Latest Updates
-
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಸುಪ್ರೀಂ ಕೋರ್ಟ್ ಶಾಕ್: ವಿಚ್ಛೇದನ ಒಪ್ಪಂದ ಮುರಿದರೆ ಕಾದಿದೆ ಕಠಿಣ ಶಿಕ್ಷೆ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಬಿಸಿಗಾಳಿ ಕಾಟವೇ? ಈ ತಂಪು ಪಾನೀಯಗಳೇ ನಿಮ್ಮ ರಕ್ಷಕ
International Yoga day 2025: ಬೊಜ್ಜು ಕರಗಿಸಲು ಈ 5 ಸಿಂಪಲ್ ಯೋಗ ಭಂಗಿ ಟ್ರೈ ಮಾಡಿ!!
ಜೂನ್ 21 ರಂದು ವಿಶ್ವದಾದ್ಯಂತ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ. ಯೋಗವು ದೈಹಿಕ ಆರೋಗ್ಯ ಹಾಗೆ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಅತ್ಯಂತ ಲಾಭದಾಯಕ ಕ್ರಿಯೆಯಲ್ಲಿ ಒಂದಾಗಿದೆ. ಯೋಗವು ನಮ್ಮ ದೇಹವನ್ನು ಸಮತೋಲನದಲ್ಲಿಡಲು ಸಹಾಯ ಮಾಡಲಿದೆ. ಹಾಗೆ ಯೋಗ ಅಭ್ಯಾಸ ಮಾಡುವುದು ಹತ್ತು ಹಲವು ಸಮಸ್ಯೆಗಳಿಂದ ನಮ್ಮನ್ನು ದೂರ ಇಡಲಿದೆ. ಹೀಗಾಗಿ ಯೋಗಕ್ಕೆ ಬಹಳ ಮಹತ್ವವೂ ಇದೆ.
ಯೋಗ ದೈಹಿಕ ಆರೋಗ್ಯಕ್ಕೆ ಎಷ್ಟು ಪೂರಕವೋ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಕೂಡ ಅಷ್ಟೇ ಮುಖ್ಯ ಎಂಬುದನ್ನು ನಾವು ಅರಿತಿದ್ದೇವೆ. ಸದ್ಯ ನಾವು ಹೊಟ್ಟೆಯ ಬೊಜ್ಜು ಕರಗಿಸಲು ಯಾವೆಲ್ಲಾ ಯೋಗ ಅಭ್ಯಾಸ ಮಾಡಬೇಕು ಅನ್ನೋದನ್ನು ತಿಳಿದುಕೊಳ್ಳೋಣ. ಅದರಲ್ಲೂ ಮನೆಯಲ್ಲೇ ನಾವು ಈ ಯೋಗಗಳ ಮಾಡುವುದರಿಂದ ಸುರಕ್ಷಿತವಾಗಿ ಬೊಜ್ಜಿನ ಸಮಸ್ಯೆಯಿಂದ ಹೊರಬರಬಹುದು.
ಬೊಜ್ಜು ಇತ್ತೀಚಿಗೆ ಹಲವರಿಗೆ ಕಾಡುತ್ತಿರುವ ಸಮಸ್ಯೆಗಳಲ್ಲಿ ಒಂದಾಗಿದೆ. ವಯಸ್ಸಿಗಿಂತ ಅಧಿಕ ತೂಕ, ಬೊಜ್ಜಿನಿಂದ ಕಷ್ಟಗಳ ಅನುಭವಿಸುತ್ತಾರೆ. ಹಾಗೆ ಈ ಯೋಗದಿಂದ ಸುಲಭವಾಗಿ ಬೊಜ್ಜು ಕರಗಿಸಬಹುದು.
ಉಷ್ಟ್ರಾಸನ
ನೀವು ಮಂಡಿಯೂರಿ ಕುಳಿತುಕೊಂಡು ನಂತರ ತಲೆಯನ್ನು ಆದಷ್ಟು ಹಿಂದಕ್ಕೆ ಬಗ್ಗಿಸುವ ಮೂಲಕ ಕೈಗಳನ್ನು ಕಾಲುಗಳ ಹಿಮ್ಮಡಿ ಮೇಲೆ ಇಡುವುದು, ಅಥವಾ ಹಿಮ್ಮಡಿಯನ್ನು ಕೈಗಳಿಂದ ಹಿಡಿಯುವುದು ಮಾಡಬೇಕು. ಈ ವೇಳೆ ನಿಮ್ಮ ಸೊಂಟ ಹಾಗೂ ಹೊಟ್ಟೆಯ ಭಾಗ ಬಾಗಿರಬೇಕು. ಈ ಯೋಗ ಮಾಡುವುದರಿಂದ ಬೊಜ್ಜಿನಿಂದ ಪಾರಾಗಬಹುದು. ನಿತ್ಯ ಈ ಯೋಗ ಮಾಡುವುದು ಹೊಟ್ಟೆಯ ಸುತ್ತಲಿನ ಮಾಂಸ ಖಂಡಗಳಲ್ಲಿ ಶೇಖರಣೆಯಾಗಿರುವ ಬೊಜ್ಜು ಕರಗಲು ಸಹಕಾರಿಯಾಗಲಿದೆ.

