂಬಾ ನಿದ್ದೆ ಮಾಡುವುದು
ಅತಿಯಾಗಿ ತಿನ್ನುವುದು ಅಥವಾ ತಿನ್ನದೇ ಇರುವುದು
ನಕರಾತ್ಮಕ ಆಲೋಚನೆ
ಮೈಕೈ ನೋವು
ಆತ್ಮವಿಶ್ವಾಸ ಕುಗ್ಗುವುದು
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