ಹಲಾಸನ
ಹಲಾಸನವು ಮಲಬದ್ಧತೆ ನಿವಾರಣೆಗಾಗಿ ಅಭ್ಯಾಸ ಮಾಡುವ ಯೋಗ ಭಂಗಿಯಾಗಿದೆ. ಆದ್ರೆ ಇದರಿಂದ ನಿಮ್ಮ ಬೊಜ್ಜು ಸಹ ಕರಗಲು ಸಹಾಯವಾಗುತ್ತದೆ. ಮೊದಲು ನೇರವಾಗಿ ಮಲಗಿ ಬಳಿಕ ಕೈಗಳನ್ನು ಮೇಲೆ ಎತ್ತದೆಯೇ ಕಾಲುಗಳನ್ನು ಮೇಲೆ ಎತ್ತಿ ನಿಧಾನವಾಗಿ ತಲೆಯ ಬಳಿ ಇರಿಸಬೇಕು. ಮುಂಗಾಲುಗಳು ನಿಮ್ಮ ಮೂಗಿಗೆ ತಾಕುವಂತೆ ಹಿಡಿಯಬೇಕು. ಈ ರೀತಿಯ ಯೋಗವನ್ನು ನಿತ್ಯ ಅಭ್ಯಾಸ ಮಾಡಬೇಕು. ಇದರಿಂದ ಸೊಂಟದ ಬಳಿಯ ಬೊಜ್ಜು ಕರಗಿಸಲು ಸಹಾಯಕವಾಗಲಿದೆ.
ಪಾದಹಸ್ತಾಸನ
ಮೊದಲು ನೇರವಾಗಿ ನಿಂತುಕೊಳ್ಳಿ. ಅನಂತರ ಕಾಲುಗಳನ್ನು ಮಡಚದಂತೆ ಮುಂದೆ ಭಾಗಿ ಎರಡೂ ಕೈಗಳನ್ನು ನೆಲಕ್ಕೆ ಸಮನಾಂತರವಾಗಿ ಹಿಡಿದುಕೊಳ್ಳಿ. ಸಾಧ್ಯವಾದರೆ ಕೈಗಳಿಂದ ನೆಲವನ್ನು ಮುಟ್ಟಬೇಕು. ಆಗಿಲ್ಲದಿದ್ದರೆ ಎರಡು ಇಟ್ಟಿಗೆ ಅಥವಾ ಕಲ್ಲುಗಳ ಇಟ್ಟು ಅದನ್ನು ಸ್ಪರ್ಶಿಸಲು ಪ್ರಯತ್ನಿಸಬೇಕು. ಈ ಭಂಗಿಯಲ್ಲಿ ಉಸಿರಾಟ ಸಾಮಾನ್ಯವಾಗಿರಲಿ. ಹಾಗೆ ಇದನ್ನು ನಿರಂತವಾಗಿ ಮಾಡುವುದು ನಿಮ್ಮ ಬೊಜ್ಜಿನ ಸಮಸ್ಯೆಗೆ ಪರಿಹಾರ ತರಲಿದೆ.
ಸಂತೋಲನಾಸನ
ಹೆಸರೇ ಸೂಚಿಸುವಂತೆ ದೇಹವನ್ನು ಸಂಯೋಲನ ಮಾಡುವುದು. ಮೊದಲು ಹೊಟ್ಟೆಯ ಮೇಲೆ ಮಲಗಿ ಬಳಿ ಅಂಗೈಯನ್ನು ನೆಲಕ್ಕೆ ಹಿಡಿದು ನೇರವಾಗಿ ಮೇಲೆ ಏಳುವುದು ಹಾಗೆ ಅದೇ ಭಂಗಿಯಲ್ಲಿ ಬಹಳ ಸಮಯ ಕಳೆಯುವುದು. ಈ ಭಂಗಿಯಲ್ಲಿ ಹೊಟ್ಟೆಯ ಭಾಗಕ್ಕೆ ಒತ್ತಡ ಬೀಳುವುದರಿಂದ ಬೊಜ್ಜು ಸುಲಭವಾಗಿ ಕರಗಿಸಬಹುದು.
ವಸಿಷ್ಠಾಸನ
ಸಂತೋಲನ ಆಸನದಂತೆ ಮಲಗಿ ಬಳಿಕ ಒಂದು ಕೈಯನ್ನು ಮತ್ತೊಂದು ಕೈನ ವಿರುದ್ಧ ದಿಕ್ಕಿನತ್ತ ನೇರವಾಗಿ ಮೇಲೆ ಎತ್ತುವುದು. ಇದು ಒಂದು ಬದಿಯಲ್ಲಿ ನೀವು ನಿಂತಂತೆ ಕಾಣಿಸಬೇಕು. ನಿಮ್ಮ ದೇಹದ ತೂಕ ಸಂಪೂರ್ಣವಾಗಿ ಹಿಡಿತದಲ್ಲಿಡಲು ಇದನ್ನು ಮಾಡಬೇಕು. ಈ ಭಂಗಿಯಲ್ಲಿ ಕ್ಯಾಲೋರಿಯನ್ನು ಸುಡಲು ಸಹಾಯ ಮಾಡುತ್ತದೆ. ಹೀಗಾಗಿ ಬೊಜ್ಜು ಕರಗಿಸಲು ಇದು ಸಹಕಾರಿಯಾಗಲಿದೆ. ಈ ಎಲ್ಲಾ ಯೋಗ ಭಂಗಿಗಳನ್ನು ಖಾಲಿ ಹೊಟ್ಟೆಯಲ್ಲಿ ಮಾಡಬೇಕು, ಹಾಗೆ ನಿರಂತರ ಅಭ್ಯಾಸ ಮಾಡಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications














